Navodaya Vidyalaya 2023: ನವೋದಯ ವಿದ್ಯಾಲಯದ ಪ್ರವೇಶಾತಿಗೆ ಅರ್ಜಿ ಆಹ್ವಾನ:
ಅರ್ಹತೆಗಳೇನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಅರ್ಜಿ ಸಲ್ಲಿಸುವ ಲಿಂಕ್ ಯಾವುದು?
ನವೋದಯ ವಿದ್ಯಾಲಯವು ಆಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಭಾರತದಲ್ಲಿನ ಪ್ರತೀ ಜಿಲ್ಲೆಯಲ್ಲಿನ 5ನೆ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಜವಾಹರ್ ನವೋದಯ ವಿದ್ಯಾಲಯಗಳಿಗೆ ಪ್ರವೇಶಾವಕಾಶ ಕಲ್ಪಿಸಿ ಅವರಿಗೆ ಪ್ರವೇಶ ಪರೀಕ್ಷೆಯ ಪ್ರಶ್ನೆಗಳು ಆಯ್ಕೆ ಆಧಾರಿತ ಹಾಗೂ ಸಾಂಕೇತಿಕವಾಗಿರುತ್ತವೆ. ಇತ್ತೀಚೆಗೆ 9ನೇ ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ಕೂಡ ಈ ನವೋದಯ ಪರೀಕ್ಷೆಗೆ ಪ್ರವೇಶಾವಕಾಶ ಕಲ್ಪಿಸಿಕೊಡಲಾಗುತ್ತಿದೆ.
9ನೇ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆಂಗ್ಲ, ಗಣಿತ, ವಿಜ್ಞಾನ ಹಾಗು ಸಮಾಜಜ್ಞಾನ ಆಧರಿತವಾಗಿರುತ್ತದೆ. ವಿದ್ಯಾರ್ಥಿಗಳು ಶಾಲೆ ಬಿಟ್ಟುಹೋದುದರಿಂದ ತೆರವಾದ ಸ್ಥಾನಗಳಿಗೆ 9ನೇ ಮತ್ತು 11ನೇ ತರಗತಿಯ ಪ್ರವೇಶ ಅವಕಾಶಗಳು ನೀಡಲಾಗುತ್ತದೆ. ಈ ಮಾಹಿತಿ ಹೆಚ್ಚು ಹೆಚ್ಚು ಶೇರ್ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಲುಪಿಸಲು ಕೋರಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ರೂ 60,000 ರವರೆಗೆ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!
ನವೋದಯ ಪ್ರವೇಶಕ್ಕೆ ಅರ್ಹತೆಗಳು:
ಈ ನವೋದಯ ಪರೀಕ್ಷೆಗೆ ಪವೇಶ ಮಾಡಲು ಅರ್ಹತೆಗಳು ಈ ಕೆಳಗೆ ನೀಡಲಾಗಿದೆ.
ವಿದ್ಯಾರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರಬೇಕು.
ವಿದ್ಯಾರ್ಥಿಯು 9-12ನೇ ವಯೋಮಿತಿಯಲ್ಲಿರಬೇಕು.
3, 4ಮತ್ತು 5ನೇ ತರಗತಿಯನ್ನು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಗ್ರಾಮೀಣ ಮೀಸಲಾತಿಯಲ್ಲಿ ಪರಿಗಣಿಸಲ್ಪಡುತ್ತಾರೆ.
ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಮೊದಲ ಭಾರಿಗೆ ಮಾತ್ರ ಪಾಲ್ಗೊಳ್ಳಬೇಕು.
ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲಾಗುತ್ತದೆ.
ಶೇ. 80ರಷ್ಟು ಸ್ಥಾನಗಳನ್ನು ಜಿಲ್ಲೆಯ ಗ್ರಾಮೀಣ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿನ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದು. 3ನೇ 1ರಷ್ಟು ಸ್ಥಾನಗಳನ್ನ ಹೆಣ್ಣುಮಕ್ಕಳಿಗೆ ಮೀಸಲಿಡಲಾಗುತ್ತದೆ.
ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗುವ ಎಲ್ಲಾ ವಿದ್ಯಾರ್ಥಿಗಳಿಗೆ 6ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತ ವಿದ್ಯಾಭ್ಯಾಸ ನೀಡಲಾಗುವುದು. ವಿದ್ಯಾರ್ಥಿಗಳ ಎಲ್ಲಾ ಸೌಕರ್ಯವನ್ನು ಅಂದರೆ ಊಟ, ವಸತಿಗಳನ್ನ ನವೋದಯ ವಿದ್ಯಾಲಯ ನೋಡಿಕೊಳ್ಳುತ್ತದೆ. ವಿದ್ಯಾಭ್ಯಾಸದ ಅವಧಿಯಲ್ಲಿ ಅವಶ್ಯಕವಾದ ಶಾಲಾ ಸಮವಸ್ತ್ರ, ಪಠ್ಯ-ಪುಸ್ತಕಗಳು, ಪಾದರಕ್ಷೆಗಳು, ದಿನಬಳಕೆಯ ವಸ್ತುಗಳಾದ ಸೋಪ್, ಪೇಷ್ಟ್ ಎಲ್ಲಾ ವಸ್ತುಗಳನ್ನು ನವೋದಯ ವಿದ್ಯಾಲಯ ಒದಗಿಸುತ್ತದೆ.
ಇದನ್ನೂ ಓದಿ: ಈ ಮೂರು ಯೋಜನೆಯಡಿ ವಿದ್ಯಾರ್ಥಿವೇತನ 2,35,000/- ರೂ ಇಂದೇ ಅರ್ಜಿ ಸಲ್ಲಿಸಿ.
ಈ ಎಲ್ಲಾ ರೀತಿಯ ಸೌಕರ್ಯವಿರುವ ಈ ವಿದ್ಯಾಲಯದ ಪ್ರವೃಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮಡಿಕೇರಿ : ಈ ವಿದ್ಯಾಲಯವು ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ನಡೆಯುವ ಜವಾಹರ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 9 ಮತ್ತು 11 ತರಗತಿಗಳಿಗೆ (ಖಾಲಿ ಇರುವ ಸೀಟಿಗೆ ಅನ್ವಯಿಸಿ) ಪ್ರವೇಶ ಪಡೆಯಲು ಬಯಸುವ ಆಸ್ತಕ ವಿದ್ಯಾರ್ಥಿಗಳಿಂದ ಆನೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅರ್ಜಿ ಸಲ್ಲಿಸಲು ಇದೇ ತಿಂಗಳ ಅಕ್ಟೋಬರ್ 31 ಕೊನೆಯ ದಿನವಾಗಿದೆ.
ಪರೀಕ್ಷೆ ದಿನಾಂಕ:
ಪ್ರವೇಶ ಪರೀಕ್ಷೆಯು 2024 ರ ಫೆಬ್ರವರಿ, 10 ರಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆಯಲಿದೆ ಎಂದು ನವೋದಯ ವಿದ್ಯಾಲಯ ಮಾಹಿತಿಯನ್ನು ತಿಳಿಸಿದೆ.
ಈ ನವೋದಯ ವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಇಚ್ಚೆಸುವವ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸುವ ಜಾಲತಾಣ :
ವಿದ್ಯಾರ್ಥಿಗಳು https://navodaya.gov.in ಗಳಲ್ಲಿ ಸೂಕ್ತ ವಿವರ ಮತ್ತು ದಾಖಲೆಗನ್ನು ಅಪ್ಲೋಡ್ ಮಾಡಬಹುದು.
ಹೆಚ್ಚಿನ ವಿವರಗಳಿಗೆ https://navodaya.gov.in ನಲ್ಲಿ ಪಡೆಯಬಹುದು. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.