Friday, September 20, 2024

ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ :

ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ ಸಾಲ ಸೌಲಭ್ಯ :
ಕೊನೆಯ ದಿನಾಂಕ ಯಾವಾಗ?ಸಾಲದ ವಿವರೇನು? ದಾಖಲೆಗಳೇನು? ಅರ್ಜಿ ಎಲ್ಲಿ ಸಲ್ಲಿಸಬೇಕು?

ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ.

ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ (KCC) ಪಶುಸಂಗೋಪನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಿಗೆ (ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆಗೆ) ನಿರ್ವಹಣಾ ವೆಚ್ಚ ಭರಿಸಲು ಲೀಡ್‌ ಬ್ಯಾಂಕ್ ಸಹಯೋಗದೊಂದಿಗೆ ರಾಷ್ಟ್ರೀಕೃತ/ಸಹಕಾರ ಬ್ಯಾಂಕ್‌ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲು ದಿನಾಂಕ 31.03.2024 ರವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗಳ ಸಾಲ ಸೌಲಭ್ಯಗಳ ವಿವರ :-

1, ಹೈನುಗಾರಿಕೆ : ಮಿಶ್ರ ತಳಿ 2 ಹಸುಗಳ ಸಾಕಾಣಿಕೆಗಾಗಿ ಪ್ರತಿ ಹಸುವಿಗೆ ರೂ. 18,000.00 ಗಳಂತೆ 2 ಹಸುಗಳಿಗೆ 36,000.00.ಸಾಲ ಸೌಲಭ್ಯ ನೀಡುವ ಅವಕಾಶ ಇರುತ್ತದೆ.

2, ಕುರಿ/ಮೇಕೆ : 10+1 ಘಟಕಕ್ಕೆ ರೂ, 29,950.00 – 20+1 ಘಟಕಕ್ಕೆ ರೂ. 57,200.00 ರೂ ವರೆಗೂ ಅವಕಾಶ ಇರುತ್ತದೆ.

3.ಹಂದಿ ಸಾಕಾಣಿಕೆ : 10 ಹಂದಿಗಳ ಘಟಕಕ್ಕೆ ರೂ. 60,000,00ರೂ ವರೆಗೂ ಸಾಲದ ಅವಕಾಶ ಇರುತ್ತದೆ.

4.ಕೋಳಿ ಸಾಕಾಣಿಕೆ :
ಅ) ಮಾಂಸದ ಕೋಳಿ ಸಾಕಾಣಿಕೆ ಪ್ರತಿ ಕೋಳಿಗೆ ರೂ. 100.00 ರಂತೆ ಗರಿಷ್ಟ ರೂ. 1,00,000.00 ವರೆಗೆ ಸಾಲ ಸೌಲಭ್ಯ ಈ ಯೋಜನೆಯಡಿ ನೀಡಲಾಗುತ್ತದೆ.
ಆ) ಮೊಟ್ಟೆ ಕೋಳಿ ಸಾಕಾಣಿಕೆ ಪ್ರತಿ ಕೋಳಿಗೆ ರೂ. 200.00 ರಂತೆ ಗರಿಷ್ಠ ರೂ. 2,00,000.00 ವರೆಗೆ ಸಾಲ ಸೌಲಭ್ಯ ನೀಡುವ ಅವಕಾಶ ಇರುತ್ತದೆ.

ಕೃಷಿಗೆ ಸಂಬಂಧಿಸಿದ ಇತರೆ ಯೋಜನೆಗಳು:


ಇದನ್ನೂ ಓದಿ: Agriculture land document Download- ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಿರಿ.


ಇದನ್ನೂ ಓದಿ: ಹೊಲ/ ಗದ್ದೆ / ಜಾಗ ಖರಿದೀಸುವ ಮುನ್ನ ಅವಶ್ಯಕವಾಗಿ ಇದರ ಗಮನವಿರಲಿ.


ಇದನ್ನೂ ಓದಿ: Solar Energy Scheme:ಸೌರ ಶಕ್ತಿ ಆಧಾರಿತ 3 HPಯಿಂದ 7.5 HP ಕೃಷಿ ಪಂಪ್‌ಸೆಟ್ ಗಳಿಗೆ ಸರ್ಕಾರದಿಂದ ಶೇ. 80 Subsidy.


ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್ ಕೊರೆಸಲು ಸಹಾಯಧನ


ಇದನ್ನೂ ಓದಿ: ಹದ್ದಬಸ್ತು, ತತ್ಕಾಲ್ ಪೋಡಿ ಈ ಎಲ್ಲಾ ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆ ಇನ್ನೂ ಸುಲಭ:

ಸಾಲ ಪಡೆಯಲು ಅವಶ್ಯಕ ದಾಖಲಾತಿಗಳು :-

1.ಆಧಾರ್ ಕಾರ್ಡ್ ಜೆರಾಕ್ಸ್
2, ಪಹಣಿ/ಹಕ್ಕು ಪತ್ರ
3, ಭಾವ ಚಿತ್ರ
4, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್
5, ರೇಷನ್ ಕಾರ್ಡ್ ಜೆರಾಕ್ಸ್.

ವಿ.ಸೂ : ಈಗಾಗಲೇ ಕಿಸಾನ್ ಕ್ರೆಡಿಟ್ ಕಾರ್ಡ್ ಕಾರ್ಯಕ್ರಮದಡಿ ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆದಿರುವವರು ಸಹಾ ಹೈನುಗಾರಿಕೆಗಾಗಿ ಸಾಲ ಪಡೆಯಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸುವುದು

ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಬಂಟ್ವಾಳ -9481445365, ಬೆಳ್ತಂಗಡಿ – 9448533922, ಮಂಗಳೂರು – 9741469994, ಮೂಡುಬಿದ್ರೆ – 9449683126, ಪುತ್ತೂರು – 9483920208, ಕಡಬ – 9483922594, ಸುಳ್ಯ – 9844995078, ಉಳ್ಳಾಲ – 9019198507, ಮುಲ್ಕಿ – 8971024282, ಮತ್ತು ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳು,

ವಿಷಯ ಸೂಚನೆ: ಬೇರೆ ಜಿಲ್ಲೆಯ ರೈತ ಬಾಂದವರು ಈ ಯೋಜನೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಿಮ್ಮ ತಾಲೂಕಿನ ಪಶುವೈದ್ಯಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles