Thursday, September 19, 2024

ಈ ಯೋಜನೆಯಡಿ ನಿಮ್ಮ ಗ್ರಾಮಕ್ಕಾಗಿ ಮತ್ತು ರೈತ ಸಮುದಾಯಕ್ಕೆ 1.35 ಕೋಟಿ ಕಾಮಗಾರಿ:

ಕೃಷಿಕರಿಗೆ ಗ್ರಾಮೀಣ ಮಟ್ಟದಲ್ಲಿ ಕೃಷಿ ಮತ್ತು ಕೃಷಿ ಪೂರಕ ಕೆಲಸ/ಕಾಮಗಾರಿಗಳನ್ನು ಪ್ರಾರಂಭ ಮಾಡಲು ಆರ್ಥಿಕವಾಗಿ ಸಹಾಯಧನ ಒದಗಿಸಲು ಮತ್ತು ಗ್ರಾಮೀಣ ಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗ ಒದಗಿಸುವ ದೇಸೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು

(Mgnreg Scheme-2023) ನಮ್ಮ ರಾಜ್ಯದ ವಿವಿಧ ಅಭಿವೃದ್ಧಿ ಇಲಾಖೆಗಳಿಂದ ಅನುಷ್ಠಾನ ಮಾಡಲಾಗುತ್ತದೆ.

ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ ಕಡಿಮೆ ಇಲ್ಲದಂತೆ ಅಕೌಶಲ್ಯ ದೈಹಿಕ ಉದ್ಯೋಗವನ್ನು ಒದಗಿಸುವುದರ ನಿಟ್ಟಿನಲ್ಲಿ ನಿಗಧಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಆಸ್ತಿಗಳ ಸೃಜನೆ ಮಾಡುವ ಉದ್ದೇಶದಿಂದಾಗಿ ಕಳೆದ ಅನೇಕ ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರಲಾಗಿದೆ.


ಈ ಯೋಜನೆಯಡಿ 2023 ನೇ ವರ್ಷದಲ್ಲಿ ಗ್ರಾಮಕ್ಕಾಗಿ ಮತ್ತು ರೈತ ಸಮುದಾಯಕ್ಕೆ ಯಾವೆಲ್ಲಾ ಕಾಮಗಾರಿಗಳನ್ನು ಮಾಡಲು ಅವಕಾಶವಿರುತ್ತದೆ. ಮತ್ತು ಯಾವ ಕಾಮಗಾರಿಗೆ ಎಷ್ಟು ಮೊತ್ತ ಒದಗಿಸಲಾಗುತ್ತದೆ. ಎಂಬುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಇದನ್ನೂ ಓದಿ: ಈ ಯೋಜನೆತಡಿ 2.50000/- ಲಕ್ಷ ವೈಯಕ್ತಿಕ ಕಾಮಗಾರಿಗೆ ಅವಕಾಶ:

Works For Village and Farming Community Under Narega Scheme: ಗ್ರಾಮಕ್ಕಾಗಿ ಮತ್ತು ರೈತ ಸಮುದಾಯಕ್ಕೆ ಇರುವ ಕಾಮಗಾರಿಗಳು:

ಗ್ರಾಮೀಣ ಗೋದಾಮು ನಿರ್ಮಾಣಕ್ಕಾಗಿ (500 ಎಂ.ಬಿ ಸಾಮರ್ಥ್ಯದ) ರೂ.22.60 ಲಕ್ಷದ ಕಾಮಗಾರಿಗೆ ಅವಕಾಶವಿರುತ್ತದೆ.

ಸಮಗ್ರ ಕೆರೆ ಅಭಿವೃದ್ಧಿಗಾಗಿ ರೂ. 19,90 ಲಕ್ಷದ ಕಾಮಗಾರಿಗೆ ಅವಕಾಶವಿರುತ್ತದೆ.

ಗ್ರಾಮೀಣ ಸಂತೆ ಕಟ್ಟಿ ನಿರ್ಮಾಣಕ್ಕಾಗಿ ರೂ. 16,60 ಲಕ್ಷದ ಕಾಮಗಾರಿಗೆ ಅವಕಾಶವಿರುತ್ತದೆ..

ಸರಕಾರಿ ಶಾಂಪೌಂಡ ನಿರ್ಮಾಣಕ್ಕಾಗಿ ರೂ. 6..40 ಲಕ್ಷದ ಕಾಮಗಾರಿಗೆ ಅವಕಾಶವಿರುತ್ತದೆ.

ಸರಕಾರಿ ಶಾಲಾ ಶೌಚಾಲಯಕ್ಕಾಗಿ ನಿರ್ಮಾಣಕ್ಕಾಗಿ ರೂ. 5.20 ಲಕ್ಷದ ಕಾಮಗಾರಿಗೆ ಅವಕಾಶವಿರುತ್ತದೆ.

ಸರಕಾರಿ ಶಾಲಾ ಅಡಿಗೆ ಗೋಡೆ ನಿರ್ಮಾಣಕ್ಕಾಗಿ ರೂ.7.45 ಲಕ್ಷದ ಕಾಮಗಾರಿಗೆ ಅವಕಾಶವಿರುತ್ತದೆ.

