Thursday, January 23, 2025

ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ವಿವರ

1)ಮೀನು ಮರಿ ಉತ್ಪಾದನೆ, ಪಾಲನೆ ಮತ್ತು ಹಂಚಿಕೆ

ಶಿರಸಿ ಮೀನುಗಾರಿಕೆ ಕಛೇರಿ ಆವರಣದ ಕೊಳಗಳಲ್ಲಿ ಪ್ರತಿ ವರ್ಷ ಉತ್ತಮ ತಳಿಗಳ ಮೀನುಮರಿಗಳನ್ನು ಪಾಲನೆ ಮಾಡಿ ತಾಲೂಕಿನ ಆಸಕ್ತ ರೈತರಿಗೆ ಯೋಗ್ಯ ದರದಲ್ಲಿ ಸರಬರಾಜು ಮಾಡಲಾಗುತ್ತಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ  ಕೆರೆಗಳನ್ನು ಗುತ್ತಿಗೆ ಪಡೆದ ಮೀನು ಕೃಷಿಕರಿಗೆ ತಾಂತ್ರಿಕ ಸಲಹೆ ಮತ್ತು ಒಳನಾಡು ಮೀನುಗಾರಿಕೆ ಕುರಿತು ಅಲ್ಪಾವಧಿ ತರಭೇತಿ ಮೂಲಕ ತಿಳುವಳಿಕೆ ನೀಡಲಾಗುತ್ತದೆ.

2)ಮೀನು ಕೃಷಿಕರಿಗೆ ಅನುಕೂಲವಾಗುವಂತೆ ಉತ್ತಮ ತಳಿಗಳ ಮೀನುಮರಿಗಳನ್ನು ಯೋಗ್ಯ ದರದಲ್ಲಿ ಅನುಮೋದಿತ ಮೀನುಮರಿ ಕೇಂದ್ರಗಳಿಂದ ಪೂರೈಸಲಾಗುತ್ತದೆ.

ಜಿಲ್ಲಾ ವಲಯ ಯೋಜನೆಗಳು :

1)ಮೀನು ಸಂಸ್ಕರಣೆ, ಮಾರುಕಟ್ಟೆ ಮತ್ತು ಮಾರಾಟಕ್ಕೆ ಸಹಾಯ

ಈ ಯೋಜನೆಯಡಿ ಮೀನುಗಾರರಿಗೆ ಮೀನುಗಳ  ಸಂರಕ್ಷಣೆ , ಮಾರಾಟಕ್ಕೆ ಅನುಕೂಲವಾಗುವಂತೆ ಸೈಕಲ್  ಮತ್ತು ಕ್ರೇಟ್ ಗಳಂತಹ ಸಲಕರಣೆಗಳ ಖರೀದಿಗೆ ಘಟಕ ವೆಚ್ಚ ರೂ. 4000 ದ ಪ್ರತಿಶತ 50 ರಂತೆ ಗರಿಷ್ಟ ರೂ. 2000 ಗಳಿಗೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ. ಅದರಂತೆಯೇ ಮೀನು ಮಾರಾಟಕ್ಕಾಗಿ ಮೊಪೆಡ್,ತ್ರಿಚಕ್ರ ವಾಹನಗಳ ಖರೀದಿಗೆ ನಿಯಮಾನುಸಾರ ಸಹಾಯಧನ ನೀಡಲಾಗುತ್ತದೆ.

2)ಪ್ರದರ್ಶನ ಮತ್ತು ತರಭೇತಿ :

ಮೀನುಗಾರಿಕೆ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಸಾಧ್ಯವಾಗುವಂತೆ ಈ ಯೋಜನೆಯಡಿ ವಸ್ತು ಪ್ರದರ್ಶನದಂತಹ ವಿಸ್ತರಣೆ ಚಟುವಟಿಕೆ ಕೈಗೊಳ್ಳಲಾಗುತ್ತದೆ.

3)ಒಳನಾಡು ಮೀನು ಅಭಿವೃದ್ದಿಗೆ ಸಹಾಯ :

ಈ ಯೋಜನೆಯಡಿಯಲ್ಲಿ ಮೀನುಗಾರರಿಗೆ ಹುಲ್ಲು ಮತ್ತು ಕಳೆ ತುಂಬಿರುವ ಕೆರೆಗಳಲ್ಲಿ ಹುಲ್ಲು ನಿಯಂತ್ರಣಕ್ಕಾಗಿ ಬಿತ್ತನೆ ಮಾಡಿರುವ ಗ್ರಾಸ್ ಕಾರ್ಪ ಮೀನುಮರಿ ಖರೀದಿಗೆ ಸಹಾಯಧನ, ಬಾವಿ ಹೊಂಡಗಳಿಗೆ ಮೀನುಮರಿ ಪೂರೈಕೆ ಮುಂತಾದ ಚಟುವಟಿಕೆ ಕೈಗೊಳ್ಳಲಾಗುತ್ತದೆ.

