Thursday, November 21, 2024

Mgnreg Scheme-2024: ರೈತರ ಭೂ ಅಭಿವೃದ್ದಿಗೆ ಮತ್ತು ಕುರಿ,ಕೋಳಿ ಶೆಡ್ ಗೆ ದೊರೆಯುವ ಅನುದಾನ ವಿವರ:

ಕೃಷಿಕರಿಗೆ ಗ್ರಾಮೀಣ ಮಟ್ಟದಲ್ಲಿ ಕೃಷಿ ಮತ್ತು ಕೃಷಿ ಪೂರಕ ಕೆಲಸ/ಕಾಮಗಾರಿಗಳನ್ನು ಪ್ರಾರಂಭ ಮಾಡಲು ಆರ್ಥಿಕವಾಗಿ ಸಹಾಯಧನ ಒದಗಿಸಲು ಮತ್ತು ಗ್ರಾಮೀಣ ಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗ ಒದಗಿಸುವ ದೃಷ್ಟಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (Mgnreg Scheme-2024) ನಮ್ಮ ರಾಜ್ಯದ ವಿವಿಧ ಅಭಿವೃದ್ಧಿ ಇಲಾಖೆಗಳಿಂದ ಅನುಷ್ಠಾನ ಮಾಡಲಾಗುತ್ತದೆ.


ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ ಕಡಿಮೆ ಇಲ್ಲದಂತೆ ಅಕೌಶಲ್ಯ ದೈಹಿಕ ಉದ್ಯೋಗವನ್ನು ಒದಗಿಸುವುದರ ನಿಟ್ಟಿನಲ್ಲಿ ನಿಗಧಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಆಸ್ತಿಗಳ ಸೃಜನೆ ಮಾಡುವ ಉದ್ದೇಶದಿಂದಾಗಿ ಕಳೆದ ಅನೇಕ ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರಲಾಗಿದೆ.


ಈ ಯೋಜನೆಯಡಿ 2024 ನೇ ವರ್ಷದಲ್ಲಿ ವೈಯಕ್ತಿಕವಾಗಿ ರೈತರು ತಮ್ಮ ಜಮೀನಿದಲ್ಲಿ ಯಾವೆಲ್ಲ ಕಾಮಕಾರಿಗಳನ್ನು ಕೈಗೊಳ್ಳಬವುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: First installment drought payment message: ಮೊದಲ ಕಂತಿನ ಬೆಳೆಹಾನಿ ಪರಿಹಾರ ಸಂದೇಶ ಬಂದರೂ ಹಣ ಜಮಾ ಆಗಿರದಿದ್ದರೇ ತಕ್ಷಣ ಈ ಕೆಲಸ ಮಾಡಿ!!!

Nrega scheme Benefits-2024: ಮನರೇಗಾ ಯೋಜನೆಯಡಿ ಯಾರೆಲ್ಲಾ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಬಹುದು?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಜನಾಂಗ,

ಬಿಪಿಎಲ್ ಕುಟುಂಬಗಳು, ಬುಡಕಟ್ಟು ಜನಾಂಗ, ಸಣ್ಣ &

ಅತಿ ಸಣ್ಣ ರೈತರು, ಲಿಂಗತ್ವ ಅಲ್ಪಸಂಖ್ಯಾತರಿಗೂ

ಯೋಜನೆಯಡಿ ಅವಕಾಶವಿರುತ್ತದೆ, ವಿಕಲಚೇತನ

ಪ್ರಧಾನ ಕುಟುಂಬಗಳು, ಸ್ತ್ರೀ ಪ್ರಧಾನ ಕುಟುಂಬಗಳು.

ಈ ಯೋಜನೆಯಡಿ ಕೆಲಸ ಮಾಡಿ ಸ್ವಾಭಿಮಾನದ ಬದುಕು ಸಾಗಿಸಿ ವಿಶೇಷ ವರ್ಗದ ಜಾಬ್ ಕಾರ್ಡ್‌ ಪಡೆದು, 100 ದಿನ ಯೋಜನೆಯಡಿ ಕೆಲಸ ಕೈಗೆತ್ತಿಕೊಳ್ಳಬಹುದಾಗಿದೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ ಪಡೆಯಬಹುದು ಮತ್ತು ಈ ಯೋಜನೆಯಡಿ ಗಂಡು ಹೆಣ್ಣಿಗೆ ಸಮಾನ ಕೂಲಿ ಒದಗಿಸಲಾಗುತ್ತದೆ.

