Friday, September 20, 2024

‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ 2000 ರೂ. ಸಂದಾಯವಾಗಬೇಕಾದರೆ ರೈತರು ಏನು ಮಾಡಬೇಕು…?

ದೇಶದ ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ ನೀಡುವ 13ನೇ ಕಂತಿನ ಹಣ ಕರ್ನಾಟಕದ 16 ಲಕ್ಷ ರೈತರಿಗೆ ಸಂದಾಯವಾಗುವುದು ಅನುಮಾನ ಎನ್ನಲಾಗಿದೆ.

‘ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ ಯಡಿ ಹಣ ಪಡೆಯುವ ಅರ್ಹ ರೈತ ಪಲಾನುಭವಿಗಳು 13 ನೇ ಕಂತಿನ 2,000 ರೂ. ಪಡೆಯಲು ಕೆವೈಸಿ ಮಾಡಿಸುವಂತೆ ಹಲವಾರು ಬಾರಿ ಕೇಂದ್ರ ಕೃಷಿ ಇಲಾಖೆ ಗಡುವು ವಿಸ್ತರಣೆ ಮಾಡಿದೆ. ಆದರೆ ಇದುವರೆಗೆ ಕರ್ನಾಟಕದ ಫಲಾನುಫವಿಗಳ ಪೈಕಿ ಒಟ್ಟು ಸುಮಾರು 37ಲಕ್ಷ ರೈತರು ಮಾತ್ರ ಕೆವೈಸಿ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಳಿದಂತೆ ಸುಮಾರು 16 ಲಕ್ಷ ರೈತ ಫಲಾನುಭವಿಗಳು ಕೆವೈಸಿ ಮಾಡಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಇದರ ಪರಿಣಾಮವಾಗಿ ಜನವರಿಯಲ್ಲಿ ಬರಬಹುದು ಎನ್ನಲಾಗುತ್ತಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ 2,000 ರೂಪಾಯಿ ರೈತರಿಗೆ ಸಿಗುವುದು ಅನುಮಾನ ಎಂಬಂತಾಗಿದೆ.

ಲಭ್ಯ ಮಾಹಿತಿಗಳ ಪ್ರಕಾರ, ಕೆವೈಸಿ ಮಾಡದ ರೈತರ ಅಂಕಿಸಂಖ್ಯೆಗಳನ್ನು ನೋಡುವುದಾದರೆ ತುಮಕೂರು ಜಿಲ್ಲೆಯಲ್ಲಿ 97,000 ರೈತರು, ಕಲಬುರರಗಿ ವ್ಯಾಪ್ತಿಯಲ್ಲಿ 97,000, ಹಾಸನದಲ್ಲಿ 92,000 ಕೆವೈಸಿ ಮಾಡಿಸಿಲ್ಲ.ಹೀಗೆ ಹಲವಾರು ಜಿಲ್ಲೆಗಳಲ್ಲಿ ಬಾಕಿ ಇರುವುದು ಕಂಡುಬಂದಿರುತ್ತದೆ,  ಈ ರೀತಿ ಕೆವೈಸಿ ಮಾಡಿಸಲು ಆಸಕ್ತಿ ತೋರದ ರೈತರಿಗೆ ಈ ಬಾರಿ ಕಂತು ಜಮೆ ಆಗುವುದಿಲ್ಲ.

ಪರಿಶೀಲನೆಯ ವಿಧಾನಗಳು 13ನೇ ಕಂತಿಗಾಗಿ ಕಾಯುತ್ತಿರುವ ರೈತರು ತಪ್ಪುಗಳಾಗದಂತೆ ಎಚ್ಚರವಹಿಸಿ. ಹಣ ಪಡೆಯಲು ಇಚ್ಛಿಸುವ ರೈತರು ಈಗಲೇ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ https://pmkisan.gov.in/ ಪರಿಶೀಲಿಸಿ. ಇಲ್ಲವೇ ಸಿಎಸ್ಸಿ ಕೇಂದ್ರ ಭೇಟಿ ನೀಡಿ ಅಥವಾ ಸಹಾಯವಾಣಿ 011-24300606, 155261 o. ಕೆವೈಸಿ ಮಾಡಲು ಅವಕಾಶಗಳು ಇದ್ದಲ್ಲಿ ತಕ್ಷಣವೇ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಏನಿದು ಯೋಜನೆ?

ಸಣ್ಣ ಪ್ರಮಾಣದ ರೈರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿ ತಂದಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2,000ರೂ.ನಂತೆ ಒಟ್ಟು ವಾರ್ಷಿಕ 6,000 ರೂ. ಹಣವನ್ನು ಅರ್ಹ ರೈತ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತದೆ. ಇದರ ಜೊತೆಗೆ ಅನ್ನದಾತರ ನೆರವಿಗೆ ನಿಂತ ರಾಜ್ಯ ಸರ್ಕಾರವು ಸಹ ತಲಾ 2,000ರೂ. ನಂತೆ ಒಟ್ಟು 4,000 ರೂ. ಹಣವನ್ನು ರೈತರ ಖಾತೆಗೆ ಜಮೆ ಮಾಡುತ್ತದೆ.

ಇದುವರೆಗೆ ಕೇಂದ್ರದಿಂದ 12 ಕಂತುಗಳು ರೈತರ ಖಾತೆಗೆ ಪಾವತಿಸಲಾಗಿದೆ. ಇದೀಗ ದೇಶಾದ್ಯಂತ ರೈತರು 13ನೇ ಕಂತಿನ ಹಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಕಂತಿನ ಹಣ ಡಿಸೆಂಬರ್ ಅಂತ್ಯಕ್ಕೆ ಜಮೆಆಗಲಿದೆ ಎನ್ನಲಾಗಿದೆ. ಸದ್ಯ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೇ.

ಇದನ್ನೂ ಓದಿ : ಅಮುಲ್ ಮತ್ತು ಕೆಎಂಎಫ್ ನಡುವಿನ ವ್ಯತ್ಯಾಸ, ಸಾಮ್ಯತೆ : ಅಂಕಿ -ಸಂಖ್ಯೆಗಳನ್ನು ತಿಳಿಯಬೇಕೆ? ಹಾಗಿದ್ದರೆ ಈ ಮಾಹಿತಿ ಸಂಪೂರ್ಣ ಓದಿ…..

ಹೊಸದಾಗಿ ಮಾಡುವರು ಗಮನಿಸಬೇಕಾದ ಮಾಹಿತಿ….

1.ಹೊಸದಾಗಿ ಮಾಡಿಸುವ ರೈತರು ತಮ್ಮ ಪಹಣಿಯನ್ನು ತಂದೆಯಿಂದ ಮಗನಿಗೆ, ಮಗಳಿಗೆ, ಅಥವಾ ತಮ್ಮ ಹೆಂಡತಿಗೆ ರೆಕಾರ್ಡ ಹೆಸರಿಗೆ ಮಾಡಿಸಿದಾಗ  ಕಬ್ಜೆ ಅಥವಾ ಸ್ವಾಧೀನತೆಯ  ರೀತಿ (ಕಾಲಂ ನಂಬರ 10 )ರಲ್ಲಿ

ಪೌತಿ ಅಥವಾ ಪಿತ್ರಾರ್ಜಿತ ಎಂದು  ನಮೂದಾಗಿರಬೇಕು.

2.ಒಂದು ವೇಳೆ ವಿಭಾಗ , ಕ್ರಯ,  2019 ರ ಇತ್ತಿಚೇಗೆ ಕಬ್ಜೆ ಅಥವಾ ಸ್ವಾಧೀನತೆಯ  ರೀತಿ (ಕಾಲಂ ನಂಬರ 10 )ರಲ್ಲಿ ಇದ್ದರೆ ಈ ಯೋಜನೆ ಅರ್ಹರಾಗಿರುವುದ್ದಿಲ್ಲ

3.ಒಂದು ವೇಳೆ 2019 ಮೊದಲು ವಿಭಾಗ , ಕ್ರಯ,  ಕಬ್ಜೆ ಅಥವಾ ಸ್ವಾಧೀನತೆಯ  ರೀತಿ (ಕಾಲಂ ನಂಬರ 10 )ರಲ್ಲಿ ಇದ್ದರೆ ಈ ಯೋಜನೆ ಅರ್ಹರಾಗಿರುತ್ತಾರೆ.

