Wednesday, January 22, 2025

ಕೃಷಿ ಆಗ್ರೋ ಕೇಂದ್ರ (ಕೃಷಿ ಅವಶ್ಯಕ ಪರಿಕರಗಳು) ಮಾರಾಟಕ್ಕೆ ಪರವಾನಿಗೆ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವುದು ಎಲ್ಲಿ?

ಮಿತ್ರರೇ ರೈತಾಪಿ ಮಾಡಲು ಬಹುಮುಖ್ಯವಾಗಿ , ಬೀಜ, ಗೊಬ್ಬರ,,ಕೀಟನಾಶಕಗಳು, ಹಾಗೂ ಕೃಷಿ ಪರಿಕರಗಳು ಬಹಳ ಮುಖ್ಯ ಹಾಗಾಗಿ ಅವುಗಳ ಮಾರಾಟ ಮಳಿಗೆ ತೇರಿಯಲು ಇಚ್ಛಿಸಿದ್ದಾರಾ, ಹಾಗಾದರೆ ಈ ಮಾಹಿತಿ ತಿಳಿಯಿರಿ.
ಕೃಷಿ ಇಲಾಖೆ ವತಿಯಿಂದ ರಾಜ್ಯದಲ್ಲಿ ರಸಗೊಬ್ಬರ , ಬೀಜ ಮಾರಾಟಕ್ಕೆ ಪರವಾನಿಗಿ ಪಡೆಯಬೇಕಾಗುತ್ತದೆ, ಪರವಾನಗಿ ಪಡೆಯಲು ಅರ್ಜಿದಾರರು ಆನ್ಲೈನ್ ಮೂಲಕ ಅಗತ್ಯ ದಾಖಲಾತಿ ಸಮೇತ ಅರ್ಜಿ ಸಲ್ಲಿಸಬೇಕು. ಈ ಕುರಿತು ಅರ್ಜಿಸಲ್ಲಿಸುವ ವಿಧಾನ ಹೇಗೆ? ಅರ್ಜಿಸಲ್ಲಿಸಲು ಬೇಕಗುವ ಅಗತ್ಯ ದಾಖಲಾತಿಗಳೇನು? ಪರವಾನಿಗೆ ಪಡೆಯಲು ಯಾವೆಲ್ಲ ಹಂತಗಳು ಇವೆ ಎಂದು ಸಂಪೂರ್ಣವಾಗಿ ವಿವರಿಸಲಾಗಿದೆ.

ಪರವಾನಿಗೆ ಪಡೆಯಲು ಬೇಕಾಗುವ ದಾಖಲಾತಿಗಳ ವಿವರ :
• ಸಹಾಯಕ ಕೃಷಿ ನಿರ್ದೇಶಕರು, ತಾಲ್ಲೂಕು ರವರಿಗೆ ಮುಖಪತ್ರ.
• ಅರ್ಜಿದಾರರ ಫೋಟೊ
• ಆಧಾರ ವಿವರ
• ಪಾನ್ಕಾರ್ಡ ವಿವರ
• ರಸಗೊಬ್ಬರ ವಿವರಗಳೊಂದಿಗೆ ಮೂಲವಾರು ಅಧಿಕೃತ ಫಾರ್ಮ-ಒ.
• ಮಾರಾಟದ ಸೈಟ್ ಯೋಜನೆ/ಶೇಖರಣಾ ಬಿಂದುಗಳು-ಸ್ವಂತ ಒಪ್ಪಂದದ ಪ್ರತಿ.
• ಮಾರಾಟ ಸೈಟ್ ಯೋಜನೆ/ ಶೇಖರಣಾ ಅಂಕಗಳು ಬಾಡಿಗೆ/ಗುತ್ತಿಗೆ ಒಪ್ಪಂದದ ಪ್ರತಿ.
• ಮಾರಾಟ ಸೈಟ್ ಯೋಜನೆ/ ಶೇಖರಣಾ ಬಿಂದುಗಳು-ಭೂ ಗುರುತುಗಳ ವಿವರದ ಪ್ರತಿ.
• ಪೂರೈಕೆಯ ಮೂಲ A2- ಸಗಟು ಮಾರಾಟಕ್ಕೆ ಪರವಾನಿಗೆ ಪ್ರತಿ.
• ಸಂಭಂದಿತ ಗ್ರಾಮ/ ಪಟ್ಟಣ ಪಂಚಾಯತದಿಂದ ಅನುಮತಿ ಪತ್ರ.
• GST ನೋಂದಣಿ ಪ್ರಮಾಣ ಪತ್ರ.
• ಬಯೋಡಾಟಾ ಸಹಿತವಾಗಿ ಸ್ವೀಕೃತಿಯೊಂದಿಗೆ ಅರ್ಹ ಅಧಿಕೃತ ವ್ಯಕ್ತಿಯ ಘೋಷಣೆ.
• ಎಫ್ಸಿಒ ಪ್ರಕಾರ ವಿದ್ಯಾರ್ಹತೆ ಪ್ರಮಾಣ ಪತ್ರ.
• ಡಿಜಿಟಲ್ ಪಾವತಿ/QR ಕೋಡ್ ಸ್ಕ್ಯಾನರ್ ವಿವರ.

