Monday, September 16, 2024

MSP Price 2024: 1.00 ಲಕ್ಷ ಮೆಟ್ರಿಕ್ ಟನ್, ಬೆಂಬಲ ಬೆಲೆಯಲ್ಲಿ ಜೋಳ ಖರೀದಿ:ಯಾವ ಜೋಳಕ್ಕೆ ಎಷ್ಟು ದರ ನಿಗಧಿ? ಒಬ್ಬ ರೈತನಿಂದ ಎಷ್ಟು ಖರೀದಿ? ಮಾನದಂಡಗಳೇನು? ನೋಂದಣಿ ದಿನಾಂಕ ಯಾವಾಗ? ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂದವರೇ ರಾಜ್ಯದ ಅನ್ನದಾತರಿಂದ 1.00 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಏಪ್ರಿಲ್ -2024 ರ ಮಾಹೆಯಿಂದ ಮೇ-2024 ರವರೆಗೆ ಖರೀದಿ ಕಾರ್ಯವನ್ನು ಕೈಗೊಳ್ಳಲು ಅನುಮತಿ ನೀಡುವಂತೆ ಕೋರಿ ಸಂಗ್ರಹಣಾ ನಕ್ಷೆಯನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು 2023-24 ನೇ ಸಾಲಿನ ಹಿಂಗಾರು ಋತುವಿನಲಿ ಕನಿಷ್ಠ ಬೆಂಬಲ ಬೆಲೆ MSP (Minimum Support Price)ಯೋಜನೆಯಡಿ ರಾಜ್ಯದ ರೈತರಿಂದ ಹಿಂಗಾರು ಜೋಳದ ಖರೀದಿಗೆ ತಂತ್ರಾಂಶದಲಿ, ಅವಕಾಶ ಕಲ್ಪಿಸಿ ಜೋಳ ಖರೀದಿಸುವ ಬಗ್ಗೆ, ಪ್ರಸ್ತಾವನೆ ರಾಜ್ಯ ಸರ್ಕಾರ ಸಲ್ಲಿಸಿರುತ್ತದೆ.

ಇದನ್ನೂ ಓದಿ: PM Kisan Scheme 2024: PM kisan ಹೊಸದಾಗಿ ಅರ್ಜಿ ಸಲ್ಲಿಸಲು ಮಾನದಂಡಗಳೇನು??? ಕೇಂದ್ರ ಸರ್ಕಾರದ ವಾರ್ಷಿಕ 6000/-ರೂ ಪಡೆಯಲು ಅರ್ಹತೆಗಳೇನು?

ಇದರನ್ವಯ ,ಆಯುಕ್ತರು, ಆಹಾರ నాగరిశ ಸರಬರಾಜು ವ್ಯವಹಾರಗಳ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, 2023-24 ನೇ ಸಾಲಿನ ಹಿಂಗಾರು (ರಬಿ) ಋತುವಿನಲಿ,, ಕನಿಷ್ಟ ಬೆಂಬಲ ಬೆಲೆ MSP (Minimum Support Price) ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ 1.00 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಖರೀದಿಸಲು ಅನುಮತಿ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುವುದರಿಂದ

ಕೇಂದ್ರ ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಿ ಹಾಗೂ ರಾಜ್ಯದ ಹಿತದಷ್ಟಿಯಿಂದ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪೂಟ್ಸ್, Fruits ದತ್ತಾಂಶದಿಂದ ಬೆಳೆ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆಯು ಒದಗಿಸಿರುವ ಸರಾಸರಿ ಬೆಳೆ ಮಾಹಿತಿಯನ್ವಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಜೋಳವನ್ನು ಸಂಗ್ರಹಣಾ ಏಜೆನ್ಸಿಗಳಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಗಳ ಮುಖಾಂತರ ಖರೀದಿಸಲು ಸರ್ಕಾರವು ತೀರ್ಮಾನಿಸಿದೆ.

2023-24 ನೇ ಸಾಲಿಗೆ ರಾಜ್ಯದ ರೈತರಿಂದ ಕನಿಷ್ಠ ಬೆಂಬಲ ಬೆಲೆ MSP (Minimum Support Price) ಯೋಜನೆಯಡಿ ಜೋಳವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಗಳನ್ನು ಸಂಗ್ರಹಣಾ ಹಂಚಿಕೆ ಮಾಡಲಾಗಿದೆ, ಆಯಾ ಜಿಲೆ,,ಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಟಾಸ್ಪೋರ್ಸ್ ಸಮಿತಿಯು ನೀಡುವ ಸೂಚನೆ/ಆದೇಶಗಳನಯ ಜೋಳ ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳಲು ಆದೇಶಿಸಿದೆ.

MSP (Minimum Support Price) : ಪ್ರತಿ ಕ್ವಿಂಟಾಲ್ ಗೆ ಖರೀದಿ ದರ ನಿಗಧಿ:
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 1.00 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಖರೀದಿಸುವುದು.
1).ಹೈಬ್ರೀಡ್ ಜೋಳ ಕ್ವಿಂಟಾಲ್ ಗೆ ರೂ. 3180/-.ನಿಗಧಿ ಪಡಿಸಲಾಗಿದೆ.
2).ಮಾಲ್ದಂಡಿ ಜೋಳವನ್ನು ಪ್ರತಿ ಕ್ವಿಂಟಾಲ್ ಗೆ ರೂ. 3225/- ನಿಗಧಿ ಪಡಿಸಲಾಗಿದೆ. ಖರೀದಿ ಮಾಡಲು ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: First installment drought payment message: ಮೊದಲ ಕಂತಿನ ಬೆಳೆಹಾನಿ ಪರಿಹಾರ ಸಂದೇಶ ಬಂದರೂ ಹಣ ಜಮಾ ಆಗಿರದಿದ್ದರೇ ತಕ್ಷಣ ಈ ಕೆಲಸ ಮಾಡಿ!!!

