Land purchase subsidy scheme: ಶೇ. 50 ರ ಸಹಾಯಧನದಲ್ಲಿ ಭೂಮಿ ಖರೀದಿಸಲು ಅವಕಾಶ:
ಸರ್ಕಾರದ ಸಹಾಯಧನ ಎಷ್ಟು? ಯಾವ ಜಿಲ್ಲೆಗೆ ಸಹಾಯಧನ ಎಷ್ಟು? ಎಷ್ಟು ಭೂಮಿ ಖರೀದೀಸಲು ಅವಕಾಶ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ..
Land purchase subsidy scheme: ಆತ್ಮೀಯ ರೈತ ಬಾಂದವರೇ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿವಿಧ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ ನಿಗಮಗಳ ಮೂಲಕ “ಭೂ ಒಡೆತನ ಯೋಜನೆ” ಯಡಿ ಭೂ ರಹಿತ ಅಂದರೆ ಭೂಮಿ ಇಲ್ಲದ ಮಹಿಳಾ ಕೃಷಿ ಕಾರ್ಮಿಕರಿಗೆ ಸಹಾಯಧನದಲ್ಲಿ ಜಮೀನು ಖರೀದಿಸಲು ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆಬಹುದಾಗಿರುತ್ತದೆ.
ಇದನ್ನೂ ಓದಿ: Drought relief fund: ಬರ ಪರಿಹಾರ ಜಮಾ ಆಗಲು ಈ ಕೆಲಸ ಕಡ್ಡಾಯ: 324 ಕೋಟಿ ಬರ ಪರಿಹಾರ ಬಿಡುಗಡೆ:
ಈ ಒಂದು ಲೇಖನದಲ್ಲಿ “ಭೂ ಒಡೆತನ ಯೋಜನೆ” ಯೋಜನೆಯಡಿ ಸೌಲಭ್ಯ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಒದಗಿಸಬೇಕಾದ ಅಗತ್ಯ ದಾಖಲಾತಿಗಳೇನು? ಅರ್ಜಿ ವಿಲೇವಾರಿ ಪ್ರಕ್ರಿಯೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡುವ ಮೂಲಕ ಈ ಯೋಜನೆ ಅಗತ್ಯವಿರುವವರಿಗೆ ತಲುಪುವಂತೆ ಮಾಡಲು ಸಹಕರಿಸಿ.
ಇದನ್ನೂ ಓದಿ: ಬೆಳೆಸಾಲ ಮಾಡಿಸಿರುವ ರೈತರ ಗಮನಕ್ಕೆ
ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದ್ದು, ಖರೀದಿಸುವ ಜಮೀನು ಫಲಾಪೇಕ್ಷಿಯ ವಾಸಿಸುವ ಸ್ಥಳದಿಂದ 10 ಕಿಮೀ ವ್ಯಾಪ್ತಿಯಲ್ಲಿರಬೇಕು.
ಒಟ್ಟು ಯೋಜನೆಯ ಘಟಕ ವೆಚ್ಚದ ಮಿತಿಯೊಳಗೆ ಕನಿಷ್ಟ 2.00 ಎಕರೆ ಖುಷಿ, 1.00 ಎಕರೆ ನೀರಾವರಿ, 1/2 ಎಕರೆ ಭಾಗಾಯ್ತು ಅಂದರೆ ತೋಟದ ಜಮೀನನ್ನು ಖರೀದಿಸಿ ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕರ ಹೆಸರಿನಲ್ಲಿ ನೊಂದಾಯಿಸಲಾಗುತ್ತದೆ ಎಂದು ಈ ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿಯನ್ನು ನೀಡುವ ಅಧಿಕಾರವನ್ನು ಆಯಾ ಜಿಲ್ಲೆಯಲ್ಲಿನ ಜಿಲ್ಲಾಧಿಕಾರಿಗಳಿಗೆ ನೀಡಲಾಗಿರುತ್ತದೆ.
land purchase subsidy amount- ಸಹಾಯಧನ ಏಷ್ಟು ಪಡೆಯಬವುದು?
ಈ ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೀಮಿತಗೊಂಡಂತೆ ಈ ಯೋಜನೆಯಡಿ ಒಟ್ಟೂ ಘಟಕ ವೆಚ್ಚವನ್ನು ರೂ.25.00 ಲಕ್ಷ ಎಂದು ನಿಗದಿಪಡಿಸಲಾಗಿರುತ್ತದೆ ಉಳಿದಂತೆ ಇತರೆ 26 ಜಿಲ್ಲೆಗಳಲ್ಲಿ ಈ ಯೋಜನೆಯಡಿ ಘಟಕ ವೆಚ್ಚವನ್ನು ರೂ.20.00 ಲಕ್ಷಗಳಿಗೆ ನಿಗದಿಪಡಿಸಲಾಗಿರುತ್ತದೆ.
ಒಟ್ಟು ಘಟಕ ವೆಚ್ಚದಲ್ಲಿ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ ಉದಾಹರಣೆಗೆ ಜಮೀನು ಖರೀದಿಸಲು 20 ಲಕ್ಷ ವೆಚ್ಚವಾದಲ್ಲಿ 10 ಲಕ್ಷವನ್ನು ಸರಕಾರ ಭರಿಸುತ್ತದೆ. ಮತ್ತು ಉಳಿದ ಶೇ.50 ರಷ್ಟು ಹಣವನ್ನು ಅವಧಿ ಸಾಲ ಒದಗಿಸಲಾಗುತ್ತದೆ. ಅವಧಿ ಸಾಲವನ್ನು ನಿಗಮದಿಂದಲೇ ಭರಿಸಲಾಗುತ್ತದೆ. ಇದಕ್ಕೆ ವಾರ್ಷಿಕ ಶೇ.6ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಸಾಲ ಮತ್ತು ಬಡ್ಡಿಯನ್ನು 10 ವರ್ಷಗಳ ಅವಧಿಯಲ್ಲಿ ವಾರ್ಷಿಕ ಸಮ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.
ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬಾರದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ಜಮೀನಿನ ದರವನ್ನು ನಿಗದಿಪಡಿಸುತ್ತದೆ..
required documents for bhu odethana yojana: ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುವು?
- ಪರಿಶಿಷ್ಟ ಜಾತಿ/ಪಂಗಡದವರಾಗಿದ್ದು, ಜಾತಿ ಪ್ರಮಾಣಪತ್ರ ಹೊಂದಿರಬೇಕು
- ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕ ಪ್ರಮಾಣಪತ್ರ ಹೊಂದಿರಬೇಕು
- ಆಧಾಯ ಪ್ರಮಾಣ ಪತ್ರ.(ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ.1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ)
- ವಯೋಮಿತಿ ಕನಿಷ್ಠ 21 ಹಾಗೂ ಗರಿಷ್ಠ 50 ವರ್ಷ.
- ಕುಟುಂಬದ ಪಡಿತರ ಚೀಟಿ.
- ಬ್ಯಾಂಕ್ ಪಾಸ್ ಬುಕ್ ಪ್ರತಿ.
- ಆಧಾರ್ ಕಾರ್ಡ್ ಪ್ರತಿ Application last date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈಗಾಗಲೇ ಇಲಾಖೆಯಿಂದ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ತಿಂಗಳ 29 ನವೆಂಬರ್ 2023 ಕೊನೆಯ ದಿನಾಂಕವಾಗಿದೆ.
ರೈತ ಬಾಂದವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳ ಈ ಮೂಲಕ ತಿಳಿಸಲಾಗಿರುತ್ತದೆ.
ಇದನ್ನೂ ಓದಿ: Free treatment: 5 ಲಕ್ಷದವರೆಗೆ ಬಡವರಿಗೆ ಉಚಿತ ಚಿಕಿತ್ಸೆ ಯೋಜನೆ