Thursday, November 21, 2024

Panchamitra Whatsapp Number: ಗ್ರಾಮ ಪಂಚಾಯಿತಿ ಸೇವೆ ಮತ್ತು ಸಮಸ್ಯೆಗಳಿಗೆ ಈ ವಾಟ್ಸಪ್ ನಂಬರ್‍ ಗೆ ಸಂದೇಶ ಕಳುಹಿಸಿ :

ಗ್ರಾಮೀಣ ಪ್ರದೇಶದ ಜನ ಸಾಮಾನ್ಯರಿಗೆ ಗ್ರಾಮ ಪಂಚಾಯಿತಿಯ ಸೇವೆಗಳು ಸರಳ ರೀತಿಯಲ್ಲಿ ದೊರೆಯುವ ದೃಷ್ಟಿಯಿಂದ ಮತ್ತು ಜನ ಸಾಮಾನ್ಯರ ಸಮಸ್ಯೆಗಳು ಮತ್ತು ಕುಂದುಕೊರೆತೆಗಳನ್ನು ಸ್ವೀಕರಿಸಲು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಪಂಚಮಿತ್ರ ವಾಟ್ಸಪ್ ಚಾಟ್ (Panchamitra Whatsapp Chat) ಸೇವೆಯನ್ನು ಜಾರಿಗೊಳಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಆಧಾರಿತ ಇಂಟರ್ನೆಟ್ ಸೇವೆ ಶೇ 96.86ರಷ್ಟು ಉಪಯೋಗಿಸುತ್ತಿದ್ದು ಎಲ್ಲಾ ರೀತಿಯ ಜನರು ಮೊಬೈಲ್ ನ ಬಳಸುವ ಪರಿಣಾಮದಿಂದಾಗಿ ಈ ಒಂದು ಯೋಜನೆ ಜನ ಸಾಮಾನ್ಯರಿಗೆ ಬಹಳ ಅನುಕೂಲವಾಗುವುದು. ಶೇ 80ಕ್ಕೂ ಹೆಚ್ಚು ಜನರು ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಜನರಿಗೆ ಈ ಸೇವೆ ಪಡೆಯುವುದು ಸುಲಭವಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಹೌದು, ಈ ಪಂಚಮಿತ್ರವು ಕರ್ನಾಟಕ ಗ್ರಾಮ ಪಂಚಾಯತಿಗಳ ಮುಖಪುಟವಾಗಿದ್ದು,ಈ ಪಂಚಮಿತ್ರವು ವಾಟ್ಸಪ್ ಚಾಟ್ (Panchamitra Whatsapp Chat) ಸೇವೆಯನ್ನು ಸಾರ್ವಜನಿಕರ ಮಾಹಿತಿಯ ವೇದಿಕೆಯಾಗಿದೆ. ಯಾವುದೇ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ, ಪಂಚಾಯಿತಿ ಸಿಬ್ಬಂದಿಗಳ, ಗ್ರಾಮ ಪಂಚಾಯಿತಿಯ ಸಭಾ ನಡುವಳಿಗಳು, ಮುಂಬರುವ ಸಭೆಗಳ ದಿನಾಂಕ ಮತ್ತು ಅದರಲ್ಲಿ ಚರ್ಚಿಸುವ ವಿಷಯಗಳು, ಗ್ರಾಮ ಪಂಚಾಯಿತಿಯ ಆದಾಯ, ಇತ್ಯಾದಿ ಮಾಹಿತಿಯನ್ನು ಸಾರ್ವಜನಿಕರು ತಿಳಿಯಬವುದಾಗಿರುತ್ತದೆ.

ಇದನ್ನೂ ಓದಿ: Horticulture training : ಮಾಸಿಕ ರೂ, 1750/- ಶಿಷ್ಯವೇತನದೊಂದಿಗೆ ರೈತರ ಮಕ್ಕಳಿಗೆ ತರಬೇತಿ

Panchamitra Services: ಪಂಚಮಿತ್ರ ಅಪ್ ನಲ್ಲಿ ಯಾವೆಲ್ಲಾ ಸೇವೆಗಳು ಲಭ್ಯವಿರುತ್ತವೆ.

