ಕೇಂದ್ರ ಸರಕಾರವು ರೈತರ ಕಲ್ಯಾಣ ಹಲವಾರು ಯೋಜನೆಗಳನ್ನು ಜಾರಿ ತಂದಿದೆ. ಅದರಲ್ಲಿ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಯೋಜನೆಯಡಿ ಕೃಷಿ ಜಮೀನು ಹೊಂದಿದ ರೈತರಿಗೆ ವರ್ಷಕ್ಕೆ 6 ಸಾವಿರ ಹಣವನ್ನು ನಾಲ್ಕು ತಿಂಗಳಿಗೆ ಒಂದರಂತೆ ಮೂರು ಹಂತಗಳಲ್ಲಿ ರೈತರಿಗೆ ನೇರ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ.
ಇಲ್ಲಿಯವರೆಗೂ ಈ ಕಿಸಾನ್ ಸಮ್ಮಾನ್ ನಿಧಿ(pm kisan samman) ಯೋಜನೆಯ ಹಣವು 16ಕಂತು ಬಿಡುಗಡೆ ಮಾಡಲಾಗಿದೆ. ಹಾಗಾಗಿ ನಿಮಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಲು ಈ ಲೇಖನದಲ್ಲಿ ಮಾಹಿತಿ ನೀಡಲಾಗುತ್ತಿದೆ. ಹಾಗೂ ಯಾವ ಹಂತದಲ್ಲಿ ನಿಮ್ಮ ಹಣ ಬರುವುದು ನಿಂತಿದೆ ಎಂದು ಈ ಲೇಖನದಲ್ಲಿ ತಿಳಿಸಲಾಗುತ್ತದೆ.
ನಮ್ಮ ಭಾರತ ದೇಶದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರೆ ಹೆಚ್ಚಾಗಿ ಇರುವುದರಿಂದ ಅವರಿಗೆ ಈ ಕಿಸಾನ್ ಸಮ್ಮಾನ್ ನಿಧಿ(pm kisan samman nidhi) ಯೋಜನೆಯವು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಿತ್ತನೆ ಬೀಜಗಳು ಮತ್ತು ರಸ ಗೊಬ್ಬರಗಳನ್ನು ಹಾಗೂ ಸಣ್ಣ ಪ್ರಮಾಣದ ಕೃಷಿ ಪರಿಕರಗಳನ್ನು ಖರೀದಿಮಾಡಲು ಅನೂಕೂಲವಾಗಲು ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: ಅಡಿಕೆ ಬೆಳೆ ಬೆಳೆಯುವ ರೈತರು ಮುಂಗಾರು ಹಂಗಾಮಿನಲ್ಲಿ ಮಾಡಬೇಕಾದ ಕ್ರಮಗಳು.
ಈ ಕಿಸಾನ್ ಸಮ್ಮಾನ್ ನಿಧಿ(pm kisan) ಯೋಜನೆಯನ್ನು 2019 ರಿಂದ ಆರಂಭ ಮಾಡಲಾಗಿದ್ದು ಇಲ್ಲಿಯವರೆಗೆ ಕೇಂದ್ರ ಸರಕಾರವು 16 ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದೆ. ಹಾಗಾಗಿ ಅದರಲ್ಲಿ ನಿಮಗೆ ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಲು ಇಲ್ಲಿದೆ ಮಾಹಿತಿ.
ಇಲ್ಲಿಯವರೆಗೂ(PM kisan) ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯುದು ಹೇಗೆ?
ಮೊದಲಿಗೆ ಇಲ್ಲಿ ಪಿಎಮ್ ಕಿಸಾನ್(PM Kisan samman) ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಕೇಂದ್ರ ಸರಕಾರದ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಳ್ಳುತ್ತದೆ.
ವಿಧಾನ-1: ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್ ತೆರದುಕೊಂಡ ಮೇಲೆ Farmers Corner ನಲ್ಲಿ ಹಲವಾರು ಅಂಕಣಗಳಿವೆ E-kyc ಅಂಕನ,New farmer registration ಅಂಕಣ, Know your status ಅಂಕಣ, Beneficiary list ಅಂಕಣ,Nmae correction as per Aadhar ಅಂಕಣ ಹೀಗೆ ಹಲವಾರು ಅಂಕಣಗಳಿವೆ.
ವಿಧಾನ-2: ಈ ಎಲ್ಲಾ ಅಂಕಣಗಳಲ್ಲಿ ನೀವು Know your status ಮೇಲೆ ಕ್ಲಿಕ್ ಮಾಡಿ.
ವಿಧಾನ-3: ನಂತರ Know your Registration no. ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅದಕ್ಕೆ OTP ಬರುತ್ತದೆ, OTP ಹಾಕಿ ನಿಮ್ಮ Registration number ತೆದುಕೊಳ್ಳಬೇಕು.
ವಿಧಾನ-4:ನಂತರ Know your status ಮೇಲೆ ಕ್ಲಿಕ್ ಮಾಡಿ ಅದರಲ್ಲಿ ನೀವು ಪಡೆದುಕೊಂಡ Registration number ಹಾಕಿ ಮತ್ತೆ ನಿಮ್ಮ ಮೊಬೈಲ್ ಗೆ OTP ಬರುತ್ತದೆ ಅದನ್ನು ಹಾಕಿದರೆ ನಿಮ್ಮ profile page ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ವಿಳಾಸ, ಹಾಗೂ ಇಲ್ಲಿಯವರೆಗೂ ಬಂದಿರುವ ಕಂತಿನ ಹಣದ ವಿವರ ಇರುತ್ತದೆ.
ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ನೋಡಲು ಇಲ್ಲಿದೆ ಲಿಂಕ್ CLICK HERE…