ರೈತ ಬಾಂದವರೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ರೈತರಿಗೆ ಆರ್ಥಿಕ ಸಹಾಯಧನವಾಗಿ ವಾರ್ಷಿಕವಾಗಿ ಕೇಂದ್ರ ಸರ್ಕಾರ 6000/-ರೂ ಗಳನ್ನು 4 ತಿಂಗಳಿಗೆ ಒಮ್ಮೆ 2000/-ರೂ ರಂತೆ ಆರ್ಥಿಕ ಸಹಾಯಧನವಾಗಿ 01/02/2019 ರಿಂದ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಮೂಲಕ ಇದುವರೆಗೆ ಒಟ್ಟು 15 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ.
ಹಾಗಿದ್ದರೆ ನೀವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Scheme) ಫಲಾನುಭವಿಯಾಗಿದ್ದರೆ, ನಿಮಗಾಗಿ ಸಂತಸದ ಸುದ್ದಿ ಇದೆ. ಸರ್ಕಾರ ಶೀಘ್ರದಲ್ಲೇ ಯೋಜನೆಯ 16 ನೇ ಕಂತು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: APJ and Murarji application : ವಸತಿ ಶಾಲೆಗಳ ಪ್ರವೇಶಗಳಿಗೆ ಅರ್ಜಿ ಆಹ್ವಾನ:
PM kisan Scheme 16 Installment: 16ನೇ ಕಂತಿನ ಬಿಡುಗಡೆ ಯಾವಾಗ?
ಪ್ರಧಾನ ಮಂತ್ರಿ ಮೋದಿ ಅವರು ಇದೇ 28 ಫೆಬ್ರವರಿ 2024 ರಂದು 16 ನೇ ಕಂತಿಗೆ ನೇರ ಲಾಭ ವರ್ಗಾವಣೆಯ DBT ಮೂಲಕ ಹಣವನ್ನು ವರ್ಗಾಯಿಸುತ್ತಾರೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಯೋಜನೆಯ ಮೊತ್ತವನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಮೊದಲು, ಯೋಜನೆಯ 15 ನೇ ಕಂತಿಗೆ ಹಣವನ್ನು PM ಮೋದಿ ಅವರು 15 ನವೆಂಬರ್ 2023 ರಂದು ಜಾರ್ಖಂಡ್‌ನ ಖುಂಟಿಯಿಂದ ವರ್ಗಾಯಿಸಿದರು. ಈ ಯೋಜನೆಗೆ 5 ವರ್ಷ ಪೂರ್ಣಗೊಂಡಿರುತ್ತದೆ.
Scheme Initiation and Number of Beneficiaries: ಯೋಜನೆ ಆರಂಭ ಮತ್ತು ಫಲಾನುಭವಿಗಳ ಸಂಖ್ಯೆ:
ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸರ್ಕಾರವು ಈ ಯೋಜನೆಯನ್ನು ಮೊದಲು 24 ಫೆಬ್ರವರಿ 2019 ರಂದು ಅಂದರೆ 5 ವರ್ಷಗಳ ಹಿಂದೆ ಪ್ರಾರಂಭಿಸಿತು. 2019 ರಿಂದ, ಸರ್ಕಾರವು 11 ಕೋಟಿಗೂ ಹೆಚ್ಚು ರೈತ ಕುಟುಂಬಗಳ ಖಾತೆಗಳಿಗೆ ರೂ 2.80 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸುವ ಮೂಲಕ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಸಹಾಯಧನವನ್ನು ನೀಡಿದೆ.
Scheme will not be profitable: ಈ ರೈತರಿಗೆ ಯೋಜನೆಯ ಲಾಭ ಸಿಗುವುದಿಲ್ಲ ಕಾರಣ:
ಯೋಜನೆ ನೋಂದಣಿ ಮಾಡಿಕೊಂಡು ಒಂದಿ ವೇಳೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವು ಲಭ್ಯವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ರೈತರು ಇ-ಕೆವೈಸಿ ಮಾಡುವುದು ಮತ್ತು ಭೂಮಿಯನ್ನು ಪರಿಶೀಲಿಸುವುದು ಅವಶ್ಯಕ. ನೀವು ಹಾಗೆ ಮಾಡಲು ವಿಫಲವಾದರೆ, ನೀವು ಯೋಜನೆಯ
ಪ್ರಯೋಜನಗಳಿಂದ ವಂಚಿತರಾಗುತ್ತೀರಿ.
E -kyc ಮಾಡುವ ವಿಧಾನ:
ಇಲ್ಲಿ ಓತ್ತಿ https://exlink.pmkisan.gov.in/aadharekyc.aspx
ಮೊದಲು ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ ನಂತರ
ಹಂತ:1: ಇಲ್ಲಿ ಫಲಾನುಭವಿಗಳ ಆಧಾರ ನಂಬರ್ ನಮೂದಿಸಿಕೊಳ್ಳಿ. Search ಬಟನ್ ಮೇಲೆ ಓತ್ತಿ.
ಹಂತ:2: ನಂತರ ಆಧಾರ್ ಜೋಡಣೆಯಾದ ಮೊಬೈಲ್ ನಂಬರ್ ನಮೂದಿಸಿಕೊಳ್ಳಿ.Get OTP ಬಟನ್ ಮೇಲೆ ಓತ್ತಿ.
ಹಂತ:3:ನಂತರ ನಿಮ್ಮ ಮೊಬೈಲ್ ನಂಬರ್ ಗೆ 4 ಸಂಖ್ಯೆಯ OTP ಬಂದಿರುತ್ತದೆ. ಅದನ್ನು ನಮೂದಿಸಿಕೊಳ್ಳಿ. Get OTP ಬಟನ್ ಮೇಲೆ ಓತ್ತಿ.
ಹಂತ:4: ನಂತರ ಅದೇ ನಂಬರ್ ಗೆ 6 ಸಂಖ್ಯೆಯ OTP ಬಂದಿರುತ್ತದೆ. ಅದನ್ನು ನಮೂದಿಸಿಕೊಳ್ಳಿ. ಅಲ್ಲಿಗೆ ಈ ಒಂದು E -kyc ಮಾಡುವ ವಿಧಾನ ಪೂರ್ಣಗೊಂಡ ಮಾಹಿತಿ ದೊರೆಯುವುದು.
Pmkisan 16th instalment-ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16 ನೇ ಕಂತಿನ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ:
Pmkisan 16th instalment ಅರ್ಹ ಪಟ್ಟಿ ಬಿಡುಗಡೆ, ಇಲ್ಲಿದೆ ನಿಮ್ಮ ಹೆಸರು ಚೆಕ್ ಮಾಡಲು ಈ ಲಿಂಕ್ ಮೇಲೆ ಓತ್ತಿ.
https://pmkisan.gov.in/
ನಂತರ “Beneficiary list” ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಫಲಾನುಭವಿಗಳ ರಾಜ್ಯ, ಮತ್ತು ಜಿಲ್ಲೆ,ಹಾಗೂ ಉಪ ಜಿಲ್ಲೆ ಅಥವಾ Block Or ನಿಮ್ಮ ತಾಲೂಕ ನಂತರ ಗ್ರಾಮ ಆಯ್ಕೆ ಮಾಡಿ
ನಂತರ,
ಕೆಳಗೆ ಕಾಣುವ Get report ಮೇಲೆ ಓತ್ತಿದರೆ ನಿಮ್ಮ ಗ್ರಾಮದ ಸಂಪೂರ್ಣವಾದ ಪಟ್ಟಿ ಗೋಚರಿಸುತ್ತದೆ.