ಕೃಷಿ ಮೇಳದಲ್ಲಿ ಮಳಿಗೆ ಹಾಕಲು ಶರತ್ತು ಮತ್ತು ನಿಬಂಧನೆಗಳೇನು?
ಆತ್ಮೀಯ ರೈತ ಬಾಂದವರೇ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕೃಷಿ ನಗರಿ ಎಂದೇ ಖ್ಯಾತಿಯಾದ ಧಾರವಾಡದಲ್ಲಿ ಕೃಷಿ ಮೇಳ-2025, ಬೃಹತ್ ಕೃಷಿ ಪ್ರದರ್ಶನವನ್ನು ಸೆಪ್ಟೆಂಬರ್ 13 ರಿಂದ 16, 2025 ರವರೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ (UASD) ಮುಖ್ಯ ಕ್ಯಾಂಪಸ್‌ನಲ್ಲಿ ಎತ್ತನಗುಡ್ಡದಲ್ಲಿ ನಡೆಸಲಾಗುತ್ತಿದೆ. ಈ ಕೃಷಿ ಮೇಳವನ್ನು “ಪೌಷ್ಠಿಕ ಆಹಾರ ಭದ್ರತೆಗಾಗಿ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ಪ್ರಭೇದಗಳು” (Soil Health and Traditional Varieties for Nutritional Food Security) ಎಂಬ ವಿಷಯದೊಂದಿಗೆ ಆಯೋಜಿಸಲಾಗಿದೆ.
ಇದನ್ನೂ ಓದಿ: Krishi Prashasti 2025 : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಥಮ ಬಹುಮಾನ ಮೊತ್ತ 50,000/-ರೂ
ಪೌಷ್ಠಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು Soil Health and Traditional Varieties for Nutritional Food Security
(ಪೌಷ್ಠಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು), ಕೃಷಿ ಪರಿಕರಗಳು, ಕೃಷಿ ಯಂತ್ರೋಪಕರಣಗಳು, ಸಾವಯವ ಕೃಷಿ, ಹೈಟೆಕ್ ತೋಟಗಾರಿಕೆ ಇತ್ಯಾದಿಗಳ ಪ್ರದರ್ಶನಗಳನ್ನು ಸಹ ಭಾಗವಹಿಸುವ ರೈತರ ಅನುಕೂಲಕ್ಕಾಗಿ ಏರ್ಪಡಿಸಲಾಗಿದೆ, ಜೊತೆಗೆ ವಿಜ್ಞಾನಿಗಳೊಂದಿಗೆ ಒಬ್ಬರಿಗೊಬ್ಬರು ಸಮಾಲೋಚನೆ ನಡೆಸುತ್ತಾರೆ. 4 ದಿನಗಳ ಮೇಳದಲ್ಲಿ ಪ್ರತಿ ವರ್ಷ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ರಾಜ್ಯಗಳಿಂದ ಸುಮಾರು 22 ರಿಂದ 23 ಲಕ್ಷ ಜನರು ಭೇಟಿ ನೀಡುವ ಕರ್ನಾಟಕದ ಬೃಹತ ಕೃಷಿ ಮೇಳ ಇದಾಗಿದೆ.
Special Features of the Agricultural Fair :ಕೃಷಿ ಮೇಳದ ವಿಶೇಷತೆಗಳು:
ಕೃಷಿ ಒಳಹರಿವು
ಪೌಷ್ಟಿಕಾಂಶಗಳು
ಕೃಷಿ ಪ್ರಕಟಣೆಗಳು
ನೀರಾವರಿ ಉಪಕರಣಗಳು/ಪರಿಕರಗಳು
ಸಾಂಪ್ರದಾಯಿಕವಲ್ಲದ ಶಕ್ತಿಯ ಉಪಕರಣಗಳು
ನರ್ಸರಿಗಳು
ಮೌಲ್ಯವರ್ಧಿತ ಉತ್ಪನ್ನಗಳು
ನೈಸರ್ಗಿಕ/ಸಾವಯವ ಕೃಷಿ
ಪ್ರಾಣಿ ಉತ್ಪನ್ನಗಳು/ಆಹಾರಗಳು/ಪಶುವೈದ್ಯಕೀಯ ಔಷಧಿಗಳು
ಫಾರ್ಮ್ ಇಂಪ್ಲಿಮೆಂಟ್ಸ್
ಆಧುನಿಕ ಕೃಷಿ ಯಂತ್ರೋಪಕರಣಗಳು
ಶೈಕ್ಷಣಿಕ ಮತ್ತು ಹಣಕಾಸು ಸಂಸ್ಥೆಗಳು

ಇದನ್ನೂ ಓದಿ: Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ
Agricultural Fair Terms and Conditions: ಶರತ್ತು ಮತ್ತು ನಿಬಂಧನೆಗಳು:
1.ಪ್ಯಾನ್, ಆಧಾರ ಹಾಗೂ ಜಿಎಸ್ಟಿ ಮಾಹಿತಿಗಳನ್ನು (ಝರಾಕ್ಷ ಪ್ರತಿಗಳನ್ನು) ಹಾಗೂ ಇತ್ತೀಚಿನ 2 ಭಾವಚಿತ್ರಗಳನ್ನು ನೀಡುವುದು ಕಡ್ಡಾಯವಾಗಿದೆ.
2.ಮಳಿಗೆಗಳನ್ನು ಕಾಯ್ದಿರಿಸುವಾಗ ಕೃಷಿ ತಾಂತ್ರಿಕತೆ/ಉತ್ಪನ್ನಗಳನ್ನು ಪ್ರದರ್ಶನ/ಮಾರಾಟ ಮಾಡುವ ಅರ್ಜಿವಾರರಿಗೆ ಆದ್ಯತೆ ನೀಡಲಾಗುವುದು. ತದನಂತರ, ಮಳಿಗೆಗಳು ಲಭ್ಯವಿದ್ದಲ್ಲಿ ಮಾತ್ರ ಇತರರಿಗೆ ಮಳಿಗೆಗಳನ್ನು ಹಂಚಿಲಾಗುವುದು.
3.ಆಧುನಿಕ/ಸುಸಜ್ಜಿತ ಮಳಿಗೆಗಳ ಜಾಗದಲ್ಲಿ ಕೃಷಿಯೇತರ ವಸ್ತುಗಳ ಪ್ರದರ್ಶನ/ಮಾರಾಟಕ್ಕೆ ಮಳಿಗೆಗಳನ್ನು ಲಭ್ಯವಿದ್ದಲ್ಲಿ ಮಾತ್ರ ನೀಡಲಾಗುವುದು.
4.ಕೃಷಿಯೇತರ ಉತ್ಪನ್ನಗಳ ಪ್ರದರ್ಶನ/ಮಾರಾಟವನ್ನು ನಿಗದಿಪಸಿಡಿಸಿದ ಸ್ಥಳಗಳಲ್ಲಿ/ಮಳಿಗೆಗಳಲ್ಲಿ ಮಾತ್ರ ಮಾಡತಕ್ಕದ್ದು (ಕೃಷಿ ವಿಶ್ವವಿದ್ಯಾಲಯವು ಜಾಗ ನೀಡಿದಲ್ಲಿ ಮಾತ್ರ)
5.ಕೃಷಿ ವಸ್ತು ಪ್ರದರ್ಶನ ಸ್ಥಳದಲ್ಲಿ ಯಾವುದೇ ತರಹದ ವಾಹನಗಳು ಓಡಾಡಲು ಅವಕಾಶವಿಲ್ಲ. ನಿಗದಿಪಡಿಸಿದ ವಾಹನ ನಿಲ್ದಾಣದಲ್ಲಿ ಮಾತ್ರ ಅವುಗಳನ್ನು ನಿಲ್ಲಿಸತಕ್ಕದ್ದು, ಮಳಿಗೆದಾರರು ತಮ್ಮ ವಾಹನಗಳನ್ನು ಬೆಳಿಗ್ಗೆ 7 ಗಂಟೆ ಒಳಗಾಗಿ ತರತಕ್ಕದ್ದು, ಬೆಳಿಗ್ಗೆ 7 ಗಂಟೆ ನಂತರ ಬಂದ ವಾಹನಗಳಿಗೆ ಪ್ರವೇಶವಿರುವುದಿಲ್ಲ.
