ಆತ್ಮೀಯ ರೈತ ಮಿತ್ರರೇ ಈ ಆಧುನಿಕ ಯುಗದಲ್ಲಿ ರೈತಾಪಿ ಮಾಡುವುದು ಬಹಳ ಸಾಹಸದ ಕೆಲಸ, , ಏಕೆಂದರೆ ಕೃಷಿ ಮಾಡಲು ರೈತರು ಮುಖ್ಯವಾಗಿ ಎದುರಿಸುತ್ತಿರುವ ಕಾರ್ಮಿಕರ ಕೊರತೆ ಮತ್ತು ಪ್ರಕೃತಿ ವಿಕೋಪದಂತಹ ಸಮಸ್ಯೆಗಳು, ಅದರಲ್ಲೂ ಕೃಷಿ ಉತ್ಪನ್ನಗಳ ವೆಚ್ಚವನ್ನು ಕಡಿಮೆ ಮಾಡಿ ಆರ್ಥಿಕವಾಗಿ ಲಾಭಗಳಿಸಬೇಕಾದರೆ ಕೃಷಿಯಲ್ಲಿ ಯಂತ್ರೋಪಕರಣಗಳ ಸದ್ಬಳಕೆ ಮುಖ್ಯವಾಗಿರುತ್ತೆ. ಆ ನಿಟ್ಟಿನಲ್ಲಿ ರೈತನು ತಂತ್ರಜ್ಞಾನಗಳನ್ನು ಬಳಸಿ ಆಧುನಿಕ ಯುಗದಲ್ಲಿ ಕೃಷಿಯನ್ನು ಮಾಡಿದ್ದೆಯಾದರೆ ಕೃಷಿ ಲಾಭಗಳಿಸಬಹುದು ಎನ್ನುವುದಕ್ಕೆ ಉದಾಹರಣೆ ಈ ಮಾಹಿತಿ .ಆಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮಗೆ ಅರ್ಥವಾಗುವುದು.
ಇದನ್ನೂ ಓದಿ: ರೈತರಿಗೊಂದು ಸಿಹಿಸುದ್ದಿ! ಪಿತ್ರಾರ್ಜಿತರ ಹೆಸರಿನಲ್ಲಿರುವ ಅಸ್ತಿಯನ್ನು ವರ್ಗಾವಣೆ ಹೇಗೆ??
ಬಂಟ್ವಳ ತಾಲೂಕಿನ ಕೋಮಲೆ ಗಣಪತಿ ಭಟ್ ಎನ್ನುವವರು ಮಲ್ಟಿ ಟ್ರೀ ಬೈಕ್ ಆವಿಷ್ಕರಿಸಿದ್ದಾರೆ. ಹಾಗಾದರೆ ಈ ಯಂತ್ರದ ವಿಶೇಷತೆ ಏನೆಂದು ಇಲ್ಲಿ ತಿಳಿಯಿರಿ.