Which Organization For which District: ಯಾವ ಜಿಲ್ಲೆಗೆ ಯಾವ ಸಂಗ್ರಹಣಾ ಸಂಸ್ಥೆ ನಿಯೋಜಿಸಲಾಗಿದೆ:

Registration of Farmers and date of Purchase: ರೈತರ ನೋಂದಣಿ ಮತ್ತು ಜೋಳ ಖರೀದಿ ದಿನಾಂಕ:

1)ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಗೆ ಸಂಬಂಧಿಸಿದಂತೆ ಸಂಗ್ರಹಣಾ ಏಜೆನ್ಸಿಗಳು ಪ್ರತಿ ಜಿಲ್ಲೆಗಳ ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿ ಕೇಂದ್ರಗಳನ್ನು ತೆರೆದು ದಿನಾಂಕ: 11.03.2024 ರಂದ 31.05.2024 ರವರೆಗೆ ಜೋಳ ಖರೀದಿಗೆ ನೋಂದಣಿಗೆ ಅವಕಾಶವನ್ನು ಮಾಡಲಾಗಿರುತ್ತದೆ.

2)ಜೋಳದ ಖರೀದಿ ಪ್ರಾರಂಭ ದಿನಾಂಕ 01/04/2024 ರಿಂದ 31/05/2024 ದಿನಾಂಕದವರೆಗೆ ಖರೀದಿ ಅವಕಾಶ ಮಾಡಲಾಗಿರುತ್ತದೆ.

MSP (Minimum Support Price) Guidelines: ಜೋಳ ಖರೀದಿಯ ಮಾರ್ಗಸೂಚಿಗಳು:

1.ಸರ್ಕಾರದಿಂದ ನೇಮಿಸಲ್ಪಟ್ಟ ಸಂಗ್ರಹಣಾ ಏಜೆನ್ಸಿಗಳು ಕೇಂದ್ರ ಸರ್ಕಾರವು ನಿಗಧಿಪಡಿಸಿದ ಮಾನದಂಡಗಳನ್ವಯ ಬಿಳಿಜೋಳದ ಖರೀದಿ ಹಂತದಲ್ಲಿ, ಎಫ್.ಎ.ಕ್ಕೂ FAQ ಗುಣಮಟ್ಟವನ್ನು ಧೃಢೀಕರಿಸಿಲು ಈ ಕೆಳಗಿನಂತೆ ಕ್ರಮವಂತೆ ತಿಳಿಸಲಾಗಿದೆ.

2.ರೈತರಿಂದ ಜೋಳವನ್ನು ಖರೀದಿಸಲು ತೆರೆಯಲಾಗಿರುವ ಪ್ರತಿ ಖರೀದಿ ಕೇಂದ್ರಕ್ಕೆ ಆಹಾರ ಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸಲು ಜಿಲಾ. ಮಟ್ಟದ ಕೃಷಿ ಇಲಾಖೆಯ ಅಧಿಕಾರಿಗಳನ್ನು ಅಥವಾ ಕೃಷಿ ಪದವೀಧರರನ್ನು సామినలు ನಿಯಮಾನುಸಾರ ಕ್ರಮವಹಿಸಲಾಗಿರುತ್ತೆ.

3.ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ತಮ್ಮ ಸಂಸ್ಥೆಗೆ ವಹಿಸಿರುವ ಜಿಲೆ.,ಗಳಲಿ., ಕಾರ್ಯ ಪ್ರಗತಿ ಬಗ್ಗೆ, ಆಗಿಂದಾಗೆ ಮೇಲುಸ್ತುವಾರಿ ತಪಾಸಣೆ ಕೈಗೊಳ್ಳುವುದು.

4.ಜೋಳ ಸಂಗ್ರಹಣೆಗೆ ಅಗತ್ಯವಿರುವ ಹೊಸ ಗೋಣಿ ಚೀಲಗಳನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯಿಂದ ಖರೀದಿ ಏಜೆನ್ಸಿಗಳಿಗೆ ಒದಗಿಸತಕ್ಕದ್ದು.

5.ಪ್ರತಿ ರೈತರಿಂದ ಬಿಳಿಜೋಳದ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 20 ಕ್ವಿಂಟಾಲ್ ನಂತೆ ಎಲ್ಲಾ ರೈತರಿಂದ ಅವರು ಹೊಂದಿರುವ ಜಮೀನಿಗೆ ಅನುಗುಣವಾಗಿ FID ಪ್ರಕಾರ ಖರೀದಿಸಲಾಗುವುದು.

6.ರಾಜ್ಯದಲಿ. ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅನುಷ್ಠಾನದಲಿ ಜಂಟಿ ನಿರ್ದೇಶಕರು (ಸಾರ್ವಜನಿಕ ವಿತರಣಾ ಪದ್ಧತಿ) ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ನೇಮಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕಿನ ಕೃಷಿ ಇಲಾಖೆ ಮತ್ತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಗಳ ಸಂಪರ್ಕಿಸಿಬಹುದಾಗಿದೆ.

ಸರ್ಕಾರದ ಆದೇಶ ಪ್ರತಿ :Click here

ಇದನ್ನೂ ಓದಿ: Agricuture Department machinery: ಯಾವ ಉಪಕರಣಕ್ಕೆ ಯಾವ ದಾಖಲೆಗಳು ಬೇಕು:

ಇತ್ತೀಚಿನ ಸುದ್ದಿಗಳು

Related Articles