Friday, September 20, 2024

ಪಾನ್ ಕಾರ್ಡ ಗೆ ಆಧಾರ್‍ ಕಾರ್ಡ ಲಿಂಕ್ ಆಗಿರುವುದನ್ನು ಚೆಕ್ ಮಾಡುವುದು ಹೇಗೇ ? ನಿಮ್ಮ ಮೊಬೈಲ್ ಚೆಕ್ ಮಾಡಿಕೊಳ್ಳಿ.

ಆತ್ಮೀಯ ಸ್ನೇಹಿತರೇ ಸದ್ಯ ಕೇಲವು ದಿನಗಳ ಹಿಂದೆ ಪಾನ್ ಕಾರ್ಡ ಗೆ ನಿಮ್ಮ ಆಧಾರ್‍ ಕಾರ್ಡ ಲಿಂಕ್ ಮಾಡುವ ಸುದ್ದಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಚಲಿತದಲ್ಲಿತ್ತು. ಮತ್ತೆ ನೀವು ಎಲ್ಲರೂ ಲಿಂಕ್ ಮಾಡಿಸಿರುವಿರಿ. ಮತ್ತು ಇನ್ನೂ ಸ್ವಲ್ಪ ಜನರು ಮಾಡಿಸುವರು ಇದ್ದಾರೆ. ಆತ್ಮೀಯರೇ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇಂದಿನ ಆಧುನಿಕ ಕಾಲ ಘಟ್ಟದಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.

ಹಾಗಾಗಿ ಲಿಂಕ್ ಮಾಡುವುದು ಬಹಳ ಮುಖ್ಯವಾಗಿರುತ್ತೆ. ಇಲ್ಲದೇ ಹೋದರೆ ಸರ್ಕಾರದ ಹಲವು ಸೌಲಭ್ಯಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಲಿಂಕ್ ಮಾಡಿಸಿದ ಜನರು ಲಿಂಕ್ ಆಗಿದೆಯೋ ಇಲ್ಲಯೋ ಅಂತ ನಿಮ್ಮ ಮೊಬೈಲ್ ಚೆಕ್ ಮಾಡಿಕೊಳ್ಳಿ. ಚೆಕ್ ಮಾಡುವ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿರುತ್ತೆವೆ.

ಇದನ್ನೂ ಓದಿ: ಅತೀ ಕಡಿಮೆ ದರದಲ್ಲಿ ಸ್ವರ್ಣಧಾರ ನಾಟಿ ಕೋಳಿ ಮತ್ತು ಮರಿಗಳು ಲಭ್ಯ

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್

ಈ ಹಿಂದಿನ 31ನೇ ಮಾರ್ಚ್ 2023 ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು ಅಂತಿಮ ದಿನಾಂಕವಾಗಿತ್ತು. ಇದನ್ನು ಮಾಡಲು ಈ ದಿನಾಂಕವನ್ನು 30ನೇ ಜೂನ್ 2023 ವರೆಗೆ ವಿಸ್ತರಿಸಲಾಗಿದೆ.

ಪ್ಯಾನ್-ಆಧಾರ್ ಲಿಂಕ್ನ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಹಂತ 1- ಮೊದಲನೆಯದಾಗಿ ನೀವು ಆದಾಯ tax.gov.in ವೆಬ್ಸೈಟ್ಗೆ ಹೋಗಿ ನಂತರ ನೀವು ಇ-ಫೈಲಿಂಗ್ ಪೋರ್ಟಲ್ನ ಮುಖಪುಟದಲ್ಲಿ ಕ್ವಿಕ್ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ. ನಂತರ

ಹಂತ 2- ಇದರ ನಂತರ ನೀವು ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ ನೀವು ನಿಮ್ಮ PAN ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು View Link Aadhaar Status ಅನ್ನು ಕ್ಲಿಕ್ ಮಾಡಬೇಕು

ಇದನ್ನೂ ಓದಿ: ಈ ಶೈಕ್ಷಣಿಕ ಸಾಲಿನ SSLC ಮತ್ತು ದ್ವೀತಿಯ PUC ವಿದ್ಯಾರ್ಥಿಗಳಿಗೆ ಸಿಹಿಸುದ್ದಿ :

ಹಂತ 3- ನಿಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿದ್ದರೆ ಅದರ ಸ್ಟೇಟಸ್ ಅನ್ನು ನಿಮ್ಮ ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ.

ಹಂತ 4- ಮತ್ತೊಂದೆಡೆ ಇದು ಪ್ರಕ್ರಿಯೆಯಲ್ಲಿದ್ದರೆ ನಿಮ್ಮ ಸ್ಕ್ರೀನ್ ಮೇಲೆ ಪರಿಶೀಲನೆಗಾಗಿ ಆಧಾರ್-ಪ್ಯಾನ್ ಲಿಂಕ್ ಅನ್ನು UIDAI ಗೆ ಕಳುಹಿಸಲಾಗಿದೆ.

ಹಂತ 5- ನಿಮ್ಮ ಪ್ಯಾನ್ ಅನ್ನು ಆಧಾರ್ಗೆ ಲಿಂಕ್ ಮಾಡಿದ್ದರೆ ನಿಮ್ಮ ಪ್ಯಾನ್ ಆಧಾರ್ಗೆ ಲಿಂಕ್ ಆಗಿದೆ ಎಂದು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ.

ಆಧಾರ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಬಹು ಮುಖ್ಯವಾಗಿರುತ್ತೆ

ಇದನ್ನೂ ಓದಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ PM-Kisan 14 ಕಂತಿನ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಯಾರು ತಿಳಿಯಿರಿ

ಕೇಂದ್ರ ಸರ್ಕಾರದೊಂದಿಗೆ ಪ್ರತಿಯೊಂದು ರಾಜ್ಯ ಸರ್ಕಾರವು ಸಹ ಈ ಮಹತ್ವದ ಕೆಲಸವನ್ನು ಹೆಚ್ಚು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿವೆ. ಈ ಮೂಲಕ ಒಂದು ವೇಳೆ ನೀವು ನಿಮ್ಮ ಆಧಾರ್ ಜೊತೆಗೆ ಪಾನ್ ಕಾರ್ಡ್ ಅನ್ನು ಇನ್ನೂ ಮಾಡದಿದ್ದರೆ ಈಗಾಗಲೇ ಮಾಡಿಕೊಳ್ಳಿ ಇಲ್ಲವಾದ್ರೆ ದಿನಾಂಕದ ನಂತರ 2000 ರೂಗಳನ್ನು ನೀಡಲೇಬೇಕಾಗುತ್ತದೆ.

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139AA ಪ್ರಕಾರ 1ನೇ ಜುಲೈ 2017 ರಂತೆ PAN ಅನ್ನು ವಿತರಿಸಿದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯವಿರುತ್ತದೆ.
ಮುಂದಿನ ದಿನಗಳಲ್ಲಿ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡದೇ ಹೋದರೆ ದಂಡ ಇನ್ನೂ ಹೆಚ್ಚಳವಾಗಬಹುದು ಎಂದು ಕೇಂದ್ರ ಹಣಕಾಸು ಸಚಿವರು ಆದ ನಿರ್ಮಲಾ ಸೀತಾರಾಮನ್ ಪತ್ರಿಕೆಗೆ ಮಾಹಿತಿಯನ್ನು ನೀಡಿರುತ್ತಾರೆ.

ಇತ್ತೀಚಿನ ಸುದ್ದಿಗಳು

Related Articles