4.ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅನರ್ಹರು.

5.ಒಂದು ಕುಟುಂಬದಲ್ಲಿ  ಪತಿ/ಪತ್ನಿ ವಯೊನಿವೃತ್ತಿ  ಹೊಂದಿ ತಿಂಗಳಿಗೆ ಹತ್ತು ಸಾವಿರ ಅಥವಾ ಹೆಚ್ಚಿನ ಪಿಂಚಣಿ ಪಡೆಯುತ್ತಿರಬಾರದು .

6. ಅರ್ಜಿದಾರರ ಕುಟುಂಬದಲ್ಲಿ ಅಂದರೆ ಪತಿ/ಪತ್ನಿ ಯಾವುದೇ ರಾಜ್ಯ ಸರ್ಕಾರ/ಕೇಂದ್ರ ಸರ್ಕಾರದ ಮಂತ್ರಾಲಯ / ಕಛೇರಿಗಳು / ಇಲಾಖೆಗಳು ಹಾಗೂ ಅವುಗಳ ಕ್ಷೇತ್ರ ಮಟ್ಟದ ಘಟಕಗಳು ಅಥವಾ ಕೇಂದ್ರ/ರಾಜ್ಯ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳ ಹಾಗು ಸರ್ಕಾರದ ಅಧೀನದಲ್ಲಿ ಬರುವ ಕಛೇರಿಗಳು/ ಸ್ವಾಯತ್ತ ಸಂಸ್ಥೆಗಳ ಹಾಲಿ ಅಥವಾ ನಿವೃತ್ತ ಗ್ರುಪ್ ಸಿ ಮತ್ತು ಮೇಲ್ಪಟ್ಟ ನೌಕರರು ಈ ಯೋಜನೆಗೆ ಅನರ್ಹರು.

7. ಕುಟುಂಬದ ಪತಿ/ಪತ್ನಿ ವೈದ್ಯರು, ಅಭಿಯಂತರರು, ವಕೀಲರು, ಮತ್ತು ಚಾರ್ಟರ್ಡ ಅಕೌಂಟಂಟ್‌ಗಳು ಹಾಗೂ ವಾಸ್ತುಶಿಲ್ಪದಲ್ಲಿ ತೋಡಗಿದವರು ಹಾಗು ಸಂಘ ಸಂಸ್ಥೆಗಳೊಂದಿಗೆ ನೋಂದಣಿ ಆಗಿದ್ದರೆ ಅವರು ಅನರ್ಹರು.

ಮೇಲ್ಕಂಡ ಎಲ್ಲಾ ಮಾಹಿತಿಯನ್ನು ಒಪ್ಪಿರುತ್ತೇನೆಂದು ಮತ್ತು ನೀಡಿದ ಎಲ್ಲಾ ಮಾಹಿತಿಯು ನಿಜ ಹಾಗೂ ಸಂಪೂರ್ಣವಾಗಿರುತ್ತದೆ ಎಂದು ದೃಢೀಕರಿಸುತ್ತೇನೆ. ಈ ಮಾಹಿತಿಯು ತಪ್ಪು, ಅಪೂರ್ಣ ಹಾಗೂ ಸುಳ್ಳು ಎಂದು ಕಂಡು ಬಂದಲ್ಲಿ ಯೊಜನೆಯಡಿ ಪಡೆಯಲಾದ ಸೌಲಭ್ಯವನ್ನು ಹಿಂದಿರುಗಿಸಲು ಬದ್ದನಾಗಿರುತ್ತೇನೆಂದು ಸ್ವಯಂ ಘೋಷಣೆ ಅರ್ಜಿಗೆ ಸಹಿ ಮಾಡಿ ಕೊಡಬೇಕಾಗಿರುತ್ತದೆ.

ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ : ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ(CSC) ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಇಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದಾಗಿದೆ.

ಇತ್ತೀಚಿನ ಸುದ್ದಿಗಳು

Related Articles