Thursday, November 21, 2024

Milk Incentive-2024: ಹಾಲಿನ ಪ್ರೋತ್ಸಾಹ ಧನ ಅಕೌಂಟ್ ಗೆ ಜಮಾ ಅಗಿರುವುದನ್ನು ಹೇಗೆ ಚೆಕ್ ಮಾಡುವುದು?

ಗ್ರಾಮೀನ ಭಾಗದಲ್ಲಿ ರಾಸುಗಳನ್ನು ಕಟ್ಟುಕೊಂಡು ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಅರ್ಥಿಕವಾಗಿ ನೆರವು ನೀಡುವ ದೇಸೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿ(KMF)ಯ ಡೈರಿಗಳಿಗೆ ಹಾಲನ್ನು ಪೂರೈಸುವ ರೈತರಿಗೆ ಪ್ರತಿ ಲೀಟರ್ ಗೆ 5 ರೂ ಸಹಾಯಧನವನ್ನು(Milk Incentive) ಸರಕಾರದಿಂದ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತಿದ್ದು,

ರೈತರು ತಮ್ಮ ಮೊಬೈಲ್ ನಲ್ಲೇ ಹಾಲಿನ ಸಹಾಯಧನ ಯಾವ ಯಾವ ತಿಂಗಳು ಎಷ್ಟು ಜಮಾ? ಅಗಿದೆ ಎಂದು ಹೇಗೆ ತಿಳಿದುಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಅದರೆ ಈ ಸಹಾಯಧನವು ರೈತರಿಗೆ ಸಕಾಲದಲ್ಲಿ ಬರುತ್ತಿಲ್ಲ ಮತ್ತು ಸಹಾಯಧನ ಎಷ್ಟು ಲೀಟರ್ ಹಾಲಿಗೆ ಜಮಾ ಅಗಿದೆ ಮತ್ತು ಯಾವ ದಿನದಂದು ಎಷ್ಟು ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಎಲ್ಲಿ ವಿಚಾರಿಸಬೇಕು ಎಂದು ಅನೇಕ ರೈತರಿಗೆ ಮಾಹಿತಿ ಇರುವುದಿಲ್ಲ.

ಇದನ್ನೂ ಓದಿ: Crop insurence Questions and Answers: ಬೆಳೆ ವಿಮೆ ಕುರಿತು ರೈತರಿಗೆ ಅನುಮಾನಗಳಿಗೆ ತೆರೆ ನೀಡಿದ ಇಲಾಖೆ: PMFBY: ರೈತರ ಹಲವು ಪ್ರಶ್ನೆಗಳಿಗೆ ಉತ್ತರಗಳು ಈ ಲೇಖನದಲ್ಲಿ

ಈ ಅಂಕಣದಲ್ಲಿ ರೈತರು ಡೈರಿಗೆ ಹಾಕುವ ಹಾಲಿಗೆ ಯಾವ ತಿಂಗಳು ಎಷ್ಟು ಸಹಾಯಧನ ಬಂದಿದೆ ಎಂದು ತಮ್ಮ ತಮ್ಮ ಮೊಬೈಲ್ ನಲ್ಲೇ ಅಧಾರ್ ನಂಬರ್ ಹಾಕಿ ಹೇಗೆ ಚೆಕ್ ಮಾಡಬೇಕು ಎಂದು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೂ ಶೇರ್ ಮಾಡಿ.

Milk Incentive status check-2024: ಹಾಲಿನ ಪ್ರೋತ್ಸಾಹ ಧನ ಅಕೌಂಟ್ ಗೆ ಜಮಾ ಅಗಿರುವುದನ್ನು ಹೇಗೆ ಚೆಕ್ ಮಾಡುವುದು?

ವಿಧಾನ-1: “DBT Karnataka” ಮೊಬೈಲ್ ಅಪ್ಲಿಕೇಶನ್ ಮೂಲಕ ಚೆಕ್ ಮಾಡಬವುದು

ರೈತರು ರಾಜ್ಯ ಸರಕಾರದಿಂದ ಡಿಬಿಟಿ ಯೋಜನೆಗಳ ಹಣ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು ಅಭಿವೃದ್ದಿಪಡಿಸಿರುವ ಈ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಹಣ ವರ್ಗಾವಣೆ ಅಗಿರುವುದನ್ನು ತಿಳಿಯಬವುದು.

ಇದನ್ನೂ ಓದಿ: ಬರ ಪರಿಹಾರ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

Step-1: ಮೊದಲಿಗೆ ಈ DBT Karnataka app ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ಲೇ ಸ್ಟೋರ್ ಭೇಟಿ ಮಾಡಿ DBT Karnataka mobile app ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ತದನಂತರ ನಿಮ್ಮ ಮನೆಯಲ್ಲಿ ನೀವು ಯಾರ ಹೆಸರಿನಲ್ಲಿ ಡೈರಿಗೆ ಹಾಲು ಪೂರೈಕೆ ಮಾಡುತ್ತಿರೋ ಅವರ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಮೊಬೈಲ್ ಗೆ ಬರುವ OTP ನಮೂದಿಸಿ 4 ಅಂಕಿಯ ಪಾಸ್ವರ್ಡ್ ರಚನೆ ಮಾಡಿಕೊಂಡು “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಗಮನಿಸಿ: ಮೊದಲ ಬಾರಿಗೆ OTP ಬರದೇ ಇದ್ದರೆ Resend OTP ಮೇಲೆ ಕ್ಲಿಕ್ ಮಾಡಿ ಮತ್ತೊಮ್ಮೆ ಪ್ರಯತ್ನಿಸಿ.

