Thursday, September 19, 2024

Crop insurance Message: ನಿಮ್ಮ ಮೊಬೈಲ್ ಗೆ ಬಂದಿದೆಯೇ ಈ ಸಂದೇಶ!!! ಬಂದರೆ ಬೆಳೆ ವಿಮೆ ತಿರಸ್ಕರಿಸಲಾಗುವುದು!!

Crop insurance Message: ನಿಮ್ಮ ಮೊಬೈಲ್ ಗೆ ಬಂದಿದೆಯೇ ಈ ಸಂದೇಶ!!! ಬಂದರೆ ಬೆಳೆ ವಿಮೆ ತಿರಸ್ಕರಿಸಲಾಗುವುದು!!
ಸಂದೇಶ ಬಂದ ರೈತರು ಏನು ಮಾಡಬೇಕು? ಬೆಳೆ ವಿಮೆ ಆಯ್ಕೆಗೆ ಈ ರೀತಿ ಮಾಡಿ.

ಆತ್ಮೀಯ ರೈತ ಬಾಂದವರೇ ಅತೀ ಮುಖ್ಯವಾಗಿ ಗಮನಿಸಿ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಿಕೊಂಡ ರೈತರು ನಿಮ್ಮ ಜಮೀನಿನಲ್ಲಿ ಬೆಳೆ ವಿಮೆ ಮಾಡಿಸಿದ ರೀತಿಯಲ್ಲಿ ಬೆಳೆಯನ್ನು ಬೆಳೆಯದೇ ಇದ್ದರೆ ಅಥವಾ ತಪ್ಪಾಗಿ ಬೆಳೆ ನಮೂದಿಸಿಕೊಂಡರೆ ತಪ್ಪದೇ ಈ ಕೆಲಸ ಮಾಡಿ, ಇಲ್ಲವಾದಲ್ಲಿ ನಿಮ್ಮ ಬೆಳೆ ವಿಮೆ ಅರ್ಜಿ ತಿರಸ್ಕರಿಸಲಾಗುತ್ತದೆ.

ಆಗಿದ್ದರೆ ತಪ್ಪಾಗಿ ನಮೂದಾಗಿದೆ ಅಂತ ಹೇಗೆ ರೈತರ ಗಮನಕ್ಕೆ ಬರುವುದು?
ಹೌದು, ನಿಮ್ಮ ಬೆಳೆ ಸಮಿಕ್ಷೇಯಲ್ಲಿ ಬೆಳೆ ತಪ್ಪಾಗಿ ನಮೂದಾಗಿದ್ದರೆ ಬೆಳೆ ವಿಮೆ ಅರ್ಜಿ ಸಲ್ಲಿಸಿದ ರೈತರ ಮೊಬೈಲ್ ನಂಬರ್‍ ಗೆ ಈ ರೀತಿ ಸಂದೇಶ ಕಳುಹಿಸಲಾಗಿರುತ್ತದೆ.

ರೈತರು ನಿಮಗೆ ಕಳುಹಿಸಿದ ಸಂದೇಶದಲ್ಲಿ ಇರುವ ದಿನಾಂಕದ ಒಳಗೆ https:/play.google.com/store/apps/details?id=com/sk.farmer23_24.cropsurvey-CRPINS ಲಿಂಕ್ ಬಳಸಿಕೊಂಡು ಮರು ಬೆಳೆ ಸಮಿಕ್ಷೇ ಮಾಡಿಕೊಳ್ಳಬಹುದಾಗಿರುತ್ತದೆ.
ಅಥವಾ
ರೈತರು ಬೆಳೆ ಸಮೀಕ್ಷೇ ಮೊಬೈಲ್ ಆ್ಯಪ್ ಅನ್ನು ಬಳಸಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ.

ಹಂತ:1: ಗೂಗಲ್ ಪ್ಲೇ ಸ್ಟೋರ್‌ನಲ್ಲಿ “Farmers Crop Survey App 2023-24”

ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬೆಳೆಸಮಿಕ್ಷೇ ಮಾಡಿಕೊಳ್ಳಿ.

ಹಂತ: 2: ಆರ್ಥಿಕ ವರ್ಷ ಹಾಗೂ ಋತು ದಾಖಲಿಸಿಕೊಳ್ಳಿ ನಂತರ .

