ರೈತ ಬಾಂದವರೇ ಆಧುನಿಕ ಯುಗದಲ್ಲಿ ರೈತರು ಕೃಷಿ ಮಾಡಿದರೆ ಹೆಚ್ಚು ಲಾಭ ಗಳಿಸಲು ಸಾದ್ಯವಿಲ್ಲ. ಕೃಷಿ ಜೊತೆಗೆ ಕೃಷಿಯೇತರ ಕಸಬುಗಳಾದ ಮೀನು ಸಾಕಾಣಿಕೆ, ಜೇನು ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಕೃಷಿ ತ್ಯಾಜ್ಯದಿಂದ ಎರೆ ಗೊಬ್ಬರ, ತಯಾರಿಕೆ ಮಾಡುವುದರಿಂದ ವರ್ಷ ಪೂರ್ತಿ ಆದಾಯ ಪಡೆದು ಜೀವನ ಸಾಗಿಸಬಹುದು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಆರ್ ಕೆ ವಿ ವೈ ಯೋಜನೆ ಅಡಿ ಕುರಿ ಅಥವಾ ಮೇಕೆ ಸಾಕಾಣಿಕೆಗಾಗಿ ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಸಾಮಾನ್ಯ ವರ್ಗದ 18ರಿಂದ 60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು ಮಹಿಳಾ ಸದಸ್ಯರು ಲಭ್ಯವಿಲ್ಲದಲ್ಲಿ ಪುರುಷ ಸದಸ್ಯರುಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
.
ಜಿಲ್ಲಾವಾರು ಸಂಪರ್ಕ ಸಂಖ್ಯೆಗೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://kswdcl.karnataka.gov.in/page/Contact+Us/kn
ಕುರಿಗಾಹಿಗಳಿಗೆ 20 ಕುರಿ ಮತ್ತು ಒಂದು ಮೇಕೆ—ಅರ್ಹರ ಪಟ್ಟಿ ಬಿಡುಗಡೆ
ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಿ ಗಮನ ಸೆಳೆದಂತೆ ದೊಡ್ಡ ಸಂಖ್ಯೆಯಲ್ಲಿರುವ ಕುರಿಗಾಹಿಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಡಳಿತಾರೂಢ ಬಿಜೆಪಿ ತೆರೆಮರೆ ಕಾರ್ಯಾಚರಣೆ ಆರಂಭಿಸಿದೆ. ವಿವಿಧ ಸಮುದಾಯಗಳನ್ನು ಸೆಳೆಯಲು ಒಂದೊಂದೇ ಜನಪ್ರಿಯ ಯೋಜನೆ ಜಾರಿಗೆ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಒತ್ತು ನೀಡಿದ್ದು ಕುರಿ ಸಾಕಾಣಿಕೆದಾರರ ಬಹು ನಿರೀಕ್ಷಿತ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.
ಕುರಿಗಾಹಿಗಳಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಜೊತೆಗೆ ಆರ್ಥಿಕವಾಗಿ ಬಲವರ್ಧನೆ ಉದ್ದೇಶತ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿಗೊಳಿಸಿದ್ದು ಪ್ರತಿ ಸದಸ್ಯನ ಘಟಕ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುಷ್ಠಾನದ ಹಾದಿ ಸುಗಮಗೊಳಿಸಿದೆ. ಕುರಿದೊಡ್ಡಿಗೆ ಶೆಡ್ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಸಿಎಂ ಭರವಸೆ ನೀಡಿದ್ದು ಇದನ್ನು ಜಾರಿಗೆತರಲಾಗಿದೆ.
ಯೋಜನೆಗೆ ಯಾರೆಲ್ಲಾ ಅರ್ಹರು?
ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸಿ ಎಂ ಬೊಮ್ಮಾಯಿ
ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ 20,000 ಸದಸ್ಯರು ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಕ್ರಮೇಣ ಸದಸ್ಯರ ಸಂಖ್ಯೆ ಏರಿಕೆಗೂ ಪುಷ್ಠಿ ನೀಡಲಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಮಾಂಸದ ಬೇಡಿಕೆ ಮತ್ತು ಪೂರೈಕೆ ನಡುವಿನ ಕೊರತೆ ಸರಿದೂಗಿಸಲು ನೆರವಾಗಲಿದೆ ಎಂಬುದು ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಲದ ಅಭಿಪ್ರಾಯ ಪಟ್ಟಿದ್ದಾರೆ.
ಕುರಿಗಳಿಗೆ ಇಪ್ಪತ್ತು ಕುರಿ ಮತ್ತು ಒಂದು ಮೇಕೆ ನೀಡುವ ತೆಲಂಗಾಣ ಮಾದರಿಯ ಯೋಜನೆ ಕನಸು ನನಸಾಗಿಸಿದ್ದಕ್ಕೆ ಕುರುಬ ಸಮುದಾಯದ ಹಿರಿಯ ನಾಯಕರು ಮಹಾಮಂಡಲ ಸಂತಸಗೊಂಡಿದೆ.
ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯ ಯೋಜನೆಗೆ ಅರ್ಹ. ಪ್ರತಿ ಸದಸ್ಯನಿಗೆ 20 ಕುರಿ ಮತ್ತು ಒಂದು ಮೇಕೆಯನ್ನು ನೀಡಲಿದೆ. 1.75 ಲಕ್ಷ ರೂ ಘಟಕ ವೆಚ್ಚದಲ್ಲಿ ಶೇಕಡ 50 ಮೊತ್ತವನ್ನ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಸಾಲವಾಗಿ ನೀಡಲಿದೆ. ಶೇಕಡ 25 ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿ ಬರಿಸಲಿದೆ.
ಘಟಕ ವೆಚ್ಚದಲ್ಲಿನ ಉಳಿದ ಮೊತ್ತ ಫಲಾನುಭವಿ ವಂತಿಕೆಯಾಗಿ ನೀಡಬೇಕಾಗುತ್ತದೆ. ಫಲಾನುಭವಿ ತನ್ನ ಪಾಲು ನೀಡುವುದಕ್ಕೆ ಸಾಲದ ವ್ಯವಸ್ಥೆ ಮಾಡಿದೆ. ಏನ್ಸಿಡಿಸಿ ಸಾಲ ಮರುಪಾವತಿಗೆ ಫಲಾನುಭವಿಗೆ ಏಳು ವರ್ಷಗಳ ಕಾಲಾವಕಾಶವಿದೆ.
ಇದನ್ನೂ ಓದಿ: ಮಹಿಳೆಯರು ತಂದೆ ಆಸ್ತಿಯಲ್ಲಿ ಪಾಲು ಕೇಳಲು ಯಾವ ಪರಿಸ್ಥಿತಿಯಲ್ಲಿ ಬರುವುದಿಲ್ಲ?
ಗೋ ಹತ್ಯೆ ನಿಷೇಧದಿಂದ ಶೇಕಡ 5 ರಿಂದ 10 ರಷ್ಟು ಮಾಂಸಾಹಾರಿಗಳು ಕುರಿ ಮಾಂಸ ದತ್ತ ಹೊರಳಿದ್ದು ಬೇಡಿಕೆಯು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಮೇಲಿನ ಮಾಫಿಯ ಹಿಡಿತ ತಪ್ಪಿಸಲೆಂದು ಮಾರುಕಟ್ಟೆ ಪ್ರವೇಶಿಸಲು ಮಹಾಮಂಡಲ ಚಿಂತನೆ ನಡೆಸಿದೆ ಎಂದು ತಿಳಿಸಿದಾಗ ಬೊಮ್ಮಾಯಿ ಪ್ರಶಂಸಿಸಿದ್ದಾರೆ. ಒಂದು ಕೆಜಿ ಕುರಿ ಮಾಂಸಕ್ಕೆ ರೂ.700ಗಳಿದ್ದರೆ ಸಾಕಿ ಬೆಳೆಸಿದವರಿಗೆ ಎರಡು ನೂರು ಸಿಗುತ್ತಿದ್ದು ಕುರಿಗಾಹಿಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡಲಾಗುವುದು. ನರಿ ಸುವರ್ಣ ಜೊತೆಗೆ ಬನ್ನೂರು ಡೆಕ್ಕಣಿ ಬಳ್ಳಾರಿ ಎಳಗ ಕೆಂಗೇರಿ ದೇಸಿ ತಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ನಿಯೋಗ ಮಾಹಿತಿ ನೀಡಿದೆ.
ಉಪಜೀವನಕ್ಕೆ ಕುರಿ ಸಾಕಾಣಿಕೆ ಅವಲಂಬಿತ ಬೇರೆ ಸಮುದಾಯಗಳ ಬಡ ಕುಟುಂಬಗಳು ಲಾಭ ಪಡೆಯಲೆಂದು ಯೋಜನೆಗೆ ಕುರಿಗಾಹಿ ಎಂಬ ವ್ಯಾಪಕ ಅರ್ಥ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಸೇರಿ ಸ್ಥಳ ಹಿಂದುಳಿದ ಸಮುದಾಯಗಳು ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸೇರಿ ವಿವಿಧ ಹಿಂದುಳಿದ ಸಮುದಾಯಗಳು ಕುರಿ ಮೇಕೆ ಸಾಕಾಣಿಕೆ ಮೆಚ್ಚಿಕೊಂಡಿದೆ. 12 ಲಕ್ಷ ಕುರಿಗಾಹಿ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಪ್ರತಿ ಕುಟುಂಬಕ್ಕೆ ನಾಲ್ಕು ಜನರಂತೆ ಲೆಕ್ಕ ಹಾಕಿದರೂ ಜನಸಂಖ್ಯೆ ಬಲ 50 ಲಕ್ಷಕ್ಕೆ ಮುಟ್ಟಿದೆ.
ಹೆಚ್ಚಿನ ಮಾಹಿಗಾಗಿ :ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳ ಕಚೇರಿ ಅಥವಾ ಕುರಿಗಾರರ ಸಂಘದ ಕಚೇರಿಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.