udyoga khatri yojane-2024: ಯೋಜನೆಯಡಿ ಯಾವೆಲ್ಲ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನ ಮಾಡಬವುದು? ಮತ್ತು ಅನುದಾನದ ವಿವರ:
ಪಂಚಾಯತಿ ಅಥವಾ ಹತ್ತಿರದ ಕಾಮಗಾರಿ ಸಂಬಂದಪಟ್ಟ ಇಲಾಖೆ ಅಂದರೆ ಕೃಷಿ ತೋಟಗಾರಿಕೆ,ರೇಷ್ಮೆ ಪಶುಪಾಲನೆ, ಅರಣ್ಯ ಇಲಾಖೆ ಕಚೇರಿಗಳಿಗೆ ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆ ಕೊಟ್ಟು ಅರ್ಜಿ ಹಾಕಬವುದು ಅಥವಾ ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಮೂಲಕವು ಸಹ ಅರ್ಜಿ ಹಾಕಬವುದಾಗಿದೆ. ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಲಿಂಕ್:

https://play.google.com/store/apps/details? id=com.effiatech.kayakamitra

Privilage and Grant Details Under Narega Scheme: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ದೊರೆಯುವ ಸವಲತ್ತುಗಳು ಮತ್ತು ಅನುದಾನ ವಿವರ:

Nrega work process- ಕಾಮಗಾರಿ ಅನುಷ್ಠಾನ ಪ್ರಕ್ರಿಯೆ:

ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ಜರುಗುವ ಸಭೆಯಲ್ಲಿ ನಿಮ್ಮ ಕಾಮಗಾರಿ ವಿವರವನ್ನು ಮಂಡಿಸಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಸಂಬಂದಪಟ್ಟ ಇಲಾಖೆಗೆ ಕಡತವನ್ನು ವರ್ಗಾಹಿಸಿ ಅರ್ಜಿದಾರರಿಗೆ ಕೆಲಸ ಪ್ರಾರಂಭಿಸಲು ವರ್ಕ್ ಆರ್ಡರ್ ನೀಡಲಾಗುತ್ತದೆ,

ಇದಾದ ಬಳಿಕ ಕಾಮಕಾರಿ ಪ್ರಾರಂಭವಾಗುವ ಮುಂಚಿತವಾಗಿ ಒಂದು ಜಿಪಿಎಸ್ ಪೋಟೋ ಮತ್ತು ಕಾಮಕಾರಿ ನಡೆಯುತ್ತಿರುವಾಗ ಮತ್ತು ಕಾಮಕಾರಿ 30% ಪೂರ್ಣಗೊಂಡಾಗ ಹೀಗೆ ವಿವಿಧ ಹಂತಗಳಲ್ಲಿ ಜಿಪಿಎಸ್‌ ಪೋಟೊ ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾ ನೇರ ನಗದು ವರ್ಗಾವಣೆ ಮೂಲಕ ಕಾಮಗಾರಿ ಹಣವನ್ನು ಪಾವತಿ ಮಾಡಲಾಗುತ್ತದೆ. ಹಣ ಪಾವತಿಯು ಎರಡು ವಿಭಾಗವನ್ನು ಹೊಂದಿದ್ದು ಒಂದು ಮೇಟಿರಿಯಲ್ ಬಿಲ್/ ಪರಿಕರ ವೆಚ್ಚ ಮತ್ತೊಂದು ವರ್ಕಸ್್ರ ಬಿಲ್/ಕೂಲಿ ವೆಚ್ಚ ಒಳಗೊಡಿರುತ್ತದೆ.

ಇದನ್ನೂ ಓದಿ: Agriculture Department machinery: ಯಾವ ಉಪಕರಣಕ್ಕೆ ಯಾವ ದಾಖಲೆಗಳು ಬೇಕು:

Narega helpline number 18004258666-ನಿಮ್ಮ ಹಳ್ಳಿಯಲ್ಲಿ ಲಭ್ಯವಿರುವ ನರೇಗಾ ಯೋಜನೆ ಕಾಮಕಾರಿ ಮಾಹಿತಿ ಪಡೆಯಲು

ಈ ಯೋಜನೆಯಡಿ ಮೇಲೆ ತಿಳಿಸಿರುವ ವೈಯಕ್ತಿಕ ಕಾಮಗಾರಿಯನ್ನು ತಮ್ಮ ಜಮೀನಿನಲ್ಲಿ ಅನುಷ್ಠಾನ ಮಾಡಲು ಆಸಕ್ತಿ ಹೊಂದಿದಲ್ಲಿ ನರೇಗಾ ಯೋಜನೆಯ ಈ 1800 425 8666 ಸಹಾಯವಾಣಿಗೆ ಕರೆಮಾಡಿ ಸಧ್ಯ ನಿಮ್ಮ ಭಾಗಕ್ಕೆ ಲಭ್ಯವಿರುವ ಯೋಜನೆ ಮಾಹಿತಿ ಮತ್ತು ಈ ಯೋಜನೆಯ ಕುರಿತು ಇತರೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬವುದಾಗಿದೆ.

ಇತ್ತೀಚಿನ ಸುದ್ದಿಗಳು

Related Articles