Thursday, September 19, 2024

Krishi mela Dharwad-2024:ಕೃಷಿ ವಿಶ್ವವಿದ್ಯಾನಿಲಯ ಧಾರವಾಡ ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಮೇಳದ ವಿಶೇಷತೆ ಹಾಗೂ ಸಂಪೂರ್ಣ ಮಾಹಿತಿ!

ಧಾರವಾಡ ಕೃಷಿ ಮೇಳ-2024ರ ಅಧಿಕೃತ ದಿನಾಂಕವನ್ನು ನಿಗದಿಪಡಿಸಲಾಗಿದ್ದು ಈ ಬಾರಿಯ ಕೃಷಿ ಮೇಳವನ್ನು (Krishi mela Dharwad) ಹವಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ಎಂಬ ಘೋಷವಾಕ್ಯದೊಂದಿಗೆ ಆಯೋಜನೆ ಮಾಡಲು ಕೃಷಿ ವಿಶ್ವ ವಿದ್ಯಾನಿಲಯದಿಂದ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಈ ಒಂದು ಕೃಷಿ ಮೇಳವನ್ನು ರೈತರ ಜಾತ್ರೆ ಎಂತಲೂ ಕರೆಯುತ್ತಾರೆ.  ಈ ಲೇಖನದಲ್ಲಿ ಕೃಷಿ ಮೇಳವನ್ನು ಯಾವ ದಿನಾಂಕದಂದು ಏರ್ಪಡಿಸಲಾಗುತ್ತಿದೆ ಮತ್ತು ಈ ಬಾರಿಯ ವಿಶೇಷತೆಗಳೇನು? ಕೃಷಿ ಮೇಳದಲ್ಲಿ ಮಳಿಗೆಗಳನ್ನು ಬುಕ್‌ ಮಾಡಲು ಸಂಪರ್ಕಿಸಬೇಕಾದ ವಿಳಾಸದ ವಿವರ ಇತ್ಯಾದಿ ಮಾಹಿತಿಯನ್ನು ತಿಳಿಸಲಾಗಿದೆ.

ಈ ವರ್ಷದ ಕೃಷಿ ಮೇಳಕ್ಕೆ 2024 ಕೃಷಿ ಜಾತ್ರೆಯನ್ನು “ಹವಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು” ಎಂಬ ಘೋಷವಾಕ್ಯದೊಂದಿಗೆ ಸೆಪ್ಟಂಬರ್‌  21 ರಿಂದ 24 ರವರೆಗೆ ವಿಶ್ವ ವಿದ್ಯಾಲಯದ ಮುಖ್ಯ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೃಷಿ ಪಂಪಸೆಟ್ ಗಳಿಗೆ ಆಧಾರ್‌ ಜೋಡಣೆ ಕಡ್ಡಾಯ? ಎಲ್ಲಿ ಮಾಡಿಸಬೇಕು ಮತ್ತು ಇದರ ಉದ್ದೇಶಗಳು ಇಲ್ಲಿದೆ ಮಾಹಿತಿ.

ಕಳೆದ ವರ್ಷ 2023 ರ ಕೃಷಿ ಮೇಳಕ್ಕೆ 10.5 ಲಕ್ಷ ರೈತರು ಮೇಳಕ್ಕೆ ಬಂದಿದ್ದು ಈ ವರ್ಷವು ಇಷ್ಟೇ ಪ್ರಮಾಣದ ರೈತರು ಸೇರುವ ನಿರೀಕ್ಷೆ ಇದೆ.

ಈ ಬಾರಿಯ ಕೃಷಿ ಮೇಳದ ಏನೆಲ್ಲ ಇರಲಿದೆ?

1)ವಿವಿಧ ಕೃಷಿ ಪರಿಕರಗಳ ಮಾರಾಟ ಮತ್ತು ಪ್ರದರ್ಶನ.

2)ನೀರಾವರಿ ಉಪಕರಣಗಳ ಪ್ರಾತ್ಯಕ್ಷಿಕೆ.

3)ಕೃಷಿ ಯಂತ್ರೋಪಕರಣಗಳ ಪ್ರದರ್ಶನ.

4)ಸಿರಿಧಾನ್ಯಗಳ ಮಳಿಗೆ ಮತ್ತು ಮಹತ್ವ.

5)ಕೃಷಿ-ತೋಟಗಾರಿಕೆ-ಅರಣ್ಯ ಸಮಗ್ರ ಪದ್ಧತಿಗಳು.

6)ಹೈಟೆಕ್‌ ತೋಟಗಾರಿಕೆ.

7)ಪಶು ಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು.

8)ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು

9)ಕೊಯ್ಲೊತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ.

10) ರೈತ ವಿಜ್ಞಾನಿ ಸಂವಾದ.

11) ನೇರ ರೈತರ ಸಮಸ್ಯೆಗೆ ವಿಜ್ಞಾನಿಗಳ ಮಳಿಗೆ.

ಇದನ್ನೂ ಓದಿ: 2024 ರ ಬೆಳೆ ವಿಮೆ ಕಟ್ಟಿದ್ದರೆ, ನಂತರ ಈ ಕೆಲಸ ಮಾಡಿ ಇಲ್ಲವಾದಲ್ಲಿ ಕಟ್ಟಿದ ಹಣ ವ್ಯರ್ಥವಾಗುತ್ತದೆ.

Stall booking-ಮಳಿಗೆಗಳನ್ನು ಬುಕ್‌ ಮಾಡಲು ಸಂಪರ್ಕ ವಿವರ:

ಮೇಳದಲ್ಲಿ ರೈತರು ಅಥವಾ ಇತರೆ ಕಂಪನಿಯವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅಥವಾ ಪ್ರದರ್ಶನ ಮಾಡಲು ಮುಂಚಿತವಾಗಿ ಮಳಿಗೆಗಳನ್ನು ಬುಕ್‌ ಮಾಡಲು ಈ ಮೊಬೈಲ್‌ 8277478507, 0836-2214497 ಸಂಖ್ಯೆಗೆ ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿಗಳು

Related Articles