Thursday, September 19, 2024

PM Kisan-ರೈತರಿಗೆ ಶುಭ ಸುದ್ಧಿ ಜೂನ್ 18 ರಂದು ರೈತರಿಗೆ ರೂ.2000 ಹಣ ಬಿಡುಗಡೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ.

ಹೌದು, ರೈತರೇ ಇದೇ ತಿಂಗಳು ಜೂನ್ 18 ರಂದು ಕೇಂದ್ರ ಸರಕಾರವು ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಲು ಈ ಲೇಖನದಲ್ಲಿ ತಿಳಿಸಲಾಗಿದೆ.

ಕೇಂದ್ರ ಸರಕಾರವು ರೈತರಿಗೆ ಅನುಕೂಲವಾಗಲು 2019 ರಿಂದ ರೈತರಿಗೆ ಪಿಎಂ ಕಿಸಾನ ಸಮ್ಮಾನ್ ನಿಧಿ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ರೂ.6000 ಸಾವಿರ ಹಣವನ್ನು ಮೂರು ಕಂತುಗಳಲ್ಲಿ 4 ತಿಂಗಳಿಗೊಮ್ಮೆ ರೂ.2000 ರೂಪಾಯಿಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗುತ್ತದೆ.

ಪಿಎಂಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ದೇಶದ 9.3 ಕೋಟಿ ರೈತರಿಗೆ ಸುಮಾರು 20000 ಸಾವಿರ ಕೋಟಿ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಿದ್ದಾರೆ. 2019 ರಂದು ಹಾಗೂ ಇಲ್ಲಿಯವರೆಗೂ ಯಾರು ಎಲ್ಲಾ ಪಿಎಂ ಕಿಸಾನ ಯೋಜನೆಗೆ ನೋಂದಣಿ ಮಾಡಿಸಿದ ಪ್ರತಿಯೊಬ್ಬ ರೈತರ ಖಾತೆಗೆ ರೂ.2000 ಜಮೆ ಮಾಡಲಿದ್ದಾರೆ.

ಇದನ್ನೂ ಓದಿ: ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು? ಕಟ್ಟಿದರೇ ಎಷ್ಟು ಪರಿಹಾರ ಬರುತ್ತೆ, ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು.

ಕೇಂದ್ರ ಸರಕಾರವು ರೈತರಿಗೆ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಪಡೆಯಲು ರೈತರಿಗೆ ಈ ಹಣವು ಸಹಾಯವಾಗಲಿದೆ. ಹಾಗಾಗಿ ರೈತರು ಪಿಎಂ ಕಿಸಾನ್ ಯೋಜನೆಯ ಹಣವನ್ನು ಸದುಪಯೋಗಪಡೆದುಕೊಳ್ಳಬಹುದು. ಇದರಿಂದ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣವು ತುಂಬಾ ಪ್ರಯೋಜನಕಾರಿಯಾಗಿದೆ.

PM kisan ಯಾವ ಯಾವ ರೈತರ ಖಾತೆಗೆ ಪಿಎಂಕಿಸಾನ್ ಹಣಜಮೆಯಾಗಲಿದೆ?

ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಈ ಕೆಳಗಿನ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ಜಮೆಯಾಗಲಿದೆ. ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ Click here.. ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ ಪೇಜ್ ತೆರದುಕೊಳ್ಳುತ್ತದೆ.

ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ಜಿಲ್ಲೆ ಆಯ್ಕೆ ಮಾಡಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ/ಊರು ಆಯ್ಕೆ ಮಾಡಿ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.

ಅಲ್ಲಿ ನಿಮ್ಮ ಹೆಸರು ಇರಲೇ ಬೇಕು. ನಿಮ್ಮ ಹೆಸರು ಇಂಗ್ಲಿಷ ಅಕ್ಷರದ ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ಪೇಜ್ ನಂಬರ್ ಮೇಲೆ ಕ್ಲಿಕ್ ಮಾಡಿ ಆ ಪೇಜ್ ಗಳಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಎರೆಹುಳು ಗೊಬ್ಬರ ಘಟಕ ರಚನೆಗೆ ಗ್ರಾಮ ಪಂಚಾಯತನಿಂದ ರೂ.20000 ಸಾವಿರ ಸಹಾಯಧನ!

PM kisan ಪಟ್ಟಿಯಲ್ಲಿ ಹೆಸರಿದ್ದರೂ ನಿಮಗೆ ಕಿಸಾನ್ ಸಮ್ಮಾನ್ ಹಣ ಜಮೆಯಾಗುತ್ತಿಲ್ಲವೇ? ಇಲ್ಲಿವೇ ಕಾರಣಗಳು!

1)ಪಿಎಂ ಕಿಸಾನ್ ಫಲಾನುಭವಿಗಳು ಕಡ್ಡಾಯ Ekyc ಮಾಡಿಸಬೇಕು. ಮಾಡಿಲ್ಲದಿದ್ದರೆ ಹಣ ಬರುವುದಿಲ್ಲ.

2) ಪಿಎಂ ಕಿಸಾನ್ ಫಲಾನುಭವಿಗಳು ನಿಮ್ಮ ಬ್ಯಾಂಕ್ ಸಂಖ್ಯೆಗೆ ಆಧಾರ್ ಸೀಡಿಂಗ್ ಮಾಡಿರಬೇಕು.

3)ನಿಮ್ಮ ಆಧಾರ್ ಕಾರ್ಡ್ ಹೆಸರು ಮತ್ತು RTC/ಪಹಣಿ ನಲ್ಲಿರುವ ಹೆಸರು ಒಂದೆ ರೀತಿ ಇರಬೇಕು.

4)ಫಲಾನುಭವಿಗಳು ಅರ್ಜಿಸಲ್ಲಿಸುವಾಗ ನೀಡಿದ ಆಧಾರ್ ನಲ್ಲಿರುವ ಹೆಸರು ನಂತರ ತಿದ್ದುಪಡಿ ಮಾಡಿಕೊಂಡಿರಬಾರದು.

5) RTC/ಪಹಣಿ ತಿದ್ದುಪಡಿ ಅಥವಾ ಬದಲಾವಣೆ ಮಾಡಿರಬಾರದು.

ಇತ್ತೀಚಿನ ಸುದ್ದಿಗಳು

Related Articles