ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ * ಜಾನುವಾರುಗಳ ಸಾಗಾಣಿಕೆ) ನಿಯಮಗಳು, 2021
ಆತ್ಮೀಯ ಮಿತ್ರರೇ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ * ಜಾನುವಾರುಗಳ ಸಾಗಾಣಿಕೆ) ನಿಯಮಗಳು, 2021 ಈ ನಿಯಮದನ್ವಯ ಜಾನುವಾರು ಮಾಲೀಕರು, ಸಾರ್ವಜನಿಕರು ಹಾಗೂ ಸರಕುವಾಹನ ಮಾಲೀಕರು/ ಚಾಲಕರು ಜಾನುವಾರುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಾಹನದಲ್ಲಿ ಸಾಗಾಣಿಕೆ ಮಾಡಲು www.animaltrans.karahvs.in ನಲ್ಲಿ ಇ-ಪರವಾನಗಿ ಪಡೆಯಲು
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಅವಕಾಶವನ್ನು ಕಲ್ಪಿಸಿದೆ. ಈ ಒಂದು ಲೇಖನದಲ್ಲಿ ಅರ್ಜಿದಾರರು ಯಾವ ಉದ್ದೇಶಕ್ಕೆ ಪರವಾನಿಗೆ ಪಡೆಯಬೇಕು? ಹಾಗೂ ಏನೇಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
ಇದನ್ನೂ ಓದಿ: free fodder seeds kit: ಪಶು ಇಲಾಖೆಯಿಂದ ಉಚಿತ ಮೇವಿನ ಬೀಜ ವಿತರಣೆ:
ಈ ಪರವಾನಿಗೆ ಪಡೆಯಲು ಜಾನುವಾರುಗಳನ್ನು ಸಾಗಾಣಿಕೆ ಮಾಡಲು ಅರ್ಜಿದಾರರು ಈ ಕೆಳಕಂಡ ಮಾಹಿತಿಗಳನ್ನು ಭರ್ತಿ ಮಾಡಬೇಕಾಗಿರುತ್ತೆ.
ಅ)ಸಾಮಾನ್ಯ ವಿವರಗಳು ಮತ್ತು ಸಾಗಾಣಿಕೆ ಉದ್ದೇಶ:
ಪಶುಪಾಲನಾ ಚಟುವಟಿಕೆ, ಚಿಕಿತ್ಸೆ, ಕೃಷಿ, ಎಪಿಎಂಸಿ/ಸಂತೆ, ಗೋಶಾಲೆ, ಸಂಶೋಧನೆ. ಜಾನುವಾರು ಜಾತ್ರೆ/ಪ್ರದರ್ಶನ, ಕಸಾಯಿ ಖಾನೆ (13 ವರ್ಷ ಮೇಲ್ಪಟ್ಟ ಕೋಣಗಳು ಮಾತ್ರ.
ಆ) ಜಾನುವಾರು ಸಾಗಾಣಿಕೆ ವಾಹನದ ಮಾಹಿತಿ:
(ವಾಹನ ಸಂಖ್ಯೆ, ಚಾಲಕನ ಹೆಸರು/ವಿಳಾಸ/ಮೊಬೈಲ್ ಸಂಖ್ಯೆ)
ಇ) ಜಾನುವಾರು ಮಾಲೀಕರ ವಿವರಗಳು:
ಇದನ್ನೂ ಓದಿ: Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ:
(ಹೆಸರು, ವಿಳಾಸ, ಮೊಬೈಲ್, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ)
ಈ) ಜಾನುವಾರು ಮಾಹಿತಿ:
(ದನ/ಹಸು/ಎತ್ತು/ಎಮ್ಮೆ/ಕೋಣ, ಕಿವಿ ಓಲೆ ಸಂಖ್ಯೆ, ಜಾನುವಾರು ಭಾವಚಿತ್ರ)
ಉ) ಸಾಗಾಟ ಮಾರ್ಗ, ತಲುಪುವ ಸ್ಥಳ ಹಾಗೂ ವ್ಯಕ್ತಿಯ ಹೆಸರು ಮತ್ತು ವಿಳಾಸ:
(ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸಾಗಾಟದ ದಿನಾಂಕ ಇತ್ಯಾದಿ
ಊ) ಶುಲ್ಕ ಪಾವತಿ:
ಇದನ್ನೂ ಓದಿ: ಈ ತಂತ್ರಾಂಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದರೆ ಮಾತ್ರ ಬೆಳೆವಿಮೆ ಪರಿಹಾರ
ಲಘು ವಾಹನಕ್ಕೆ ರೂ.25/- ಮತ್ತು ಭಾರೀ ವಾಹನಕ್ಕೆ ರೂ.50/- (ಜಿ.ಎಸ್.ಟಿ ಪ್ರತ್ಯೇಕ) :
15 ಕಿ.ಮೀ. ಒಳಗೆ ಜಾನುವಾರು ಸಾಗಾಣಿಕ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದರೆ ಜಾನುವಾರು ಸಾಗಾಣಿಕೆ ಪರವಾನಗಿ ಪಡೆಯುವುದು ಕಡ್ಡಾಯ.)
ವಿಶೇಷ ಸೂಚನೆ: ಅರ್ಜಿದಾರರು ತಮ್ಮ ಅರ್ಜಿಯ ಹಂತವನ್ನು www.animaltrans.karahvs.in ನಲ್ಲಿ ಪರಿಶೀಲಿಸಿ ಇ-ಪರವಾನಗಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಗಮನಿಸಿ: ಅಧಿಕಾರಿಗಳು/ಸಾರ್ವಜನಿಕರು ಜಾನುವಾರು ಸಾಗಾಣಿಕೆ ಇ-ಪರವಾನಗಿಯನ್ನು www.animaltrans.karahvs. in ನಲ್ಲಿ ಪರಶೀಸಬಹುದು/ವೀಕ್ಷೀಸಬಹುದು.
ಇದನ್ನೂ ಓದಿ: Agricultural innovation Scheme: ಕೃಷಿ ನವೋದ್ಯಮ ಯೋಜನೆಯಡಿ 5 ಲಕ್ಷದಿಂದ 50 ಲಕ್ಷದವರೆಗೆ ಸಹಾಯಧನ.