Thursday, September 19, 2024

PM- Kisan 16th installment: ಪಿ ಎಂ ಕಿಸಾನ್ 16 ನೇ ಕಂತಿನ ಹಣಕ್ಕೆ ಈ ಪ್ರಕ್ರಿಯೆ ಕಡ್ಡಾಯ!!!

ಆತ್ಮೀಯ ರೈತ ಬಾಂದವರೇ ಕೃಷಿ ಇಲಾಖೆ ಪಿ ಎಂ ಕಿಸಾನ್ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ 2019 ನೇ ಇಸ್ವಿಯಲ್ಲಿ ಜಾರಿಗೊಳ್ಳಿಸಿರುತ್ತದೆ. ಮುಂದುವರೆದು ಈ ಯೋಜನೆಯಡಿ ಫಲಾನುಭವಿಗಳಾದ ರೈತರು ಅರ್ಜಿ ಸಲ್ಲಿಸುವಾಗ ನೀಡಿದ ದಾಖಲೆಗಳನ್ನುಇತ್ತೀಚಿಗೆ ಬದಲಾವಣೆಯಾದಲ್ಲಿ ಇ ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಹಣ ಬರುವುದು ರದ್ದಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.

Pradhan Mantri Kisan Samman Scheeme ಪಿ ಎಮ್ ಕಿಸಾನ್ ಯೋಜನೆ ಫಲಾನುಭವಿಗಳಿಗೆ ಆಧಾರಗೆ ಮೊಬೈಲ್ ಲಿಂಕ್ ಆಗದೇ ಇದ್ದರೂ ಕೆವೈಸಿ ಮಾಡಿಸಬಹುದು . ಈ KYC ಪ್ರಕ್ರಿಯೆ ಮಾಡಿದರೆ ಮಾತ್ರ ಮುಂದಿನ ಕಂತು ಹಣ ಜಮಾ ಆಗಲಿದೆ.

ಇದನ್ನೂ ಓದಿ: Hakku Patra: ರಾಜ್ಯದ 7 ಸಾವಿರ ರೈತರಿಗೆ ಹಕ್ಕು ಪತ್ರ !! ಏಷ್ಟು ಎಕರೆ ಭೂಮಿ ಪತ್ರ ವಿತರಣೆ?

ಪಿಎಂ ಕಿಸಾನ್ 16ನೇ ಕಂತು: ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರನ್ನು ಸಬಲೀಕರಣಗೊಳಿಸುವ ಯೋಜನೆಯಾಗಿದ್ದು, ಅದರ ಮೂಲಕ ಅವರು ಹಣಕಾಸಿನ ನೆರವು ಪಡೆಯಬಹುದು. PM ಕಿಸಾನ್ ಯೋಜನೆಯ 15 ನೇ ಕಂತು ನವೆಂಬರ್ 15, 2023 ರಂದು ಬಿಡುಗಡೆಯಾಗಿದೆ. ಈಗ ರೈತರು PM ಕಿಸಾನ್ ಯೋಜನೆಯ 16 ನೇ ಕಂತುಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಆದಾಗ್ಯೂ, 16 ನೇ ಕಂತು ತಮ್ಮ ಇ-ಕೆವೈಸಿ ಮಾಡಿದ ರೈತರಿಗೆ ಮಾತ್ರ ಲಭ್ಯವಿರುತ್ತದೆ. ಇ-ಕೆವೈಸಿ ಮಾಡಲು ಕೊನೆಯ ದಿನಾಂಕ ಫೆಬ್ರುವರಿ 15 , 2024. ಆಗಿದ್ದು . ಎಲ್ಲಾ ಅರ್ಹ ರೈತರು ತಮ್ಮ ಇ-ಕೆವೈಸಿಯನ್ನು ಸಮಯಕ್ಕೆ ಸರಿಯಾಗಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಇದರಿಂದ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಅರ್ಹ ಫಲಾನುಭವಿಗಳು EKYC ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 16000 ಸಾವಿರ ರೈತರು EKYC ಮಾಡುವುದು ಬಾಕಿ( Pending ) ಇರುತ್ತದೆ.