ಕಟ್ಟಡ ನಿರ್ಮಾಣ ಪರವಾನಗಿ

ಹೊಸ ನೀರು ಸರಬರಾಜು ಸಂಪರ್ಕ

ನೀರು ಸರಬರಾಜಿನ ಸಂಪರ್ಕ ಕಡಿತ

ಕುಡಿಯುವ ನೀರಿನ ನಿರ್ವಹಣೆ

ಬೀದಿ ದೀಪದ ನಿರ್ವಹಣೆ

ಗ್ರಾಮ ನೈರ್ಮಲ್ಯ ನಿರ್ವಹಣೆ

ವ್ಯಾಪಾರ ಪರವಾನಗಿ

ಸ್ವಾಧೀನ ಪ್ರಮಾಣ ಪತ್ರ • ರಸ್ತೆ ಅಗೆಯುವುದಕ್ಕಾಗಿ ಅನುಮತಿ . ನಮೂನೆ 9/11

ನಮೂನೆ 11 ಬಿ

ನಿರಾಕ್ಷೇಪಣಾ ಪತ್ರ

ನರೇಗಾ ಅಡಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ

ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು

ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ

ಹೊಸ/ಅಸ್ತಿತ್ವದಲ್ಲಿರುವ ದೂರಸಂಪರ್ಕ

ಮೂಲಸೌಕರ್ಯ ಗೋಪುರಕ್ಕೆ ಅನುಮತಿ, ನಿಯಮಿತಗೊಳಿಸುವಿಕೆ

ಹೊಸ/ಅಸ್ತಿತ್ವದಲ್ಲಿರುವ ಓರ್ವ ಗೌಂಡೇಬಲ್

ಮೂಲಸೌಕರ್ಯ/ಭೂಗತ ಕೇಬಲ್ ಮೂಲ

ಲಭ್ಯ ಸೇವೆಗಳು ಸೌಕರ್ಯಕ್ಕಾಗಿ ಅನುಮತಿ, ನಿಯಮಿತಗೊಳಿಸುವಿಕೆ

ಇದನ್ನೂ ಓದಿ: Aadhar card Update : ಆಧಾರ್‍ ನವೀಕರಣ ಮಾಡಲು Website link ಬಿಡುಗಡೆ: ಉಚಿತವಾಗಿ ನವೀಕರಣಕ್ಕೆ ಮಾ. 14 ಕೊನೆಯ ದಿನಾಂಕ:

How to get Panchamitra Service: ಪಂಚಮಿತ್ರ ವಾಟ್ಸಪ್ ಸೇವೆ ಪಡೆಯುವುದು ಹೇಗೆಂದರೆ?

ಗ್ರಾಮೀಣ ಪ್ರದೇಶದ ಜನ ಸಾಮಾನ್ಯರಿಗೆ ಗ್ರಾಮ ಪಂಚಾಯಿತಿಯ ಸೇವೆಗಳು ಸರಳ ರೀತಿಯಲ್ಲಿ ದೊರೆಯುವ ದೃಷ್ಟಿಯಿಂದ ಮತ್ತು ಜನ ಸಾಮಾನ್ಯರ ಸಮಸ್ಯೆಗಳು ಮತ್ತು ಕುಂದುಕೊರೆತೆಗಳನ್ನು ಸ್ವೀಕರಿಸಲು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಪಂಚಮಿತ್ರ ವಾಟ್ಸಪ್ ಚಾಟ್ (Panchamitra Whatsapp Chat) ಸೇವೆಯನ್ನು ಜಾರಿಗೊಳಿಸಿದೆ.

ಈ ವಾಟ್ಸಾಪ್ ಚಾಟ್ , 8277506000 ಸಂಖ್ಯೆಗೆ ವಾಟ್ಸಾಪ್ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್ ಚಾಟ್ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ. ಅಗತ್ಯವಿರುವ ಮಾಹಿತಿ ತಿಳಿಯಬಹುದು.

ಹೆಚ್ಚಿನ ಸೇವೆಗಳಿಗೆ ‘ಪಂಚಮಿತ್ರ – ಸಾರ್ವಜನಿಕ ಮಾಹಿತಿ ಪೋರ್ಟಲ್’ಗೆ ಭೇಟಿ ನೀಡಿ.

ವಿಶೇಷ ಮಾಹಿತಿ: ಪಂಚ ತಂತ್ರ ಜಾಲತಾಣಕ್ಕಾಗಿ ಇಲ್ಲಿ ಓತ್ತಿ.
ಪಂಚ ತಂತ್ರ ಆಪ್ಲಿಕೇಶನಗಾಗಿ ಇಲ್ಲಿ ಓತ್ತಿ

ಇತ್ತೀಚಿನ ಸುದ್ದಿಗಳು

Related Articles