Saturday, October 5, 2024

KRISHI PRASHASTI AWARD-2024: ರೈತರಿಂದ ಹಾಗೂ ರೈತ ಮಹಿಳೆಯರಿಂದ 2024 ರ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ! ವಿಜೇತರಿಗೆ ಸಿಗಲಿದೆ 1 ಲಕ್ಷದವರೆಗೆ ಹಣದ ಬಹುಮಾನ.

ಕೃಷಿ ಇಲಾಖೆ ವತಿಯಿಂದ 2024-25 ನೇ ಸಾಲಿನ ಆಯವ್ಯಯದಲ್ಲಿ ಕೃಷಿಯಲ್ಲಿ ರೈತರು ಮತ್ತು ರೈತ ಮಹಿಳೆಯರನ್ನೂ ಪ್ರೋತ್ಸಾಹಿಸುವ ಸಲುವಾಗಿ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ “ ಕೃಷಿ ಪಂಡಿತ “ ಪ್ರಶಸ್ತಿ ಬಹುಮಾನ ನೀಡಲು ರೈತರಿಗೆ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಪಂಡಿತ ಪ್ರಶಸ್ತಿಗೆ ಭಾಗವಹಿಸಲು ಇಚ್ಚಿಸುವವರು ತಮ್ಮ ಜಿಲ್ಲೆಯಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಛೇರಿ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಭೇಟಿ ಮಾಡಿ ಅರ್ಜಿಗಳನ್ನು ಪಡೆಯಬಹುದು ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಕೃಷಿ ಕ್ಷೇತ್ರದಲ್ಲಿ ವಿನೂತನ/ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮೂದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು. ಭಾಗವಹಿಸುವವರ ಸಾಧನೆಗಳು/ಸಂಶೋಧನೆಗಳು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು ಹಾಗೂ ವ್ಯಾಪಕವಾಗಿ ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು.

ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಯಾವುದೇ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಉಳಿದ ರೈತರಿಗಿಂತ ವಿಭಿನ್ನವಾದ ಕೃಷಿ ಹಾಗೂ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬಾಕಿ ರೈತರ ಹೋಲಿಕೆಗೆ ವಿಭಿನ್ನವಾಗಿ ಕಾಣಿಸುವುದರೊಂದಿಗೆ ಆದಾಯವು ಉಳಿದ ರೈತರಿಗಿಂತ ಭಿನ್ನವಾಗಿರಬೇಕು. ಹಾಗೂ ಕೃಷಿ ಎಲ್ಲಿ ತಂತ್ರಜ್ಞಾನಗಳ ಅಳವಡಿಕೆ ಬಗ್ಗೆ ಜ್ಞಾನವನ್ನು ಹೊಂದಿರಬೇಕು.

ಇದೊಂದೆ ಅಲ್ಲದೇ ಸಮಗ್ರ ಕೃಷಿ ಅಥವಾ ಯಾವುದೇ ಒಂದು ಕೃಷಿಯಲ್ಲಿ ವಿಭಿನ್ನ ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡು ವಂತವರಾಗಿರಬೇಕು. ಹಾಗೂ ಕೃಷಿಯಲ್ಲಿ ಖುಷಿ ಕಂಡಿರಬೇಕು.

ಇದನ್ನೂ ಓದಿ: ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಕೃಷಿಕರಿಗೆ ಲಕ್ಷದವರೆಗೂ ಸಹಾಯಧನ.

ಕೃಷಿ ಪಂಡಿತ ಪ್ರಶಸ್ತಿಯ ಬಹುಮಾನ ವಿವರ:

ಪ್ರಥಮ-1,25,000/-

ದ್ವಿತೀಯ-1,00,000/-

ತೃತೀಯ-75,000/-

ಚತುರ್ಥ-50,000/-

ಅರ್ಜಿಸಲ್ಲಿಸಲು 2024 ಆಗಷ್ಟ-31 ಕೊನೆಯ ದಿನವಾಗಿದೆ. ಪ್ರಶಸ್ತಿಗೆ ನಾಮನಿರ್ದೇಶನ ಸಲ್ಲಿಸ ಬಯಸುವ ರೈತರು ಹಾಗೂ ರೈತ ಮಹಿಳೆಯರು ಸ್ಥಳೀಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಂಡು ಮಾಹಿತಿಯನ್ನು ಭರ್ತಿ ಮಾಡಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಸೂಚನೆ: ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿ ಪಡೆದವರು ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: ಪಿ ಎಂ ಕಿಸಾನ್‌ ರೈತರ ಹೊಸ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಪಟ್ಟಿಯಲ್ಲಿ ಉಂಟೇ? ನೋಡಲು ಇಲ್ಲಿದೆ ಮಾಹಿತಿ.

ಕೃಷಿ ಪಂಡಿತ ಅರ್ಜಿಗಳನ್ನು ಯಾವ ವೇದಿಕೆ ಮೇಲೆ ನೀಡಲಾಗುತ್ತದೆ ನಿಮಗೆ ಗೊತ್ತೆ?

ಇಂತಹ ಪ್ರಶಸ್ತಿಗಳನ್ನು ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ನಡೆಯುವ ಕೃಷಿ ಮೇಳಗಳಲ್ಲಿ ಅತ್ಯಂತ ಗೌರಯುತವಾಗಿ ಸನ್ಮಾನಿಸಲಾಗುತ್ತದೆ. ಈ ಕಾರ್ಯಕ್ರಮಗಳಲಿ ಕರ್ನಾಟಕ ರಾಜ್ಯ ಸರಕಾರದ ಕೆಲವು ಬಾರಿ ಮುಖ್ಯ ಮಂತ್ರಿಗಳು, ಉಳಿದಂತೆ ಕೃಷಿ ಸಚಿವರು, ಇನ್ನಿತರ ಸಚಿವರು, ಕೃಷಿ ವಿ,ವಿ ಕುಲಸಚಿವರು, ಕೃಷಿ ವಿಜ್ಞಾನಿಗಳು ಹಾಗೂ ಅನೇಕ ಗಣ್ಯರು ಹಾಜರಾಗುತ್ತಾ ಕೃಷಿ ಮೇಳದ ಸಭಾಂಗಣದ ವೇದಿಕೆ ಮೇಲೆ ಸಾವಿರಾರು ರೈತರ ಮುಂದೆ ನಿಮ್ಮನ್ನು ಸನ್ಮಾನಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಇತ್ತೀಚಿನ ಸುದ್ದಿಗಳು

Related Articles