ಹಂತ-1
ಮೊದಲನೇದಾಗಿ ಅರ್ಜಿದಾರರು ಕೃಷಿ ಇಲಾಖೆಯ https://kkisan.karnataka.gov.in/License/Registration.aspx ಈ ವೆಬ್ ಸೈಟ್ ಭೇಟಿ ಮಾಡಿ ಅಲ್ಲಿ ನೋಂದಣಿ/Register ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು, ಪಾನ್ ನಂಬರ್, ಮೇಲ್ ಐಡಿ ಹಾಕಿ ನೋಂದಣಿ ಮಾಡಬೇಕಾಗುತ್ತದೆ.

ಹಂತ-2
ನೋಂದಣಿ ನಂತರ ಲಾಗಿನ್ ಪೇಜ್ ಹೋಗಿ ನಿಮ್ಮ ಬಳಿ ಲಭ್ಯವಿರುವ ಬಳಕೆದಾರರ ID ಮತ್ತು Password ಅನ್ನು ನಮೂದಿಸಿ ಲಾಗಿನ್ ಕೊಡಬೇಕು.

ಹಂತ-3
ಇಲ್ಲಿ ರಸಗೊಬ್ಬರ/ಕೀಟನಾಶಕ/ ಬೀಜ ಮಾರಾಟ ಅಥವಾ ನಿಮಗೆ ಬೇಕಾಗಿರುವ ಪರವಾನಿಗೆಯ ಮೇಲೆ ಕ್ಲಿಕ್ ಮಾಡಿ ಹೊಸ ಅರ್ಜಿ/ New Application ಮೇಲೆ ಕ್ಲಿಕ್ ಮಾಡಬೇಕು, ಇಲ್ಲಿ ಕಂಪನಿಯ ಹೆಸರು/ ಸಂಸ್ಥೆಯ ಹೆಸರು/Name of the Company/ Firm, ದೂರವಾಣಿ ಸಂಖ್ಯೆಯೊಂದಿಗೆ ಅಂಚೆ ವಿಳಾಸ (ಕರ್ನಾಟಕ ರಾಜ್ಯದೊಳಗಿನ ವಿಳಾಸ ನೀಡಿ), ಮಾರಾಟದ ಸ್ಥಳ, ದಾಸ್ತಾನು ಮಳಿಗೆ ವಿಳಾಸ,ಅರ್ಜಿದಾರರ ವಿಳಾಸ ಮತ್ತು ವಿದ್ಯಾರ್ಹತೆ(BSc Agriculture/BSc in Chemistry/Diploma in Agriculture/Certificate Course on Agri-inputs) ಅರ್ಜಿದಾರರ ಅಡಿಯಲ್ಲಿ ಉದ್ಯೋಗದಲ್ಲಿರುವ ತಾಂತ್ರಿಕ ಸಿಬ್ಬಂದಿಯ ವಿದ್ಯಾರ್ಹತೆ, ಅಭ್ಯರ್ಥಿಯ ಭಾವಚಿತ್ರ, ಸಹಿಯನ್ನು ಅಪ್ಲೋಡ್ ಮಾಡಬೇಕು,(ಕೆಂಪು ಗುರುತುಯಿರುವ ಎಲ್ಲಾ ಕಾಲಂ ಭರ್ತಿಯನ್ನು ಕಡ್ಡಾಯವಾಗಿ ಮಾಡಬೇಕು) ನಂತರ ಕೆಳಗೆ ನಾನು ವಿವರಗಳನ್ನು ಒಪ್ಪುತ್ತೇನೆ ಮೇಲೆ ಕ್ಲಿಕ್ ಮಾಡಿ-Save draft ಮೇಲೆ ಒತ್ತಿ ನಂತರ ಮುಂದುವರಿಸು ಮೇಲೆ ಕ್ಲಿಕ್ ಮಾಡಬೇಕು.

