Saturday, July 6, 2024

Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ:

ಆತ್ಮೀಯ ರೈತ ಬಾಂದವರೇ ಇತ್ತೀಚಿನ ದಿನಮಾನಗಳಲ್ಲಿ ರೈತರು ಕೃಷಿ ಒಂದೇ ಅವಲಂಬನೆ ಮಾಡಿದರೇ ಹೆಚ್ಚಿನ ಲಾಭ ಗಳಿಸುವುದು ಬಹಳ ಕಷ್ಟಕರವಾಗಿರು ಪರಿಸ್ಥಿತಿ ಉಂಟಾಗಿದೆ. ಅದಕ್ಕಾಗಿ ಕೃಷಿ ಜೊತೆಗೆ ಕೃಷಿಯೇತರ ಚಟುವಟಿಕೆಗಳನ್ನು ಮಾಡುವುದರಿಂದ ವರ್ಷ ಪೂರ್ತಿ ಆದಾಯ ದೊರೆಯುವಂತಾಗಿ ಆರ್ಥಿಕವಾಗಿ ದ್ವಿಗುಣಗೊಳ್ಳಬಹುದಾಗಿರುತ್ತದೆ.

ಆದಾಯ ವರ್ಷಪೂರ್ತಿ ದೊರೆಯುವ ಕೃಷಿಯೇತರ ಚಟುವಟಿಕೆಯಲ್ಲಿ ಪಶುಪಾಲನೆ ಒಂದಾಗಿದೆ.ಈ ಪಶುಪಾಲನೆಯಲ್ಲಿ ಆಸಕ್ತಿ ಇರುವ ರೈತರಿಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2023-24 ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ ಮಿಶ್ರತಳಿ ಹಸು ಘಟಕ ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಒಂದು ಸುವರ್ಣವಕಾಶವನ್ನು ಅರ್ಹ ವ್ಯಕ್ತಿಗಳು ಈ ಒಂದು ಯೋಜನೆ ಲಾಭ ಪಡೆದುಕೊಳ್ಳಲು ಈ ಲೇಖನದಲ್ಲಿ ಯೋಜನೆ ಸಂಬಂದಪಟ್ಟಂತೆ ಮಾಹಿತಿ ನೀಡಲಾಗಿರುತ್ತದೆ.

ಇದನ್ನೂ ಓದಿ: ಸಹಾಯಧನದಲ್ಲಿ ತುಂತುರು ನೀರಾವರಿ ಘಟಕಕ್ಕೆ ಅರ್ಜಿ ಆಹ್ವಾನ:

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2023-24 ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ ಮಿಶ್ರತಳಿ ಹಸು ಘಟಕ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದೆ.

2023-24 ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ ಮಿಶ್ರತಳಿ ಹಸು ಘಟಕದಡಿ ಮಿಶ್ರ ತಳಿ ಹಸು ವಿತರಿಸಲಾಗುವುದು,

ಈ ಯೋಜನೆಯಡಿ ದೊರೆಯುವ ಸಹಾಯಧನ:
ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ ಮಿಶ್ರತಳಿ ಹಸು ಘಟಕದಡಿ ಮಿಶ್ರತಳಿ ಹಸು ಘಟಕ ವೆಚ್ಚ ರೂ. 65,000/-ಇದ್ದು, SC TSP ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ (ಶೇ.90) ರೂ. 58,500/- ಸಹಾಯಧನ ಮತ್ತು (ಶೇ.10) ರೂ.6500/- ಫಲಾನುಭವಿಗಳ ವಂತಿಕೆ ಅಥವಾ ಬ್ಯಾಂಕ್‌ನಿಂದ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಾಹಿತಿ ನೀಡಿರುತ್ತದೆ.

ಇದನ್ನೂ ಓದಿ: Poutry farm:ಕೋಳಿ ಸಾಕಾಣಿಕೆಗೆ ? ಯಾವೆಲ್ಲ ಅನುಮತಿ ಪಡೆಯಬೇಕು?

ಆಯ್ಕೆಯ ವಿಧಾನ ಮತ್ತು ಮಾನಂದಂಡಗಳು:
ಅರ್ಜಿ ಸಲ್ಲಿಸುವ ಅರ್ಜಿದಾರರು FRUITS ID (ಗುರುತಿನ ಸಂಖ್ಯೆ) ಹೊಂದಿರಬೇಕು.
ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಮತ್ತು ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರನ್ನು ಆಯ್ಕೆ ಮಾಡಲಾಗುವುದು.
ಆಯ್ಕೆಗೊಂಡ ಫಲಾನುಭವಿಗಳು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು.
ಸದಸ್ಯತ್ವ ಕಡ್ಡಾಯವಾಗಿ ಪಡೆಯಬೇಕು.


ಆಯ್ಕೆಗೊಂಡ ಫಲಾನುಭವಿ ಸ್ವತ್ತು ಪಡೆದ ನಂತರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಡ್ಡಾಯವಾಗಿ ಹಾಲು ಪೂರೈಸುವ ಷರತ್ತಿಗೆ ಒಳಪಟ್ಟು ಮುಚ್ಚಳಿಕೆಯನ್ನು ವ್ಯವಸ್ಥಾಪಕರು/ಪ್ರತಿನಿಧಿಯವರಿಂದ ಧೃಢೀಕರಿಸಿ ಸಲ್ಲಿಸಬೇಕು.
ಕಳೆದ 5 ವರ್ಷಗಳಲ್ಲಿ ಪಶುಪಾಲನಾ ಇಲಾಖೆಯಲ್ಲಿ ವಿವಿಧ ಯೋಜನೆಗಳಲ್ಲಿ ಹೈನುಗಾರಿಕೆಗೆ ಸಹಾಯಧನ ಸವಲತ್ತು ಪಡೆದಿರುವ ಕುಟುಂಬಗಳು ಈ ಯೋಜನೆಯ ಸವಲತ್ತು ಪಡೆಯಲು ಅರ್ಹರಿರುವುದಿಲ್ಲ.

ಸರ್ಕಾರದ ನಿಯಮದಂತೆ ಮಹಿಳೆಯರಿಗೆ ಶೇ.33.3 ರಷ್ಟು ಮತ್ತು ವಿಶೇಷ ಚೇತನರಿಗೆ ಶೇ. 3 ರಷ್ಟು ಅದ್ಯತೆ ನೀಡಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಆರ್‌ಡಿ ಸಂಖ್ಯೆ RD Number ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ವಿಶೇಷ ಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿರುತ್ತದೆ.

ಇದನ್ನೂ ಓದಿ: Gift Deed- ದಾನ ಪತ್ರ ಹೇಗೆ ಬರೆಯಬೇಕು? ಬೇಕಾಗುವ ದಾಖಲೆಗಳೇನು?

ಹೆಚ್ಚಿನ ಮಾಹಿತಿಗಾಗಿ:
ಅರ್ಜಿಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) / ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು.

ವಿಶೇಷ ಸೂಚನೆ: ಈ ಯೋಜನೆಯಡಿ ನಿಗದಿಪಡಿಸಿರುವ ಗುರಿಗಳ ಅನ್ವಯ ಅನುದಾನದ ಲಭ್ಯತೆ ಮೇಲೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.

ಇತ್ತೀಚಿನ ಸುದ್ದಿಗಳು

Related Articles