Friday, September 20, 2024

ವಿವಿಧ ತೋಟಗಾರಿಕೆ ಬೆಳೆಗಳಲ್ಲಿ ರೋಗ ನಿವಾರಕವಾದ ಬೋರ್ಡೋ ದ್ರಾವಣ ತಯಾರಿಸುವ ವಿಧಾನ

ಆತ್ಮೀಯ ರೈತ ಬಾಂದವರೇ ನಾವೆಲ್ಲಾ ಬೆಳೆಯುವ ತೋಟಗಾರಿಕಾ ಬೆಳೆಗಳಾದ ಅಡಿಕೆ, ಕಾಳಮೆಣಸು,ಎಲಕ್ಕಿ ಸಸಿ, ನಿಂಬೆ, ಮಾವು, ಬಾಳೆ,ಕಾಫಿ, ದಾಳಿಂಬೆ, ತೆಂಗಿನಗಿಡ,ಇನ್ನೂ ಹಲವಾರು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುತ್ತೆವೆ.ಈ ಬೆಳೆಗಳಲ್ಲಿ ಹಲವು ತರನಾದ ರೋಗಗಳು ಕಂಡುಬರುತ್ತವೆ.ಅವುಗಳ ಹತೋಟಿಗೆ ಬೋರ್ಡೋ ದ್ರಾವಣ ಅತೀ ಅವಶ್ಯಕವಾಗಿರುತ್ತದೆ. ಹಾಗಿದ್ದರೆ ಅದನ್ನು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.

ಇದನ್ನೂ ಓದಿ: ಕೇಂದ್ರದ 6000/-ರೂ ರಾಜ್ಯದ 4000/-ರೂ ಬರದೆ ಇರಲು ಕಾರಣ,ಯೋಜನೆ ಮಾರ್ಗಸೂಚಿ ಸಂಪೂರ್ಣ ಮಾಹಿತಿ:

ಮೊದಲು ಬೋರ್ಡೋ ದ್ರಾವಣ ತಯಾರಿಕೆಗೆ ಬೇಕಾದ ವಸ್ತುಗಳು ( ಸಾಮಾನುಗಳು):
ಸುಣ್ಣದ ಹರಳು
ಸಿಮೆಂಟಿನ ಕೊಳ ಅಥವಾ ಮಣ್ಣಿನ ಪಾತ್ರೆ
ಚಾಕು
ಲಿಟ್ಮಸ್ ಪೇಪರ್‍

ಶೇ. ಒಂದರ ಬೋರ್ಡೋ ದ್ರಾವಣ ಮಿಶ್ರಣ ತಯಾರಿಸುವ ಪದ್ದತಿ:

ಒಂದು ಕಿ. ಗ್ರಾಂ ಮೈಲುತುತ್ತೆಯನ್ನು 50 ಲೀಟರ್‍ ನೀರಿನಲ್ಲಿ ಕರಗಿಸಬೇಕು.ಅದರಂತೆ ಮತ್ತೊಂದು ಪಾತ್ರೆಯಲ್ಲಿ ಒಂದು ಕಿ.ಗ್ರಾಂ. ಸುಣ್ಣವನ್ನು 50 ಲೀಟರ್‍ ನೀರಿನಲ್ಲಿ ಕರಗಿಸಬೇಕು.ನಂತರ ಮೈಲುತುತ್ತೆ ದ್ರಾವಣ ಹಾಗೂ ಸುಣ್ಣದ ತಿಳಿಯನ್ನು ಮತ್ತೊಂದು ಪಾತ್ರೆಗೆ ಹಾಕಬೇಕು.ಎರಡೂ ದ್ರಾವಣವನ್ನು ಒಟ್ಟಿಗೆ ಹಾಕಬೇಕು. ಆವಾಗ ಈ ಮಿಶ್ರಣ ಶೇ. ಒಂದು ರಷ್ಟು ಆಗುವುದು. ಈ ಎರಡು ಮಿಶ್ರಣ ಕೂಡಿ ಒಟ್ಟು 100 ಲೀಟರ್‌ ಆಗುವುದು.

ಈ ಮಿಶ್ರಣ ಸರಿಯಾಗಿ ತಯಾರಾಗಿದೆವೋ ಇಲ್ಲವೋ ಪರೀಕ್ಷೆಗೆ ಮಾಡುವ ವಿಧಾನ:

ಒಂದು ಚಾಕು ಅಥವಾ ಬ್ಲೇಡನ್ನು ಈ ಮಿಶ್ರಣದಲ್ಲಿ ಅದ್ದಬೇಕು ಅದ್ದಿದಾಗ ಆ ಚಾಕು ಅಥವಾ ಬ್ಲೇಡ ಕೆಂಪು ಬಣ್ಣವಾಗಿ ಕಂಡು ಬಂದರೆ ಮತ್ತೆ ಸುಣ್ಣದ ತಿಳಿಯನ್ನು ಈ ಮಿಶ್ರಣಕ್ಕೆ ಹಾಕಬೇಕು ಈ ಮಿಶ್ರಣವು ತಿಳಿನೀಲಿ ಬಣ್ಣದಾಗಿ ಕಂಡುಬಂದರೆ ಸರಿಯಾಗಿದೆ ಅಂತ ತಿಳಿದು ಲೀಟ್ಮಸ್ ಪೇಪರ್‍ ಸಹಾಯದಿಂದ PH 7.00 ಇರುವಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: ಅಡಿಕೆ ಬೆಳೆಯಲ್ಲಿ ಸುಳಿ ತಿಗಣೆ ಮತ್ತು ನುಸಿ ಬಾಧೆಯ ಲಕ್ಷಣ ಮತ್ತು ಹತೋಟಿ ಕ್ರಮಗಳು.

ಬೋಡ್ರೋ ಮುಲಾಮುನ್ನು (ಪೇಸ್ಟ )ತಯಾರಿಸುವ ವಿಧಾನದ : 100 ಗ್ರಾಂ ಸುಣ್ಣವನ್ನು ನೂರು ಗ್ರಾಂ ಮೈಲುತುತ್ತೆಯನ್ನು 500 ಮೀ ಲೀ ನೀರಿನಲ್ಲಿ ಬೇರೇ ಬೇರೇಯಾಗಿ ಬೆರೆಸಬೇಕು.ಬೆರೆಸಿದ ನಂತರ ಇವೆರೆಡನ್ನು ಒಟ್ಟಿಗೆ ಕೂಡಿಸಿ ಒಂದು ಲೀಟರ್‍ ಬೋಡ್ರೋ ಮುಲಾಮು ತಯಾರಿಸಬೇಕು.
ಈಗೆ ತಯಾರಿಸಿದ ದ್ರಾವಣವು ತೋಟಗಾರಿಗಾ ಬೆಳೆಗಳಿಗೆ ಸಿಂಪರಣೆಗೆ ಸೂಕ್ತವಾಗಿರುತ್ತದೆ.

ಯಾವ ಬೆಳೆಗಳಿಗಳಲ್ಲಿ ಯಾವ ರೋಗಗಳಿಗೆ ಸಿಂಪಡಿಸಬಹುದು:


ಅಡಿಕೆಯಲ್ಲಿ ಕೊಳೆ ರೋಗ, ನಿಂಬೆಯಲ್ಲಿ ಕಜ್ಜಿ ರೋಗ, ಮಾವಿನಲ್ಲಿ ಚಿಬ್ಬು ರೋಗ, ಬಾಳೆಯಲ್ಲಿ ಎಲೆಚುಕ್ಕೆ ರೋಗ, ಎಲಕ್ಕಿಯಲ್ಲಿ ಸಸಿಯ ಚುಕ್ಕೆ ರೋಗ, ಕಾಳಮೆಣಸಿನಲ್ಲಿ ಸೊರಗು ರೋಗ, ದ್ರಾಕ್ಷಿಯಲ್ಲಿ ಬೂಜು ಮತ್ತು ಚಿಬ್ಬು ರೋಗ, ತೆಂಗಿನಮರದಲ್ಲಿ ಕೊಳೆ ಮತ್ತು ಉದುರುವ ರೋಗ,ದಾಳಿಂಬೆಯಲ್ಲಿ ಹಣ್ಣಿನ ಚುಕ್ಕೆ, ಕೊಳೆ ರೋಗ,ಕಾಫಿಯಲ್ಲಿ ಎಲೆಚುಕ್ಕೆ ರೋಗ.
ಇನ್ನೂ ಹಲವಾರು ತೋಟಗಾರಿಕೆ ಬೆಳೆಗಳಲ್ಲಿ ಇದನ್ನೂ ಬೋರ್ಡೋ ದ್ರಾವಣ ಶೀಲಿಂದ್ರ ಬೆಳೆವಣಿಗೆಗೆ ಪ್ರತಿರೋಧವಾಗಿ ಬಳಸಲಾಗುತ್ತದೆ. ಇದರ ಬದಲಿಗೆ ಕಾಪರ್‍ ಆಕ್ಸಿ ಕ್ಲೋರಡ್ ಮ್ಯಾಂಕೋಜೆಬ್ ಕಾರ್ಬನ್ಡೈಜಿಮ್,ಬಳಸಬುದು.
(ಈ ಒಂದು ಮಾಹಿತಿ ತೋಟಗಾರಿಕಾ ವಿಜ್ಞಾನಿಗಳ ಸಲಹೆಯಾಗಿರುತ್ತದೆ.)

ಇತ್ತೀಚಿನ ಸುದ್ದಿಗಳು

Related Articles