EKYC ಮಾಡಿಸದೆ ಬಾಕಿ ಇರುವ ರೈತರ ಯಾದಿಯನ್ನು ಉತ್ತರ ಕನ್ನಡ ಜಿಲ್ಲೆಯ ಬರುವ ಎಲ್ಲಾ ತಾಲೂಕಗಳ ಸಂಬಂದ ಪಡುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪ್ರದರ್ಶಿಸಲಾಗಿದೆ. ಅರ್ಹ ಫಲಾನುಭವಿಗಳು ಆಧಾರ ಕಾರ್ಡ ಹಾಗೂ ಆಧಾರ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಹತ್ತಿರದ ಕೃಷಿ ಇಲಾಖೆಗೆ, ಅಥವಾ ಗ್ರಾಮ್ ಓನ್, CSC (Common Service Centres )ಕರ್ನಾಟಕ ಓನ್, Karnataka One centres ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದಾಗಿರುತ್ತದೆ.

ಇದನ್ನೂ ಓದಿ: Bara Parihara list-2024: ರಾಜ್ಯದ 29 ಲಕ್ಷ ರೈತರಿಗೆ 545 ಕೋಟಿ ಬರ ಪರಿಹಾರ !! ನಿಮಗೂ ಬಂದಿದೇ ಚೆಕ್ ಮಾಡಿ??

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಅರ್ಹ ಫಲಾನುಭವಿಗಳು ಮರಣ ಹೊಂದಿದ್ದಲ್ಲಿ ಅಂತಹ ರೈತರ ಕಡ್ಡಾಯವಾಗಿ ಮರಣ ದಾಖಲೆ ಹಾಗೂ ಆಧಾರ ಪ್ರತಿಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ನೀಡಬೇಕು.

ವಿಶೇಷ ಮಾಹಿತಿ: ಒಂದು ವೇಳೆ ನಿಮ್ಮ ಮೊಬೈಲ್ ನಂಬರ್‍ ಆಧಾರ್‍ ಕಾರ್ಡ ಗೆ ಲಿಂಕ್ ಇಲ್ಲದೇ ಇದ್ದರೆ ಆ ಸಂದರ್ಭದಲ್ಲಿ ಈ ಕೆಳಗೆ ಕಾಣಿಸಿದ ಲಿಂಕ್ ಮೇಲೇ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಇನ್ಟಾಲ್ ಮಾಡಿಕೊಂಡು
EKYC ಮಾಡಿಕೊಳ್ಳಬಹುದಾಗಿರುತ್ತದೆ.

ಮೊಬೈಲ್ ನಲ್ಲಿ E -KYC ಮಾಡುವುದು?
ಮುಖ್ಯವಾಗಿ ಈ ಆಪ್ PM Kisan app ಇಸ್ಟಾಲ್ ಮಾಡಿಕೊಂಡಲ್ಲಿ ಫಲಾನುಭವಿಗಳು ವಯಸ್ಸಾದಲ್ಲಿ, ಅಂಗವವೀಕಲತೆ ಆದಲ್ಲಿ ಈ ಆಪ್ ಬಹಳ ಉಪಯೋಗವಾಗಲಿದೆ.
ಕಚೇರಿಗಳಿಗೆ ಅಲೆದಾಡು ಅವಶ್ಯಕತೆ ಇರುವುದಿಲ್ಲ. ಕೂಡಲೇ ಈ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ.

ಇದನ್ನೂ ಓದಿ: Loan interest waive Order: ರಾಜ್ಯದ ರೈತರ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಿದ ಅಧಿಕೃತ ಆದೇಶ :

ಇತ್ತೀಚಿನ ಸುದ್ದಿಗಳು

Related Articles