ಹಂತ-4
ಇಲ್ಲಿ ಮಾರಾಟಗಾರರ ಹೆಸರು ಮತ್ತು ವಿಳಾಸ, ಮೂಲ ಕಂಪನಿಯ ಹೆಸರನ್ನು, ರಸಗೊಬ್ಬರಗಳ ವಿಧ ಆಯ್ಕೆ ಮಾಡಿ, ನಾನು ವಿವರಗಳನ್ನು ಒಪ್ಪುತ್ತೇನೆ ಕ್ಲಿಕ್ ಮಾಡಿ. ಮುಂದುವರಿಸು ಮೇಲೆ ಕ್ಲಿಕ್ ಮಾಡಬೇಕು.

ಹಂತ-5
ನಂತರ ಸಹಾಯಕ ಕೃಷಿ ನಿರ್ದೇಶಕರು, ತಾಲ್ಲುಕುರವರಿಗೆ ಮುಖಪತ್ರ, ರಸಗೊಬ್ಬರ ವಿವರಗಳೊಂದಿಗೆ ಮೂಲವಾರು ಅಧಿಕೃತ ಫಾರ್ಮ-ಒ, ಮಾರಾಟದ ಸೈಟ್ ಯೋಜನೆ/ ಶೇಖರಣಾ ಬಿಂದುಗಳು-ಸ್ವಂತ ಒಪ್ಪಂದದ ಪ್ರತಿ, ಮಾರಾಟದ ಸೈಟ್ ಯೋಜನೆ/ಶೇಖರಣಾ ಅಂಕಗಳು-ಬಾಡಿಗೆ/ ಗುತ್ತಿಗೆ ಒಪ್ಪಂದದ ಪ್ರತಿ, ಮಾರಾಟದ ಸೈಟ್ ಯೋಜನೆ/ ಶೇಖರಣಾ-ಬಿಂದುಗಳು-ಭೂ ಗುರುತುಗಳ ವಿವರ, ಪೂರೈಕೆಯ ಮೂಲ A2-ಸಗಟು ಮಾರುಕಟ್ಟೆ ಪರವಾನಿಗೆ ಪತ್ರ, ಸಂಬಂಧಿತ ಗ್ರಾಮ/ಪಟ್ಟಣ ಪಂಚಾಯತ ನಿಂದ ಅನುಮತಿ ಪತ್ರ, GST ನೋಂದಣಿ ಪ್ರಮಾಣ ಪತ್ರ, ಬಯೋಡಾಟಾ ಸಹಿತವಾಗಿ ಸ್ವೀಕೃತಿಯೊಂದಿಗೆ ಅರ್ಹ ಅಧಿಕೃತ ವ್ಯಕ್ತಿಯ ಘೋಷಣೆ ಪತ್ರ ಎಫ್ಸಿಒ ಪ್ರಕಾರ ಅರ್ಹತಾ ಪ್ರಮಾಣ ಪತ್ರ ಡಿಜಿಟಲ್ ಪಾವತಿ/QR ಕೋಡ್ ಸ್ಕ್ಯಾನರ್ ವಿವರಗಳ ಜೆಪಿಜೆ/ಪಿ.ಡಿ.ಎಪ್ ಪೈಲ್(ಗಮನಿಸಿ: ದಾಖಲೆ ಗಾತ್ರವು 2 MBಗಿಂತ ಕಡಿಮೆ ಇರಬೇಕು)ಗಳನ್ನು ಅಪ್ಲೋಡ್ ಮಾಡಬೇಕು. ನಂತರ ನಾನು ವಿವರಗಳನ್ನು ಒಪ್ಪುತ್ತೇನೆ ಮೇಲೆ ಕ್ಲಿಕ್ ಮಾಡಿ, ಮುಂದುವರೆಸು ಮೇಲೆ ಒತ್ತಬೇಕು.

ಇದನ್ನೂ ಓದಿ : ಇಲಾಖೆಯಿಂದ ರೈತರಿಗೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಖರೀದಿಗೆ ಸಹಾಯಧನದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ.

