Friday, September 20, 2024

ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಾರ್ಯಕ್ರಮಗಳು

ಅಭಿವೃದ್ಧಿ ಕಾರ್ಯ ಚಟುವಟಿಕೆಗಳು:

1) ಜಾನುವಾರು ಚಿಕಿತ್ಸೆ ಹಾಗೂ ಔಷಧ ಪೂರೈಕೆ:

ಜಾನುವಾರುಗಳ ಅನಾರೋಗ್ಯದ ಸಂದರ್ಭದಲ್ಲಿ ಮತ್ತು ಯಾವುದೇ ತರದ  ರೋಗ ಉದ್ರೇಕಗಳ ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ  ನೀಡಿಕೆ ಹಾಗೂ ಔಷದೋಪಚಾರ.

2) ಜಂತುನಾಶಕ ಔಷಧ ಪೂರೈಕೆ:

ಪಶುಗಳಿಂದ ತಿಳಿದು ಎಲ್ಲ ಜಾನುವಾರುಗಳಿಗೆ ಕಾಲ-ಕಾಲಕ್ಕೆ ಜಂತುನಾಶಕ ಔಷಧಗಳ ವಿತರಣೆ.

3) ಹೊರ ಪರೋಪಜೀವಿಗಳ  ಔಷಧ ನೀಡಿಕೆ:

ಮಲೆನಾಡಿನಲ್ಲಿ  ಜಾನುವಾರುಗಳಿಗೆ  ತೀವ್ರ ರಕ್ತಹೀನತೆ ಉಂಟುಮಾಡುವ  ಮತ್ತು ತೀವ್ರ ತರಹದ ಹಲವು ರೋಗಗಳಿಗೆ ಮೂಲ ಕಾರಣವಾಗಿರುವ ಉಣ್ಣೆ  ಹೇನುನೊಣ ಇತ್ಯಾದಿ  ಹೊರ ಪರೋಪಜೀವಿಗಳ ವಿರುದ್ಧ  ಔಷಧಗಳ ವಿತರಣೆ.

4) ಸಾಂಕ್ರಾಮಿಕ ರೋಗಗಳ ನಿಯಂತ್ರಣ:

ರೋಗ ಉದ್ರೇಕಗಳ ಸಂದರ್ಭದಲ್ಲಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಶಾಲೆಯ ಪರೀಕ್ಷೆಗಳ ಆಧಾರದ ಮೇಲೆ ಸೂಕ್ತ ಚಿಕಿತ್ಸೆ ಹಾಗೂ ನಿಯಂತ್ರಣ ಕ್ರಮ ಕೈಗೊಳ್ಳುವುದು.

ಮಲೆನಾಡಿನಲ್ಲಿ ಕಂಡು ಬರುವ ಸಾಂಕ್ರಾಮಿಕ  ರೋಗಗಳಾದ ಕಾಲುಬಾಯಿ ಜ್ವರ, ಗಂಟಲು ಬೇನೆ, ಚಪ್ಪ ಬೇನೆ ಗಳಂತಹ ಕಾಯಿಲೆಗಳ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಕಾಲಕಾಲಕ್ಕೆ ಲಸಿಕೆ ನೀಡಿಕೆ ಕಾರ್ಯಕ್ರಮ.

ನಾಟಿ ಕೋಳಿಗಳಲ್ಲಿ ಮಾರಣಾಂತಿಕವಾದ  ಕೊಕ್ಕರೆ ರೋಗದ ವಿರುದ್ಧ ನಿಯಮಿತವಾಗಿ ಲಸಿಕಾ ಕಾರ್ಯಕ್ರಮ.

5) ಜಾನುವಾರು ತಳಿ ಅಭಿವೃದ್ಧಿ:

ಅಧಿಕ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಹೋರಿಗಳ ಘನೀಕೃತ ವೀರ್ಯ ಬಳಸಿ  ಕೃತಕ ಗರ್ಭಧಾರಣೆಯ ಮೂಲಕ ಕಡಿಮೆ ಗುಣಮಟ್ಟದ ಸ್ಥಳೀಯ ಜಾನುವಾರು ತಳಿಗಳ  ಉತ್ತಮೀಕರಣ.

 ಯಾವುದೇ ನಿರ್ದಿಷ್ಟ ಗುಣಲಕ್ಷಣ ಹೊಂದಿರದ ಕಳಪೆ ಗುಣಮಟ್ಟದ ಸ್ಥಳೀಯ ಹೋರಿಗಳನ್ನು ಕಸಿ ಮಾಡುವುದು.

6)ಗೊಡ್ಡು ರಾಸುಗಳ ಚಿಕಿತ್ಸಾ  ಶಿಬಿರಗಳ ಆಯೋಜನೆ:

ಬಂಜೆಯಾದ ಹೈನು ರಾಸುಗಳಿಗೆ  ತಜ್ಞ ಪಶುವೈದ್ಯರಿಂದ ವಿಶೇಷ ಚಿಕಿತ್ಸೆ ನೀಡಿ ಉತ್ಪಾದನೆಗೆ ತೊಡಗುವಂತೆ ಮಾಡಲು ಹಳ್ಳಿಗಳಲ್ಲಿ ಶಿಬಿರ ಏರ್ಪಾಡು.

