ನಮಸ್ಕಾರ ರೈತರೇ, 2025-26ನೇ ಸಾಲಿನ ನರೇಗಾ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ವಿವಿಧ ಕೃಷಿ ಮತ್ತು ಇತರೆ ಸಂಬಂದಿತ ವೈಯಕ್ತಿಕ ಕಾಮಗಾರಿಗೆ ಅರ್ಜಿ ಸಲ್ಲಿಸಲು ನವೆಂಬರ್ ತಿಂಗಳ ಗಡುವು ನೀಡಲಾಗಿದೆ.
ಹೌದು ರೈತರೇ, ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರದ ಸಹಾಯಧನದಲ್ಲಿ ವಿವಿಧ ಕೃಷಿ ಕೆಲಸಗಳನ್ನು ಮಾಡಿಕೊಳ್ಳಲು ಆಸಕ್ತ ರೈತರು ಇದೇ ತಿಂಗಳು ನವೆಂಬರ್ ಒಳಗೆ ತಮ್ಮ ಗ್ರಾಮ ಪಂಚಾಯತ್ ಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಿ.
ಈ ಮುಂಚೆ ಕೃಷಿಕರ ಬೇಡಿಕೆಗೆ ತಕ್ಕಂತೆ ಕಾಲ ಕಾಲಕ್ಕೆ ಅರ್ಜಿ ಸ್ವೀಕಾರ ಮತ್ತು ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು ಆದರೆ 2025-26ನೇ ಸಾಲಿಗೆ ಒಂದು ಬಾರಿ ಮಾತ್ರ ಬೇಡಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದ್ದರಿಂದ ಇದೇ ತಿಂಗಳು ನವೆಂಬರ್ ಒಳಗೆ ನಿಮ್ಮ ನರೇಗಾ ಬೇಡಿಕೆ ಅರ್ಜಿ ಸಲ್ಲಿಸಿ.
Mgnrega work-ಯಾವೆಲ್ಲ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಬಹುದು.
1)ತೆರೆದ ಬಾವಿ ರಚನೆ
2)ಕೃಷಿ ಹೊಂಡ/ಕೆರೆ ರಚನೆ
3)ಇಂಗು ಗುಂಡಿ ರಚನೆ
4)ಕುರಿ/ಆಡು ಶೆಡ್ ರಚನೆ
5) ದನದ ಕೊಟ್ಟಿಗೆ ರಚನೆ
6)ಹಂದಿ ಶೆಡ್ ರಚನೆ
7)ಕೋಳಿ ಶೆಡ್ ರಚನೆ
8)ದ್ರವ ತ್ಯಾಜ್ಯ/ಬಚ್ಚಲು ಗುಂಡಿ ರಚನೆ
9)ಎರೆಹುಳು ತೊಟ್ಟಿ ರಚನೆ
10)ಅಡಿಕೆ ಪುನಶ್ಚೇತನ ಕಾಮಗಾರಿ
11) ತೆಂಗು ಕೃಷಿ ಕಾಮಗಾರಿ
12)ಅಡಿಕೆ ಕೃಷಿ ಕಾಮಗಾರಿ
13)ಕೈತೋಟ ಕೃಷಿ
14)ವಿವಿಧ ಹಣ್ಣಿನ ಬೆಳೆಗಳ ತೋಟದ ಕಾಮಗಾರಿ
15)ತೋಟದ ಬದುಗಳ ನಿರ್ಮಾಣದ ಕಾಮಗಾರಿ
16)ಬಸಿಗಾಲುವೆ ಕಾಮಗಾರಿ
ಇನ್ನೂ ಹೆಚ್ಚಿನ ಮಾಹಿತಿಗೆ ಹತ್ತಿರದ ಗ್ರಾಮ ಪಂಚಾಯತ್ ಭೇಟಿ ಮಾಡಿ ವಿಚಾರಿಸಬಹುದು.