ನಗರಗಳಲ್ಲಿ ಆಳಾಗಿರುವ ಬದಲು ಊರಿಗೆ ಹೋಗಿ ಕೃಷಿ ಮಾಡಿ ಅರಸನಾಗಿ ಬದುಕುತ್ತೇನೆ ಅನ್ನುವುದು ತುಂಬಾ ಜನರ ಅಭಿಪ್ರಾಯವಾಗಿರುತ್ತದೆ. ಆದರೆ ಕೆಲವರು ಕೃಷಿ ಮಾಡಲು ಕೂಲಿ ಆಳುಗಳ ಸಮಸ್ಯೆಯಿಂದ ಮತ್ತು ಕೃಷಿಗೆ ಪೂರಕ ವಾತಾವರಣ ಇತರೆ ನೈಸರ್ಗಿಕ ಅಡಚೆಣೆಯಿಂದ ಮತ್ತೆ ನಗರದ ಕಡೆ ಮುಖ ಮಾಡುವುದು ನಾವು ನೀವು ತಿಳಿದಿರುವ ವಿಷಯ.ಇಲೊಬ್ಬ ಆ ಎಲ್ಲಾ ಸಮಸ್ಯೆಗಳಿಗೆ ಉತ್ತರ ಒದಗಿಸಿಕೊಂಡು ರೈತಾಪಿಯಲ್ಲಿ ಏನಾದ್ರು ಸಾಧನೆ ಮಾಡಬೇಕು ಎಂಬ ಛಲದಿಂದ ನಾವು ಇಂಜಿನಿಯರ್ ಗಿಂತ ಕಡಿಮೆ ಇಲ್ಲ ಅಂತ ರೈತ ವರ್ಗಕ್ಕೆ ಮಾದರಿಯಾಗಿದ್ದಾನರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಮಾನ್ಯ ಕೃಷಿಕ , ಒಂದು ಯಂತ್ರವನ್ನು ಕಂಡು ಹಿಡಿದಿದ್ದಾರೆ. ಇದೀಗ ಈ ಕೃಷಿಕ ತಯಾರಿಸಿದ ಮರವೇರುವ ಯಂತ್ರಕ್ಕೆ ಎಲ್ಲೆಡೆ ಬೇಡಿಕೆ ಹೆಚ್ಚಿದೆ.
ಯಂತ್ರದ ಮೇಲೇಯೇ ಕೂತು ಮರವೇರಬಹುದು ಈ ಕೃಷಿಕನನ್ನು ಒಮ್ಮೆ ನೋಡಿದರೆ ನೀವು ಆಶ್ಚರ್ಯಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಯಂತ್ರವನ್ನು ಆವಿಷ್ಕರಿಸಿದರೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಮಲೆ ಗಣಪತಿ ಭಟ್ ಎನ್ನುವವರಾಗಿದ್ದಾರೆ. ಇವರು ತಯಾರಿಸಿದ ಈ ಯಂತ್ರಕ್ಕೆ ಇದೀಗ ದಕ್ಷಿಣ ಭಾರತದಾದ್ಯಂತ ಬೇಡಿಕೆ ಹೆಚ್ಚಾಗಿದೆ.
ಮರವೇರುವ ಯಂತ್ರಕ್ಕೆ ಭಾರಿ ಬೇಡಿಕೆ ಗಣಪತಿ ಭಟ್ ಮೊದಲು ಅಡಿಕೆ ಮರವನ್ನು ಏರುವ ಯಂತ್ರವನ್ನು ಆವಷ್ಕರಿಸಿದ್ದು, ಈಗ ಈಲ್ಲಾ ಮರವೇರುವ ವಿನೂತನ ಯಂತ್ರ ಆವಿಷ್ಕಾರ ಮಾಡಿದ್ದಾರೆ. ಈ ಯಂತ್ರದ ಮೂಲಕ ಯಾವುದೇ ಅಡೆತಡೆಯಿಲ್ಲದೆ ಮರದ ತುದಿಯನ್ನು ತಲುಪಬಹುದಾಗಿದೆ. ಈ ಯಂತ್ರ ಸುರಕ್ಷತೆಯಲ್ಲಿ ಅತ್ಯುತ್ತಮವಾಗಿದೆ. ತೆಂಗು, ಅಡಿಕೆ, ಸಿಲ್ವರ ಮರ, ಮಾವಿನ ಮರ, ಹಲಸಿನ ಮರ ಸೇರಿದಂತೆ ಎಲ್ಲಾ ಮರಗಳನ್ನು ಈ ಟ್ರೀ ಬೈಕ್ ಬಳಸಿ ಏರಬಹುದಾಗಿದೆ.
ಮಲ್ಟಿ ಟ್ರೀ ಬೈಕ್ನ ತೂಕದ ಮಾಹಿತಿ ಈ ರೀತಿ ಇದೆ.
