ರೈತ ಭಾಂದವರಿಗೆ ನಮಸ್ಕಾರಗಳು, ನಮ್ಮ ರೈತರಿಗೆ ಕೃಷಿ ಮಾಡುವಲ್ಲಿ ಹಲವಾರು ಸಮಸ್ಯೆಗಳಿವೆ ಅದರಲ್ಲಿ ಒಂದಾದ ಕೀಟಗಳು ತುಂಬಾ ಹಾನಿಯನ್ನು ಮಾಡುತ್ತವೆ. ಅವುಗಳ ನಿರ್ವಹಣೆ ಹೇಗೆ ಮಾಡಬೇಕು ಅದರಲ್ಲಿ ಭತ್ತಕ್ಕೆ ಹಾಗೂ ಬೆಳೆಗಳಲ್ಲಿ ಬರುವ ಕೀಟಗಳ ನಿರ್ವಹಣೆ ಬಗ್ಗೆ ತಿಳಿದುಕೊಳ್ಳುವ.
1)ಕಾಂಡಕೊರೆಯುವ ಹುಳು:
*ಪ್ರತಿ ವರ್ಷವು ಬರುವ ಪ್ರದೇಶದಲ್ಲಿ ಬೆಳೆ ಕಟಾವಾದ ನಂತರ ಉಳಿದ ಬೆಳೆಯ ಅವಶೇಷವನ್ನು ಬೆಂಕಿ ಹಚ್ಚಿ ಸುಡಬೇಕು.
*ಮಾಗಿ ಉಳುಮೆ ಮಾಡಬೇಕು.
*ಈ ಭಾದೆ ಹೆಚ್ಚಾಗಿರುವ ಪ್ರದೇಶದಲ್ಲಿ ಎಕರೆಗೆ 10 ಕೆ.ಜಿ ಫಿಪ್ರೊನಿಲ್ ಹರಳುಗಳನ್ನು ಬಳಸಬೇಕು.
*ಎಕರೆಗೆ 8ಕೆ.ಜಿ ಕಾರ್ಬೋಪ್ಯೂರಾನ್ ಹಾಕಬೇಕು.
*ಹುಳಭಾದೆ ಹೆಚ್ಚಾಗಿರುವ ಪ್ರದೇಶದಲ್ಲಿ ಎಕರೆಗೆ 10ಕೆ.ಜಿ ಫಿಪ್ರೊನಿಲ್ ಹರಳುಗಳನ್ನು ಹಾಕಬೇಕು.
*ಅಥವಾ ಕ್ಲೋರೋಫೈರಿಫಾಸ್ 2/ಮಿ.ಲಿ ಪ್ರತಿ ಲೀಟರ್ ಸಿಂಪರಣೆ.
2)ಕಣೆಹುಳು:
*ಹೆಚ್ಚಿಗೆ ಸಾರಜನಕ ಬಳಕೆ ಮಾಡಬಾರದು.
*ಆಕರ್ಷಕ ದೀಪ ಬಲೆಗಳನ್ನು ಬಳಸಿ ನಾಶಪಡಿಸುವುದು.
*ಈ ಭಾದೆ ಹೆಚ್ಚಾಗಿರುವ ಪ್ರದೇಶದಲ್ಲಿ ಎಕರೆಗೆ 10 ಕೆ.ಜಿ ಫಿಪ್ರೊನಿಲ್ ಹರಳುಗಳನ್ನು ಬಳಸಬೇಕು.
*ಎಕರೆಗೆ 8ಕೆ.ಜಿ ಕಾರ್ಬೋಪ್ಯೂರಾನ್ ಹಾಕಬೇಕು.
*ಕಾರ್ಬೋಸಲ್ಫಾನ್ ಅಥವಾ ಕ್ಲೋರೋಫೈರಿಫಾಸ್ 2/ಮಿ.ಲಿ ಪ್ರತಿ ಲೀಟರ್ ಸಿಂಪರಣೆ.
ಇದನ್ನೂ ಓದಿ:ಸ್ವ-ಉದ್ಯೋಗ ಮಾಡಲು ಕಡಿಮೆ ಬಡ್ಡಿ ದರದಲ್ಲಿ ಅಂದರೆ ಶೇ.4 ರಂತೆ 2.0 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!
3)ರಸಹೀರುವ ಕೀಟಗಳು:(ಕಂದು ಜಿಗಿ ಹುಳು, ಹಸಿರು ಜಿಗಿ ಹುಳು)
*ಶಿಫಾರಸ್ಸಿನ ಪ್ರಮಾಣದ ಸಾರಜನಕ ಬಳಕೆ ಮಾಡಬೇಕು.
*ಇಮಿಡಾಕ್ಲೋಪ್ರಿಡ್ 1ಮಿ.ಲೀ/ಲೀಟರ್ ಗೆ, ಥಯೋಮಿಥೋಕ್ಸಮ್ 1ಮಿ.ಲಿ/ಲೀಟರ್ ಗೆ ಸಿಂಪರಣೆ ಮಾಡಬೇಕು.
*ಜೈವಿಕ ಶಿಲೀಂಧ್ರನಾಶಕವಾದ ಮೆಟಾರೈಜಿಯಂ 1-2 ಗ್ರಾಂ ಪ್ರತಿ ಲೀಟರ್ ಗೆ ಬೆರೆಸಿ ಸಿಂಪಡಿಸುವುದು.
4)ಎಲೆ/ಗರಿ ತಿನ್ನುವ ಹುಳುಗಳು:
*ಮಿಡತೆಗಳ ನಿರ್ವಹಣೆಗೆ ಬದುಗಳನ್ನು ಸ್ವಚ್ಚವಾಗಿಡಬೇಕು.
*ಈ ಕೀಟಗಳ ನಿರ್ವಹಣೆಗೆ ಕ್ವಿನಾಲ್ಫಾಸ್ 2ಮಿ.ಲಿ/ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
*ಕಾಳಿನಲ್ಲಿ ಹಾಲು ತುಂಬುವ ಹಂತದಲ್ಲಿ ಹೆಚ್ಚಾದರೆ ಪ್ರೊಫೆನೊಫಾಸ್ 2ಮಿ.ಲಿ/ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಇದನ್ನೂ ಓದಿ:ಬೆಳೆ ಸಮೀಕ್ಷೆ ರೈತರೇ ಮಾಡಿದ ಸಮೀಕ್ಷೆ ವರದಿ ನೋಡುವುದು ಹೇಗೆ ಎಂದು ತಿಳಿಯಲು ಇಲ್ಲಿದೆ ಮಾಹಿತಿ!
*ಮೋನೊಕ್ರೊಟೊಫಾಸ್ 2ಮಿ.ಲಿ/ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
*ಕ್ಲೋರೋಫೈರಿಫಾಸ್ 2ಮಿ.ಲಿ/ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಕೀಟಗಳ ನಿರ್ವಹಣೆ ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ. ಸೂಕ್ತ ಮಾಹಿತಿ ಪಡೆದುಕೊಳ್ಳಿ.