ಹಂತ: 3: ರೈತರ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದು ಬೇಕಾಗುತ್ತದೆ. ನಮೂದಿಸಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ನಮೂದಿಸಿ ನೊಂದಣಿ ಮಾಡಿಕೊಳ್ಳಬೇಕು.

ಹಂತ: 4 : ಮಾಸ್ಟರ್ ವಿವರ ಡೌನ್‌ಲೋಡ್ ಮಾಡುವುದು ನಂತರ ಪಹಣಿ ಮತ್ತು ಮಾಲೀಕರ ವಿವರದ ಮೇಲೆ ಕ್ಲಿಕ್ ಮಾಡಿ ನಂತರ
ಜಿಲ್ಲೆ, ತಾಲ್ಲೂಕು, ಹೋಬಳಿ , ಗ್ರಾಮ ಆಯ್ಕೆ ಮಾಡಿ ಸರ್ವೆ ನಂ ನಮೂದಿಸುವುದು ಹಾಗೂ ಹಿಸ್ಸಾ ಇದ್ದರೆ ಅದನ್ನು ಆಯ್ಕೆ ಮಾಡುವುದು, ಮಾಲೀಕರ ಹೆಸರು ಆಯ್ಕೆ ಮಾಡುವುದು ಮತ್ತು ಕ್ಷೇತ್ರ ನಮೂದಿಸಿಕೊಳ್ಳಿ.

ಹಂತ: 5: ರೈತರು ಸ್ವಂತ ಜಮೀನಿನ ವಿವರ ದಾಖಲಿಸುತ್ತಿದ್ದರೆ ಸ್ವತಃ ಎಂದು ಆಯ್ಕೆಮಾಡುವುದು, ಒಂದು ವೇಳೆ ಸ್ನೇಹಿತರು ಸಂಬಂಧಿಕರ ಹೊಲದ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದರೆ, ರೈತರ ಪರವಾಗಿ ಬೆಳೆ ಮಾಹಿತಿಯನ್ನು ದಾಖಲಸುತ್ತಿದ್ದೇನೆಂದು ಆಯ್ಕೆ ಮಾಡಿ ಆ ರೈತರ ಮೊಬೈಲ್ ಸಂಖ್ಯೆಯನ್ನು ದಾಖಲಿಸುವುದು ಮತ್ತು ಪಹಣಿ ವಿವರ ಡೌನಲೋಡ್ ಮಾಡಬೇಕಾಗುತ್ತದೆ.

ಹಂತ: 6:ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ವಿವರಗಳನ್ನು ದಾಖಲಸಿ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಛಾಯಾ ಚಿತ್ರಗಳನ್ನು ತೆಗೆದು ಅಪ್‌ಲೋಡ್ ಮಾಡುಬೇಕು.

ಈ ರೀತಿ ಅಪ್‌ಲೋಡ್ ಮಾಡಲಾದ ಬೆಳೆ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಇಲಾಖಾ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುವರು. ಸಂಗ್ರಹಿಸಲಾದ ಬೆಳೆ ಮಾಹಿತಿಯನ್ನು ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ,ಬರ ಪರಿಹಾರ, ಬೆಳೆ ವಿಮೆ ,ಬೆಂಬಲ ಬೆಲೆ,ಬೆಳೆ ಸಾಲ, ಬೆಳೆಹಾನಿ ಇಂತಹ ಯೋಜನೆಗಳ ಪ್ರಯೋಜನೆಯನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ – ಹತ್ತಿರದ ರೈತ ಸಂಪರ್ಕ ಕೇಂದ್ರ, ಕೃಷಿ, ಕಂದಾಯ, ತೋಟಗಾರಿಕ ಹಾಗೂ ರೇಷ್ಮೆ ಇಲಾಖೆಯನ್ನು ಸಂಪರ್ಕಿಸಿರಿ.

ಇತರೆ ಯೋಜನೆಗಳ ಮಾಹಿತಿಗಳು:


ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್ ಕೊರೆಸಲು ಸಹಾಯಧನ
ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ
ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.
ಹೊಲ/ಗದ್ದೆ/ಜಾಗ ಖರೀದಿಸುವ ಮುನ್ನ ಅವಶ್ಯಕವಾಗಿ ಈ ದಾಖಲೆಗಳ ಬಗ್ಗೆ ಗಮನವಿರಲಿ.

ಇತ್ತೀಚಿನ ಸುದ್ದಿಗಳು

Related Articles