6.ಪ್ರದರ್ಶನಕಾರರು ತಮಗೆ ಹಂಚಿದ ಮಳಿಗೆಗಳನ್ನು ತಾವೇ ಉಪಯೋಗಿಸಬೇಕು ಹಾಗೂ ಯಾವುದೇ ಪರಸ್ಪರ ಬದಲಾವಣೆಗೆ ಅಥವಾ ಮರು ಮಾರಾಟಕ್ಕೆ ಅವಕಾಶವಿಲ್ಲ.
7.10 x 10 ಮಳಿಗೆಗಳ ಮುಂದೆ ಯಾವುದೇ ವಸ್ತುಗಳನ್ನು/ಗಿಡಗಳನ್ನು ಇತ್ಯಾದಿ ಪ್ರದರ್ಶನಕ್ಕೆ ಇಡಬಾರದು. ಅಂತಹ ಪ್ರದರ್ಶನಕಾರರು 10 x25′ ಮಳಿಗೆಗಳನ್ನು ತೆಗೆದುಕೊಳ್ಳಬೇಕು.
8.ಮಳಿಗೆಗಳ ಆಳತೆಗಳಲ್ಲಿ ಅಲ್ಪ ವ್ಯತ್ಯಾಸವಾಗುವ ಸಂಭವವಿರುವುದರಿಂದ, ಮಳಿಗೆಗಳ ಬ್ಯಾನರ್ ಫೂಟ್ ಕಡಿಮೆ ಇರುವಂತೆ ಬ್ಯಾನರ್‌ಗಳನ್ನು ಮುದ್ರಿಸಬೇಕು.
9.ಮಳಿಗೆಗಳಲ್ಲಿಡಬೇಕಾದ ಸಾಮಾನುಗಳನ್ನು ದಿನಾಂಕ: 12.09.2025 ರ ರಾತ್ರಿ 10 ಗಂಟೆಯೊಳಗಾಗಿ ತಂದು ಜೋಡಿಸಿಕೊಳ್ಳಬೇಕು ಹಾಗೂ ತಮ್ಮ ವಾಹನಗಳನ್ನು ತಕ್ಷಣವೆ ಕಡ್ಡಾಯವಾಗಿ ಅಲ್ಲಿಂದ ಹೊರತೆಗೆಯಬೇಕು.
ದಿನಾಂಕ: 13.09.2025 ರ ಬೆಳಗ್ಗೆ 6.00 ಗಂಟೆಯ ಮೇಲೆ ಅಲ್ಲಿಯೇ ಇರುವ ವಾಹನಗಳನ್ನು ಟ್ರಾಫಿಕ್ ಪೋಲಿಸರು ಎಳೆದುಕೊಂಡು ಹೋಗುವ ವಿಷಯದ ಬಗ್ಗೆ ಗಮನವಿರಲಿ,
10.ವಿಶ್ವವಿದ್ಯಾಲಯದ ಆವರಣದಲ್ಲಿ ಭಿತ್ತಿ ಪತ್ರ/ಹ್ಯಾಂಡ್ ಬಿಲ್ ಹಚ್ಚುವುದನ್ನು ನಿಷೇಧಿಸಲಾಗಿದೆ ಹಾಗೂ ಕಾನೂನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಗುವುದು.
