Thursday, January 23, 2025

Library Supervisor- ಗ್ರಂಥಾಲಯ ಮೇಲ್ವಿಚಾರಕರಿಗೆ ಮಾಸಿಕ ಕನಿಷ್ಠ ವೇತನ ಹೆಚ್ಚಳ!

ರಾಜ್ಯ ಸರ್ಕಾರವು “ಅರಿವು ಕೇಂದ್ರ” ಗಳ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಗ್ರಂಥಾಲಯ ಮೇಲ್ವಿಚಾರಕರಿಗೆ(Library Supervisor) ಮಾಸಿಕ ಕನಿಷ್ಠ ವೇತನ ಹೆಚ್ಚಳ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಅವರು ಇಂದು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ರಾಜ್ ಆಯುಕ್ತಾಲಯದ ಮುಖ್ಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದನ್ನೂ ಓದಿ: First installment drought payment Failure list:ಬರ ಪರಿಹಾರ ಹಣ ಬರದೇ ಇರುವ ರೈತರ ಪಟ್ಟಿ ಮತ್ತು ಕಾರಣ :

ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳನ್ನು “ಅರಿವು ಕೇಂದ್ರ” ಎಂದು ಮೇಲ್ದರ್ಜೆಗೇರಿಸಲಾಗಿದ್ದು, 5,895 ಗ್ರಾಮಪಂಚಾಯಿತಿ ಗ್ರಂಥಾಲಯಗಳಲ್ಲಿ ಈವರೆಗೆ 4,925 ಗ್ರಂಥಾಲಯಗಳಿಗೆ ಕಟ್ಟಡ, ಕಟ್ಟಡದ ನವೀಕರಣ, ಕೊಠಡಿಗಳು, ಓದುವ ಸಾಮಗ್ರಿಗಳನ್ನು ಇಡಲು ಕಪಾಟುಗಳು, ಅಗತ್ಯ ಪೀಠೋಪಕರಣಗಳು, ಪುಸ್ತಕ, ನಿಯತಕಾಲಿಕೆಗಳ ಸಂಗ್ರಹಣೆ, ಇತ್ಯಾದಿಗಳನ್ನು ಒದಗಿಸಿ ಅಭಿವೃದ್ಧಿಪಡಿಸಲಾಗಿದೆ. 5.537 ಗ್ರಾಮ ಪಂಚಾಯಿತಿ ಗ್ರಂಥಾಯಗಳಲ್ಲಿ ಡಿಜಿಟಲ್ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಗ್ರಂಥಾಲಯಗಳನ್ನು ಉಪಯೋಗಿಸಿಕೊಳ್ಳುವ ಹಾಗೂ ಓದುವ ಹವ್ಯಾಸವನ್ನು ಪ್ರೋತ್ಸಾಹಿಸಿದ್ದರ ಪರಿಣಾಮವಾಗಿ ಇಂದು 6 ರಿಂದ 18 ವರ್ಷದೊಳಗಿನ 47.83 ಲಕ್ಷ ಮಕ್ಕಳು ಗ್ರಂಥಾಲಯಗಳಲ್ಲಿ ನೊಂದಾಯಿಸಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ: Panchamitra Whatsapp Number: ಗ್ರಾಮ ಪಂಚಾಯಿತಿ ಸೇವೆ ಮತ್ತು ಸಮಸ್ಯೆಗಳಿಗೆ ಈ ವಾಟ್ಸಪ್ ನಂಬರ್‍ ಕಳುಹಿಸಿ :

ಗ್ರಾಮಪಂಚಾಯಿತಿಗಳ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ “ಅರಿವು ಕೇಂದ್ರ” ಗಳಾಗಿ ಕಾರ್ಯನಿರ್ವಹಿಸಲು ಕೆಲಸದ ಸಮಯವನ್ನು 6 ರಿಂದ 8 ಗಂಟೆವರೆಗೆ ಏರಿಸಲಾಗಿದೆ. “ಆರಿವು ಕೇಂದ್ರ” ಗಳ ಮೂಲಕ ಬಸವತತ್ವ, ಬುದ್ದತತ್ವ, ಅಂಬೇಡ್ಕ‌ರ್ ತತ್ವ, ಸಂವಿಧಾನತತ್ವದ ಸಂದೇಶವನ್ನು ಸಾರಲು, ವಿಶೇಷ

ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ನೀಡಲಾಗುವುದು. ಇವುಗಳನ್ನು ಸಾಕಾರಗೊಳಿಸಲು ಗ್ರಂಥಾಲಯದ ಮೇಲ್ವಿಚಾರಕರಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದರು.

