Order to cancel ration Card: 3 ಲಕ್ಷ ಅಧಿಕ ರೇಷನ್ ಕಾರ್ಡ ರದ್ದು ಮಾಡಲು ಸರ್ಕಾರ ಆದೇಶ: ನಿಮ್ಮ ರೇಷನ್ ಕಾರ್ಡ ಇದೆಯಾ ಪರಿಶೀಲಿಸಿ:
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಡಿತರ ಚೀಟಿ (Ration Card) ಪ್ರಾಮುಖ್ಯತೆ ಬಹಳ ಹೆಚ್ಚಾಗಿದೆ. ಇನ್ನು ಕೆಲವರು ಕೆಲವು ಸರ್ಕಾರದಿಂದ ರೇಷನ್ ಪಡೆಯದಿದ್ದರೂ ಕೆಲವು ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ಮಾಡಿಸಿದ್ದರು. ಹೀಗೆ, ಪಡಿತರ ಕಾರ್ಡ ಹೊಂದಿದ್ದರೂ ರೇಷನ್ ಪಡೆಯದ 3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್‌ಗಳನ್ನು ಅಮಾನತು ಮಾಡುವಂತೆ ಸರ್ಕಾರ ತೀರ್ಮಾನಿಸಿದೆ.
ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಪಡಿತರ ಚೀಟಿ ಹೊಂದಿದ್ದರೂ 6 ತಿಂಗಳಿಂದ ನಿರಂತರವಾಗಿ ರೇಷನ್ ಪಡೆಯದವರಿಗೆ ಅನ್ನಭಾಗ್ಯ ಯೋಜನೆಯ 5 ಕೆ.ಜಿ. ಅಕ್ಕಿಯ ಹಣ ನೀಡುವುದಿಲ್ಲ ಎಂದು ತಿಳಿಸಿತ್ತು. ಕೇಂದ್ರ ಸರ್ಕಾರ ಈಗ ಎಂದು ತಿಳಿಸಿತ್ತು. ಕೇಂದ್ರ ಸರ್ಕಾರ ಈಗ ನೋಂದಣಿಯಾಗಿರುವ ಪಡಿತರ ಚೀಟಿಗಷ್ಟೇ ಅಕ್ಕಿ ವಿತರಣೆ ಮಾಡುತ್ತಿದ್ದು, ಹೊಸ ಪಡಿತರ ಚೀಟಿಗಳಿಗೆ ಅಕ್ಕಿ ವಿತರಣೆಗೆ ಅನುಮತಿ ನೀಡಿಲ್ಲ.
ಜೊತೆಗೆ, ಹೊಸ ಪಡಿತರ ಚೀಟಿ ವಿತರಣೆ ಮಾಡಿದರೆ, ಹೆಚ್ಚುವರಿ 3 ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆ ನೀಡಲು ಕೋಟ್ಯಂತರ ರೂ. ಹಣ ವ್ಯಯ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ಮನಗಂಡ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಲ್ಲಿಕೆಯಾಗಿದ್ದ 3.9 ಲಕ್ಷ ಹೊಸ ಪಡಿತರ ಚೀಟಿ ಅರ್ಜಿಗಳನ್ನು ಪರಿಶೀಲನೆ ಮಾಡಿ ಕಾಯ್ದಿರಿಸಿತ್ತು.
ಇದನ್ನೂ ಓದಿ: Schoolarship: ವಿದ್ಯಾರ್ಥಿಗಳಿಗೆ 35,0000/- ಸಹಾಯಧನಕ್ಕೆ ಅರ್ಜಿ ಆಹ್ವಾನ:
ಇದನ್ನೂ ಓದಿ: Poutry farm:ಕೋಳಿ ಸಾಕಾಣಿಕೆಗೆ ? ಯಾವೆಲ್ಲ ಅನುಮತಿ ಪಡೆಯಬೇಕು?
ಜೊತೆಗೆ, ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಹಾಕಿದವರಲ್ಲಿ ಅರ್ಹರನ್ನು ಮಾತ್ರ ಪತ್ತೆಹಚ್ಚಲು ಅಧಿಕಾರಿಗಳಿಗೆ ಟಾಸ್ಕ್ ನೀಡಲಾಗಿತ್ತು. ಆದರೆ, ಈಗ ಅರ್ಹರ ಸಂಖ್ಯೆಯೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಹೆಚ್ಚು ಹೊರೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರವು ಈಗಾಗಲೇ ಪಡಿತರ ಚೀಟಿ ಹೊಂದಿದ್ದರೂ ರೇಷನ್ ಪಡೆಯದ ಫಲಾನುಭವಿಗಳ ಪಡಿತರ ಚೀಟಿ ರದ್ದುಗೊಳಿಸಲು ಚಿಂತನೆ ಮಾಡಿದ್ದು, ಅದರಂತೆ ಆದೇಶವನ್ನೂ ಹೊರಡಿಸಲಾಗಿದೆ. ಈ ಮೂಲಕ ಸರ್ಕಾರ ಮುಂದಿನ ಕೆಲವು ವರ್ಷಗಳವರೆಗೆ ಗ್ಯಾರಂಟಿ ಯೋಜನೆಗೆ ಈಗ ಲೆಕ್ಕ ಹಾಕಿರುವುದಕ್ಕಿಂತ ಹೆಚ್ಚುವರಿ ಹಣ ಖರ್ಚಾಗದಂತೆ ಸರಿದೂಗಿಸುವ ಪ್ರಯತ್ನವನ್ನೂ
ಮಾಡುತ್ತಿರಬಹುದು.
ಹೌದು, ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳನ್ನು ಜಾರಿಗೊಳಿಸಲು ಮೂಲ ದಾಖಲೆಯಾಗಿ ಆಧಾರ್‌ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಪರಿಗಣಿಸುತ್ತಿದೆ. ಮಹಿಳೆಯರಿಗೆ 2,000 ರೂ. ಹಣವನ್ನು ನೀಡುವ ಗೃಹಲಕ್ಷ್ಮಿ ಯೋಜನೆ, ಎಲ್ಲ ಪಡಿತರ ಚೀಟಿದಾರರಿಗೆ ತಲಾ 10 ಕೆ.ಜಿ. ಪಡಿತರ ನೀಡುವ ಅನ್ನಭಾಗ್ಯ ಯೋಜನೆಗೆ ಪಡಿತರ ಚೀಟಿಯೇ ಆಧಾರವಾಗಿದೆ. ಹೀಗಾಗಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹೊಸ ಪಡಿತರ ಚೀಟಿ ವಿತರಣೆಯನ್ನು ಸ್ಥಗಿತಗೊಳಿಸಿದೆ. ಜೊತೆಗೆ, ಪಡಿತರ ಚೀಟಿ ಹೊಂದಿದ್ದರೂ ರೇಷನ್ ಪಡೆಯದವರಿಗೆ ಶಾಕ್ ನೀಡಲು ಮುಂದಾಗಿದೆ.
ಕಳೆದ ಸುಮಾರು 6 ತಿಂಗಳಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಆಹಾರ ಇಲಾಖೆ ಮುಂದಾಗಿದೆ. ಈ ನಿಯಮ ಅಂತ್ಯೋದಯ, ಬಿಪಿಎಲ್ ಕಾರ್ಡ್ ಅನ್ವಯಿಸುತ್ತದೆ. ಸದ್ಯ ಆರು ತಿಂಗಳಿಂದ ಒಟ್ಟು 3.26 ಲಕ್ಷ ಜನ ಪಡಿತರ ಪಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಅಂತಹ ರೇಷನ್ ಕಾರ್ಡ್‌ಗಳ ದತ್ತಾಂಶ ಸಂಗ್ರಹಿಸಿ ಅಮಾನತು ಮಾಡುವಂತೆ ಆದೇಶಿಸಿದೆ.