11.ಪ್ರತಿ ಮಿತವ್ಯಯ ಮಳಿಗೆ-1 ರಲ್ಲಿ ಮೇಲ್ಗಡೆ ಮಳೆ ನೀರು ಸೋರದಂತೆ ನಿರ್ಮಿಸಿದ ಭಾವಣೆ ಹಾಗೂ ಪಕ್ಕದ ಮಳಿಗೆಗೆ ಬಟ್ಟೆಯ ಸಹಾಯದಿಂದ ಬೇರ್ಪಡಿಸಲಾಗವುದು. ಮಿತವ್ಯಯ ಮಳಿಗೆ-11 ಅದರಲ್ಲಿ ಭಾವಣೆ ಹಾಗೂ ಹಿಂದಿನ ಭಾಗ ಜಿಂಕ್ ಆಟ್ನಿಂದ ಕಟ್ಟಿ ಬಟ್ಟೆ ಸಹಾಯದಿಂದ ಬೇರ್ಪಡಿಸಲಾಗುವುದು. ಪ್ರತಿ ಮಳಿಗೆಗೆ 2 ಪ್ಲಾಸ್ಟಿಕ್ ಕುರ್ಚಿಗಳು, 2 ಟೇಬಲ್‌ಗಳು, 2 ಟ್ಯೂಬ್ ಲೈಟ್ಸ್/ LED ಹಾಗೂ ಒಂದು Samp ನ ವಿದ್ಯುತ್ ಪಾಯಿಂಟ್‌ನ್ನು ಒದಗಿಸಲಾಗುವುದು.
12.ಸುಮಾರು 180* x 110 ಅಡಿ ವಿಸ್ತೀರ್ಣದಲ್ಲಿ ಮಳೆ ನೀರು ಸೋರದಂತೆ ನಿರ್ಮಿಸಿದ ಭಾವನೆ ಒಳಗಡೆ ಸುಸಜ್ಜಿತ ಮಳಿಗೆಗಳು ಇರುತ್ತವೆ. ಫ್ಲೋರ್ ಮ್ಯಾಟ್ಸ್ ಮತ್ತು 400 ವ್ಯಾಟ್‌ನ ಬಲ್ಫ್ ವ್ಯವಸ್ಥೆಯಿದೆ. ಪ್ರತಿ 10 x 10 ಅಡಿ ಗಾತ್ರದ ಮಳಿಗೆಗಳಿಗೆ ಸುತ್ತಲು ಮೂರು ಕಡೆ ಫೈವುಡ್ ಬಳಸಲಾಗುವುದು ಹಾಗೂ ಪ್ರತಿ ಮಳಿಗೆಗೆ 2 ಟ್ಯೂಬ್ ಲೈಟ್ಸ್ / LED ಒಂದು 5 amps ನ ವಿದ್ಯುತ್ ಪಾಯಿಂಟ್, 2 ಪ್ಲಾಸ್ಟಿಕ್ ಕುರ್ಚಿಗಳು, 2 ಟೇಬಲ್ಗಳನ್ನು ಕೊಡಲಾಗುವುದು.
13.ಖುಲ್ಲಾ ಜಾಗದಲ್ಲಿ ಕೃಷಿಯಂತ್ರೋಪಕರಣಗಳ ಪ್ರದರ್ಶನ ಮಾಡುವವರು ತಾವೇ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು.
14.ಯಾವುದೇ ಹೆಚ್ಚುವರಿ ಸೌಲಭ್ಯಗಳು ಬೇಕಾದಲ್ಲಿ ಪ್ರದರ್ಶನಕಾರರು ನೇರವಾಗಿ ಗುತ್ತಿಗೆದಾರದಿಂದ ಬಾಡಿಗೆ ಆಧಾರದ ಮೇಲೆ ಪಡೆಯತಕ್ಕದ್ದು.
15.ಖುಲ್ಲಾ ಜಾಗೆಯಲ್ಲಿ ಹಾಕುವ ಮಳಿಗೆಗಳಿಗೆ ಬೇಕಾಗುವ ವಿದ್ಯುತ್ ಶಕ್ತಿಯ ವ್ಯವಸ್ಥೆಯನ್ನು ನೇರವಾಗಿ ಗುತ್ತಿಗೆದಾರರಿಂದ ಹಣಕೊಟ್ಟು ಪಡೆಯಬೇಕು.
