ನಿಮ್ಮ ಗ್ರಾಮದಲ್ಲೇ ಇನ್ನೂ ಈ ಎಲ್ಲಾ ಸೇವೆಗಳು:
ಹದ್ದಬಸ್ತು, ತತ್ಕಾಲ್ ಪೋಡಿ ಈ ಎಲ್ಲಾ ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆ ಜನಸಾಮಾನ್ಯರಿಗೆ ಇನ್ನೂ ಸುಲಭ:
ಎಲ್ಲಿ ದೊರೆಯುತ್ತವೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಶುಲ್ಕ ಎಷ್ಟು? ಸಂಪೂರ್ಣ ಮಾಹಿತಿ…
ಆತ್ಮೀಯ ಸ್ನೇಹಿತರೇ ಇನ್ನೂ ಮುಂದೆ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿಯಲ್ಲಿನ ಸೇವೆಗಳನ್ನು ಪಡೆಯಲು ಜನಸಾಮಾನ್ಯರು ಹೋಬಳಿ ಮಟ್ಟದ ನಾಡ ಕಛೇರಿ ಮತ್ತು ತಾಲ್ಲೂಕು ಮಟ್ಟದ ಕಚೇರಿಗೆ ಹೋಗುವ ಪರಿಪಾಟಲು ಬೇಕಾಗಿಲ್ಲ.
ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಇನ್ನೂ ಈ ಎಲ್ಲಾ ಸೇವೆಯನ್ನು ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಪ್ರಾರಂಭಿಸಲು ತೀರ್ಮಾನಿಸಿದೆ ..ಹೀಗಾಗಿ ಇನ್ಮುಂದೆ ಗ್ರಾಮ ಪಂಚಾಯ್ತಿಗಳ ಬಾಪೂಜಿ ಸೇವಾ ಕೇಂದ್ರದ ಮೂಲಕವೂ ಗ್ರಾಮೀಣ ಜನರು 11ಇ ನಕ್ಷೆ, ಭೂ ಪರಿವರ್ತನೆಗಾಗಿ, ತತ್ಕಾಲ್ ಪೋಡಿ ಹಾಗೂ ಹದ್ದುಬಸ್ತಿಗಾಗಿ ಅರ್ಜಿಯನ್ನು ಸಲ್ಲಿಸಬಹುದುಯೆಂದು ಈ ಮೂಲಕ ತಿಳಿಸಲಾಗುತ್ತೆ.
ಕೃಷಿಗೆ ಸಂಬಂಧಿಸಿದ ಹೆಚ್ಚಿನ ಯೋಜನೆಗಳಿಗೆ ಇಲ್ಲಿ ಕೆಳಗೆ ನೀಡಲಾಗಿದೆ.
ಇದನ್ನೂ ಓದಿ: ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.
ಇದನ್ನೂ ಓದಿ: CSC Center : ನೀರುದ್ಯೋಗ ಯುವಕರಿಗೆ ಹಳ್ಳಿಗಳಲ್ಲೆ ಉದ್ಯೋಗ ಮಾಡಲು ಸುವರ್ಣ ಅವಕಾಶ.
ಹೌದು ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ಅನ್ನುವಂತೆ ಗ್ರಾಮ ಪಂಚಾಯ್ತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ರಾಜ್ಯ ಸರ್ಕಾರದಿಂದ ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿ ವಿವಿಧ ಸೇವೆಗಳನ್ನು ಒದಗಿಸುವಂತೆ ಆದೇಶ ಹೊರಡಿಸಿದೆ.