ಇದನ್ನೂ ಓದಿ: Crop insurance 2024: ಬಾಕಿ 800 ಕೋಟಿ ಬೆಳೆವಿಮೆ ಪರಿಹಾರ ಮಾರ್ಚ ಅಂತ್ಯಕ್ಕೆ ಬಿಡುಗಡೆ:

Step-3: ಇದಾದ ಬಳಿಕ ಈ ಅಪ್ಲಿಕೇಶನ್ ಗೆ ಲಾಗಿನ್ ಆಗುತ್ತದೆ ಇಲ್ಲಿ ಕನ್ನಡ/English ಆಯ್ಕೆ ಬಲಬದಿಯಲ್ಲಿ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ನಂತರ ಮುಖಪುಟದಲ್ಲಿ ಕಾಣುವ “ಪಾವತಿ ಸ್ಥಿತಿ” ಮೇಲೆ ಕ್ಲಿಕ್ ಮಾಡಬೇಕು.

Step-4: ಇಲ್ಲಿ ಫಲಾನುಭವಿಯ ಡಿಬಿಟಿ ಯೋಜನೆ ಮಾಹಿತಿ ಗೋಚರಿಸುತ್ತದೆ “ಹಾಲು ಉತ್ಪಾದಕರಿಗೆ ಪ್ರೋತ್ಸಾಧನ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಯಾವ ಯಾವ ತಿಂಗಳು ಎಷ್ಟು ಹಣ ವರ್ಗಾವಣೆ ಅಗಿದೆ ಎಂದು ತೋರಿಸುತ್ತದೆ.

ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎಂದು ತಿಳಿಯಲು ಇದೆ ಅಪ್ಲಿಕೇಶನ್ ನ ಮುಖಪುಟದಲ್ಲಿ ಕಾಣುವ “ಬ್ಯಾಂಕ್ ಖಾತೆಯೋಂದಿಗೆ ಆಧರ್ ಸಂಯೋಜನೆಯ ಸ್ಥಿತಿ” ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಅಗಿದೆ ಎಂದು ತೋರಿಸುತ್ತದೆ ಇದೆ ಖಾತೆಗೆ ಹಣ ವರ್ಗಾವಣೆ ಅಗಿರುತ್ತದೆ.

ಇದನ್ನೂ ಓದಿ: MSP Price 2024: 1.00 ಲಕ್ಷ ಮೆಟ್ರಿಕ್ ಟನ್, ಬೆಂಬಲ ಬೆಲೆಯಲ್ಲಿ ಜೋಳ ಖರೀದಿ:
ಯಾವ ಜೋಳಕ್ಕೆ ಎಷ್ಟು ದರ ನಿಗಧಿ? ಒಬ್ಬ ರೈತನಿಂದ ಎಷ್ಟು ಖರೀದಿ? ಮಾನದಂಡಗಳೇನು? ನೋಂದಣಿ ದಿನಾಂಕ ಯಾವಾಗ? ಸಂಪೂರ್ಣ ಮಾಹಿತಿ.

ವಿಧಾನ-2: ಕ್ಷೀರಸಿರಿ ಜಾಲತಾಣದ ಮೂಲಕ ಚೆಕ್ ಮಾಡಬವುದು.

ರೈತರಿಗೆ ಪ್ರತಿ ತಿಂಗಳ ಹಾಲಿನ ಪ್ರೋತ್ಸಾಹ ಧನ ವಿತರಣೆ ಮಾಡಲು ಕ್ಷೀರಸಿರಿ ಜಾಲತಾಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ರೈತರು ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ FID ನಂಬರ್ ಹಾಕಿ ಎಷ್ಟು ಲೀಟರ್ ಹಾಲಿಗೆ ಎಷ್ಟು ಸಹಾಯಧನ ವರ್ಗಾವಣೆ ಅಗಿದೆ ಎಂದು ತಿಂಗಳುವಾರು ಮಾಹಿತಿ ಗೋಚರಿಸುತ್ತದೆ.

Step-1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://ksheerasiri.karnataka.gov.in/KMF_Milk_Pourer_Login.aspx ಕ್ಷೀರಸಿರಿ ವೆಬ್ಸೈಟ್ ಭೇಟಿ ಮಾಡಬೇಕು ನಂತರ ಫಲಾನುಭವಿಯ FID ನಂಬರ್ ಹಾಕಿ Login ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ ವರ್ಷ ಆಯ್ಕೆ ಮಾಡಿ “View” ಬಟನ್ ಮೇಲೆ ಕ್ಲಿಕ್ ಮಾಡಿದ್ದರೆ ನೀವು ಡೈರಿಗೆ ಪೂರೈಕೆ ಮಾಡಿದ ತಿಂಗಳುವಾರು ಹಾಲಿನ ವಿವರ ಮತ್ತು ಸಹಾಯಧನದ ಹಣ ವರ್ಗಾವಣೆ ಮಾಹಿತಿ ತೋರಿಸುತ್ತದೆ.

ಡೈರಿಗಳಿಗೆ ಹಾಲು ಪೂರೈಕೆ ಮಾಡಿದ ಬಳಿಕವು ನಿಮಗೆ ಹಾಲಿನ ಪ್ರೋತ್ಸಾಧನ ವರ್ಗಾವಣೆ ಅಗಿಲ್ಲದಿದ್ದರೆ ಇಲ್ಲಿ ಕಿಕ್ ಮಾಡಿ ಒಕ್ಕೂಟವಾರು ಲಭ್ಯವಿರುವ ಸಹಾಯವಾಣಿ ಸಂಖ್ಯೆಗನ್ನು ಪಡೆದು ಹೆಚ್ಚಿನ ಮಾಹಿತಿಯನ್ನು ಪಡೆಯಬವುದು.

ಇತ್ತೀಚಿನ ಸುದ್ದಿಗಳು

Related Articles