16.ಒಂದು ಸಾರಿ ಪಾವತಿಯಾದ ಹಣವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸುವುದಿಲ್ಲ.
17.ತಮ್ಮ ತಮ್ಮ ಮಳಿಗೆಗಳಲ್ಲಿನ ವಸ್ತುಗಳ ಸುರಕ್ಷತೆಗೆ ತಾವೇ ಜವಾಬ್ದಾರರು
18.ಮಳಿಗೆಗಳಲ್ಲಿ ಅಡಿಗೆ ಮಾಡುವುದು, ಮದ್ಯಪಾನ, ಜೂಜಾಡುವುದು ಹಾಗೂ ಯಾವುದೇ ತರಹದ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇಧಿಲಾಗಿದೆ.
19.ಮೈಕ್ ಅಥವಾ ಟಿವಿ ಬಳಕೆ ಮಾಡುವವರು ಪಕ್ಕದವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿಬೇಕು.
20.ಅರ್ಜಿಯಲ್ಲಿ ನಮೂದಿಸಿದ ಉತ್ಪನ್ನ/ವಸ್ತುಗಳನ್ನು ಮಾತ್ರ ಮಳಿಗೆಗಳಲ್ಲಿ ಪ್ರದರ್ಶನ/ಮಾರಾಟ ಮಾಡತಕ್ಕದ್ದು
21.ಮಳಿಗೆಗಳಲ್ಲಿ ಅಡಿಗೆ ಮಾಡುವುದು ತಿನ್ನುವ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆಹಾರ/ಕ್ಯಾಂಟಿನ್ ಮಳಿಗೆಗಳಲ್ಲಿ ಅಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದು, ಅದಕ್ಕಾಗಿ ಅರ್ಜಿಯನ್ನು ವಿಸ್ತರಣಾ ನಿರ್ದೇಶನಾಲಯದಿಂದ ಪಡೆದು ತದನಂತರ ಅರ್ಜಿಯ ಪ್ರತಿ ಮತ್ತು ರಸಿದಿಯನ್ನು ಸಹ ಸಂಶೋಧನಾ ನಿರ್ದೇಶಕರು ಮತ್ತು ಅಧ್ಯಕ್ಷರು, ಆಹಾರ ಸಮಿತಿ ಇವರಿಗೆ ಸಲ್ಲಿಸಬೇಕು (ದೂರವಾಣಿ ಸಂ. 0836-2214241, 0836-2214245)
22.ಪ್ರದರ್ಶನಕಾರರ ಯಾವುದೇ ವಸ್ತುಗಳ ಹಾನಿ/ನಷ್ಟಕ್ಕೆ ಕೃಷಿ ವಿಶ್ವವಿದ್ಯಾಲಯವು ಜವಾಬ್ದಾರಿಯಲ್ಲ ಹಾಗೂ ಯಾವುದೇ ತರಹದ ವಿವಾದಕ್ಕೆ ವಿಶ್ವವಿದ್ಯಾಲಯದ ನಿರ್ಧಾರವೇ ಅಂತಿಮವಾಗಿರುತ್ತದೆ.
23.ಮಳಿಗೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿರಿ ಹಾಗೂ ಮಳಿಗೆಯಲ್ಲಿ ಕಸದ ಡಬ್ಬಿ ಇಡಬೇಕು. ಪ್ಲಾಸ್ಟಿಕ್ ಮತ್ತು ಇತರ ಕಸವನ್ನು ಹೊರಗೆ ಚೆಲ್ಲುವದನ್ನು ನಿಷೇಧಿಸಲಾಗಿದೆ.
