PM Kisan: ಯಾರೆಲ್ಲಾ 20 ನೇ ಕಂತಿನ ಪಿ ಎಂ ಕಿಸಾನ್ (PM KISAN) ಯೋಜನೆಗೆ ಅರ್ಹರು?.
ನಿಮ್ಮ ಊರಿನ ಪಿ ಎಂ ಕಿಸಾನ್ (PM KISAN) ಯೋಜನೆ ಫಲಾನುಭವಿಗಳು ಯಾರು?
ಆತ್ಮೀಯ ಪ್ರೀಯ ಓದುಗರೇ ,ಕೃಷಿ ಮತ್ತು ಕಲ್ಯಾಣ ಸಚಿವಾಲಯವು ವಾರ್ಷಿಕವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.
ಹಾಗಿದ್ದರೆ, ಈ ಯೋಜನೆಗೆ ಸಂಭಂದಿಸಿದಂತೆ ಕೆಲವು ಮಾಹಿತಿಯನ್ನು ನೋಡೋಣ ,,
ಹೌದು ಈ ಯೋಜನೆ 2019 ನೇ ಎಪ್ರಿಲ್ ತಿಂಗಳಿನಲ್ಲಿ ಜಾರಿಗೆ ಬಂದಿರುತ್ತದೆ, ಮುಂದುವರೆದು 2019 ರ ನಂತರ ಪಹಣಿ ಬದಲಾವಣೆ ಮಾಡಿರುವ ರೈತರು ಯೋಜನೆ ಲಾಭ ಪಡೆಯಬೇಕಾದರೆ , ರೈತರ ದಾಖಲೆಗಳು ಹೇಗೆ ಇರಬೇಕು ? ಪಹಣಿ ( RTC) ಯಾವ ರೀತಿ ಮಾರ್ಪಟ್ಟಿರಬೇಕು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಕಳೆದ ವರ್ಷದ ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯಿರಿ.
PM Kisan Scheme: ಹೊಸದಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ ಹೊಸದಾಗಿ ಅರ್ಜಿ ಸಲ್ಲಿಸಲು ಮುಖ್ಯವಾಗಿ ಕೃಷಿ ಜಮೀನು ಹೊಂದಿರಬೇಕು.
ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳನ್ನು ಕೃಷಿ ಇಲಾಖೆಯ Fruits ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿರಬೇಕು.
ಪ್ರತಿ ಒಬ್ಬ ರೈತರಿಗೂ ರೈತರ ನೋಂದಣಿ ಸಂಖ್ಯೆ (FID Number) ಒಳಗೊಂಡಿರಬೇಕು.
ಮುಖ್ಯವಾಗಿ ಪಹಣಿಯಲ್ಲಿ(RTC) ಕಾಲಂ ನಂಬರ್ 10 ರಲ್ಲಿ ಕಬ್ಜೆ ಅಥವಾ ಸ್ವಾಧಿನತೆಯ ರೀತಿ “ಪೌತಿ” ಅಂತ ಇದ್ದರೆ ಆ ರೈತರಿಗೆ ಅರ್ಜಿಸಲ್ಲಿಸಲು ಅವಕಾಶವಿರುತ್ತದೆ. ( ಇದು 01/02/2019 ರ ನಂತರ (ಜಮೀನು/ಕೃಷಿ ಜಾಗ/ಗದ್ದೆ) ಹೊಸದಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಮಾತ್ರ ಅನ್ವಯವಾಗುತ್ತದೆ)
ಒಂದು ವೇಳೆ 2019 ರ ಪೂರ್ವದಲ್ಲಿ ಜಮೀನು ಇದ್ದರೆ ಈ ಮೇಲಿನ ಹೇಳಿಕೆ ಅನ್ವಹಿಸುವುದಿಲ್ಲ.
Who is Eligible: ಯಾರೆಲ್ಲಾ ಈ ಮುಂದಿನ ಕಂತಿನ ಹಣ ಪಡೆಯಲು ಅರ್ಹರು?
1.ಮುಖ್ಯವಾಗಿ e-kyc ಪೂರ್ಣಗೊಂಡಿರಬೇಕು.
2.ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
3.ಜಮೀನಿನ ಎಲ್ಲಾ ದಾಖಲೆಗಳು ಸರಿ ಇರಬೇಕು.( ಬದಲಾವಣೆ ಆಗಿದ್ದರೆ ಮಾತ್ರ).
4.ಒಂದು ಕುಟುಂಬದಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರೂ ಮಾತ್ರ ಅರ್ಹರು.(PDS)
5.ರೈತರು ಯಾವುದೇ ಸಾಂವಿದಾನಿಕ ಹುದ್ದೆ ಹೊಂದಿರಬಾರದು.
6.NPCI ( National payments and Corporation Of India ) ಮ್ಯಾಪಿಂಗ್ (mapping ) ಅಗಿರಬೇಕು.
7.ಯಾವುದೇ ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು.
List Of Beneficiaries village: ನಿಮ್ಮ ಊರಿನ ಪಿ ಎಂ ಕಿಸಾನ್ (PM KISAN) ಯೋಜನೆ ಫಲಾನುಭವಿಗಳು ಯಾರು?
ಆತ್ಮೀಯ ಪ್ರಿಯ ಓದುಗರೇ, ಇಲ್ಲಿ ಕೆಳಗೆ ನೀಡಿರುವ ಲಿಂಕ್ ಮೇಲೆ ಓತ್ತಿ
PM KISAN LINK
ನಂತರ PM KISAN ಪೇಜ್ ಓಪನ್ ಆಗುವುದು ಅಲ್ಲಿ
ಮೊದಲು ನಿಮ್ಮ, ರಾಜ್ಯ ಆಯ್ಕೆ ಮಾಡಿ, ನಂತರ ಜಿಲ್ಲೆ, ಹಾಗೂ ತಾಲೂಕು ಕೇಂದ್ರ, ಗ್ರಾಮ ಆಯ್ಕೆ ಮಾಡಿಕೊಂಡು ನಿಮ್ಮ ಹೆಸರು ಹಾಗೂ ನಿಮ್ಮ ಸಂಬಂದಿಕರ ಹೆಸರು ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿ ವೀಕ್ಷಣೆ ಮಾಡಬಹುದು.
ಇದನ್ನೂ ಓದಿ: PM Kisan ಮುಂದಿನ ಕಂತಿನ ಹಣ ಬರಬೇಕೇ ತಪ್ಪದೇ ಈ ಕೆಲಸ ಇಂದೇ ಮಾಡಿ!!!
ವಿಶೇಷ ಸೂಚನೆ : ಈ ಒಂದು ಲಿಸ್ಟನಲ್ಲಿ ಇರುವ ರೈತರು ಫಲಾನುಭವಿಗಳು ಮಾತ್ರ ಅರ್ಹಅಥವಾ ಅನರ್ಹರು ಎಂಬುದು ನೀವು ಕೃಷಿ ಮತ್ತು ಕೃಷಿಯೇತರ ಇಲಾಖೆಗೆ ಭೇಟಿ ನೀಡಿ ಪರೀಕ್ಷಿಸಿ.
ಇದೇ ತಿಂಗಳ ಅಂತ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಹಣ ಜಮಾ ಆಗಲಿದೆ.