Saturday, October 5, 2024

Loan Facility: 7 ಲಕ್ಷದವರೆಗೆ ಪಿಕ್‌ಅಪ್ ವ್ಯಾನ್ ಖರೀದಿಸಲು ಸಾಲ ಸೌಲಭ್ಯ:

Loan Facility: 7 ಲಕ್ಷದವರೆಗೆ ಪಿಕ್‌ಅಪ್ ವ್ಯಾನ್ ಖರೀದಿಸಲು ಸಾಲ ಸೌಲಭ್ಯ:

ಕನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ರಾಜ್ಯದ ಗುಡ್ಡಗಾಡು ಪ್ರದೇಶದ ರೈತರಿಗೆ ಸಾಲ ಸೌಲಭ್ಯ ನೀಡಲು ಮುಂದಾಗಿದೆ.


ರಾಜ್ಯದ ಗುಡ್ಡಗಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ಈ ಜಿಲ್ಲೆಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ದೃಷ್ಟಿಯಿಂದ ಮತ್ತು ಕೃಷಿ ಕಾರ್ಯ ಉತ್ತೇಜಿಸುವ ಉದ್ದೇಶದಿಂದ, ಯುವಕರನ್ನು ಕೃಷಿಗೆ ಆಕರ್ಷಿಸುವ ಉದ್ದೇಶದಿಂದ ರಾಜ್ಯದ ಗುಡ್ಡಗಾಡು ಜಿಲ್ಲೆಗಳ ರೈತರಿಗೆ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಸಾಲ ಸೌಲಭ್ಯವನ್ನು ನೀಡುತ್ತಿದೆ.

ಇದನ್ನೂ ಓದಿ: ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ತಾಡಪತ್ರೆ ವಿತರಣೆ :
ಇದನ್ನೂ ಓದಿ: ಜಲಾನಯನ ಅಭಿವೃದ್ದಿ ಇಲಾಖೆಯಿಂದ ತೆರೆದ ಬಾವಿ, ಡೀಸೆಲ್ ಪಂಪ್ ಸೆಟ್ ಗೆ ಅರ್ಜಿ ಆಹ್ವಾನ:

ಈ ಸಾಲ ಸೌಲಭ್ಯ ಯಾವ ರೀತಿ ಇದೆ ಮೊತ್ತ ಎಷ್ಟು? ಮತ್ತು ಬಡ್ಡಿದರ ಎಷ್ಟು? ಸಂಪೂರ್ಣ ಮಾಹಿತಿ ಈ ಅಂಕಣದಲ್ಲಿ ನೀಡಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ : ಸಿಒ 169 ಸಿಎಲ್‌ಎಸ್ 2023,ಬೆಂಗಳೂರು,ದಿನಾಂಕ 08/09/2023
ಸಹಕಾರ ಸಂಘಗಳ ನಿರ್ಭಂಧಕ ಕಛೇರಿ ಆದೇಶ ಸಂಖ್ಯೆ :ಸಿಆರ್‍ ಡಿ/ಸಿಎಬಿ-1//22/2023-24 ದಿನಾಂಕ:12/09/2023

ಈ ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರವು ಉಲ್ಲೇಖ(1) ರಲ್ಲಿ ರಾಜ್ಯದ ಈ ಗುಡ್ಡಗಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡ್ಡಗಾಡು ಪ್ರದೇಶದ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗೆ ನಾಲ್ಕು ಚಕ್ರದ ಪಿಕ್‌ಅಪ್ ವ್ಯಾನ್ ಖರೀದಿಸಲು ರೂ.7.00 ಲಕ್ಷಗಳವರೆಗೆ ಶೇ.4ರ ಬಡ್ಡಿದರದಲ್ಲಿ ಪಿಕಾರ್ಡ್ ಬ್ಯಾಂಕ್‌ಗಳ ಮೂಲಕ ಸಾಲ ವಿತರಿಸಲು ಆದೇಶ ಹೊರಡಿಸಲಾಗಿದೆ.

ಅದರಂತೆ ಸನ್ 2023-24ನೇ ಸಾಲಿನಲ್ಲಿ ರೈತರು ಪಿಕ್‌ ಅಪ್ ವ್ಯಾನ್ ಖರೀದಿಸಲು ಉಲ್ಲೇಖ (1) & (2) ರಲ್ಲಿನ ಎಲ್ಲಾ ಷರತ್ತುಗೊಳಪಟ್ಟು, ಪಿಕಾರ್ಡ್ ಬ್ಯಾಂಕುಗಳ ಮೂಲಕ ರೈತರಿಗೆ ಶೇ.4ರ ಬಡ್ಡಿದರದಲ್ಲಿ ರೂ.7.00 ಲಕ್ಷಗಳವರೆಗೆ ಸಾಲ ವಿತರಿಸಲು ಆದೇಶಿಸಲಾಗಿದೆ. ಶಾಖೆಯ ಜಿಲ್ಲಾ ವ್ಯವಸ್ಥಾಪಕರು & ಪಿಕಾರ್ಡ್ ಬ್ಯಾಂಕಿನ ವ್ಯವಸ್ಥಾಪಕರು ಸದರಿ ಯೋಜನೆಯನ್ನು ಹೆಚ್ಚು ಪ್ರಚುರಪಡಿಸಿ ರೈತರು ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಅಗತ್ಯ ಕ್ರಮವಿಡಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಈ ನೀಡಲಾದ ಜಿಲ್ಲೆಗಳ ಕನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: PM kisan: ಫಲಾನುಭವಿಗಳು 15 ನೇ ಕಂತಿಗೆ ಅರ್ಹರಾಗಲು ಈ ಕೆಲಸ ಮಾಡುವುದು ಕಡ್ಡಾಯ
ಇದನ್ನೂ ಓದಿ: ನರೇಗಾ ಯೋಜನೆಯಡಿ ನಿಮ್ಮ ಗ್ರಾಮಕ್ಕಾಗಿ ಮತ್ತು ರೈತ ಸಮುದಾಯಕ್ಕೆ 1.35 ಲಕ್ಷದ ಕಾಮಗಾರಿ:

ಇತ್ತೀಚಿನ ಸುದ್ದಿಗಳು

Related Articles