Friday, November 22, 2024

ಮಹಿಳೆಯರು ತಂದೆ ಆಸ್ತಿಯಲ್ಲಿ ಪಾಲು ಕೇಳಲು ಯಾವ ಪರಿಸ್ಥಿತಿಯಲ್ಲಿ ಬರುವುದಿಲ್ಲ?

ರೈತ ಬಾಂದವರೇ ಇತ್ತೀಚಿನ ದಿನಮಾನಗಳಲ್ಲಿ ಕುಟುಂಬಗಳಲ್ಲಿ ಆಸ್ತಿಗಾಗಿ ಜಗಳ ಮಾಡುವ ಸನ್ನಿವೇಶಗಳನ್ನು ನಾವು ಕೇಳಿರುತ್ತೇವೆ. ನಮ್ಮ ಗ್ರಾಮಗಳಲ್ಲಿ ನೋಡಿರುತ್ತೇವೆ. ಇಂತಹ ಜಗಳದಿಂದ, ಕೋರ್ಟು, ಕಛೇರಿ, ಜೈಲು ಪಾಲು ಆಗಿರುವ ಮಾಹಿತಿಯನ್ನು ಕೇಳಿರುತ್ತೇವೆ. ಇಲ್ಲಿ ನಾವು ಹೆಣ್ಣು ಮಕ್ಕಳ ಆಸ್ತಿ ಪಾಲು ಮಾಡುವ ಬಗ್ಗೆ ನೋಡೋಣ.

ಒಂದು ವೇಳೆ ನೀವು ಹೆಣ್ಣು ಮಕ್ಕಳು ಆಗಿದ್ದರೆ ನಿಮಗೆ ಯಾವಾಗ ಆಸ್ತಿ ಕೇಳಲು ಹಕ್ಕು ಇರುವುದಿಲ್ಲ ಇಂದು ನೀವು ನೋಡುತ್ತೀರಿ ಹೆಣ್ಣು ಮಕ್ಕಳಿಗೆ ಯಾವಾಗ ಆಸ್ತಿಯಲ್ಲಿ ಹಕ್ಕು ಕೇಳಲು ಬರುವುದಿಲ್ಲ ಎನ್ನುವಂತಹ ವಿಷಯವನ್ನು ತಿಳಿಯೋಣ. ಹೆಣ್ಣು ಮಕ್ಕಳ ಆಸ್ತಿಯ ವಿಷಯದಲ್ಲಿ ಈಗಲೂ ಕೂಡ ತುಂಬಾ ಗೊಂದಲಗಳೂ ಇದ್ದಾವೆ ಸಮಾನವಾದ ಹಕ್ಕು ಹೆಣ್ಣು ಮಕ್ಕಳಿಗೆ ಇದೆ ಆದರೆ ಯಾವ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕನ್ನು ಕೇಳುವುದಕ್ಕೆ ಬರುವುದಿಲ್ಲ ಎಂದರೆ.

ತಮ್ಮ ಜೀವಿತಾವಧಿಯಲ್ಲಿ ಅವರು ತಮ್ಮ ಆಸ್ತಿ ಸಂಪಾದನೆಯನ್ನು ಮಾಡಿರುತ್ತಾರೆ ಅವರ ಸ್ವಂತವಾಗಿ ದುಡಿದು ಸಂಪಾದಿಸುತ್ತಾ ಇರುತ್ತಾರೆ ಅಂದರೆ ಸ್ವಯಾರ್ಜಿತವಾಗಿ ಕಳುಹಿಸುತ್ತಾ ಇರುತ್ತಾರೆ. ಅಂತ ಆಸ್ತಿಯನ್ನು ತಂದೆಯ ಜೀವಿತಾವಧಿಯಲ್ಲಿ ಹಕ್ಕನ್ನು ಕೇಳುವುದಕ್ಕೆ ಬರುವುದಿಲ್ಲ. ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆ ಬದುಕಿದ್ದಾಗ ಹೆಣ್ಣು ಮಕ್ಕಳಿಗಾಗಲಿ ಅಥವಾ ಗಂಡು ಮಕ್ಕಳೇ ಆದರು ಪಾಲನ್ನು ಕೇಳುವುದಕ್ಕೆ ಬರುವುದಿಲ್ಲ ಅವರು ಯಾರಿಗೆ ಬೇಕಾದರೂ ಕೂಡ ಕೊಡಬಹುದು.


ಕೆಲವೊಂದು ಸನ್ನಿವೇಶದಲ್ಲಿ ತಂದೆಯು ಅವರ ಸ್ವಯಾರ್ಜಿತ ಆಸ್ತಿಯನ್ನು ಅವರ ಗಂಡು ಮಕ್ಕಳಿಗೆ ಮಾತ್ರ ಬರೆದು ಇಟ್ಟರೆ ಅದನ್ನು ಹೆಣ್ಣು ಮಕ್ಕಳಿಗೆ ಪ್ರಶ್ನಿಸುವುದಕ್ಕೆ ಬರುವುದಿಲ್ಲ. ಆಸ್ತಿ ವಿಭಾಗವಾಗುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮ್ಮ ಆಸ್ತಿಯನ್ನು ರಿಲೀಸ್ ಡೇಟ್ ಮೂಲಕ ಅಂದರೆ ಹಕ್ಕು ಬಿಡುಗಡೆ ಪತ್ರದ ಮೂಲಕ ಹಕ್ಕನ್ನು ಅವರೇ ಬಿಟ್ಟುಕೊಟ್ಟು ಮೇಲೆ ಮತ್ತೆ ಕೇಳುವುದಕ್ಕೆ ಬರುವದಿಲ್ಲ ಆಸ್ತಿ ಬೇಡ ಅಂತ ಸೈನ್ (ರುಜು)ಮಾಡಿ ಬಿಟ್ಟು ಕೊಟ್ಟು ಮತ್ತೆ ಬೇಕು ಅಂತ ಕೇಸ್ ಹಾಕಿ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ.

