ನಮಸ್ಕಾರ ರೈತರೇ, ರೈತರ ಮಾಹಿತಿಗಾಗಿ ಮತ್ತು ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ರಾಜ್ಯದಲ್ಲಿ ಹಲವಾರು ಕೃಷಿ ಸಂಶೋಧನಾ ಕೇಂದ್ರಗಳಿವೆ ಅದೇ ರೀತಿ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(IIHR) ಯಿಂದ 3 ದಿನಗಳ “ರಾಷ್ಟ್ರೀಯ ತೋಟಗಾರಿಕೆ ಮೇಳ-2025/ National horticulture fair” ನ್ನು ಆಯೋಜನೆ ಮಾಡಲಾಗಿದ್ದು ಮೇಳದ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಸಹ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(IIHR,ಬೆಂಗಳೂರು) ವತಿಯಿಂದ “ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ದಿನಾಂಕ ಫೆಬ್ರುವರಿ 27 ರಿಂದ ಮಾರ್ಚ್ 1 ರವರೆಗೆ ಆಯೋಜನೆ ಮಾಡಲಾಗಿದ್ದು ಕಳೆದ ವರ್ಷ 70,000 ಸಾವಿರಕ್ಕೂ ಅಧಿಕ ರೈತರು ಈ ಮೇಳದಲ್ಲಿ ಭಾಗವಹಿಸಿದ್ದರು ಎಂದು ಸಂಸ್ಥೆಯ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
“ವಿಕಸಿತ ಭಾರತಕ್ಕಾಗಿ ತೋಟಗಾರಿಕೆ-ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ” ಎನ್ನುವ ಶಿರ್ಷಿಕೆಯಡಿಯಲ್ಲಿ ಈ ಬಾರಿಯ ಮೇಳವನ್ನು ಆಯೋಜನೆ ಮಾಡಲಾಗಿದ್ದು ಈ ಬಾರಿಯ ಮೇಳದ ವಿಶೇಷತೆಗಳೇನು? ಮುಂಚಿತವಾಗಿ ಸ್ಟಾಲ್ ಬುಕ್ ಮಾಡಲು ಅನುಸರಿಸಬೇಕಾದ ಕ್ರಮಗಳೇನು? ರೈತರು ಮೇಳದಲ್ಲಿ ಭಾಗವಹಿಸಿ ಯಾವೆಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂಬ ಇತ್ಯಾದಿ ವಿವರವನ್ನು ಇಲ್ಲಿ ತಿಳಿಸಲಾಗಿದೆ.
National horticulture fair-2025- ಮೇಳದಲ್ಲಿ ಯಾವೆಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದು:
1)ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(IIHR,ಬೆಂಗಳೂರು) ವತಿಯಿಂದ ಅಭಿವೃದ್ಧಿ ಪಡಿಸಿರುವ ಸುಧಾರಿತ ನೂತನ ತಳಿಗಳ ಪ್ರಾತ್ಯಕ್ಷಿಕೆ ಕುರಿತು ಪ್ರಾಯೋಗಿಕ ಮಾಹಿತಿಯನ್ನು ಪಡೆಯಬಹುದು.
2)ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿನ ನೂತನ ತಂತ್ರಜ್ಷಾನಗಳ ಕುರಿತು ಮಾಹಿತಿ ಪ್ರದರ್ಶನ ಮಳಿಗೆಗಳು.
3)ತೋಟಗಾರಿಕೆ ಬೆಳೆಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ಸೂಕ್ತ ತಂತ್ರಜ್ಞಾನಗಳ ಮಾಹಿತಿ.
4)ಕೃಷಿ ಯಂತ್ರೋಪಕರಣಗಳ ಪ್ರಾತ್ಯಾಕ್ಷಿಕೆ.
5)250ಕ್ಕೂ ಹೆಚ್ಚಿನ ಕೃಷಿ ಮತ್ತು ತೋಟಗಾರಿಕೆ ಮಾಹಿತಿ ಪೂರಕ ಪ್ರದರ್ಶನ ಮಳಿಗೆಗಳು.
ಈ ಬಾರಿ ಮೇಳದಲ್ಲಿ ವಿಶೇಷವಾಗಿ ಪ್ರದರ್ಶನದಲ್ಲಿರುವ ಬೆಳೆಗಳು:
1)ಕಲ್ಲಂಗಡಿ-ಸೆಲ್4
2)ಬಾಟಲ್ ಸೋರೆಕಾಯಿ-ಅರ್ಕಾ ಶ್ರೇಯಸ್
3)ವ್ಯಾಕ್ಸ್ ಆಪಲ್-CHESM-1
4)ಆವಕಾಡೋ-ಅರ್ಕಾ ಕೂರ್ಗ್ ರವಿ
5)ರೆಡ್ ಡ್ರ್ಯಾಗನ್ ಪ್ರೂಟ್ ಪೌಡರ್ ತಂತ್ರಜ್ಞಾನ
6)ಎಲೆಸುರುಳಿ ನಿರೋಧಕ ಮೆಣಸಿನಕಾಯಿ ಮಿಶ್ರತಳಿಗಳು
ಮುಂಚಿತವಾಗಿ ಸ್ಟಾಲ್ ಬುಕಿಂಗ್ ಮಾಡಲು ಸಂಪರ್ಕಿಸಿ:
ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಾರ್ಟಿಕ್ಚರ್
ICAR-IIHR,BENGLORE-MOBILE NO:8618286559