ಉಚಿತ 30 ದಿನಗಳ ಉಚಿತ ಮೊಬೈಲ್ ರಿಪೇರಿ ತರಬೇತಿಗೆ(Free Mobile Repair Training)ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಉಜಿರೆ ಕೇಂದ್ರದಲ್ಲಿ ಮೊಬೈಲ್ ಪೋನ್ ರಿಪೇರಿ(Mobile Repair) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಈ ತರಬೇತಿ ಕುರಿತು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Free electronics repair training- ಉಚಿತ ಟಿ ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
How can apply-ಯಾರೆಲ್ಲ ಈ ತರಬೇತಿ ಪಡೆಯಲು ಅರ್ಹರು?
1) 18 ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
2) ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿಯಿರುವವರು ಅರ್ಜಿ ಸಲ್ಲಿಸಬಹುದು.
3) ಬಿಪಿಎಲ್ ಕಾರ್ಡ ಹೊಂದಿರುವವರಿಗೆ ಮೊದಲ ಅದ್ಯತೆ ನೀಡಲಾಗುತ್ತದೆ.
4) ಗ್ರಾಮೀಣ ಭಾಗದವರಿಗೆ ಮೊದಲ ಅದ್ಯತೆ ಇರುತ್ತದೆ.
ಇದನ್ನೂ ಓದಿ: Milk Incentive-2024: ಹಾಲಿನ ಪ್ರೋತ್ಸಾಹ ಧನ ಅಕೌಂಟ್ ಗೆ ಜಮಾ ಅಗಿರುವುದನ್ನು ಹೇಗೆ ಚೆಕ್ ಮಾಡುವುದು?
Application- ಎಲ್ಲಿ ಅರ್ಜಿ ಸಲ್ಲಿಸಬೇಕು?
ಈ ತರಬೇತಿಯನ್ನು ಪಡೆಯಲು ಆಸಕ್ತಿಯಿರುವವರು 08256236404, 9591044014, 944834569 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಈ 6364561982 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.
Required Documents for application-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:
ಅರ್ಜಿದಾರರ ಆಧಾರ್ ಕಾರ್ಡ ಪ್ರತ
ಪೋಟೋ- 1
ಬಿಪಿಎಲ್ ಕಾರ್ಡ್ ಪ್ರತಿ
ಬ್ಯಾಂಕ್ ಪಾಸ್ ಬುಕ್
Mobile Repair Training Date- ತರಬೇತಿ ನಡೆಯುವ ಅವಧಿ:
ಈ ತರಬೇತಿಯು 04 ಏಪ್ರಿಲ್ 2024 ರಿಂದ ಪ್ರಾರಂಭವಾಗಿ 03 ಮೇ 2024 ರವರೆಗೆ ನಡೆಯಲಿದೆ.
ಇದನ್ನೂ ಓದಿ: Yashaswini card – ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಇನ್ನೂ 10 ದಿನ ಮಾತ್ರ ಅವಕಾಶ!
ತರಬೇತಿಯು ಸಂಪೂರ್ಣ ಉಚಿತ:
ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟ ಸೌಲಭ್ಯವಿರುತ್ತದೆ. ಇದಲ್ಲದೇ ಸ್ವ-ಉದ್ಯೋಗ ಪ್ರಾರಂಭಿಸಲು ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿಯನ್ನು ಸಹ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Training center- ತರಬೇತಿ ನಡೆಯುವ ಸ್ಥಳ ವಿವರ:
ಧರ್ಮಸ್ಥಳ ಸಮೀಪ ಉಜಿರೆಯ ರುಡ್ ಸೆಟ್ ಸಂಸ್ಥೆಯ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.
ಹೆಚ್ಚಿನ ಮಾಹಿತಿ ಪಡೆಯಲು ರುಡ್ ಸೆಟ್ ಸಂಸ್ಥೆಯ ವೆಬ್ಸೈಟ್ ಲಿಂಕ್: Click here