ಹೌದು ರೈತರೇ ಇನ್ನೂ ಮುಂದೆ ಹಾಗೂ ಈಗಾಗಲೇ ಬಳಕೆಯಲ್ಲಿರುವ ಕೃಷಿಕರ ಪಂಪಸೆಟ್ ಗಳಿಗೆ ಆಧಾರ್ ಜೋಡಣೆ ಮಾಡುವುದು ಕರ್ನಾಟಕ ರಾಜ್ಯ ಸರಕಾರವು ಕಡ್ಡಾಯ ಎಂದು ಆದೇಶವನ್ನು ಹೊರಡಿಸಿದೆ. ಈ ಕೃಷಿ ಪಂಪಸೆಟ್ ಗಳಿಗೆ ಎಲ್ಲಿ ಆಧಾರ್ ಜೋಡಣೆ ಮಾಡಿಸಬೇಕು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.
ಗ್ಯಾರಂಟಿ ಯೋಜನೆಗಳ ಸಹಿತ ಸರಕಾರದ ವಿವಿಧ ಸಬ್ಸಿಡಿ ಯೋಜನೆಗಳಿಗೆ ಈಗಾಗಲೇ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಮುಂದುವರಿದ ಭಾಗವಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆ ಇ ಆರ್ ಸಿ) 2024-25ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಆದೇಶದಲ್ಲಿ ಕೃಷಿ ಪಂಪಸೆಟ್ ಗಳ ಆರ್,ಆರ್, ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿದ್ದು, ಈ ಸಂಬಂಧ ರಾಜ್ಯದ ಎಲ್ಲಾ ಎಸ್ಕಾಂ ಕಛೇರಿಗಳಿಗೆ ಸೂಚನೆ ನೀಡಲಾಗಿದೆ.
ಅದರಂತೆ 10HP ಸಾಮರ್ಥ್ಯದ ವರೆಗಿನ ಪಂಪಸೆಟ್ ಹೊಂದಿರುವ ರೈತರ ಆಧಾರ್ ಸಂಖ್ಯೆ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಆದರೆ ಹೀಗೆ ಸಂಗ್ರಹಿಸಲಾದ ಬಹುತೇಕ ಆರ್,ಆರ್ ಸಂಖ್ಯೆಗಳಿಗೆ ಮತ್ತು ಆಧಾರ್ ಸಂಖ್ಯೆಗೆ ಹೊಂದಾಣಿಕೆ ಆಗುತ್ತಿಲ್ಲ. ಹಾಗೂ ಎಷ್ಟೋ ಕಡೆಗಳಲ್ಲಿ ಹೆಸರು ಬದಲಾಗಿದೆ.
ರಾಜ್ಯದಲ್ಲಿ ಸುಮಾರು 34.17 ಲಕ್ಷ ರೈತರು ಸರಕಾರವು ಕೃಷಿ ಪಂಪಸೆಟ್ ಗಳಿಗೆ ನೀಡುವ ಉಚಿತ ವಿದ್ಯುತ್ ನ ಫಲಾನುಭವಿಗಳಾಗಿದ್ದು, ವಾರ್ಷಿಕ ಅಂದಾಜು 21 ಮಿಲಿಯನ್ ಯೂನಿಟ್ ವಿದ್ಯುತ್ ಪೂರೈಸಲಾಗುತ್ತಿದೆ.
ಕೃಷಿ ಪಂಪಸೆಟ್ ಗಳಿಗೆ ಆಧಾರ್ ಜೋಡಣೆಯ ಉದ್ದೇಶ ಏನು?
1)ಸರಕಾರ ಪ್ರತಿ ವರ್ಷ ಎಸ್ಕಾಂಗಳಿಗೆ ನೀಡುತ್ತಿರುವ ಸಬ್ಸಿಡಿಗೂ ವಿದ್ಯುತ್ ಬಳಕೆಗೂ ಹೋಲಿಕೆ ಆಗುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳವುದು.
2)ಅಕ್ರಮ ಪಂಪಸೆಟ್ ಗಳಿಗೆ ಕಡಿವಾಣ ಹಾಕುವುದು.
3)ಸಬ್ಸಿಡಿ ನಿಜವಾದ ಫಲಾನುಭವಿಗೆ ಹೋಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳುವುದು.
4)ಪಂಪಸೆಟ್ ಗಳಿಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಶ್ರೀಮಂತರ ಪತ್ತೆ ಹಚ್ಚಲು ಸುಲಭವಾಗುತ್ತದೆ.
5)ಬೇರೆಯವರ ಹೆಸರಿನಲ್ಲಿರುವ ಕೃಷಿ ಪಂಪಸೆಟ್ ಪತ್ತೆ ಹಚ್ಚಲು.
ಕೃಷಿ ಪಂಪಸೆಟ್ ಗಳಿಗೆ ಆಧಾರ್ ಜೋಡಣೆಯನ್ನು ಎಲ್ಲಿ ಮಾಡಿಸಬೇಕು?
ಕೃಷಿ ಪಂಪಸೆಟ್ ಗಳಿಗೆ ಆಧಾರ್ ಜೋಡಣೆಯನ್ನು ನಿಮ್ಮ ಗ್ರಾಮಗಳಲ್ಲಿರುವ ಇಂಧನ ಇಲಾಖೆ(KEB) ಕಛೇರಿಯನ್ನು ಭೇಟಿ ಮಾಡಿ ಕೃಷಿ ಪಂಪಸೆಟ್ ಗಳಿಗೆ ಆಧಾರ್ ಜೋಡಣೆಯನ್ನು ಮಾಡಿಸಿ. ಅಥವಾ ನಿಮ್ಮ ಗ್ರಾಮಗಳಲ್ಲಿರುವ ಲೈನ ಮೆನ್ ಗಳಿಗೆ ಮಾಹಿತಿ ನೀಡಿ ಆಧಾರ್ ಜೋಡಣೆ ಮಾಡಿಸಿಕೊಳ್ಳಿ.