Thursday, September 19, 2024

Mgnrega Scheme-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಯಾವೆಲ್ಲ ವೈಯಕ್ತಿಕ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದು ಅದರ ಮಾಹಿತಿ ಇಲ್ಲಿದೆ ನಿಮಗೆ.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಕೂಲಿ ನೌಕರರಿಗೆ ಅನುಕೂಲವಾಲೆಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಡವರ ಅಭಿವೃದ್ಧಿಗೆ ಜಾರಿಗೆ ತಂದಿದ್ದಾರೆ. ಇದರ ಅಡಿಯಲ್ಲಿ ಉದ್ಯೋಗ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ ನೂರು ದಿನಗಳ ಕೆಲಸವನ್ನು ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಹಳ್ಳಿಗಳನ್ನು ಹೊಂದಿದ್ದು ಹಳ್ಳಿಯ ಜನರು ಉದ್ಯೋಗವನ್ನು ಹುಡುಕಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗದೆ ಇರಲು ಹಾಗೂ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಉದ್ಯೋಗ ನೀಡುವ/ಒದಗಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಯಾವೆಲ್ಲ ವೈಯಕ್ತಿಕ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದು ಅದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗೂ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಮತ್ತು ದಿನಕ್ಕೆ ರೂ.316 ಕೂಲಿಯನ್ನು ಪುರುಷ ಮತ್ತು ಮಹಿಳೆಯರಿಗೆ ಸಮಾನ ವೇತನ ನೀಡಲಾಗುತ್ತದೆ.

ಇದನ್ನೂ ಓದಿ:ಸರ್ವೇ ನಂಬರ್ ಗಳಿಗೆ ಆಧಾರ್ ಜೋಡಣೆ ಮಾಡಿಸಿ ಸಾಲ ಪಡೆಯುವುದು ಹೇಗೆ?

ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಬಹುದಾದ ವೈಯಕ್ತಿಕ ಕಾಮಗಾರಿಗಳು:
1)ತೆರೆದ ಬಾವಿ ರಚನೆ-150000(3ಮೀ,ಸುತ್ತಳತೆ, 18ಮೀ ಆಳ)
2)ದನದ ಹಟ್ಟಿ ರಚನೆ- 57000(8ಮೀಉದ್ದ,4ಮೀಅಗಲ,3ಮೀಎತ್ತರ)
3)ಮೇಕೆ/ಆಡು/ಕುರಿ ಶೆಡ್‌ ರಚನೆ-70000 (10ಮೀಉದ್ದ,5ಮೀಅಗಲ,3ಮೀಎತ್ತರ)
4)ಹಂದಿ ಶೆಡ್‌ ರಚನೆ-57000(12ಮೀಉದ್ದ,4ಮೀಅಗಲ,2ಮೀಎತ್ತರ)
5)ಕೋಳಿ ಶೆಡ್‌ ರಚನೆ-60000(12ಮೀಉದ್ದ,4ಮೀಅಗಲ,3ಮೀಎತ್ತರ)
6)ಕೊಳವೆ ಬಾವಿ ಮರುಪೂರಣ ಘಟಕ-30000(2.1ಮೀಉದ್ದ,2.1ಮೀಅಗಲ,2.1ಮೀಆಳ)
7)ಬಚ್ಚಲು ಗುಂಡಿ(ಸೋಕ್‌ ಪಿಟ್)-11000(1.5ಮೀಉದ್ದ,1.5ಮೀಅಗಲ,2ಮೀಆಳ)
8)ಎರೆಹುಳು ಗೊಬ್ಬರ ಘಟಕ-20000(3ಮೀಉದ್ದ,2ಮೀಅಗಲ,1ಮೀಎತ್ತರ)
9)ಕೃಷಿ ಹೊಂಡ ರಚನೆ-52000 (9ಮೀಉದ್ದ,9ಮೀಅಗಲ,3ಮೀಆಳ) 63000(10ಮೀಉದ್ದ,10ಮೀಅಗಲ,3ಮೀಆಳ)149000(15ಮೀಉದ್ದ,15ಮೀಅಗಲ,3ಮೀಆಳ)
10)ಗೊಬ್ಬರ ಗುಂಡಿ-25000(6ಮೀಉದ್ದ,5ಮೀಅಗಲ,1.5ಮೀಆಳ)
11)ಇಂಗು ಗುಂಡಿ(1.5ಮೀಉದ್ದ,0.5ಮೀಅಗಲ,ಆಳ1 ಫೀಟ್‌ ಗುಂಡಿಗೆ 300)
12)ಪೌಷ್ಠಿಕ ತೋಟ ರಚನೆ-ವಿವಿಧ ಹಣ್ಣುಗಳ ಗಿಡ ನೆಡಲು ಸಹಾಯಧನ
13)ಅರಣ್ಯೀಕರಣ-(ಹಲಸು,ಹೆಬ್ಬಲಸು,ಸಾಗುವಾನಿ,ಶ್ರೀಗಂಧ ಇತ್ಯಾದಿ ಗಿಡಗಳನ್ನು ಬೆಳೆಸಲು ಅವಕಾಶ)
14)ಬಸಿಗಾಲುವೆ(ಉಜಿರೆ ಕಣಿ) ವಿವಿಧ ಮೀಟರ್‌ಗಳಲ್ಲಿ ಕಾಮಗಾರಿ ಕೆಲಸಗಳು
15)ತೋಟಗಾರಿಕೆ ಬೆಳೆಗಳ ಹೊಸ ತೋಟ ರಚನೆ ಮತ್ತು ಪುನಶ್ಚತನಕ್ಕೆ ಸಹಾಯಧನ

ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

ಈ ಕೆಳಗೆ ಸೂಚಿಸಲಾದ ಫಲಾನುಭವಿಗಳು ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶ:
1)ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ
2)ಬಿ.ಪಿ.ಎಲ್‌ ಕುಟುಂಬ ಚೀಟಿ ಹೊಂದಿದವರು
3)ಮಹಿಳಾ ಪ್ರಧಾನ ಕುಟುಂಬಗಳು
4)ಭೂ ಸುಧಾರಣಾ ಫಲಾನುಭವಿಗಳು
5)ವಿಕಲಚೇತನ ಪ್ರಧಾನ ಕುಟುಂಬಗಳು
6)ಸಣ್ಣ ಮತ್ತು ಅತೀ ಸಣ್ಣ ರೈತರು

ಉದ್ಯೋಗ ಚೀಟಿ ಮಾಡಿಸಲು ಬೇಕಾಗುವ ದಾಖಲೆಗಳು:
1)ಕುಟುಂಬದ 18 ವರ್ಷಮೇಲ್ಪಟ್ಟ ಪ್ರತಿಯೊಬ್ಬ ಸದಸ್ಯರ ರಾಷ್ಟ್ರೀಕೃತ ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ
2) ಆಧಾರ್‌ ಕಾರ್ಡ ಜೆರಾಕ್ಸ
3)ಪಡಿತರ ಚೀಟಿ ಜೆರಾಕ್ಸ
4)ಪ್ರತಿಯೊಬ್ಬ ಸದಸ್ಯರ ಪಾಸ್‌ ಫೋರ್ಟ ಸೈಜ್‌ ಫೋಟೋ-3
5) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಆಗಿದಲ್ಲಿ ಜಾತಿ ಪ್ರಮಾಣ ಪತ್ರ
6) RTC/ಪಹಣಿ ಪ್ರತಿ

ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯತ್ ಗಳಿಗೆ ಭೇಟಿ ಮಾಡಿ. ಅಥವಾ 18004258666 ಗೆ ಕರೆ ಮಾಡಿ.

ಇತ್ತೀಚಿನ ಸುದ್ದಿಗಳು

Related Articles