ಇದನ್ನೂ ಓದಿ: PM Kisan ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

ಮಕ್ಕಳಲ್ಲಿ ವೈಜ್ಞಾನಿಕ ಭಾವನೆ ಬೆಳೆಸುವುದು ಅತ್ಯವಶ್ಯಕವಾಗಿದ್ದು, ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಬೇಕು. ಮಕ್ಕಳಿಗೆ ಯುವಕ- ಯುವತಿಯರಿಗೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಅರಿವು ಕೇಂದ್ರ ಸ್ಪೂರ್ತಿ ಕೇಂದ್ರವಾಗಬೇಕು. ನಿಮಗೆ ಬೇಕಾದ ಅನೂಕೂಲವನ್ನು ಕಲ್ಪಿಸಿಕೊಡಲು ಸರ್ಕಾರ ಸಿದ್ಧವಿದೆ ಎಂದು ಗ್ರಂಥಾಲಯದ ಮೇಲ್ವಿಚಾರಕರಿಗೆ ಹೇಳಿದರು.

ತಮ್ಮ ಅರಿವು ಕೇಂದ್ರಗಳಿಗೆ ಯಾವ ರೀತಿಯ ಪುಸ್ತಕ ಒದಗಿಸಬೇಕು ಎನ್ನುವ ಬಗ್ಗೆ ಮಾಹಿತಿಯನ್ನು ಮೇಲ್ವಿಚಾರಕರು ನೀಡಿದರೆ, ಪುಸ್ತಕಗಳಿಗೆ ಕೊರತೆಯಾಗದಂತೆ ಮಕ್ಕಳಿಗೆ ಅನುಕೂಲವಾಗುವಂತಹ ಪುಸ್ತಕಗಳನ್ನು ಒದಗಿಸಲಾಗುವುದು. ಗ್ರಂಥಾಲಯದ ಮೇಲ್ವಿಚಾರಕರಿಗೆ ಅನುಕೂಲವಾಗಲು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಸರ್ಟಿಫಿಕೇಟ್ ಕೋರ್ಸ್‌ನ್ನು ಸಹ ಆರಂಭಿಸಲಾಗಿದೆ ಎಂದರು.

ನಮ್ಮ ರಾಜ್ಯದಲ್ಲಿ “ಅರಿವು ಕೇಂದ್ರ”ಗಳ ಸಬಲೀಕರಣ ಮಾಡಿ, ಈ ವ್ಯವಸ್ಥೆಯನ್ನು ಬಲವರ್ಧನೆ ಮಾಡಿದರೆ ನಾಳೆ ಸಮಾಜದಲ್ಲಿ ಉತ್ತಮವಾದ ನಾಗರೀಕರು ಬರುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಅರಿವು ಕೇಂದ್ರ ಲಾಂಛನ, ಅರಿವು ಕೇಂದ್ರದ ಲಾಂಛನ ವಿಡಿಯೊ, ಅರಿವು ಕೇಂದ್ರದ ಪೋಸ್ಟರ್, ಓದುವ ಬೆಳಕು ಅಭಿಯಾನದ ಚಟುವಟಿಕೆಗಳ ಸಂಕಲನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಸರ್ಟಿಫಿಕೇಟ್ ಕೋರ್ಸ್ ಪಠ್ಯಕ್ರಮ ಬಿಡುಗಡೆ ಮಾಡಿದರು. ಗ್ರಾಮಪಂಚಾಯಿತಿ ಅರಿವು ಕೇಂದ್ರ ಕಟ್ಟಡದ ಮಾದರಿ ವಿನ್ಯಾಸದ ಅನಾವರಣ ಮಾಡಿದರು. ಅಲ್ಲದೆ ಅರಿವು ಕೇಂದ್ರಗಳ ಅಭಿವೃದ್ಧಿಗೆ ಶ್ರಮಿಸಿದ ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾ ಶ್ರೀಮತಿ ಉಮಾ ಮಹದೇವನ್, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರಾದ ಶ್ರೀಮತಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಂಥಾಲಯಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳು

Related Articles