ಸರ್ಕಾರದ ದತ್ತಾಂಶದಂತೆ ಮುಂದಿನ ಒಂದು ವಾರದಲ್ಲಿ 3.26 ಲಕ್ಷ ಕಾರ್ಡ್‌ಗಳು ಅಮಾನತು ಆಗಲಿವೆ. ಈಗಾಗಲೇ ಮೃತರ ಹೆಸರಲ್ಲಿದ್ದ ಪಡಿತರ ಫಲಾನುಭವಿಗಳ ಹೆಸರು ಡಿಲೀಟ್ ಮಾಡಿ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿತ್ತು. ಇದೀಗ 6 ತಿಂಗಳಿನಿಂದ ಅಕ್ಕಿ ಪಡೆಯದ ರೇಷನ್ ಕಾರ್ಡ್‌ಗಳನ್ನು ಸಸ್ಪೆಂಡ್ ಮಾಡಲು ಮುಂದಾಗಿದೆ.
- ರಾಜ್ಯದಲ್ಲಿ ಅಂತ್ಯೋದಯ, ಪಿಹೆಚ್ಹೆಚ್ ಹಾಗೂ ಎನ್ಪಿಎಚ್ಎಚ್ ಸೇರಿ ಒಟ್ಟು 52,34,148 ಕಾರ್ಡ್‌ಗಳಿವೆ. ಈ ಕಾರ್ಡ್‌ನಲ್ಲಿ 1,52,79,343
ರಾಜ್ಯದಲ್ಲಿ ಅಂತ್ಯೋದಯ, ಪಿಹೆಚ್ಹೆಚ್ ಹಾಗೂ ಎನ್ಪಿಎಚ್ಎಚ್ ಸೇರಿ ಒಟ್ಟು 52,34,148 ಕಾರ್ಡ್‌ಗಳಿವೆ. ಈ ಕಾರ್ಡ್‌ನಲ್ಲಿ 1,52,79,343 ಫಲಾನುಭವಿಗಳಿದ್ದಾರೆ. - ರಾಜ್ಯದಲ್ಲಿ 1,27,82,893 ಬಿಪಿಎಲ್ ಕಾರ್ಡ್ ಗಳಿದ್ದು ಇದರಡಿ 4,37,65,128 ಫಲಾನುಭವಿಗಳಿದ್ದಾರೆ.
- ಈ ಎರಡೂ ವಿಭಾಗದಲ್ಲಿ 3.26 ಲಕ್ಷ ಕಾರ್ಡ್‌ಗಳನ್ನು ಅಮಾನತು ಮಾಡಲು ಸರ್ಕಾರ ಮುಂದಾಗಿದೆ. ನಂತರ ಹೊಸ ಕಾರ್ಡ್‌ಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.
ನಿಮ್ಮ ರೇಷನ್ ಕಾರ್ಡ ಸ್ಥಿತಿ ಪರಿಶೀಲನೆ ಮಾಡಲು ಈ ಕೆಳಗಿನ ಲಿಂಕ್ ಓತ್ತಿ ತಿಳಿದುಕೊಳ್ಳಿ:
https://ahara.kar.nic.in/Home/EServices
ಗೃಹಲಕ್ಷೀ ಹಣ ಜಮಾ ಬಗ್ಗೆ ತಿಳಿಯಲು ಈ ಲಿಂಕ್ ಓತ್ತಿ ತಿಳಿಯಿರಿ.
