Tuesday, December 3, 2024

Pm Kisan beneficiary list-ಪಿಎಂ ಕಿಸಾನ್ ಹಣವು ಈ ಲಿಸ್ಟ್ ನಲ್ಲಿರುವ ರೈತರಿಗೆ ಮಾತ್ರ ಸಿಗಲಿದೆ! ನಿಮ್ಮ ಹೆಸರು ಉಂಟೆ? ಚೆಕ್ ಮಾಡಿಕೊಳ್ಳಿ.

ರೈತ ಭಾಂದವರಿಗೆ ನಮಸ್ಕಾರಗಳು, ಕೇಂದ್ರ ಸರಕಾರವು ರೈತರಿಗೆ ಅನುಕೂಲವಾಗಲು 2019 ರಿಂದ ರೈತರಿಗೆ ಪಿಎಂ ಕಿಸಾನ ಸಮ್ಮಾನ್ ನಿಧಿ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ರೂ.6000 ಸಾವಿರ ಹಣವನ್ನು ಮೂರು ಕಂತುಗಳಲ್ಲಿ 4 ತಿಂಗಳಿಗೊಮ್ಮೆ ರೂ.2000 ರೂಪಾಯಿಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗುತ್ತದೆ. ಪಿಎಂ ಕಿಸಾನ್ ಹಣವು ಈ ಲಿಸ್ಟ್ ನಲ್ಲಿಇರುವ ರೈತರಿಗೆ ಮಾತ್ರ ಸಿಗಲಿದೆ! ನಿಮ್ಮ ಹೆಸರು ಉಂಟೆ? ಚೆಕ್ ಮಾಡಿಕೊಳ್ಳಿ.

ಪಿಎಂಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ದೇಶದ 9.3 ಕೋಟಿ ರೈತರಿಗೆ ಸುಮಾರು 20000 ಸಾವಿರ ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ. 2019 ರಂದು ಹಾಗೂ ಇಲ್ಲಿಯವರೆಗೂ ಯಾರು ಎಲ್ಲಾ ಪಿಎಂ ಕಿಸಾನ ಯೋಜನೆಗೆ ನೋಂದಣಿ ಮಾಡಿಸಿದ ಪ್ರತಿಯೊಬ್ಬ ರೈತರ ಖಾತೆಗೆ ರೂ.2000 ಜಮೆ ಮಾಡಲಿದ್ದಾರೆ.

ಕೇಂದ್ರ ಸರಕಾರವು ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಪಡೆಯಲು ರೈತರಿಗೆ ಈ ಹಣವು ಸಹಾಯವಾಗಲಿದೆ. ಹಾಗಾಗಿ ರೈತರು ಪಿಎಂ ಕಿಸಾನ್ ಯೋಜನೆಯ ಹಣವನ್ನು ಸದುಪಯೋಗಪಡೆದುಕೊಳ್ಳಬಹುದು. ಇದರಿಂದ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣವು ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: RTC/ಪಹಣಿ ಗೆ ಆಧಾರ್‌ ಲಿಂಕ್‌ ಮಾಡಲು ಜುಲೈ ತಿಂಗಳ ಗಡವು ನೀಡಿದ ಕಂದಾಯ ಸಚಿವರು. ನಿಮ್ಮ RTC ಗೆ ಆಧಾರ್‌ ಲಿಂಕ್‌ ಆಗಿದೆಯೋ ಇಲ್ಲವೋ ತಿಳಿಯಲು ಇಲ್ಲಿದೆ ಮಾಹಿತಿ.

ಪಿಎಂ ಕಿಸಾನ್ ಲಿಸ್ಟನಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?

ರೈತರಿಗೆ ಪಿ ಎಂ ಕಿಸಾನ ಯೋಜನೆಯ ಹಣವು ಈ ಲಿಸ್ಟ್ ನಲ್ಲಿರುವ ರೈತರಿಗೆ ಮಾತ್ರ ಸಿಗಲಿದೆ! ನಿಮ್ಮ ಹೆಸರು ಉಂಟೆ? ಚೆಕ್ ಮಾಡಿಕೊಳ್ಳಿ. ತಿಳಿಯಲು ಇಲ್ಲಿದೆ ಮಾಹಿತಿ.

ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.

ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕಣ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Name correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.

ಇದನ್ನೂ ಓದಿ: ಬೆಳೆ ವಿಮೆ ಮಾಡಿಸಿದ ಮೇಲೆ ಈ ಕೆಲಸ ಮಾಡಿ ಇಲ್ಲವಾದಲ್ಲಿ ಬೆಳೆ ವಿಮೆ (CROP INSURANCE) ಪರಿಹಾರ ಸಿಗುವುದಿಲ್ಲ!

ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು Beneficiary list  ಮೇಲೆ ಕ್ಲಿಕ್ ಮಾಡಿ.

ವಿಧಾನ-3: ನಂತರ ನಿಮ್ಮ ರಾಜ್ಯ ಆಯ್ಕೆ ಮಾಡಿ, ಜಿಲ್ಲೆ ಆಯ್ಕೆ ಮಾಡಿ, ಉಪ ಜಿಲ್ಲೆ ಆಯ್ಕೆ ಮಾಡಿ, ತಾಲೂಕು ಆಯ್ಕೆ ಮಾಡಿ, ಕೊನೆಯಲ್ಲಿ ನಿಮ್ಮ ಗ್ರಾಮ/ಹಳ್ಳಿ ಆಯ್ಕೆ ಮಾಡಿ.

ವಿಧಾನ-4:ನಂತರ Get report ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ನಿಮ್ಮ ಗ್ರಾಮದಲ್ಲಿ ಇರುವ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಹುಡುಕಿಕೊಳ್ಳಿ. 

ನಿಮ್ಮ ಹೆಸರು ಆ ಲಿಸ್ಟ್ ನಲ್ಲಿ ಕಾಣದಿದ್ದರೇ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಪಿಎಂ ಕಿಸಾನ್ ಅರ್ಜಿ ಏನಾಗಿದೆ ಎಂದು ತಿಳಿದುಕೊಳ್ಳಿ. ಕೆಲವು ಸಾರಿ Ekyc ಮತ್ತು Aadhar name ತಿದ್ದುಪಡಿ, RTC/ಪಹಣಿ ತಿದ್ದುಪಡಿ, ಹೀಗೆ ಹಲವಾರು ಕಾರಣಗಳಿಂದ ಬಂದಿರುವುದಿಲ್ಲ.

ಇತ್ತೀಚಿನ ಸುದ್ದಿಗಳು

Related Articles