Wednesday, January 22, 2025

ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಹೊಸ ಯೋಜನೆ ಕೃಷಿ ಉಡಾನ್ 2.0

ರೈತರು ಯಾವುದೇ ಬೆಳೆ ಬೆಳೆಯಬೇಕಾದರೆ ಬಿತ್ತನೆಯಿಂದ ಹಿಡಿದು ಕಟಾವಿನ ವರೆಗೂ ಏಷ್ಟೇಲ್ಲಾ ಪರಿಶ್ರಮ ಪಟ್ಟಿರುತ್ತಾನೆ. ಕಾಡು ಪ್ರಾಣಿಗಳಿಂದ ರಕ್ಷಣೆಯಿಂದ, ಪ್ರಕೃತಿ ವಿಕೋಪದಂತ ಗಾಳಿ,ಬರಗಾಲ, ಮತ್ತು ಅತಿವೃಷ್ಠಿಯಿಂದ, ಕೀಟ ಬಾದೆ ರೋಗ ಬಾದೆ, ಇಷ್ಟೇಲ್ಲಾ ಕಷ್ಟ ಪಟ್ಟ ಬೆಳೆದ ಬೆಳೆಗಳನ್ನು ಸಾಗಣಿಕೆಗೂ ಹರ ಸಾಹಸ ಪಡಬೇಕು. ನಿಮೆಗೆಲ್ಲಾ ಗೊತ್ತಿರುವ ಹಾಗೆ ರೈತ ಬೆಳೆದಿರುವ ತರಕಾರಿಗಳು, ಹಣ್ಣುಗಳು, ಇತರೆ ಕೃಷಿ ಉತ್ಪನ್ನಗಳನ್ನು ಸರಿಯಾದ ವೇಳೆ ಸಾಗಾಣಿಕೆ ಇಲ್ಲದ ಕಾರಣದಿಂದ ರೈತನಿಗೆ ಬೆಳೆದ ಬೆಳೆಗಳು ಕೊಳೆತು ಹಾಳುವುದು ರೈತನ ವರ್ಷವಿಡಿ ಪಟ್ಟ ಕಷ್ಟದಿಂದ ರೈತ ನೊಂದು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ನೋಡಿರುತ್ತೆವೆ.

ಸರಿಯಾದ ನಿಗಧಿತ ಬೆಲೆ (ರೇಟ್ )ಕೂಡ ಇರುವುದ್ದಿಲ್ಲ. ಆ ಒಂದು ನಿಟ್ಟಿನಲ್ಲಿ ರೈತ ಬೆಳೆದ ಬೆಳೆಗಳನ್ನು ಸಾಗಾಣಿಕೆ ಮಾಡಲೆಂದೇ, ಭಾರತದಾದ್ಯಂತ ಇರುವ ಗುಡ್ಡಗಾಡು ಪ್ರದೇಶಗಳು,ಈಶಾನ್ಯ ರಾಜ್ಯಗಳು, ಮತ್ತು ಬುಡಕಟ್ಟು ಪ್ರದೇಶಗಳಿಂದ ಜೈವಿಕವಾಗಿ ಕೊಳೆತು ಹೋಗುವಂತಹ ಆಹಾರೋತ್ಪನ್ನಗಳನ್ನು ಸಾಗಾಣಿಕೆ ಮಾಡುವುದರತ್ತ ಗಮನ ಹರಿಸಲು ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೃಷಿ ಉಡಾನ್ 2.0 ಯೋಜನೆಯನ್ನು ಆರಂಭಿಸಿದ್ದಾರೆ.

ಕೃಷಿ ಉಡಾನ್ 2.0 ಯೋಜನೆಯ ಅಡಿಯಲ್ಲಿ ನಾಗರೀಕ ವಿಮಾನ ಯಾನ ಸಚಿವಾಲಯವು ದೇಶಿಯ ವಿಮಾನಗಳ ಇಳಿಯುವಿಕೆ, ನಿಲುಗಡೆ, ನಿಲ್ದಾಣದಿಂದ ತೆರಳುವಿಕೆ,ದರಗಳ ಮತ್ತು ಮಾರ್ಗ ತೆರಳುವಿಕೆಯ ಸಂಪೂರ್ಣ ವಿನಾಯತಿ ನೀಡಿದೆ.