ಸರಕಾರಿ ಶಾಲೆಗೆ ಆಟದ ಮೈದನದಲ್ಲಿ ಬಾಸ್ಟೇಟ್ ಬಾಲ್ ಅಂಕಣ ನಿರ್ಮಾಣಕ್ಕಾಗಿ ರೂ.5.20 ಲಕ್ಷದವರೆಗೆ ಅವಕಾಶವಿರುತ್ತದೆ.

ಕಬ್ಬಡಿ ಅಂಕಣ ನಿರ್ಮಾಣಕ್ಕಾಗಿ ರೂ. 2.60 ಲಕ್ಷ ಖೋ-ಖೋ ಕೋರ್ಟ ನಿಮಾಣದ್ದಾಗಿ ರೂ.3.30 ಲಕ್ಷ .
ಅಂಕ್ಕಾಗಿ ರೂ. ವಾಲಿಬಾಲ್ ಅಂಕಣಕ್ಕೆ. ರೂ. 5.10 ಲಕ್ಷ. ಸಮುದಾಯ ಗೋ ಶಾಲಾ ನಿರ್ಮಾಣಕ್ಕಾಗಿ ರೂ.31. 00 ಲಕ್ಷದ ಕಾಮಗಾರಿಗೆ ಅವಕಾಶವಿರುತ್ತದೆ.

ಸಮುದಾಯ ಶೌಚಾಲಯ ನಿರ್ಮಾಣಕ್ಕಾಗಿ ರೂ. 5.00 ಲಕ್ಷದ ಕಾಮಗಾರಿರಿಗೆ ಅವಕಾಶವಿರುತ್ತದೆ.

ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ರೂ. 8.00 ಅಕ್ಷರ ಕಾಮಗಾರಿಗೆ ಅವಕಾಶವಿರುತ್ತದೆ..

ಶಾಂತಿ ಧಾಮ ಅಭಿವೃದ್ಧಿ ಪಡಿಸುವುದು (ಸ್ಮಶಾನ ಅಭಿವೃದ್ಧಿ) ರೂ. 5.60 ಲಕ್ಷದ ಕಾಮಗಾರಿಗೆ ಅವಕಾಶವಿರುತ್ತದೆ.

ಇದನ್ನೂ ಓದಿ: ನರೇಗಾ ಯೋಜನೆ ಕೂಲಿ ದಿನಗಳು ಹೆಚ್ಚಳ

Incentives for kayaks Under Narega Scheme:ನರೇಗಾ ಯೋಜನೆಯಡಿ ಕಾಯಕಬಂಧುಗಳಿಗೆ ಪ್ರೋತ್ಸಾಹ:

ಕಾಯಕಬಂಧುಗಳಿಗೆ ಮೇಟ್ ಕೂಲಿ ಹಣದ ಜೊತೆಗೆ ಮೇಟ್-ಸಹಾಯ ಧನ ನೀಡಲಾಗುವುದು.
ಕಾಯಕಬಂಧುಗಳಿಗೆ NMMS ಹೊಣೆಗಾರಿಕೆ.

Child care center for labores children under Narega scheme:ಕೂಲಿಕಾರರ ಮಕ್ಕಳಿಗೆ ಶಿಶುಪಾಲನಾ ಕೇಂದ್ರ ಸೌಲಭ್ಯ:
ನರೇಗಾ ಯೋಜನೆತಡಿ ನೋಂದಾಯಿತ ಕುಟುಂಬದ ಕೂಲಿಕಾರ ಮೂರು ವರ್ಷದೊಳಗಿನ ಮಕ್ಕಳಿಗೆ ಶಿಶುಪಾಲನಾ ಕೇಂದ್ರ ನಿರ್ಮಾಣ.
ಪ್ರತಿ ಗ್ರಾಮ ಪಂಚಾಯತಿಗೆ ಒಂದು ಶಿಶುಪಾಲನಾ ಕೇಂದ್ರ ನಿರ್ಮಾಣ .


ನೋಂದಾತಿತ ಕುಟುಂಬಕ್ಕೆ ರೂ.2.50 ಲಕ್ಷದ ವರೆಗೆ ಧನ ಸಹಾಯ ನೀಡಲಾಗುತ್ತದೆ.
ಪ್ರತಿ ಗ್ರಾಮ ಪಂಚಾಯತಿಯಲ್ಲಿ 10 ಜನ ಮಹಿಳಾ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸಲಾಗುವುದು.
ಪ್ರತಿ ದಿದ ಕೂಲಿ ರೂ.316/-ಹೆಣ್ಣು ಗಂಡಿಗೆ ಸಮಾನ ಕೂಲಿ.

ಇದನ್ನೂ ಓದಿ: ಜಲಾನಯನ ಅಭಿವೃದ್ದಿ ಇಲಾಖೆಯಿಂದ ತೆರೆದ ಬಾವಿ, ಡೀಸಲ್ ಪಂಪ್ ಸೆಟ್ ಗೆ ಸಹಾಯಧನ ಅರ್ಜಿ ಆಹ್ವಾನ:

ಹೆಚ್ಚಿನ ಮಾಹಿತಿಗಾಗಿ ಉಚಿತ ಸಹಾಯವಾಣಿ 1800-4258-666 ಕರೆ ಮಾಡಿ ಅಥವಾ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ…

ಇತ್ತೀಚಿನ ಸುದ್ದಿಗಳು

Related Articles