ಮರದಲ್ಲೇ ಯಂತ್ರ ಸುತ್ತಲೂ ತಿರಗಲಿದೆ. ಈ ಯಂತ್ರಕ್ಕೆ ಒಂದು ಲೀಟರ್ ಪೆಟ್ರೊಲ್ ಹಾಕಿದರೆ 80 ಮರಗಳನ್ನು ಏರಬಹುದಾಗಿದೆ.
45 ಕೆಜಿ ಭಾರವಿರುವ ಟ್ರೀ ಬೈಕ್ನ್ನು ಟ್ರಾಲಿ ,ಮೂಲಕ ಆರಾಮಾಗಿ ಕೊಂಡುಹೋಗಬಹುದಾಗಿದೆ.
ತೆಂಗಿನ ಮರದಲ್ಲಿ ಈ ಯಂತ್ರದ ಮೇಲೆ ನಿಂತು ಕಾಯಿಗಳನ್ನು ಕೀಳಬಹುದಾಗಿದೆ.
ಸುರಕ್ಷತಾ ಗುಣಮಟ್ಟವನ್ನು ಹೊಂದಿರುವ ಈ ಯಂತ್ರದ ಪರೀಕ್ಷಾ ಪ್ರಯತ್ನವನ್ನು ಸ್ವತಃ ಮರದ ಮೇಲೆ ನಿಂತು ಗಣಪತಿ ಭಟ್ ಅವರೇ ಮಾಡಿ ತೋರಿಸಿದ್ದಾರೆ.
ಮಲ್ಟಿ ಟ್ರೀ ಬೈಕ್ ನ ದರ
ಈ ಟ್ರೀ ಬೈಕ್ ಗೆ ಈಗ ಕೇರಳ, ತಮಿಳನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಬಂದಿದೆ. ಇದನ್ನು ಬಳಸಿ 5-15 ಇಂಚು ದಪ್ಪವಿರುವ ಮರವನ್ನು ಏರಬಹುದಾಗಿದ್ದು, ಸದ್ಯ ಈ ಯಂತ್ರಕ್ಕೆ ಕರ್ನಾಟಕ ಮಾರುಕಟ್ಟೆಯಲ್ಲಿ 1,55,000/- ರೂಪಾಯಿ ದರವಿದೆ.
ಕರ್ನಾಟಕ ಸರ್ಕಾರ ಈ ಯಂತ್ರ ಖರೀದಿಸುವ ರೈತರಿಗೆ 43 ಸಾವಿರ ರೂಪಾಯಿ ಸಬ್ಸಿಡಿಯನ್ನು ನೀಡಲಿದೆ. ಹೀಗಾಗಿ ಈ ಯಂತ್ರ 1,12,000/- ರೂ, ಕೊಟ್ಟರೆ ಕೃಷಿಕರ ಕೈ ಸೇರಲಿದೆ. ಈ ಯಂತ್ರ ಬಳಸುವುದರಿಂದ ಕೆಲಸವೂ ಬೇಗ ಮುಗಿಯುತ್ತದೆ. ಎಂದು ಮಾರ್ಕೆಟಿಂಗ್ ಮಾಡುತ್ತಿರುವ ಇಂಜಿನಿಯರ್ ಶರ್ವಿನ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕೂಲಿಕಾರರ ಸಮಸ್ಯೆ ಎಂದು ಕೃಷಿಯಿಂದ ಹಿಂಜರಿಯುವ ಯುವ ಕೃಷಿಕರಿಗೆ ಈ ಟ್ರೀ ಬೈಕ್ ನೆರವಾಗಲಿದೆ. ಒಬ್ಬ ಸಹಾಯಕನೊಂದಿಗೆ ಇಡೀ ತೋಟದ ಕೆಲಸವನ್ನು ಮಾಲೀಕನೇ ಮಾಡಬಹುದು ಅನ್ನುವುದನ್ನು ಟ್ರೀ ಬೈಕ್ ಬಳಕೆದಾರರ ಮನದಾಳದ ಮಾತಾಗಿದೆ.