Tuesday, November 12, 2024

Land purchase records-ಯಾವುದೇ ಜಮೀನನ್ನು ಖರೀದಿ ಮಾಡುವಾಗ ಈ ದಾಖಲೆಗಳನ್ನು ತಪ್ಪದೇ ಚೆಕ್ ಮಾಡಿಕೊಳ್ಳಿ!

ನಮಸ್ಕಾರ ರೈತರೇ, ನೀವು ಯಾವುದೇ ಜಮೀನಿಗೆ ಸಂಬಂಧಪಟ್ಟ ವ್ಯವಹಾರ ಮಾಡುವರಿದ್ದರೇ ಜಮೀನು ಖರೀದಿ ಮಾಡುವಾಗ ಬೇಕಾಗುವ ಅಗತ್ಯ ದಾಖಲೆಗಳು ಯಾವು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಸಾರ್ವಜನಿಕರು ಒಂದು ಆಸ್ತಿಯನ್ನು ಮಾರಾಟ ಅಥವಾ ಖರೀದಿ ಮಾಡುವ ಸಮಯದಲ್ಲಿ ಯಾವೆಲ್ಲ ದಾಖಲೆಗಳನ್ನು (land documents) ಮರೆಯದೆ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಈ ಕುರಿತು ಅದರ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ನೀವು ಒಂದೊಮ್ಮೆ ಜಮೀನಿನ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಹಣ ಕಟ್ಟಿ ಜಮೀನನ್ನು ಖರೀದಿ ಮಾಡಿದಲ್ಲಿ ದೊಡ್ಡ ಮಟ್ಟದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಒಮ್ಮೆ ಜಮೀನಿನ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸುವುದು ತುಂಬಾ ಅತ್ಯಗತ್ಯ. ನಿಮಗೆ ಅದರ ಬಗ್ಗೆ ಗೊತ್ತಿಲ್ಲದಿದ್ದರೆ ಉತ್ತಮ ಲಾಯರ್ ಆಫೀಸನ್ನು ಭೇಟಿ ಮಾಡಿ ದಾಖಲೆಗಳನ್ನು ಪರಿಶೀಲಿಸಿ.

ಇದನ್ನೂ ಓದಿ:ಮನೆಯಲ್ಲೆ ಕುಳಿತು ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಪಹಣಿ /rtc ಚೆಕ್ ಮಾಡಿಕೊಳ್ಳುವ ವಿಧಾನ!

ಜಮೀನನ್ನು ಖರೀದಿ ಮಾಡುವಾಗ ಈ ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ.

1)ಹಕ್ಕು ಪತ್ರ (hakkupatra)

2) ಆಕಾರ ಬಂದ್ (akara band)

3)ಪಹಣಿ (rtc)

4)ಇಸಿ (ec)

5)ಮ್ಯುಟೇಶನ್ ರಿಪೋರ್ಟ್ (MR)

6)ಖರೀದಿ ಪತ್ರ (sale deed)

7)11 ಇ ಸ್ಕೇಚ್ (11 e sketch)

8)ಸರ್ವೇ ಸ್ಕೆಚ್ (survey sketch)

9)ಫಾರ್ಮ್ 10 (form 10)

10) ಸಾಗುವಳಿ ಚೀಟಿ (saguvali cheeti)

ಇದನ್ನೂ ಓದಿ:ಪಿ ಎಮ್ ಕಿಸಾನ್ ಯೋಜನೆಯ ಹಣ ಬಂದಿಲ್ಲವೇ? ನಿಮ್ಮ ಹಣದ ಸ್ಥಿತಿ ಹೇಗೆ ತಿಳಿಯಿರಿ.

ಇತ್ತೀಚಿನ ಸುದ್ದಿಗಳು

Related Articles