ಭಾರತ ಸರಕಾರದ, ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ C,B,S,E ಪಠ್ಯಕ್ರಮ ಆಧಾರಿತ ವಸತಿ ಶಾಲೆಗಳಾದ ಜವಾಹರ ನವೋದಯ ವಿದ್ಯಾಲಯಗಳ 2025-26ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಏನು ಮಾಡಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಏನು ದಾಖಲೆಗಳು ಬೇಕಾಗುತ್ತದೆ ಎಂಬ ಇತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು.
ಹಳ್ಳಿಯ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೆರವು ನೀಡುವುದು ಜವಾಹರ ನವೋದಯ ವಿದ್ಯಾಲಯಗಳ ಮುಖ್ಯ ಗುರಿ. ಈ ವಸತಿ ಶಾಲೆಗಳು ಮಕ್ಕಳಲ್ಲಿ ಶಿಸ್ತು ಮೂಡಿಸುವಲ್ಲಿ ಮತ್ತು ಅವರ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಒತ್ತು ಕೊಡುವಲ್ಲಿ ಯಶಸ್ವಿಯಾಗಿವೆ.
ಸುಸಜ್ಜಿತ ಕಲಿಕಾ ಕೊಠಡಿಗಳು, ಗ್ರಂಥಾಲಯ, ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯಗಳು, ಕ್ರೀಡಾಂಗಣಗಳು ಸೇರಿದಂತೆ ಉತ್ತಮ ಕಲಿಕೆಗೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳು ಇಲ್ಲಿರಲಿವೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಪೌಷ್ಠಿಕ ಆಹಾರ ಮತ್ತು ಸುಸಜ್ಜಿತ ವಸತಿ ಸೌಕರ್ಯಗಳನ್ನು ನೀಡಲಾಗುತ್ತದೆ.
Application-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1)ವಿದ್ಯಾರ್ಥಿಯ ಆಧಾರ್ ಕಾರ್ಡ್
2)ಜಾತಿ ಮತ್ತು ಆದಾಯ ಪ್ರಮಾಣ ಪತ್ರ
3)ವಿದ್ಯಾರ್ಥಿಯ ಫೋಟೋ ಮತ್ತು ಸಹಿ
4)ತಂದೆ/ತಾಯಿ/ಪಾಲಕರ ಸಹಿ
5)ನವೋದಯ ದಾಖಲಾತಿ ಅಧಿಸೂಚನೆಯ ನಮೂನೆಯಲ್ಲಿ ಶಾಲಾ ದೃಡೀಕರಣ
6)ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
7)ಶಾಲಾ ದೃಡೀಕರಣದಲ್ಲಿ 3ನೇ ತರಗತಿಯಿಂದ 5ನೇ ತರಗತಿವರೆಗೆ ವಿದ್ಯಾರ್ಥಿ ದಾಖಲಾದ ವರ್ಷ, ಉತ್ತೀರ್ಣವಾದ ವರ್ಷ ಶಾಲೆಯ ವಿಳಾಸ ಮತ್ತು ವಿವರಗಳನ್ನು ತುಂಬಿಸಿಕೊಳ್ಳಬೇಕು.
ಜವಾಹರ ನವೋದಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
6ನೇ ತರಗತಿ ದಾಖಲಾತಿಯ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಈಗಾಗಲೇ ಆರಂಭವಾಗಿದ್ದು, ಕೊನೆಯ ದಿನಾಂಕ:16/09/2024. ಅಷ್ಟರೊಳಗೆ ಅರ್ಜಿ ಸಲ್ಲಿಸಿ.
ಜವಾಹರ ನವೋದಯ ಪ್ರವೇಶ ಪರೀಕ್ಷೆ ದಿನಾಂಕ:18/01/2025.
ಜವಾಹರ ನವೋದಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಲಿಂಕ್ Click here….