24.ಮಳಿಗೆದಾರರಿಗೆ ನೀಡಿದ ಗುರುತಿನ ಕಾರ್ಡನ್ನು / ರಶೀದಿಯನ್ನು ಮಳಿಗೆಗಳಲ್ಲಿ ಸ್ಪಷ್ಟವಾಗಿ ಕಾಣುವಂತೆ ಇಟ್ಟಿರಬೇಕು.
25.ಕೃಷಿ ಮೇಳ-2025 ರ ಕಾರ್ಯಕ್ರಮದಲ್ಲಿ ಮಳಿಗೆಗಳನ್ನು ಪಡೆದವರು/ಸಂಸ್ಥೆಯವರು ನಡೆಸುವ ಎಲ್ಲಾ ವಹಿವಾಟುಗಳಿಗೆ ಹಾಗೂ ವ್ಯವಹಾರಗಳಿಗೆ ಅವರೇ ಹೊಣೆಗಾರರಾಗಿದ್ದು, ಈ ವಿಷಯದಲ್ಲಿ ಗ್ರಾಹಕರಿಂದ ಯಾವುದೇ ತಕರಾರು ಬಂದಲ್ಲಿ ಕೃಷಿ ವಿಶ್ವವಿದ್ಯಾಲಯವು ಯಾವುದೇ ರೀತಿಯಲ್ಲಿಯೂ ಜವಾಬ್ದಾರಾಗಿರುವುದಿಲ್ಲ, ಅರ್ಜಿದಾರರಿಗೆ ಮಳಿಗೆ ಹಂಚುವ ಅಧಿಕಾರವು ಕೃಷಿ ವಿಶ್ವವಿದ್ಯಾಲಯಕ್ಕೆ ಇದ್ದು ಯಾರು ಈ ಬಗ್ಗೆ ತಕರಾರು ಮಾಡುವಂತಿಲ್ಲ.
26.ಪ್ರದರ್ಶನಕಾರರ ಮಳಿಗೆಯಲ್ಲಿ ನೈಸರ್ಗಿಕ ವಿಕೋಪಗಳಿಗೆ (ಮಳೆ ಅಥವಾ ಗಾಳಿಯಿಂದ) ತಮ್ಮ ವಸ್ತುಗಳಿಗೆ ಹಾನಿಯಾದಲ್ಲಿ ಕೃಷಿ ವಿಶ್ವವಿದ್ಯಾಲಯವು ಜವಾಬ್ದಾರಿಯಲ್ಲ.
27.ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮೇಲಿನ ಎಲ್ಲ ಶರತ್ತು ಮತ್ತು ನಿಬಂಧನೆಗಳನ್ನು ಸಂಪೂರ್ಣ ಓದಿದ್ದೇನೆ ಮತ್ತು ತಿಳಿದುಕೊಂಡಿದ್ದೇನೆ. ಅಲ್ಲದೇ ಎಲ್ಲ ಕರಾರುಗಳಿಗೆ ನಾನು ಬದ್ಧನಾಗಿದ್ದೇನೆ. ಒಂದು ವೇಳೆ ಕರಾರುಗಳನ್ನು ತಪ್ಪಿದಲ್ಲಿ, ವಿಶ್ವವಿದ್ಯಾಲಯದ ಹಿತದೃಷ್ಟಿಗೆ ಚ್ಯುತಿ ತಂದಲ್ಲಿ ವಿಶ್ವವಿದ್ಯಾಲಯವು ಕೈಕೊಳ್ಳುವ ಕ್ರಮಗಳಿಗೆ ನನ್ನದೇನೂ ಅಭ್ಯಂತರವಿಲ್ಲವೆಂದು ಈ ಮೂಲಕ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದೇನೆ. ದೃಡೀಕರಿಸಿಬೇಕು.
ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ
ಸಹ ಸಂಶೋಧನಾ ನಿರ್ದೇಶಕರು ಮತ್ತು ಅಧ್ಯಕ್ಷರು, ಆಹಾರ ಸಮಿತಿ (ದೂರವಾಣಿ ಸಂ. 0836-2214241, 0836-2214245)