ಮತ್ತೆ ಹಳೆಯ ಆಸ್ತಿಗಳು ಇರುತ್ತದೆ, 2005ರ ಮೊದಲನೇ ಪಾರ್ಟಿಶನ್ ಆಗಿರುವಂತಹ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ ಗಂಡು ಮಕ್ಕಳಿಗೆ ಖಾತಾ ಬದಲಾವಣೆ ಯಾಗಿರುತ್ತದೆ. ಬಹಳ ವರ್ಷಗಳ ನಂತರ ಹೆಣ್ಣು ಮಕ್ಕಳು ಕೇಸನ್ನು ಹಾಕಿ ತೆಗೆದುಕೊಳ್ಳುತ್ತೀರಿ ಅಂತ ಹೇಳಿದರೆ ಬರುವುದಿಲ್ಲ ಇನ್ನು ಕೆಲವೊಮ್ಮೆ ಮನೆಯ ಯಜಮಾನತೆಗೆ ಹೋದಾಗ ಆಸ್ತಿಯನ್ನು ಪಾರ್ಟಿಶಿಯನ್ ಮೂಲಕ ಭಾಗ ಮಾಡಿಕೊಳ್ಳಬೇಕು ಅಂತ ಇರುತ್ತದೆ ತಂದೆ ಆಸ್ತಿಯಾಗಿದ್ದಾಗ ಆಗ ಬಾಯಿ ಮಾತಿನ ಮೂಲಕ ಹೆಣ್ಣು ಮಕ್ಕಳು ನಮಗೆ ಬೇಡ ಅಂತ ಹೇಳಿರುತ್ತಾರೆ ನಾವು ಮದುವೆಯಾಗಿ ಬಂದಿದ್ದೇವೆ ನಮ್ಮ ಪಾಲನ್ನು ಗಂಡು ಮಕ್ಕಳು ಹಂಚಿಕೊಳ್ಳಿ ಅಂತ ಹೇಳಿರುತ್ತಾರೆ. ಗಂಡು ಮಕ್ಕಳು ಮಾತ್ರ ಪಾರ್ಟಿಶನ್ ಮಾಡಿಕೊಂಡು ಇರುತ್ತಾರೆ ಮುಂದೆ ಹೆಣ್ಣು ಮಕ್ಕಳು ನಮಗೂ ಪಾಲು ಬೇಕು ಈಗ ಪಾಲು ಕೋಡುತ್ತಿರಾ ಅಂತ ಕೇಳುವುದಕ್ಕೆ ಬರುವುದಿಲ್ಲ.ಕುಟುಂಬದ ಎಲ್ಲಾ ಸದಸ್ಯರಿಂದ ಸರಿಮಾಡಿಕೋಳ್ಳುವುದು ಒಳ್ಳೆದು ಆಗಿರುತ್ತದೆ.ಎಲ್ಲಾ ಟೈಮ್ ನಲ್ಲಿ ಬರೀ ಮಾತಿನಿಂದ ಒಪ್ಪಿಗೆ ಕೊಟ್ಟಿಲ್ಲ ಅಂತ ಅದೆಷ್ಟು ವರ್ಷಗಳ ನಂತರ ನನಗೆ ಒಪ್ಪಿಗೆ ಇರಲಿಲ್ಲ ಅಂತ ಕೇಸ್ ಹಾಕುವುದಕ್ಕೆ ಬರುವುದಿಲ್ಲ.

ನೋಡಿದಿರಲ್ಲ ವೀಕ್ಷಕರೇ ಈ ಮೇಲಿನ ಪರಿಸ್ಥತಿ ನಿಮ್ಮ ಮನೆಯಲ್ಲೂ ಕೂಡ ಬಂದರೆ ನೀವು ಯಾವುದೇ ರೀತಿಯಾಗಿ ಕೇಸ್ ಅಥವಾ ಆಸ್ತಿಯನ್ನು ಕೇಳಲು ಹೋಗಬೇಡಿ ಏಕೆಂದರೆ ಇದು ಕಾನೂನಿನ ವಿರುದ್ದವಾಗಿರುತ್ತದೆ. ಹಾಗಾಗಿ ನಿಮ್ಮ ಎದುರುಗಡೆ ಇರುವಂತಹ ಮನುಷ್ಯರು ನಿಮ್ಮ ಮೇಲೆ ಕೋರ್ಟಿನಲ್ಲಿ ಕೇಸ್ ಹಾಕಬಹುದು ಇದರಿಂದ ನೀವು ಹಲವಾರು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles