ಆತ್ಮೀಯ ಸ್ನೇಹಿತರೇ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆವತಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು? ಬೇಕಾದ ದಾಖಲೆಗಳು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಅರ್ಜಿ ಎಲ್ಲಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಸರ್ಕಾರವು ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
Eligibility to Apply: ಅರ್ಜಿ ಸಲ್ಲಿಸಲು ಅರ್ಹತೆಗಳು:
ಈ ಅರ್ಜಿಗಳನ್ನು ಮುಖ್ಯವಾಗಿ ಸರ್ಕಾರದ ನಿಯಾನುಸಾರ ರಾಜ್ಯ ಸರ್ಕಾರದ ನಿಗಮ,ಸಂಸ್ಥೆ, ಗ್ರಾಮ ಹಾಗೂ ಸ್ಥಳೀಯ ಪಂಚಾಯತಿಗಳು, ಕೃಷಿ ಪ್ರಾಥಮಿಕ ಪತ್ತಿನ ಮಾರಾಟ ಸಹಕಾರ ಸಂಘ, ವ್ಯವಸಾಯ ಉತ್ಪನ್ನ ಸಹಕಾರ ಸಂಘ ,ಪ್ರಾಥಮಿಕ ಕೃಷಿ ಸಹಕಾರ ಸಂಘ, ತೋಟಗಾರಿಕಾ ಉತ್ಪನ್ನಗಳ ಬಳಕೆದಾರರ ಸಹಕಾರ ಸಂಘ, ನೊಂದಾಯಿತ ಸಹಕಾರ ಸಂಘ ಹಾಗೂ ಇತರ ಸಹಕಾರ ಸಂಘಗಳು ಹಾಗೂ ಸ್ತ್ರೀಶಕ್ತಿ ಸಂಘಗಳ ಮುಖ್ಯ ಪಟ್ಟಿಗಳಿಗೂ ಹೊಸ ನ್ಯಾಯ ಬೆಲೆ ಅಂಗಡಿ ಪ್ರಾಧಿಕಾರಣದ ಸಾಧನೆಗೆ ಅವಕಾಶ ಇರುತ್ತದೆ.
ಮತ್ತು ಸರ್ಕಾರವು ವಿಕಲಚೇತನರು ಹಾಗೂ ಅಲ್ಪಸಂಖ್ಯಾತರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿರುತ್ತದೆ. ಸರ್ಕಾರಿ ಆಲಿಸಿಯ ಪ್ರಕಾರ ನ್ಯಾಯಬೆಲೆ ಅಂಗಡಿಗಳನ್ನು ಪ್ರಾಧಿಕಾರಣಕ್ಕೆ ತೆರೆಯಲು ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿಗಳನ್ನು ಸರ್ಕಾರವು ನಿಯೋಜಿಸಲಾಗಿದೆ.
ಈ ಸಹಕಾರಿ ಸಂಘಗಳು ಕನಿಷ್ಟ 3 ವರ್ಷದ ಹಿಂದೆ ನೋಂದಾಯಿತರಾಗಿರಬೇಕು.
ಕನಿಷ್ಟ ರೂ.2 ಲಕ್ಷ ರೂಪಾಯಿಗಳ ಬ್ಯಾಂಕ್ ಮೊತ್ತ ಬ್ಯಾಲೆನ್ಸ್ ಹೊಂದಿರಬೇಕು.
ಈ ಒಂದು ಮಾದರಿಯಲ್ಲಿ ಸ್ತ್ರೀ ಸಹಾಯ ಸಂಘಗಳು ರೂ.1 ಲಕ್ಷ ಬ್ಯಾಂಕ್ ಮೊತ್ತ ಬ್ಯಾಲೆನ್ಸ್ ಹೊಂದಿರಬೇಕು.
ಹಾಗೂ ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ರೂ. 50 ಸಾವಿರ ಬ್ಯಾಂಕ್ ಠೇವಣಿ ಹೊಂದಿರಬೇಕು.
ಇದನ್ನೂ ಓದಿ: ಭೂಮಿ ಖರೀದಿಗೆ ಶೇ.50 ರಷ್ಟು ಸಹಾಯಧನ ಈ ಇಲಾಖೆಯಿಂದ.
Required Documents:ಬೇಕಾದ ದಾಖಲೆಗಳು:
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಡ್ಡಾಯವಾಗಿ ಹತ್ತನೇ ತರಗತಿ ಪಾಸಾಗಿರಬೇಕು. (ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಮಾತ್ರ),
ಸಹಕಾರ ಸಂಘ, ಸಂಸ್ಥೆಗಳ ಮತ್ತು ಸ್ವಸಹಾಯ ಸಂಘಗಳಾದರೆ ನೋಂದಾವಣೆ ಪತ್ರ,
ಸಹಕಾರ ಸಂಘ ಸಂಸ್ಥೆಯಾದರೆ ಕಳೆದ 3 ವರ್ಷಗಳ ದೃಢೀಕೃತ ಲೆಕ್ಕ ಪರಿಶೋಧನಾ ವರದಿ,
ಬೈಲಾ, ಪ್ರತನಿಧಿ ನೇಮಕ ನಿರ್ಣಯ, ಅರ್ಜಿ ಸಲ್ಲಿಸಿದ ಸಹಕಾರಿ ಸಂಘದ
ಮೇಲೆ ಯಾವುದೆ ವಿಚಾರಣೆ, ಲಿಕ್ವಿಡೇಷನ್ ನಡವಳಿ ನಡೆದಿರುವುದಿಲ್ಲ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಢೀಕರಣ ಪತ್ರ,
ವ್ಯಾಪಾರದ ಮಳಿಗೆಯ ಖಾತೆ ಅಥವಾ ಬಾಡಿಗೆ ಕರಾರು ಪತ್ರ, ಹಣಕಾಸು
ಹೊಂದಿರುವ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ,
ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ ಪ್ರತಿನಿಧಿಯ ಇತ್ತೀಚಿನ 3 ಭಾವಚಿತ್ರ, ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಪ್ರಕರಣಗಳು ಹೊಂದಿಲ್ಲದಿರುವ
ಬಗ್ಗೆ ಪೆಂಲೀಸ್ ಇಲಾಖೆಯಿಂದ ಪೊಲೀಸ್ ವೆರಿಪಿಕೇಷನ್ ರಿಪೋಟ್‌ರ್ನ್ನು ಪಡೆದು ಕಡ್ಡಾಯವಾಗಿ ಸಲ್ಲಿಸಬೇಕು.
ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ದೃಢೀಕರಣ ಪತ್ರ ಸಲ್ಲಿಸಬೇಕು
ಇದನ್ನೂ ಓದಿ:ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಆಹ್ವಾನ:
ಈ ಒಂದು ಲೇಖನದಲ್ಲಿ ಚಿತ್ರುದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿ ಚಿಕ್ಕಹಳ್ಳಿ ಎಸ್.ಸಿ.ಕಾಲೋನಿ ಗ್ರಾಮಕ್ಕೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಿರುವ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲಿರುವ ಚಿಕ್ಕಹಳ್ಳಿ ಎಸ್.ಸಿ.ಕಾಲೋನಿಯಲ್ಲಿ 7 ಎಎವೈ, 93 ಪಿಹೆಚ್‌ಹೆಚ್ ಸೇರಿದಂತೆ ಒಟ್ಟು 100 ಪಡಿತರ ಚೀಟಿಗಳಿವೆ.ಎಂದು ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.
Last date to apply: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಡಿಸೆಂಬರ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ಧೃಡೀಕೃತ ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿನದೊಳಗೆ, ಜಂಟಿ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಚಿತ್ರದುರ್ಗ ಇವರಿಗೆ ಸಲ್ಲಿಸಲು ತಿಳಿಸಿದೆ.
ನಿಗಧಿತ ಅವಧಿಯ ನಂತರ ಸಲ್ಲಿಕೆಯಾಗುವ ಅಥವಾ ಬೇರೆ ಯಾವುದೇ ಕಚೇರಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಗಧಿತ ಫಾರಂ “ಎ” ಅನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಅಥವಾ ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.