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿ “11 ಇ ನಕ್ಷೆ”, “ತತ್ಕಾಲ್ ಪೋಡಿ”, “ಭೂ ಪರಿವರ್ತನೆಗಾಗಿ ಅರ್ಜಿ” ಮತ್ತು “ಹದ್ದುಬಸ್ತು” ಸೇವೆಗಳನ್ನು ನೀಡಲಾಗುತ್ತಿದೆ. ಸದರಿ ಸೇವೆಗಳಿಗೆ ಅರ್ಜಿ ಸಲ್ಲಿಸಲು ಜನರು ತಾಲೂಕು ಹಂತದಲ್ಲಿರುವ ತಹಶೀಲ್ದಾರ್ ಕಚೇರಿಗೆ ಅಥವಾ ಹೋಬಳಿ ಮಟ್ಟದಲ್ಲಿರುವ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗಿರುತ್ತದೆ ಎಂದಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಮಾಡಲು ಉದ್ದೇಶ:
ಒಂದು ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕುಗಳಲ್ಲಿ ಸುಮಾರು 30-40 ಹಾಗೂ ದೊಡ್ಡ ತಾಲೂಕು ಅಗಿದ್ದರೆ ಇನ್ನೂ ಹೆಚ್ಚು ಗ್ರಾಮ ಪಂಚಾಯತಿಗಳನ್ನು ಹಾಗೂ ಪ್ರತಿಯೊಂದು ಪಂಚಾಯತಿಗಳನ್ನು ಹಾಗೂ ಪ್ರತಿಯೊಂದು ಹೋಬಳಿಯಲ್ಲಿ ಆರರಿಂದ ಏಳು ಗ್ರಾಮ ಪಂಚಾಯತಿಗಳನ್ನು ಹೊಂದಿರುತ್ತದೆ. ಈ ಎಲ್ಲಾ ಗ್ರಾಮ ಈ ಪಂಚಾಯತಿಯ ಸುಮಾರು 20-50 ಸಾವಿರ ಜನರು ಸರ್ಕಾರಿ ಸೇವೆಯನ್ನು ತಾಲೂಕು ಅಥವಾ ಹೋಬಳಿ ಮಟ್ಟದಲ್ಲೇ ಪಡೆಯಬೇಕಾದುದರಿಂದ ಜನಸಂದಣಿ ಹೆಚ್ಚುವುದರ ಜೊತೆಗೆ ಕೇಂದ್ರದಲ್ಲಿ ತ್ವರಿತ ಗತಿಯಲ್ಲಿ ಸೇವೆಯನ್ನು ಒದಗಿಸುವುದಕ್ಕೆ ತೊಂದರೆಯಾಗುತ್ತಿತ್ತು. ಜೊತೆಗೆ ಸಾರ್ವಜನಿಕರು ಸೇವೆಗಳನ್ನು ಪಡೆಯಲು ಸಾಕಷ್ಟು ದೂರ ಪ್ರಯಾಣ ಮಾಡ ಬೇಕಾದುದರಿಂದ ಸಾಕಷ್ಟು ಹಣ ಜೊತೆಗೆ ಅವರ ವೇಳೆ,ಆ ದಿನಗಳ ಕೃಷಿ ಕೆಲಸ ಮತ್ತು ಇನ್ನಿತರ ರೀತಿಯಲ್ಲಿ ಕೆಲಸ ಕಾರ್ಯಗಳು ಆಗುವುದಿಲ್ಲ ಅಂತ ಜನಸಾಮಾನ್ಯರಗಳಿಂದ ದೂರಗಳು ಪದೇ ಪದೇ ಕೆಳುತ್ತಿದ್ದವು ಅದಕ್ಕೆ ಸರ್ಕಾರ ಈ ನಿರ್ಧಾರ ಮಾಡಿರುತ್ತದೆ.
ಈ ಸಮಸ್ಯೆಗೆ ಪರಿಹಾರವಾಗಿ, ಗ್ರಾಮೀಣ ಜನತೆ ತಮಗೆ ಅವಶ್ಯವಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿರುವ ಸದರಿ ಸೇವೆಗಳನ್ನು ಮತ್ತಷ್ಟು ದಕ್ಷ ಹಾಗೂ ತ್ವರಿತ ರೀತಿಯಲ್ಲಿ ಗ್ರಾಮ ಪಂಚಾಯತಿಯಲ್ಲೇ ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒದಗಿಸಲು ಸರ್ಕಾರವು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ, ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ 3.7 ಕೋಟಿ ಜನರಿಗೆ ಅಂದರೆ 78 ಲಕ್ಷ ಕುಟುಂಬಗಳು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿರುವ ’11 ಇ ನಕ್ಷೆ”, “ತತ್ಕಾಲ್ ಪೋಡಿ”, ”ಭೂ ಪರಿವರ್ತನೆಗಾಗಿ ಅರ್ಜಿ” ಮತ್ತು “ಹದ್ದುಬಸ್ತು” ಸೇವೆಗಳನ್ನು ಪಡೆಯುವಲ್ಲಿ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳು ಮಹತ್ವದ ಪಾತ್ರ ವಹಿಸಲಿವೆ ಎಂದಿದ್ದಾರೆ.
ಸಾರ್ವಜನಿಕರು ಇನ್ನೂ ಮುಂದೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯಡಿರುವ “11 ಇ ನಕ್ಷೆ”, “ತತ್ಕಾಲ್ ಪೋಡಿ”, “ಭೂ ಪರಿವರ್ತನೆಗಾಗಿ ಅರ್ಜಿ” ಮತ್ತು ‘ಹದ್ದುಬಸ್ತು ಸೇವೆಗಳಿಗೆ ಅರ್ಜಿ ಸಲ್ಲಿಸಿ ಪಡೆಯಲು ತಾಲೂಕು ಹಂತದಲ್ಲಿರುವ ತಹಶೀಲ್ದಾರ್ ಕಚೇರಿಗೆ ಅಥವಾ ಹೋಬಳಿ ಮಟ್ಟದಲ್ಲಿರುವ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿಗೆ ಭೇಟಿ ನೀಡದೇ,
ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಸದರಿ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಅದರಂತೆ, ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ “11 ಇ ನಕ್ಷೆ”, “ತತ್ಕಾಲ್ ಪೋಡಿ”, “ಭೂ ಪರಿವರ್ತನೆಗಾಗಿ ಅರ್ಜಿ” ಮತ್ತು “ಹದ್ದುಬಸ್ತು ಸೇವೆಗಳಿಗೆ ಅರ್ಜಿಗಳನ್ನು ಸ್ವೀಕರಿಸಿ, ಉಲ್ಲೇಖ 1 ಮತ್ತು 2 ರ ಆದೇಶಗಳಂತೆ, ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಲಾಗಿರುವ ಅರ್ಜಿ ಶುಲ್ಕವನ್ನು ಪಡೆಯಲು ಆದೇಶಿಸಿದ್ದಾರೆ.
ಮೋಜಿನಿ ವ್ಯವಸ್ಥೆಯಡಿಯ ವಿವಿಧ ಸೇವೆಗಳ ಶುಲ್ಕದ ವಿವರ ಈ ಕೆಳಗಿನಂತಿದೆ:.
11 E Map:(11 ಇ ನಕ್ಷೆ): – 11 ಇ ನಕ್ಷೆಗೆ ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರದ ಶುಲ್ಕ 2 ಎಕರೆವರೆಗೂ ರೂ.1,500 ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿರುತ್ತದೆ. ಒಂದು ವೇಳೆ 2 ಎಕರೆಗಿಂತ ಹೆಚ್ಚು ಇದ್ದರೇ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕವಾಗಿ ರೂ. 400 ನಿಗದಿ ಪಡಿಸಲಾಗಿರುತ್ತದೆ. ಮತ್ತು ಇದರ ಜೊತೆಗೆ ಗ್ರಾಮ ಪಂಚಾಯ್ತಿಗಳ ಸೇವಾ ಶುಲ್ಕವಾಗಿ ರೂ.25 ನಿಗದಿಪಡಿಸಲಾಗಿದೆ.
(Non agriculture Land Application):ಭೂ ಪರಿವರ್ತನೆಗಾಗಿ ಅರ್ಜಿ : – ಈ ಒಂದು ಸೇವೆಗಾಗಿ 2 ಎಕರೆಯವರೆಗೆ ರೂ.1,500, 2 ಎಕರೆಗಿಂತ ಹೆಚ್ಚಿದ್ದರೇ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕವಾಗಿ ರೂ.400 ಹಾಗೂ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ಇರುತ್ತದೆ.
Tatkalal podi (ತತ್ಕಾಲ್ ಪೋಡಿ ) :- ಈ ಒಂದು ಸೇವೆಗಾಗಿ 2 ಎರಡು ಎಕರೆವರೆಗೂ ರೂ.1,500, 2 ಎಕರೆಗಿಂತ ಹೆಚ್ಚಿದ್ದರೇ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ ರೂ.400 ಹಾಗೂ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ನಿಗದಿಪಡಿಸಲಾಗಿದೆ.
Haddubastu (ಹದ್ದುಬಸ್ತು) – ಈ ಒಂದು ಸೇವೆಗಾಗಿ 2 ಎಕರೆವರೆಗೂ ರೂ.500, ಮತ್ತು 2 ಎಕರೆಗಿಂತ ಹೆಚ್ಚಿದ್ದರೇ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ ರೂ.300, ಆಗಿರುತ್ತದೆ.ಹಾಗೂ ನೋಟಿಸ್ ಶುಲ್ಕವಾಗಿ ಗ್ರಾಮೀಣ ಪ್ರದೇಶದ ಪ್ರತಿ ಬಾಜುದಾರರಿಗೆ ರೂ.25 ಆಗಿರುತ್ತದೆ ಜೊತೆಗೆ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ಇರುತ್ತದೆ.
ಇದನ್ನೂ ಓದಿ: ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರಿಗೆ ಊಟ ಮತ್ತು ವಸತಿ ಜೊತೆಗೆ ಉಚಿತ ತರಬೇತಿ
ಇದನ್ನೂ ಓದಿ: ಇಲಾಖೆಯಿಂದ ಅನರ್ಹ ಮತ್ತು ಅರ್ಹ ಪಡಿತರ ಚೀಟಿ ಪಟ್ಟಿ!!