ಹಂತ-6
ನಂತರ ಖಜಾನೆ ಚಲನ್ ಪಡೆಯಲು ಮೇಲೆ ಕ್ಲಿಕ್ ಮಾಡಿ ಚಲನ್ ವಿವರ ಭರ್ತಿ ಮಾಡಿ ರೂ. 4,000ದ ಚಲನ್ನ್ನು ಸೃಜನೆ ಮಾಡಿ ಬ್ಯಾಂಕ್ ನಲ್ಲಿ ಸಲ್ಲಿಸಿ ಹಣ ಪಾವತಿ ನಂತರ ಶುಲ್ಕ ಪಾವತಿಸಿದ ಚಲನ್ ನಕಲನ್ನು ಅಪ್ಲೋಡ್ ಮಾಡಿ, ಪಾವತಿಸಿದ ಮೊತ್ತ, ಶಾಖೆ, ಪಾವತಿಸಿದ ದಿನಾಂಕದ ವಿವರ ಭರ್ತಿ ಮಾಡಿ ಅಂತಿಮ ಸಲ್ಲಿಕೆ ಮೇಲೆ ಕ್ಲಿಕ್ ಮಾಡಬೇಕು. ಇದನಂತರ ಅರ್ಜಿಯು ಸಂಬಂಧಪಟ್ಟ ಅಧಿಕಾರಿಯ ಲಾಗಿನ್ಗೆ ಚಲಿಸುತ್ತದೆ. ಸಂಬಂಧಪಟ್ಟ ಅಧಿಕಾರಿ ನಂಉದಿಸಿದ ಕ್ಷೇತ್ರಗಳನ್ನು ಮತ್ತು ಅಪ್ಲೋಡ್ ಮಾಡಿದ ದಾಖಲೆಗಳನ್ನು ಪರಿಸೀಲಿಸುತ್ತಾರೆ. ಪರಿಶೀಲನೆ ಹಂತದಲ್ಲಿ ಅಧಿಕಾರಿಯು ಅಪೂರ್ಣ ದಾಖಲೆಗಳನ್ನು ಅಪ್ಲೊಡ್ ಮಾಡಲು ಅರ್ಜಿದಾರರಿಗೆ ಹಿಂತಿರುಗಿಸಬಹುದು. ಸಂಪೂರ್ಣ ಪರಿಶಿಲನೆಯ ನಂತರ ಅರ್ಜಿಯನ್ನು ಸಂಬಂಧಪಟ್ಟ ಪರವಾನಿಗೆ ಪ್ರಾಧಿಕಾರಕ್ಕೆ ಕಳುಹಿಸಲಾಗಿದೆ.

ಪರವಾನಿಗೆ ಪ್ರಾಧಿಕಾರವು ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲಿಸಿ ಮತ್ತು ಎಲ್ಲಾ ವಿವರ ಮತ್ತು ದಾಖಲೆಗಳು ಸರಿಯಾಗಿದ್ದಲ್ಲಿ ನಂತರ ಜಿಪಿಎಸ್ ಟ್ಯಾಗ್ ಮಾಡಿದ ಫೋಟೋ ತಪಾಸಣೆಯ ಸಮಯದಲ್ಲಿ ಫಲಾನುಭವಿ/ಪರವಾನಿಗೆದಾರರು ಮತ್ತು ತಪಾಸಣಾ ಅಧಿಕಾರಿಯ ಜೊತೆಗೆ ಫೋಟೊ ತೆಗೆಯಲಾಗುತ್ತದೆ.

ನಂತರ ತಪಾಸಣಾ ವರದಿಯನ್ನು ಪರವಾನಿಗೆ ಪರಾಧಿಕಾರದ ಲಾಗಿನ್ ನಲ್ಲಿ ರವಾನಿಸಲಾಗುತ್ತದೆ. ತಪಾಸಣೆ ವರದಿಯನ್ನು ಪರಿಶೀಲಿಸಿದ ನಂತರ ಅನುಮತಿಯೊಂದಿಗೆ ಪರವಾನಿಗೆಯನ್ನು ವಿತರಿಸಲಾಗುತ್ತದೆ. ಅರ್ಜಿದಾರರಯ ತಮ್ಮ ಅರ್ಜಿಯ ಸ್ಥಿತಿಯ ಕುರಿತು ಪ್ರತಿ ಹಂತದ ಸೂಚನೆಗಳನ್ನು ತಿಳಿಯಬಹುದು. ಈ ಎಲ್ಲ ಹಂತಗಳಿಗೆ 30 ದಿನದ ಕಾಲಮಿತಿ ಇರಿಸಲಾಗಿದೆ.

ಹೆಚ್ಚಿನ ಮಾಹಿತಿಗಗಿ ನಿಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಭೇಟಿ ಮಾಡಿ.

ಇತ್ತೀಚಿನ ಸುದ್ದಿಗಳು

Related Articles