Thursday, November 21, 2024

Pm kisan installation-ಪಿಎಮ್ ಕಿಸಾನ್ ಸಮ್ಮಾನ್ 18ನೇ ಕಂತು ಬಿಡುಗಡೆಗೆ ದಿನಾಂಕ ಪ್ರಕಟಣೆ! ನಿಮ್ಮದು ಇಕೆವೈಸಿ ಆಗಿದೆಯೇ? ಚೆಕ್ ಮಾಡಿಕೊಳ್ಳಿ.

ನಮಸ್ಕಾರ ರೈತ ಭಾಂದವರೇ, ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ(pm kisan samman) ಯೋಜನೆಯ 18ನೇ ಕಂತನ್ನು ಇದೇ ತಿಂಗಳು ಅಕ್ಟೋಬರ್ 5 ರಂದು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ. ಆದ್ದರಿಂದ ಎಲ್ಲಾ ರೈತರು ತಪ್ಪದೇ ಇಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಈ ಕಿಸಾನ್ ಸಮ್ಮಾನ್ ಯೋಜನೆಯು 2019 ರಿಂದ ಚಾಲನೆಯಲ್ಲಿದ್ದು, ಇಲ್ಲಿವರೆಗೂ ರೂ.2000 ರಂತೆ ಒಟ್ಟು 17 ಕಂತುಗಳು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 5 ರಂದು 18 ನೇ ಕಂತು ಬಿಡುಗಡೆ ಮಾಡಲು ಕೇಂದ್ರ ಸರಕಾರವು ತಿಳಿಸಲಾಗಿದೆ. ಹಾಗಾಗಿ ತಪ್ಪದೇ ಎಲ್ಲರೂ ಇಕೆವೈಸಿ ಮಾಡಿಕೊಳ್ಳಿ ಇಲ್ಲವಾದಲ್ಲಿ 18ನೇ ಕಂತು ಜಮೆಯಾಗುವುದಿಲ್ಲ.

ಈ ಪಿಎಮ್ ಕಿಸಾನ್ ಯೋಜನೆಯ ಹಣವು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೃಷಿ ಮಾಡಲು ಬೀಜ ಮತ್ತು ಗೊಬ್ಬರಗಳನ್ನು ಪಡೆದುಕೊಳ್ಳಲು ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಣದಿಂದ ಅತೀ ಸಣ್ಣ ರೈತರು ತರಕಾರಿ ಬೀಜಗಳನ್ನು ಕೊಂಡು ತರಕಾರಿ ಬೆಳೆಯಲು ಪ್ರಯೋಜನವಾಗಿದೆ.

ಈ ಪಿಎಮ್ ಕಿಸಾನ್ ಸಮ್ಮಾನ(pm kisan samman) ಹಣವು ಪಡೆದುಕೊಳ್ಳುವ ಪ್ರತಿಯೊಬ್ಬರು ಇಕೆವೈಸಿ ಮಾಡಿಸುವುದು ಕಡ್ಡಾಯವೆಂದು ಸರಕಾರ ಆದೇಶ ಮಾಡಿದೆ. ಆದ್ದರಿಂದ ಎಲ್ಲರೂ ತಪ್ಪದೆ ಇಕೆವೈಸಿ ಮಾಡಿಸಿ ನಿಮ್ಮ ಕಿಸಾನ್ ಸಮ್ಮಾನ್ ಹಣ ಪಡೆದುಕೊಳ್ಳಿ.  

Ekyc checking-ಇಕೆವೈಸಿ ಆಗಿದೆಯೇ ಇಲ್ಲವೇ ಎಂದು ನೋಡುವ ವಿಧಾನ!

ಮೊದಲಿಗೆ ಇಲ್ಲಿ ನೀಡಲಾದ PM kisan.gov.in ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು. ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

ವಿಧಾನ-1: ಪಿಎಂ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರೆದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ, Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.

ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು E-kyc ಅಂಕಣ ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-3: ನಂತರ E-kyc ಅಂಕಣ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಆಧಾರ‍ ನಂಬರ್ ಹಾಕಿ E-kyc ಆಗಿದೆಯೇ ಇಲ್ಲವೇ ಎಂದು ತಿಳಿದು ಕೊಳ್ಳಬಹುದು.

Ekyc ಮಾಡಿಸಲು ಹತ್ತಿರದ ಕೃಷಿ ಇಲಾಖೆ, ಗ್ರಾಮ ಒನ್ ಮತ್ತು ಸೇವಾ ಸಿಂಧು ಸೈಬರ್ ಗಳಿಗೆ ಭೇಟಿ ಮಾಡಿ Ekyc ಮಾಡಿಸಿಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles