Monday, October 7, 2024

ಮನೆ ಕಟ್ಟುವವರಿಗೆ ಶುಭಸುದ್ದಿ: ಪ್ರಧಾನ ಮಂತ್ರಿ ಆವಾಸ್( ವಸತಿ ) ಯೋಜನೆಯ ಹೊಸ ಮಾರ್ಗಸೂಚಿಗಳು ಪ್ರಕಟ:

ಮನೆ ಕಟ್ಟುವವರಿಗೆ ಶುಭಸುದ್ದಿ:
ಪ್ರಧಾನ ಮಂತ್ರಿ ಆವಾಸ್( ವಸತಿ ) ಯೋಜನೆಯ ಹೊಸ ಮಾರ್ಗಸೂಚಿಗಳು ಪ್ರಕಟ:
ಅರ್ಹರು ಯಾರು ? ಅನರ್ಹ ಯಾರು ಸಂಪೂರ್ಣ ಮಾಹಿತಿ…

ಪ್ರೀಯ ಸ್ನೇಹಿತರೇ ಜೀವನದಲ್ಲಿ ಒಂದು ಉತ್ತಮ ಮನೆ ಕಟ್ಟುವ ಆಸೆ ಯಾರಿಗೆ ತಾನೆ ಇರುವುದಿಲ್ಲ.ಹಣವಂತವರು ತಮಗೆ ಬೇಕಾದ ರೀತಿಯಲ್ಲಿ ಮನೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಆರ್ಥಿಕವಾಗಿ ದುರ್ಬಲವಾಗಿರುವ ಜನರು ಒಂದು ಸೂರಿಗಾಗಿ ಜೀವನ ಪೂರ್ತಿ ಕಷ್ಟ ಪಟ್ಟು ದುಡಿದರು ಮನೆ ನಿರ್ಮಿಸಲು ಆಗುವುದಿಲ್ಲ. ಅಂತವರು ಸಹಾಯಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಬಡವರಿಗೆ ಕಡಿಮೆ ದರದಲ್ಲಿ ಮನೆ ಸಿಗುವಂತೆ ಮಾಡುವ ಕೇಂದ್ರದ ಯೋಜನೆ ಇದಾಗಿದೆ.

2015ರಲ್ಲಿ ಆರಂಭಗೊಂಡ ಪಿಎಂ ಆವಾಸ್ ಯೋಜನೆ 2024ರ ಡಿಸೆಂಬರ್‌ವರೆಗೂ ವಿಸ್ತರಣೆ ಆಗಿದೆ. ಅರ್ಹರಿಗೆ ವಸತಿಗಳನ್ನು ಅನುಮೋದಿಸುವ ಅಧಿಕಾರ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದೆ. ಈ ಯೋಜನೆ ಅಡಿ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಸಿಗುತ್ತದೆ. ಬಡ್ಡಿಯೂ ಬಹಳ ಕಡಿಮೆ. ಸರ್ಕಾರದಿಂದಲೂ ಧನಸಹಾಯ ಇರುತ್ತದೆ. ಈ ಯೋಜನೆಗೆ ಅರ್ಹರು ಯಾರು, ಅನರ್ಹರು ಯಾರು ಎಂಬ ವಿವರ ಇಲ್ಲಿದೆ…

ನಗರ ಪ್ರದೇಶ (Economically Weaker Section)ಅರ್ಹ ಫಲಾನುಭವಿಗಳು ಯಾರು?

ಯೋಜನೆ ಲಾಭ ಪಡೆಯಲು ವ್ಯಕ್ತಿಯು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.

ವರ್ಷದ ಆದಾಯ 3 ಲಕ್ಷ ರೂ ಗಿಂತ ಹೆಚ್ಚಿರಬಾರದು.

Low income Group: ಕೆಳ ಆದಾಯ ಗುಂಪಿನವರು ಇವರ ವಾರ್ಷಿಕ ಆದಾಯ 3ರಿಂದ 6 ಲಕ್ಷ ರು.

Middle income Group : ಮಧ್ಯಮ ಆದಾಯ ಗುಂಪಿನವರು
ವಾರ್ಷಿಕ ಆದಾಯ 6ರಿಂದ 12 ಲಕ್ಷ ರೂ ಗಿಂತ ಹೆಚ್ಚಿರಬಾರದು.

ಮಧ್ಯಮ ಆದಾಯ ಗುಂಪಿನವರು (-MIG-2): ವಾರ್ಷಿಕ ಆದಾಯ 12ಲಕ್ಷರಿಂದ 18 ಲಕ್ಷ ರೂ ಗಿಂತ ಹೆಚ್ಚಿರಬಾರದು ಅಂತ ಸರ್ಕಾರದ ಈ ಯೋಜನೆ ಮಾನದಂಡವಾಗಿರುತ್ತದೆ.

ಇದನ್ನೂ ಓದಿ: ಇಲಾಖೆಯಿಂದ ಅನರ್ಹ ಮತ್ತು ಅರ್ಹ ಪಡಿತರ ಚೀಟಿ ಪಟ್ಟಿ!!

ಇದನ್ನೂ ಓದಿ: CSCCenter : ನೀರುದ್ಯೋಗ ಯುವಕರಿಗೆ ಹಳ್ಳಿಗಳಲ್ಲೆ ಉದ್ಯೋಗ ಮಾಡಲು ಸುವರ್ಣ ಅವಕಾಶ.

ಇದನ್ನೂ ಓದಿ: ಕೃಷಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸಲು 50 ಲಕ್ಷ ಸಾಲ ಸೌಲಭ್ಯ

ಪಿಎಂ ಆವಾಸ್ ಯೋಜನೆಗೆ (ಗ್ರಾಮೀಣ ಪ್ರದೇಶದ ) ಜನರ ಅನರ್ಹರ ಮಾನದಂಡಗಳು:

ಮೋಟಾರು ವಾಹನ, ಎರಡಕ್ಕಿಂತ ಹೆಚ್ಚು ಬೈಕ್, ಸ್ಕೋಟರ್, ಒಂದು ಟ್ರೈಸೈಕಲ್ ಮತ್ತು ಕೃಷಿ ಯಂತ್ರೋಪಕರಣವನ್ನು ಹೊಂದಿದವರು.

ರೂ 50,000 ಹಾಗು ಅದಕ್ಕಿಂತ ಹೆಚ್ಚು ಲಿಮಿಟ್ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರು.

ರಿಫ್ರಿಜರೇಟರ್, ಲ್ಯಾಂಡ್‌ಲೈನ್ ಫೋನ್ ಹೊಂದಿದವರು.

ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವವರು.

ಫಲಾನುಭವಿಯ ಕುಟುಂಬದ ಯಾವುದೇ ಸದಸ್ಯನಿಗೂ ದೇಶದಲ್ಲಿ ಎಲ್ಲಿಯಾದರೂ ಮನೆ ಇದ್ದರೆ ಈ ಯೋಜನೆ ಅನರ್ಹರು.

ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ಮತ್ತು ಗ್ರಾಮೀಣ ಎಂದು ಪ್ರತ್ಯೇಕಗೊಳಿಸಲಾಗಿದೆ. ಫಲಾನುಭವಿಗಳಿಗೆ ಅರ್ಹತಾ ಮಾನದಂಡಗಳನ್ನೂ ಬದಲಿಸಲಾಗಿದೆ.

ಈ ಯೋಜನೆಗೆ ಅರ್ಜಿಸಲ್ಲಿಸಲು ದಾಖಲೆಗಳು:

ಆಧಾರ್ ಕಾರ್ಡ್ ಕಡ್ಡಾಯ.
ಅರ್ಜಿದಾರರು ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವನ್ನು ಪಡೆದಿರಬಾರದು. ಯಾವುದೇ ವಸತಿ ಯೋಜನೆಯಡಿಯಲ್ಲಿ ಭಾರತದ
ಆಸ್ತಿಯು ಕುಟುಂಬದ ಮಹಿಳಾ ಸದಸ್ಯೆಯ ಸಹ-ಮಾಲೀಕತ್ವವನ್ನು ಹೊಂದಿರಬೇಕು.
2011 ರ ಜನಗಣತಿಯ ಪ್ರಕಾರ, ಆಸ್ತಿಯ ಸ್ಥಳವು ಅನುಮತಿಸಲಾದ ಪಟ್ಟಣಗಳು ಮತ್ತು ಅವುಗಳ ಹತ್ತಿರದ ಯೋಜನಾ ಪ್ರದೇಶಗಳ ಅಡಿಯಲ್ಲಿ ಬರಬೇಕು.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಹತೆಯ ಮಾನದಂಡಗಳು ಈ ಕೆಳಗಿನಂತಿವೆ-

  1. PMAY ಸಮಾಜದ ಆರ್ಥಿಕವಾಗಿ ದುರ್ಬಲ ವಿಭಾಗ (Economically Weaker Section)

LIG( Low income Group) (ಕಡಿಮೆ ಆದಾಯ ಗುಂಪು), MIG-I (Middle income Group) (ಮಧ್ಯಮ ಆದಾಯ ಗುಂಪು I), ಮತ್ತು MIG-II (ಮಧ್ಯಮ ಆದಾಯ ಗುಂಪು-II) ವಿಭಾಗಗಳು ಈ ಯೋಜನೆಯ ಲಾಭ ಪಡೆಯಬಹುದು.

  1. ವಸತಿ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಎರಡೂ ಒದಗಿಸಿದ ಸಾಲಗಳ ಮೇಲೆ ಸಹಾಯಧನವನ್ನು ಒದಗಿಸಲಾಗುತ್ತದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ಮತ್ತು ಹೌಸಿಂಗ್ & ಅರ್ಬನ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (HUDCO) ಸಾಲಗಳನ್ನು ವಿತರಿಸುವ ಎರಡು ಕೇಂದ್ರ ಏಜೆನ್ಸಿಗಳಾಗಿವೆ.
  2. ಅರ್ಜಿದಾರರು ಸೇರಿರುವ ವರ್ಗ, ಮತ್ತು ಅರ್ಜಿದಾರರ ವಾರ್ಷಿಕ ಆದಾಯವು ಒದಗಿಸಿದ ಆಧಾರ ಮೇಲೆ ಸಬ್ಸಿಡಿ ಮೊತ್ತವನ್ನು ನಿರ್ಧರಿಸಲಾಗುತ್ತದೆ.
  3. ಸ್ನಾನಗೃಹಗಳು, ಅಡಿಗೆಮನೆಗಳು ಇತ್ಯಾದಿಗಳನ್ನು ಒಳಗೊಂಡಂತೆ ಹೆಚ್ಚುವರಿ ಕೊಠಡಿಗಳನ್ನು ಹೊಂದಲು, ನವೀಕರಿಸಲು ಮತ್ತು ನಿರ್ಮಿಸಲು ಸಹಾಯಧನಗಳು ಲಭ್ಯವಿದೆ.
  4. ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PMAY) ಫಲಾನುಭವಿ:

ಗಂಡ, ಹೆಂಡತಿ ಮತ್ತು ಅವಿವಾಹಿತ ಹೆಣ್ಣುಮಕ್ಕಳು/ಪುತ್ರರು ಆಗಿರಬಹುದು
ಪಕ್ಕಾ ಮನೆಯನ್ನು ಹೊಂದಿರಬಾರದು, ಅಂದರೆ ಮನೆಯು ಅವನ/ಅವಳ ಹೆಸರಿನಲ್ಲಿ ಅಥವಾ ಭಾರತದಾದ್ಯಂತ ಕುಟುಂಬದ ಯಾವುದೇ ಸದಸ್ಯರಲ್ಲಿ ಇರಬಾರದು
ವಯಸ್ಕ ಗಳಿಸುವ ಸದಸ್ಯರನ್ನು ಅವನ/ಅವಳ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಪ್ರತ್ಯೇಕ ಮನೆಯಂತೆ ಪರಿಗಣಿಸಲಾಗುತ್ತದೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಲಾಭ ಪಡೆಯುವ ಆಸಕ್ತರು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಪಟ್ಟಣ , ತಾಲ್ಲೂಕ ಪಂಚಾಯಿತಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಇತ್ತೀಚಿನ ಸುದ್ದಿಗಳು

Related Articles