ರಾಜ್ಯ ವಲಯ ಯೋಜನೆಗಳು

1)ಮೀನುಗಾರರಿಗೆ ಮೀನು ಸಂಸ್ಕರಣೆಗಳ ಕಿಟ್ ವಿತರಣೆ :

ಮೀನುಗಾರರು ನದಿ, ಜಲಾಶಯ , ಕೆರೆಗಳಲ್ಲಿ ಮೀನು ಹಿಡುವಳಿ ಮಾಡಲು ಅನುಕೂಲವಾಗುವಂತೆ ಮೀನುಗಾರಿಕೆ ಸಲಕರಣೆ ಹಾಗೂ ಮೀನು ಮಾರಾಟ ಸಲಕರಣೆಗಳ ಕಿಟ್‌ಗಳನ್ನು ಶೇ. 100 ಸಹಾಯ ಧನದಲ್ಲಿ ಪೂರೈಸಲಾಗುತ್ತದೆ.

2) ವಿಶೇಷ ಘಟಕ ಯೋಜನೆ / ಗಿರಿಜನ ಉಪಯೋಜನೆ :

ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀನುಗಾರರಿಗೆ ಮೀನುಗಾರಿಕಾ ಸಲಕರಣೆ ಕಿಟ್‌ಗಳನ್ನು ಸಹಾಯಧನದಲ್ಲಿ ಪೂರೈಸಲಾಗುತ್ತದೆ.

3)ಮತ್ಸ್ಯಾಶ್ರಯ  ಯೋಜನೆ :

ನಿವೇಶನ ಹೊಂದಿರುವ ವಸತಿರಹಿತ ಅರ್ಹ ಮೀನುಗಾರರಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಮತ್ಸ್ಯಾಶ್ರಯ ಯೋಜನೆಯಡಿ ವಸತಿ ನಿರ್ಮಾಣಕ್ಕಾಗಿ ಸಹಾಯಧನ ನೀಡಲಾಗುತ್ತದೆ.

4)ಮೀನುಮರಿ ಖರೀದಿಗೆ ಸಹಾಯಧನ :

ಮೀನು ಕೃಷಿಕರು ಮೀನು ಕೃಷಿ ಕೈಗೊಳ್ಳಲು ಸರ್ಕಾರದಿಂದ ಅನುಮೋದಿತ ಮೀನುಮರಿ ಕೇಂದ್ರಗಳಿಂದ ಖರೀದಿಸಿರುವ ಮೀನುಮರಿ ಮೊತ್ತಕ್ಕೆ ಅರ್ಹತೆಗನುಸಾರವಾಗಿ ಶೇ.50 ರಂತೆ ಸಹಾಯಧನ ನೀಡಲಾಗುತ್ತದೆ.

5)ಜೀವ ರಕ್ಷಕ ಸಾಧನ (  ಲೈಫ್ ಜಾಕೆಟ್/ ಲೈಫ್ ಬಾಯ್)  ಖರೀದಿಗೆ ಸಹಾಯಧನ:

 ನದಿ/ ಜಲಾಶಯ/ ಕೆರೆಗಳಲ್ಲಿ ಮೀನುಗಾರಿಕೆಗೆ ತೊಡಗಿರುವ ಮೀನುಗಾರರ ರಕ್ಷಣೆಯ ಕುರಿತು ಜೀವರಕ್ಷಕ ಸಾಧನಗಳಾದ   ಲೈಫ್ ಜಾಕೆಟ್ ಹಾಗೂ  ಲೈಫ್ ಬಾಯ್ ಗಳನ್ನು ಸಹಾಯಧನದಲ್ಲಿ ಪೂರೈಸಲಾಗುವುದು.

6) ಮೀನುಗಾರರಿಗೆ ಅಪಘಾತ ವಿಮಾ ಯೋಜನೆ:

 ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿರುವಾಗ ಪ್ರಕೃತಿ ವಿಕೋಪಕ್ಕೆ ಗುರಿಯಾಗಿ ಮರಣಹೊಂದಿದ ಮೀನುಗಾರರ ವಾರಸುದಾರರಿಗೆ ಪರಿಹಾರ ನೀಡಲಾಗುತ್ತದೆ.

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ( N.F.D.B ) ಯೋಜನೆಗಳು:

1) ಸ್ವಂತ ಜಮೀನಿನಲ್ಲಿ ಮೀನು  ಕೃಷಿ ಕೊಳ ನಿರ್ಮಾಣಕ್ಕೆ ಸಹಾಯಧನ.

2) ಮೀನುಮರಿ  ಪಾಲನಾ ಕೊಳಗಳ ನಿರ್ಮಾಣಕ್ಕೆ ಸಹಾಯಧನ.

3) ಅಲಂಕಾರಿಕ ಮೀನು ಮರಿ ಪಾಲನೆಗೆ ಸಹಾಯ.

4) ಸಿಹಿನೀರು ಸಿಗಡಿ ಪಾಲನಾ ಕೊಳಗಳಿಗೆ ಸಹಾಯ.

5)  ಪಂಗೇಶಯನ  ಮುಂತಾದ ಮೀನು  ಪಾಲನೆಗೆ ಪ್ರೋತ್ಸಾಹ.

6) ಆಯ್ದ ಜಲಾಶಯ/ ಕೆರೆಗಳಲ್ಲಿ ಬಲಿತ ಮೀನುಮರಿ ಬಿತ್ತನೆ

ಗ್ರಾಮೀಣ ಪ್ರದೇಶದಲ್ಲಿ ಅಲಂಕಾರಿಕ ಮೀನು ಉತ್ಪಾದನೆ:

ರಾಜ್ಯದಲ್ಲಿ ಅಲಂಕಾರಿಕ ಮೀನಿಗೆ ಅಪಾರ ಬೇಡಿಕೆಯಿದೆ  ಮತ್ತು ಸದ್ಯದ ಬೇಡಿಕೆಯನ್ನು ನೆರೆರಾಜ್ಯಗಳ ಸಹಾಯದಿಂದ ಪೂರೈಸಲಾಗುತ್ತದೆ.

ಗ್ರಾಮೀಣ ಪ್ರದೇಶದ ರೈತರು ಅಲಂಕಾರಿಕ ಮೀನು ಸಾಕಣೆಯನ್ನು ಒಂದು ಉಪಕಸುಬನ್ನಾಗಿ  ಕೈಗೊಂಡು ಹೆಚ್ಚಿನ ಆದಾಯ ಪಡೆಯಬಹುದು.

ಮಹಿಳೆಯರು  ಅದರಲ್ಲಿಯೂ ಸ್ವಸಹಾಯ ಗುಂಪಿನ ಮಹಿಳೆಯರು ಬಿಡುವಿನ ಸಮಯದಲ್ಲಿ ಅಲಂಕಾರಿಕ ನೀನು ಉತ್ಪಾದನೆಯನ್ನು ಮನೆಯ ಅಂಗಳದಲ್ಲಿ ಮತ್ತು ಹಳ್ಳಿಯಲ್ಲಿ ಸಣ್ಣ ಪ್ರಮಾಣದ ಗುಡಿಕೈಗಾರಿಕೆಯಾಗಿ ಕೈಗೊಳ್ಳಬಹುದು.

ವ್ಯವಸಾಯಕ್ಕೆ ಮತ್ತು ಇನ್ನಿತರ ಕಸಬುಗಳಿಗೆ ಧಕ್ಕೆಯಾಗದಂತೆ ಸಾಕಣೆ ಮಾಡಬಹುದು. ಈ  ಚಟುವಟಿಕೆಯಲ್ಲಿ ಶ್ರಮ ಕಡಿಮೆ. ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳ ಬಳಕೆ ಮತ್ತು ಲಭ್ಯವಿರುವ ಅಂತಹ ಸಮಯದಲ್ಲಿ ಮೀನು ಉತ್ಪಾದನೆ ಮಾಡಬಹುದು.

 ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದ ಮಹಿಳೆಯರಂತೆ ನಮ್ಮ ರಾಜ್ಯದಲ್ಲಿ ಮಹಿಳೆಯರು ಈಗಾಗಲೇ ಹೆಚ್ಚಿನ ರೀತಿಯಲ್ಲಿ ಅಲಂಕಾರಿಕ ಮೀನು ಉತ್ಪಾದನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಹೊಂದುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳು

Related Articles