ನಮಸ್ಕಾರ ರೈತರೇ, ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಣಿ ಮಾಡಿಕೊಂಡ ರೈತರಿಗೆ ಶುಭ ಸುದ್ದಿ. ನೀವು ನೋಂದಣಿ ಮಾಡುವಾಗ ನೀಡಿದ ಮೊಬೈಲ್ ನಂಬರ್ ಕಳೆದು ಅಥವಾ ಬದಲಾವಣೆ ಆಗಿದ್ದಲ್ಲಿ ಅದನ್ನೂ ಈಗ ಚಾಲನೆಯಲ್ಲಿರುವ ಮೊಬೈಲ್ ಗೆ ಮೇಸೆಜ್ ಬರುವ ಹಾಗೆ ಮಾಡುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.
ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು 2019ರಲ್ಲಿ ಜಾರಿಗೆ ಬಂದಿದ್ದು ಅರ್ಜಿ ಸಲ್ಲಿಸುವ ಹಂತದಲ್ಲಿ ನೀಡಲಾದ ಮೊಬೈಲ್ ನಂಬರ್ ಗಳು ಯಾವುದೋ ಕಾರಣಗಳಿಂದ ಕಳೆದು ಅಥವಾ ಬದಲಾವಣೆ ಆಗಿರುವ ರೈತರು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ.
ಮೊಬೈಲ್ ನಂಬರ್ ಬದಲಾದ ಅಥವಾ ಕಳೆದು ಹೋದಂತಹ ರೈತರು ಹತ್ತಿರದ ಕೃಷಿ ಇಲಾಖೆಗಳಿಗೆ ಭೇಟಿ ಮಾಡಿ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಥವಾ ರೈತರೇ ಕೆಳಗಡೆ ನೀಡಲಾದ ಮಾಹಿತಿ ಬಳಸಿ ನೀವೇ ಮಾಡಿಕೊಳ್ಳಬಹುದು. ಇದರಿಂದ ಸುಲಭವಾಗಿ ನಿಮಗೆ ಎಷ್ಟು ಕಂತು ಹಣ ಜಮೆಯಾಗಿದೆ ಎಂದು ನೋಡಬಹುದು.
ಮೊಬೈಲ್ ನಂಬರ್ ತಿದ್ದುಪಡಿ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ!
ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.
ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ, update mobile number ಅಂಕಣ ಹೀಗೆ ಹಲವಾರು ಅಂಕಣಗಳಿವೆ.
ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು update mobile number ಮೇಲೆ ಕ್ಲಿಕ್ ಮಾಡಿ.
ವಿಧಾನ-3: ನಂತರ Know your Registration no. ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅದಕ್ಕೆ OTP ಬರುತ್ತದೆ, OTP ಹಾಕಿ ನಿಮ್ಮ Registration number ತೆದುಕೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ ನಿಮ್ಮ Registration number ತೆದುಕೊಳ್ಳಬೇಕು.
ವಿಧಾನ-4:ನಂತರ update mobile number ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನೀವು ಪಡೆದುಕೊಂಡ Registration number ಹಾಕಿ ಮತ್ತೆ ಅಲ್ಲಿ ಕಾಣುವ ಕ್ಯಾಪ್ಚರ್ ಕೋಡ ಹಾಕಿ ಸರ್ಚ್ ಕೊಡಬೇಕು.
ವಿಧಾನ-5: ನಂತರ GET aadhar OTP ಎಂದು ಬರುತ್ತದೆ go ಕೊಟ್ಟು new mobile number update ಮಾಡಬೇಕು.
ಸೂಚನೆ: ನಿಮಗೆ mobile number update ಮಾಡಲು ಬರದೆ ಇದ್ದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ mobile number update ಮಾಡಿಸಿಕೊಳ್ಳಿ.