ಕೃಷಿ ಸಚಿವಾಲಯವು ಲೇಹ್,ಶ್ರೀ ನಗರ, ನಾಗ್ಪುರ್‍, ನಾಶಿಕ್,ರಾಂಚಿ, ಬಾಗ್ದೋರಾ, ರಾಯಪುರ್‍, ಮತ್ತು ಗೌಹಾತಿಗಳಲ್ಲಿ ನಿಲ್ದಾಣಗಳನ್ನು ಆರಂಭಿಸಲು ಸಿದ್ದವಾಗಿದೆ. ಸಚಿವಾಲಯವು ಈ ಯೋಜನಯಡಿಯಲ್ಲಿ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಏರಪೋರ್ಟ ಆತೋರಿಟಿ ಆಫ್ ಇಂಡಿಯಾ ನಿರ್ವಹಿಸುತ್ತಿರುವ 53 ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಿದೆ. ಇವುಗಳಲ್ಲದೆ.
ಇತರೆ ದೇಶಿಯ ಮತ್ತು ಅಂತರಾಷ್ಟೀಯ ವಹಿವಾಟು ಮಾರ್ಗಗಳನ್ನು ಸಹ ಈ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ.


ಸರ್ಕಾರವು ಮೆಕ್ಕೆಜೋಳ ಬೆಳೆಗೆ:, ಅಮೃತಸರ್‍-ದುಬೈ, ಹೂವಿನ ಬೆಳೆಗಳಿಗಾಗಿ:ದರ್ಬಾಂಗ್ -ನಿಂದ ಸಮಗ್ರ ಭಾರತ , ಸಾವಯುವ ಉತ್ಪನ್ನಗಳಿಗಾಗಿ:ಸಿಕ್ಕಿಂ- ಸಮಗ್ರ ಭಾರತ, ಸಮುದ್ರ ಆಹಾರೋತ್ಪನ್ನಗಳಿಗಾಗಿ:ಚೈನೈ-ವೈಝಾಗ್-ಕೊಲ್ಕತ್ತಾದಿಂದ ಈಶಾನ್ಯ ರಾಜ್ಯಗಳು, ಪೈನಾಪಲ ಹಣ್ಣಿನ ಬೆಳೆಗಳಿಗೆ:ಅಗರ್ತಲ- ದೆಹಲಿ-ದುಬೈ, ಮುಂಡಾರಿನ ಕಿತ್ತಳೆ ಹಣ್ಣಿನ ಬೆಳೆಗಾಗಿ:ದಿಬ್ರುಘಡ-ದೆಹಲಿ-ದುಬೈ, ಬೆಳೆಕಾಳು ಸಾಕಾಣಿಕೆ ಮಾಡಲು:ಗೌಹಾತಿ- ಹಾಂಕಾಂಗ್ ಮಾರ್ಗಗಳನ್ನು ಗುರುತಿಸಿದೆ.
ಈ ಯೋಜನೆವು ಕೃಷಿ ಉತ್ಪನ್ನಗಳನ್ನು ದೇಶಿಯ ಹಾಗೂ ಅಂತರಾಷ್ಟ್ರೀಯ ಸ್ಥಳಗಳಿಗೆ ತಲುಪಿಸುವ ಗುರಿಯನ್ನು ಹೊಂದಿದ್ದು, ಇದು ದೇಶದಾದ್ಯಂತ ಹಾಳಾಗುವಂತಹ ಕೃಷಿ ಉತ್ಪನ್ನಗಳ ಮೌಲ್ಯವನ್ನು ಹೆಚ್ಚಿಸಲು ಸಹಾಯಕವಾಗಿದೆ.


ಈ ಯೋಜನೆಯಡಿ ಇ- ಕುಶಲ್ ಎಂಬ ಆನ್ ಲೈನ್ ಪ್ಲಾಟ್ ಫಾರಂ ಅನ್ನು ಸಹ ಅಭಿವೃದ್ದಿಪಡಿಸಲಾಗಿದೆ.ಇದು ಕೃಷಿ ಉತ್ಪನ್ನಗಳ ಮಾಹಿತಿಯನ್ನು ದೇಶದ ಎಲ್ಲಾ ಭಾಗಿದಾರರಿಗೆ ತಲುಪಿಸುವ ಕಾರ್ಯವನ್ನು ಈ ವೆಬ್ಸೈಟ ಮಾಡುತ್ತದೆ. ಇ- ಕುಶಲ್ ನ್ಯಾಶನಲ್ ಅಗ್ರಿಕಲ್ಚರ್‍ ಮಾರ್ಕಟ್ (ಇ-ನ್ಯಾಮ್) ನೋಂದಿಗೆ ಸಂಯೋಜಿಸುವ ಉದ್ದೇಶವೂ ಸರ್ಕಾರ ಮುಂದೆ ಇದೆ.

ಇತ್ತೀಚಿನ ಸುದ್ದಿಗಳು

Related Articles