Friday, November 22, 2024

Krishi mela uahs-ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕೃಷಿ ಮೇಳದ ವಿಶೇಷತೆ ಮತ್ತು ದಿನಾಂಕದ ಮಾಹಿತಿ.

ನಮಸ್ಕಾರ ರೈತರೇ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕೃಷಿ ಮೇಳವನ್ನು ಇದೇ ತಿಂಗಳು ಅಕ್ಟೋಬರ್ 18, 19, 20, 21 ರಂದು ಆಯೋಜನೆ ಮಾಡಲಾಗುತ್ತಿದೆ. ಈ ಕೃಷಿ ಮೇಳದ ವಿಶೇಷತೆಗಳೇನು ಎಂದು ತಿಳಿಯಲು ಈ ಲೇಖನವನ್ನು ಸಂಪೂರ್ಣ ಓದಿ.

ಹೌದು ರೈತರೇ, ಪ್ರತಿ ವರ್ಷದಂತೆ ಈ ವರ್ಷವು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದ ಕೃಷಿ ಮೇಳದ ಘೋಷವಾಕ್ಯ ಪೌಷ್ಠಿಕ ಆಹಾರಕ್ಕಾಗಿ ವಿಕಸಿತ ಕೃಷಿ (vikasit agriculture for nutritious food) ಎಂದು ಸೂಚಿಸಲಾಗಿದೆ.

ಕಳೆದ ಬಾರಿ ರಾಜ್ಯದ ಹಲವು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬರ ಬಂದಿರುವ ಕಾರಣ ಕೃಷಿ ಮೇಳ ಆಯೋಜನೆ ಮಾಡಿರಲಿಲ್ಲ. ಈ ಬಾರಿಯು ರಾಜ್ಯದಲ್ಲಿ ಮುಂಗಾರು ಮಳೆ ಒಳ್ಳೆಯ ಮಳೆಯನ್ನು ನೀಡಿದ್ದು ರೈತರಿಗೆ ಖುಸಿ ತಂದಿದೆ. ಹಾಗಾಗಿ ಈ ಬಾರಿ ಮರಳಿ ಕೃಷಿ ಮೇಳವನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ:ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ ಗೃಹಲಕ್ಷ್ಮಿ ಹಣ ಬಿಡುಗಡೆ! ನಿಮಗೆ ಬಂತೆ ಚೆಕ್ ಮಾಡಿಕೊಳ್ಳಿ.

Krishi mela uahs-ಕೃಷಿ ಮೇಳದ ವಿಶೇಷತೆಗಳು:

ಬೆಳೆ ಪ್ರಾತ್ಯಕ್ಷಿಕೆಗಳು(crop demos), ಕ್ರಾಪ್ ಮ್ಯೂಸಿಯಂ(crop museum), ಕೃಷಿ ತಂತ್ರಜ್ಞಾನ  ಪಾರ್ಕ್ (technology park), ಹೈಟೆಕ್ ತೋಟಗಾರಿಕೆ(hi-teck horticulture), ಸಂರಕ್ಷಿತ ಸಾಗುವಳಿ(protected cultivation), ಕ್ಯಾಶ್ಯೂ ತಂತ್ರಜ್ಞಾನ(cashew technologies), ಲಂಬ ಕೃಷಿ (vertical farming), ತಾರಸಿ ತೋಟಗಾರಿಕೆ(terrace gardening), ಸಾವಯವ ಕೃಷಿ (organic farming), ಸಮಗ್ರ ಕೃಷಿ ವ್ಯವಸ್ಥೆ(integrated farming system), ಜಲಾನಯನ ನಿರ್ವಹಣೆ(watershed management), ಜೇನು ನೊಣ ಸಾಕಾಣಿಕೆ(bee keeping), ಅಣಬೆ ಉತ್ಪಾದನೆ (mushroom production), ಮೌಲ್ಯವರ್ಧನೆ(post harvest technologies), ಮೀನುಗಾರಿಕೆ(fisheries).

Krishi mela stall tariff-ಕೃಷಿ ಮೇಳದಲ್ಲಿ ಮಳಿಗೆ ಹಾಕುವ ದರ ಪಟ್ಟಿ:

ಸ್ಟಾಲ್ ವಿಧ         ಸ್ಟಾಲ್ ಸೈಜ್             ದರ

ಹೈಟೆಕ್ ಸ್ಟಾಲ್     10*10                 ರೂ.20000

ಮಷೀನ್ ಸ್ಟಾಲ್    20*20                 ರೂ.18000

ಎಕೊನಮಿ ಸ್ಟಾಲ್  10*10                 ರೂ.8000  

ಕೃಷಿ ಮೇಳದಲ್ಲಿ ಸ್ಟಾಲ್ ಪಡೆಯಲು ದಿನಾಂಕ 08/10/2024 ರಂದು ಕೊನೆಯ ದಿನವಾಗಿರುತ್ತದೆ. ಹಾಗಾಗಿ ಇಂದೆ ವಿಚಾರಿಸಿ.

ಇದನ್ನೂ ಓದಿ:ರಾಜ್ಯದಲ್ಲಿ 22ಲಕ್ಷ ಬಿಪಿಎಲ್ ಮತ್ತು ಅಂತ್ಯೊದಯ ರೇಷನ್ ಕಾರ್ಡ್ ಅನರ್ಹ ಮಾಡಲಾಗಿದೆ.

ಕೃಷಿ ಮೇಳದಲ್ಲಿ ಸ್ಟಾಲ್ ಹಾಕಲು ಮತ್ತು ಕೃಷಿ ಮೇಳದ ಹೆಚ್ಚಿನ ವಿವರಗಳನ್ನು ತಿಳಿಯಲು ಈ ಲಿಂಕ್ ಮೇಲೆ ಒತ್ತಿ click here krishi mela uahs 

ಇತ್ತೀಚಿನ ಸುದ್ದಿಗಳು

Related Articles