Annabhagya September month amount: ನಿಮ್ಮ ಮೊಬೈಲ್ ನಲ್ಲೇ ನಿಮಗೆ ಎಷ್ಟು ಹಣ ಜಮಾ ಅಗಿದೆ ಎಂದು ಚೆಕ್ ಮಾಡಬವುದು:
ಪಡಿತರ ಚೀಟಿ ಹೊಂದಿರುವವರು ನಿಮ್ಮ ಮೊಬೈಲ್ ಮೂಲಕ ಆಹಾರ ಇಲಾಖೆಯ ಅಧಿಕೃತ ವೆಬ್ಬೆಟ್ ಭೇಟಿ ಮಾಡಿ ನಿಮಗೆ ಎಷ್ಟು ಹಣ ವರ್ಗಾವಣೆ ಅಗಿದೆ ಎಂದು ತಿಳಿದುಕೊಳ್ಳಬವುದು ಮತು ಇತರೆ ಜಿಲ್ಲೆಯವರು ನಿಮ್ಮ ಹಣ ವರ್ಗಾವಣೆ ಯಾವ ಹಂತದಲ್ಲಿದೆ ಎಂದು ಸಹ ಮಾಹಿತಿ ಪಡೆದುಕೊಳ್ಳಬವುದು.
Step-1: Annabhagya DBT Status check ಆಹಾರ ಇಲಾಖೆಯ ವೆಬ್ಬೆಟ್ ಭೇಟಿ ಮಾಡಬೇಕು. ಇಲ್ಲಿ 3 ಲಿಂಕ್ ಗೋಚರಿಸುತ್ತವೆ ಇದರಲ್ಲಿ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
Step-2: ನಂತರ ಈ ಪುಟದಲ್ಲಿ ಕಾಣುವ “ನೇರ ನಗದು ವರ್ಗಾವಣೆಯ ಸ್ಥಿತಿ(DBT)” ಅನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. https://ahara.kar.nic.in/lpg/
Step-3: “select month””September” ಎಂದು ಆಯ್ಕೆ ಮಾಡಿಕೊಂಡು ಕೆಳಗಿನ ನಿಗದಿತ ಕಾಲಂ ನಲ್ಲಿ ನಿಮ್ಮ ರೇಷನ್ ಕಾರ್ಡನ ನಂಬರ್ ಅನ್ನು ಹಾಕಿ ಅಲ್ಲೇ ಕೆಳಗೆ ತೋರಿಸುವ ಕ್ಯಾಪ್ಟಾ ಅನ್ನು ನಮೂದಿಸಿ “GO” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-4: ನಂತರ ಅನ್ನಭಾಗ್ಯ ಯೋಜನೆಯಡಿ ಸೆಪ್ಟೆಂಬರ್ ತಿಂಗಳಲ್ಲಿ ಎಷ್ಟು ಹಣ ಜಮಾ ವಿವರ ತೋರಿಸುತ್ತದೆ ಈ ಪುಟದಲ್ಲಿ ನಿಮ್ಮ ರೇಷನ್ ಕಾರ್ಡನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ? ನಿಮಗೆ ಎಷ್ಟು ಹಣ ಜಮಾ ಅಗುತ್ತದೆ ಎಂದು ತೋರಿಸುತ್ತದೆ. ಮತ್ತು ಈಗಾಗಲೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಅಗಿದ್ದರೆ “Payment Details” ಎಂದು ಕೆಳಗಡೆ ಗೋಚರಿಸುತ್ತದೆ, ಇಲ್ಲಿ ಯಾವ ದಿನ ಹಣ ವರ್ಗಾವಣೆ ಅಗಿದೆ, ಖಾತೆದಾರರ ಹೆಸರು ಮತ್ತು ಬ್ಯಾಂಕ್ ವಿವರ ತೋರಿಸುತ್ತದೆ.
ವಿಷೇಶ ಸೂಚನೆ: ಈ ವೆಬ್ಟ್ ಬೆಳಗ್ಗೆ 8-00 ಗಂಟೆಯ ನಂತರ ಮತ್ತು ರಾತ್ರಿ 8-00 ಗಂಟೆಯ ನಡುವೆ ಮಾತ್ರ ಒಪನ್ ಅಗುತ್ತದೆ ಇದರ ಮಧ್ಯದಲ್ಲೇ ನೀವು ನಿಮ್ಮ ಹಣ ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು.