Sunday, November 10, 2024

Biodiversity Award:2023 ನೇ ಸಾಲಿನ ಅತ್ಯುತ್ತಮ ಜೀವವೈವಿಧ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Biodiversity Award:2023 ನೇ ಸಾಲಿನ ಅತ್ಯುತ್ತಮ ಜೀವವೈವಿಧ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಯಾವ ಯಾವ ವಿಭಾಗಗಳು ಅರ್ಜಿ ಸಲ್ಲಿಸಬಹುದು? ಮಾನದಂಡನೆಗಳೇನು?ಅರ್ಜಿ ಸಲ್ಲಿಸುವುದು ಎಲ್ಲಿ? ಕೊನೆಯ ದಿನಾಂಕ ಯಾವುದು? ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ.

ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಪ್ರತಿ ವರ್ಷ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಅಂಗವಾಗಿ ಜೀವವೈವಿಧ್ಯತೆಯ ಸಂರಕ್ಷಣೆಯ ಕುರಿತಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಜೀವವೈವಿಧ್ಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅದರಂತೆ, 2023 ನೇ ಸಾಲಿನ ಜೀವವೈವಿಧ್ಯ ಪ್ರಶಸ್ತಿಗಾಗಿ ಈ ಕೆಳಕಂಡ ವಿಭಾಗಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಹೊಸ ವೃತ್ತಿ ಪ್ರಾರಂಭಿಸಲು 100000/-ರೂ ಪ್ರೋತ್ಸಾಹಧನ.

Award categories:ಪ್ರಶಸ್ತಿಯ ವಿಭಾಗಗಳು:

Conservation of Biodiversity:ಜೀವವೈವಿಧ್ಯತೆ ಸಂರಕ್ಷಣೆ:
Section wise norms: ವಿಭಾಗಾವಾರು ಮಾನದಂಡಗಳು:
ಜೀವವೈವಿಧ್ಯತೆ ಸಂರಕ್ಷಣೆ ಪ್ರಶಸ್ತಿಗಾಗಿ, ಜೀವವೈವಿಧ್ಯತೆಯ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾರೇ ವ್ಯಕ್ತಿಅಥವಾ ಯಾವುದೇ ಸಂಸ್ಥೆಯು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಸಾವಯವ-ಪಾರಂಪರಿಕ ಕೃಷಿ ಪದ್ಧತಿ :


ಸಾವಯವ-ಪಾರಂಪರಿಕ ಕೃಷಿ ಪದ್ಧತಿ’ ವಿಭಾಗದಲ್ಲಿ ಸಾವಯವ ಅಥವಾ ಪಾರಂಪರಿಕ ಕೃಷಿ ಕ್ಷೇತ್ರದಲ್ಲಿ ಜೀವವೈವಿಧ್ಯತೆಯ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆಯಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿರುವ ವ್ಯಕ್ತಿ/ಸಂಘ/ಸಂಸ್ಥೆಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ‘

ಅತ್ಯುತ್ತಮ ಜೀವವೈವಿಧ್ಯ ನಿರ್ವಹಣಾ ಸಮಿತಿ:


‘ಅತ್ಯುತ್ತಮ ಜೀವವೈವಿಧ್ಯ ನಿರ್ವಹಣಾ ಸಮಿತಿ’ ಪ್ರಶಸ್ತಿ ವಿಭಾಗದಲ್ಲಿ ಸ್ಥಳೀಯ ಸಂಸ್ಥೆಗಳು ಅಂದರೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಪಿತವಾಗಿರುವ ಜೀವವೈವಿಧ್ಯ ನಿರ್ವಹಣಾ ಸಮಿತಿಗಳು, ಜೀವವೈವಿಧ್ಯ ಸಂರಕ್ಷಣೆ ನಿರ್ವಹಣೆಯಲ್ಲಿ ಸಲ್ಲಿಸಿರುವ ಸೇವೆ ಕೊಡುಗೆಗಳನ್ನು ಉಲ್ಲೇಖಿಸಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

‘ಅತ್ಯುತ್ತಮ ಜೀವವೈವಿಧ್ಯ ಸಾಕ್ಷ್ಯ ಚಿತ್ರ:


ಅತ್ಯುತ್ತಮ ಜೀವವೈವಿಧ್ಯ ಸಾಕ್ಷ್ಯ ಚಿತ್ರ ಪ್ರಶಸ್ತಿ ವಿಭಾಗದಲ್ಲಿ ಜೀವವೈವಿಧ್ಯತೆ ಸಂರಕ್ಷಣೆ, ಸುಸ್ಥಿರ ಬಳಕೆಯ ಬಗ್ಗೆ, ಜನ ಸಾಮಾನ್ಯರಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತಹ ಸಾಕ್ಷ ಚಿತ್ರಗಳನ್ನು ಪರಿಗಣಿಸಲಾಗುವುದು ಹಾಗೂ ಸಾಕ್ಷ್ಯಚಿತ್ರಗಳು ಕನಿಷ್ಠ 5 ನಿಮಿಷದಿಂದ ಗರಿಷ್ಠ 15 ನಿಮಿಷಗಳ ಅವಧಿಯೊಳಗೆ ಇರತಕ್ಕದ್ದು.

ಇದನ್ನೂ ಓದಿ: ಮುಂಗಾರು ಸೂರ್ಯಕಾಂತಿ ಬೆಳೆದ ರೈತರಿಗೆ ಸರ್ಕಾರದಿಂದ 6750/- ರೂ ಬೆಂಬಲ ಬೆಲೆ ನಿಗಧಿ;

ಯಾರು ಅರ್ಜಿ ಸಲ್ಲಿಸಬಹುದು – ಸಾಮಾನ್ಯ ಮಾನದಂಡಗಳೇನು?

1.ಅರ್ಜಿ ಸಲ್ಲಿಸುವ ವ್ಯಕ್ತಿಯು ಕರ್ನಾಟಕದಲ್ಲಿ ವಾಸವಾಗಿರುವವರಾಗಿರಬೇಕು ಅಥವಾ ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ಸಂಸ್ಥೆಯಾಗಿರತಕ್ಕದ್ದು.

  1. ವ್ಯಕ್ತಿ/ಸಂಘ/ಸಂಸ್ಥೆಯು ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಇದುವರೆಗೆ ಯಾವುದೇ ಜೀವವೈವಿಧ್ಯತೆಯ ಪ್ರಶಸ್ತಿ’ಯನ್ನು ಪಡೆದಿರಬಾರದು.
  2. ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸಿಬ್ಬಂದಿ/ನೌಕರರಿಗೆ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸ ಅವಕಾಶವಿರುವುದಿಲ್ಲ.
  3. ಪಶಸ್ತಿಗೆ ಅರ್ಹರಾದ (ವ್ಯಕ್ತಿ/ಸಂಘ/ಸಂಸ್ಥೆಯ ಒಪ್ಪಿಗೆಯ ಮೇರೆಗೆ) ನಾಮನಿರ್ದೇಶನ ಮಾಡಬಹುದಾಗಿರುತ್ತದೆ.
  4. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಕಾರ್ಯ ಸಾಧನೆಯನ್ನು ಮಾತ್ರ ಉಲ್ಲೇಖಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
  5. ಸರ್ಕಾರೇತರ ಸಂಸ್ಥೆಯಾಗಿದ್ದಲ್ಲಿ ಪ್ರಶಸ್ತಿ ನೀಡುವ ವರ್ಷಕ್ಕೆ ನೋಂದಾಯಿತವಾಗಿ ಕನಿಷ್ಠ ಮೂರು ವರ್ಷಗಳಾಗಿರಬೇಕು.
  6. ಸರ್ಕಾರಿ, ಅನುದಾನದೊಂದಿಗೆ ನಿರ್ವಹಿಸಲಾದ ಕಾರ್ಯಗಳು/ಯೋಜನೆಗಳು ಕಾರ್ಯಕ್ರಮಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
  1. ವ್ಯಕ್ತಿ ಸಂಘ ಸಂಸ್ಥೆಯು ನಾಲ್ಕು ವಿಭಾಗಗಳಲ್ಲಿ ಒಂದು ವಿಭಾಗಕ್ಕೆ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
  2. ಸರ್ಕಾರದಿಂದ ಮಂಡಳಿಯಿಂದ ರಚನೆಗೊಂಡಿರುವ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಅರ್ಜಿಗಳ ಪರಿಶೀಲನೆ ನಂತರ ಅರ್ಹರನ್ನು ಆಯ್ಕೆ ಮಾಡಲಾಗುವುದು ಹಾಗೂ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
  3. ಅರ್ಜಿದಾರರನ್ನು ಪ್ರಶಸ್ತಿ ಸಮಿತಿಯ ಮುಂದೆ ವೈಯಕ್ತಿಕವಾಗಿ ಹಾಜರಾಗಲು ಆಹ್ವಾನಿಸಲಾಗುವುದಿಲ್ಲ. ಆದುದರಿಂದ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ಅರ್ಜಿಯೊಂದಿಗಿರುವ ಮಾಹಿತಿಗಳೊಂದಿಗೆ ಸಮರ್ಪಕ ರೀತಿಯಲ್ಲಿ ಲಗತ್ತಿಸಿರಬೇಕು. ಅಪೂರ್ಣವಾದ ಹಾಗೂ ಕಾರ್ಯನಿರ್ವಹಿಸಿರುವುದರ ಬಗ್ಗೆ ಆಧಾರವಾಗಿರುವ ದಾಖಲೆ/ಸಾಕ್ಷ್ಯಧಾರ ರುಜುವಾತುಗಳು ಇಲ್ಲದೇ ಸಲ್ಲಿಸಲಾದ ಅರ್ಜಿಗಳನ್ನು ಪ್ರಶಸ್ತಿ ಆಯ್ಕೆಸಮಿತಿಯ ಮುಂದೆ ಮಂಡಿಸಲಾಗುವುದಿಲ್ಲ.
  4. ಪ್ರಶಸ್ತಿ ಆಯ್ಕೆ ಸಮಿತಿಯು ಅಗತ್ಯವಿದ್ದಲ್ಲಿ ಅರ್ಜಿದಾರರು ನಾಮನಿರ್ದೇಶನ ಮಾಡುವವರು ಪ್ರತಿಪಾದಿಸುವ ಕಾರ್ಯಗಳ ಕುರಿತಾಗಿ ಕ್ಷೇತ್ರ ಸಮೀಕ್ಷೆ ನಡೆಸುವ ಅಧಿಕಾರವನ್ನು ಹೊಂದಿರುತ್ತದೆ.
    12, ಜೀವವೈವಿಧ್ಯ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನದೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು,

ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ದಿನಾಂಕ :


1 ದಿನಾಂಕ 15.10.2023 ಸಂಜೆ 5:00ರೊಳಗಾಗಿ ನಿಗದಿತ ವ್ಯಕ್ತಿ ಸಂಘ ಸಂಸ್ಥೆಯು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
2, ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಮುದ್ದಾಂ ಅಥವಾ ಅಂಚೆಯ ಮೂಲಕ ಸಲ್ಲಿಸಬಹುದಾಗಿರುತ್ತದೆ (ಅರ್ಜಿಯ ನಮೂನೆಯನ್ನು ಲಗತ್ತಿಸಲಾಗಿದೆ).

ಇದನ್ನೂ ಓದಿ: 2023-24 ನೇ ಸಾಲಿನ ಉಚಿತ ಹೊಲಿಗೆ ಯಂತ್ರ ಮತ್ತು ಪವರ್‍ ಟೂಲ್ಸ ವಿತರಣೆ :

ಅರ್ಜಿಗಳನ್ನು ಸಲ್ಲಿಸುವ ವಿಳಾಸ


ಸದಸ್ಯ ಕಾರ್ಯದರ್ಶಿಗಳು ಕರ್ನಾಟಕ: ಜೀವವೈವಿಧ್ಯ ಮಂಡಳಿ
ನೆಲಮಹಡಿ, ವನವಿಕಾಸ ಕಟ್ಟಡ, 18ನೇ ಕ್ರಾಸ್
ಮಲ್ಲೇಶ್ವರಂ, ಬೆಂಗಳೂರು – 560003

ಜೀವವೈವಿಧ್ಯತೆಯ ಪ್ರಶಸ್ತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ. ದೂರವಾಣಿ : 080-23448783 Email.kbb.ka.ms@gmailcom; kbb-ka@nic.in;
website: kbb.karnataka.gov.in

ಇದನ್ನೂ ಓದಿ: ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಣಗಳು.
ಇದನ್ನೂ ಓದಿ: ರಾಜ್ಯದಲ್ಲೇ ಅತಿಹೆಚ್ಚು ಬೆಳೆವಿಮೆ ಪರಿಹಾರ ಈ ಜಿಲ್ಲೆಯ ರೈತರಿಗೆ !!!

ಇತ್ತೀಚಿನ ಸುದ್ದಿಗಳು

Related Articles