Thursday, September 19, 2024

ಪಿಎಂ ಕಿಸಾನ್ 13ನೇ ಕಂತಿನ ಹಣ, ಯಾವಾಗ ಜಮಾ, ಯಾರಿಗೆ, ಯಾರಿಗೆಲ್ಲಾ ಇಲ್ಲ,ಯಾಕೆ, ತಿಳಿಯಿರಿ.

ಪಿಎಂ ಕಿಸಾನ್ 13ನೇ ಕಂತು : ಕೊನೆಗೂ ಪಿಎಂ ಕಿಸಾನ ಯೋನೆಯ 13ನೇ ಕಂತು ಯಾವಾಗ ಬರಲಿದೆ ಎನ್ನುವ ಮಾತಿಗೆ ತೆರೆ ಬಿದ್ದಿದೆ. ಈ ಸಲದ ಪಿಎಂ ಕಿಸಾನ್ 13ನೇ ಕಂತು ಫೆಬ್ರುವರಿ 27 ರಂದು ಅಂದರೆ ಈ ದಿನವೇ ರೈತರ ಖಾತೆಗೆ ಜಮಾ ಆಗಲಿದೆ.

PM KISAN 13ನೇ ಕಂತಿನ ಹಣ ಬಿಡುಗಡೆ

ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯ 13ನೇ ಕಂತಿನ ಹಣವು ಬಿಡುಗಡೆಯಾಗುವ ದಿನ ನಿಗದಿಯಾಗಿದ್ದು, 10 ಕೋಟಿಗೂ ಅಧಿಕ ರೈತರಿಗೆ ಏಕಕಾಲದಲ್ಲಿ 2,000 ರೂ ಅವರ ಖಾತೆಗೆ ಜಮೆಯಾಗಲಿದೆ, ತುಂಬಾ ದಿನದ ಹಣ ಬಿಡುಗಡೆ ಆಗಿರಲಿಲ್ಲ ಹಾಗೂ ಬೇರೆ ಬೇರೆ ವರದಿಯ ತಪ್ಪು ದಿನಾಂಕದ ಮಾಹಿತಿಯ ನಂತರ ಕೊನೆಗೂ ಅಧಿಕೃತ ದಿನಾಂಕದ ವರದಿ ನಮಗೆ ದೊರೆತ್ತಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಆಗಿರುವ ಶೋಭಾ ಕರಂದ್ಲಾಜೆಯವರು ಈ ಅಧಿಕೃತ ಮಾಹಿತಿಯನ್ನು ಟ್ವೀಟ್ ಮಾಡಿದ್ದು, ಇದೇ ಫೆಬ್ರುವರಿ 27 ರಂದು ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಲಿದ್ದು, ಈ ಕಾರ್ಯಕ್ರಮದಲ್ಲಿ ಮೋದಿಯವರು ಪಿಎಂ ಕಿಸಾನ್ 13ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

ಯಾರಿಗೆ ಬರಲಿದೆ ಈ ಸಲದ ಪಿಎಂ ಕಿಸಾನ್ 13ನೇ ಕಂತು?

ಈ ಸಲ ಪಿಎಂ ಕಿಸಾನ್ ಯೋಜನೆಯಲ್ಲಿ ಕೆಲವೊಂದು ಅವಶ್ಯಕ ಬಲಾವಣೆ ತಂದಿದ್ದು, ಈಗಾಗಲೇ ಪಿಎಂ ಕಿಸಾನ್ 13ನೇ ಕಂತಿನ ಹಣ ಬಿಡುಗಡೆಯಾಗಲಿರುವ ಪಟ್ಟಿ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದ್ದು, (ನಿಮ್ಮ ಹೆಸರನ್ನು ಚೆಕ್ ಮಾಡಲು


ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://pmkisan.gov.in/Rpt_BeneficiaryStatus_pub.aspx
ಇವರಿಗೆ ಮಾತ್ರ ಬರಲಿದೆ ಪಿಎಂ ಕಿಸಾನ್ 13ನೇ ಕಂತು! ನಿಮ್ಮ ಹೆಸರು ಇದೆಯಾ ಎಂದು ಇಲ್ಲಿ ಚೆಕ್ ಮಾಡಿ(PM Kisan Beneficiary List)
ನಿಮ್ಮ ಹೆಸರು ಇದೆಯೋ ಇಲ್ಲವೇ ಎಂದು ನೋಡಿಕೊಳ್ಳಿ, ನಿಮ್ಮ ಪಿಎಂ ಕಿಸಾನ್ ಖಾತೆಯಲ್ಲಿ ಏನಾದರೂ ದೋಷವಿದ್ದಲ್ಲಿ ನಿಮಗೆ ಬರದೇ ಇರಬಹುದು.

ವಿಶೇಷ ಮಾಹಿತಿ : ಈ 3 ತಪ್ಪುಗಳಿದ್ದರೆ ನಿಮಗೆ ಈ ಸಲದ ಪಿಎಂ ಕಿಸಾನ್ ಹಣ ಜಮೆ ಆಗಲ್ಲ! ಕೂಡಲೇ ಸರಿಪಡಿಸಿಕೊಳ್ಳಿ.
ಒಂದು ವೇಳೆ ನೀವು ಇನ್ನು eKYC ಮಾಡಿಸಿಲ್ಲವೆಂದರೆ ನಿಮಗೆ ಈಸಲದ ಹಣ ಬರುವುದಿಲ್ಲ, ಆದ್ದರಿಂದ ಕೂಡಲೇ eKYC ಮಾಡಿಸಿಕೊಳ್ಳಿ. eKYC ಮಾಡುವ ವಿಧಾನ ತಿಳಿಸಲು

ಈ ಒಂದು ನಿಮಿಷದ ಕೆಲಸಕ್ಕೋಸ್ಕರ 13ನೇ ಕಂತಿನ ಹಣ ನೀವು ಬಿಡಿತ್ತೀರಾ?? ಇಲ್ಲ ತಾನೆ!
ನಿಮ್ಮ ಪಿಎಂ ಕಿಸಾನ ಖಾತೆಗೆ ಈ ಕೆವೈಸಿ ಆಗಿದೆಯೋ ಅಥವಾ ಇಲ್ಲ ಎಂಬುದನ್ನು ಮೊದಲಿಗೆ ಕನ್ಫರ್ಮ ಮಾಡಿಕೊಳ್ಳಿ ಇದನ್ನು ಮಾಡಬೇಕಾದರೆ ನೀವು ಡೈರೆಕ್ಟಾಗಿ Googleನಲ್ಲಿ OTP Based e-Kyc ಎಂದು ಸರ್ಚ ಮಾಡಿ ಅಥವಾ ಇಲ್ಲಿ ನಿಮಗೆ ನೀಡಿರುವ ಆಫೀಸಿಯಲ್ ಲಿಂಕ್

ಇದನ್ನೂ ಓದಿ : ಇಲ್ಲಿದೆ PM Kisan eKYC ಮಾಡಿಸುವ ವಿಧಾನ. https://krishimahiti.com/e-kyc-pmkisan-adhara-mobile-check/

ಅನರ್ಹರ ಪಟ್ಟಿ ಬಿಡುಗಡೆ :


ಆದಾಯ ತೆರಿಗೆದಾರರು, ಶ್ರೀಮಂತರು, ಸರ್ಕಾರಿ ನೌಕರರು ಈ ಯೋಜನೆಗೆ ಅರ್ಹರಾಗಿಲ್ಲದಿದ್ದರೂ ಪಿಎಂ ಕಿಸಾನ್ ಯೋಜನೆಯಡಿ ಸ್ವಯಂ ನೋಂದಣೆ ಅವಕಾಶ ನೀಡಿತ್ತು, ಇದರಲ್ಲಿ ಅನರ್ಹರು ಕೂಡ ಯೋಜನೆಯ ಹಣ ಪಡೆಯುತ್ತಿದ್ದಾರೆ, ಇದನ್ನು ತೆಗೆಯಲು ಈಗಾಗಲೇ eKYC ಜಾರಿಗೊಳಿಸಿದ್ದು, ವಂಚಿಸುತ್ತಿರುವವರಿಗೆ ಎಚ್ಚರಿಕೆ ನೀಡಲಾಗಿದ್ದು, ಪಿಎಂ ಕಿಸಾನ್ ನ ಅಧಿಕೃತ ವೆಬ್ಸೈಟ್ ನಲ್ಲಿ ಹಣ ಹಿಂದಿರುಗಿಸುವಂತೆ Online Refund ಆಯ್ಕೆ ನೀಡಲಾಗಿದ್ದು, ರಾಜ್ಯದಲ್ಲಿ ಒಟ್ಟು 3.97 ಲಕ್ಷ ಅನರ್ಹರು ಈ ಯೋಜನೆಯಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಅಧಿಕೃತ ಮಾಹಿತಿಯಿದೆ, ಇದಲ್ಲದೆ ಅನರ್ಹ ರೈತರಿಗೆ ಜಮೆಯಾದ ಹಣವನ್ನು ಹಿಂದಿರುಗಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು, ಈ ಬಗ್ಗೆ ಬ್ಯಾಂಕ್ಗಳ ಜೊತೆ ಚರ್ಚಿಸಲಾಗಿದೆ ಎಂದು ಕೃಷಿ ಆಯುಕ್ತರು ತಿಳಿಸಿದ್ದಾರೆ.


ಇದನ್ನೂ ಓದಿ : ಉಚಿತ ಕಿಸಾನ್ ಕ್ರೇಡಿಟ್ ಕಾರ್ಡನಿಂದ ನಾಲ್ಕು ಲಕ್ಷದವರೆಗೂ ಕೃಷಿ ಸಾಲ

ಇತ್ತೀಚಿನ ಸುದ್ದಿಗಳು

Related Articles