7)  ಮೇವು ಅಭಿವೃದ್ಧಿ:

ಸುಧಾರಿತ ಮೇವಿನ ಬೆಳೆಗಳ ಉತ್ಪಾದನೆಗಾಗಿ ರೈತರನ್ನು ಪ್ರೋತ್ಸಾಹಿಸಲು ವಿವಿಧ ಜಾತಿಯ ಮೇವಿನ ಬೀಜಗಳ ಕಿರು ಪೊಟ್ಟಣ ವಿತರಣೆ.

ಒಣ ಮೇವಿನ ಪೌಷ್ಟೀಕರಣ ದ ಬಗ್ಗೆ ಮತ್ತು ರಸ ಮೇವಿನ ತಯಾರಿಕೆಯ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಸುವುದು.

8) ಉದ್ಯೋಗ ಖಾತ್ರಿ ಯೋಜನೆ:

ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ದನ, ಕುರಿ, ಮೇಕೆ- ಕೊಟ್ಟಿಗೆ ಅಜೋಲಾ ತೊಟ್ಟಿ ಹಾಗೂ ಕೋಳಿ ಶೆಡ್ ನಿರ್ಮಾಣ.

9) ಹೈನುಗಾರಿಕೆ ಅಭಿವೃದ್ಧಿ ಬಡ್ಡಿ ಸಹಾಯಧನ ಯೋಜನೆ:

ಈ ಯೋಜನೆಯಲ್ಲಿ ಹೈನುಗಾರಿಕೆಗಾಗಿ/ ಕುರಿ ಸಾಕಾಣಿಕೆಗಾಗಿ  ಬ್ಯಾಂಕುಗಳಿಂದ ಪಡೆದ 70 ಸಾವಿರದವರೆಗೆ ಸಾಲದ ಮೇಲಿನ ಶೇಕಡಾ 6ಕ್ಕಿಂತ ಹೆಚ್ಚಿನ ಬಡ್ಡಿಯನ್ನು( ಶೇಕಡಾ 5ರವರೆಗೆ)  ಸಹಾಯ ಧನವನ್ನಾಗಿ ನೀಡಿಕೆ.

ವಿಶೇಷ ಘಟಕ ಯೋಜನೆ ಅಡಿಯಲ್ಲಿ  ಆಯ್ದ ಅರ್ಹ ಅನುಸೂಚಿತ  ಜಾತಿಯ ಫಲಾನುಭವಿಗಳಿಗೆ ಶೇ. 60 ರ  ಸಹಾಯಧನ ನೀಡಿಕೆ.

10) ಕುಕ್ಕಟ  ಅಭಿವೃದ್ಧಿ:

ಆಯ್ದ ಮಹಿಳಾ ಫಲಾನುಭವಿಗಳಿಗೆ  ಶೇ.50ರ ಸಹಾಯಧನದಲ್ಲಿ ಗಿರಿರಾಜ ಕೋಳಿ ಮರಿಗಳ ವಿತರಣೆ.

ಕರ್ನಾಟಕ ಕುಕ್ಕುಟ ಮಹಾಮಂಡಲದ ಮೂಲಕ ಬಡತನ ರೇಖೆಗಿಂತ ಕೆಳಗಿರುವ S.C, S.T.  ಹಾಗೂ ಸಾಮಾನ್ಯ ಫಲಾನುಭವಿಗಳಿಗೆ ಉಚಿತ ಗಿರಿರಾಜ ಕೋಳಿ ಮರಿ ವಿತರಣೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಆಸಕ್ತಿಯುಳ್ಳ ತರಬೇತಿ ಪಡೆದ ರೈತರಿಗೆ ಮಾಂಸದ ಕೋಳಿ ಘಟಕ ಸ್ಥಾಪನೆಗೆ  ಶೇ.50  ಸಹಾಯಧನ ನೀಡಿಕೆ.

11) ಮೊಲ ಸಾಕಾಣಿಕೆ:

ಆಸಕ್ತ ರೈತರಿಗೆ ಪೂರಕ ಆದಾಯದ ಉಪಕಸುಬಾಗಿ ಮೊಲ ಸಾಕಾಣಿಕೆ ಕೈಗೊಳ್ಳಲು ಇಲಾಖೆಯಿಂದ ರಿಯಾಯಿತಿ ದರದಲ್ಲಿ ಮೊಲದ ಮರಿಗಳ ವಿತರಣೆ.

12) ವಿಸ್ತರಣೆ ಮತ್ತು ತರಬೇತಿ:

ಹೈನುಗಾರಿಕೆಗೆ ಸಂಬಂಧಿಸಿದಂತೆ ತಳಿ ಆಯ್ಕೆ, ಜಾನುವಾರು ನಿರ್ವಹಣೆ, ಆಹಾರಕ್ರಮ, ಮೇವಿನ ಪುಷ್ಟಿಕರಣ, ಸಂಗ್ರಹಣೆ, ಜಾನುವಾರು ಆರೋಗ್ಯ ಸೇರಿದಂತೆ ಸಮಗ್ರ ಜಾನುವಾರು ಅಭಿವೃದ್ಧಿಯ ಕುರಿತು ರೈತರಿಗೆ ಮಾಹಿತಿ ಹಾಗೂ ತರಬೇತಿ.

ಇತ್ತೀಚಿನ ಸುದ್ದಿಗಳು

Related Articles