Friday, November 22, 2024

Know your Polling Booth: ನಿಮ್ಮ ಮತದಾನದ ಬೂತ್ ಯಾವುದು? ಕ್ಷೇತ್ರ ಬದಲಾಣೆ ಏನು ಮಾಡಬೇಕು?ಹೊಸದಾಗಿ ಹೆಸರು ಸೇರ್ಪಡೆ ಹೇಗೆ? ಸಂಪೂರ್ಣ ಮಾಹಿತಿ ಈ ಲಿಂಕ್ ನಲ್ಲಿ

ಭಾವಚಿತ್ರ ಇರುವ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಮತದಾನದ ಹಕ್ಕು ದೊರಕುವುದಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮತದಾನದ ಅವಕಾಶ. ಆದ ಕಾರಣ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಖುದ್ದು ಪರಿಶೀಲಿಸಿಕೊಳ್ಳಿ. ನಿಮ್ಮ ವಿವರ ಅಥವಾ EPIC card number (ಭಾವಚಿತ್ರವಿರುವ ಗುರುತಿನ ಚೀಟಿ ಸಂಖ್ಯೆ) ಮೂಲಕ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬ ಬಗ್ಗೆ ಈ ಲಿಂಕ್ ವಿಳಾಸಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿಕೊಳ್ಳಿ.

ನೀವು ಈ ವರ್ಷದ ಲೋಕಸಭೆ ಚುನಾವಣೆಗೆ ಚುನಾಯಿಸಲು ಯಾವ ಮತಗಟ್ಟೆ,(Polling Booth), ನಿಮ್ಮ ಚುನಾವಣೆ ಗುರುತಿನ ಕಾರ್ಡ ಸಂಖ್ಯೆ ಇದ್ದರೆ ಸಾಕು ನಿಮ್ಮ ಮತದಾನದ ಪಟ್ಟಯಲ್ಲಿ ನಿಮ್ಮ ಸಂಖ್ಯೆ ಎಷ್ಟು?ಯಾವ ವಿಧಾನ ಸಭೆ ಕ್ಷೇತ್ರ? ನಿಮ್ಮ ಹೆಸರು? ಪ್ರತಿಯೊಂದು ಮಾಹಿತಿ ನೋಡಬಹುದಾಗಿದೆ?

ಪರಿಕ್ಷೀಸುವ ವಿಧಾನ:
ಹಂತ : 1: ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ ಈ ಜಾಲತಾಣ ತೆರೆದ ಮೇಲೆ ಮೋದಲು ಭಾಷೆ ಆಯ್ಕೆ Select Language ಮಾಡಿಕೊಂಡು ನಂತರ, EPIC Number ನಮೂದಿಸಿಕೊಳ್ಳಿ.
https://electoralsearch.eci.gov.in/

ಹಂತ: 2: ನಂತರ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು.ಕೆಳಗೆ ಕಾಣುವ Captcha code ನಮೂದಿಸಿಕೊಳ್ಳಿ. ನಂತರ Search ಆಯ್ಕೆ ಮೇಲೆ ಓತ್ತಿದರೆ ಕೆಳಗೆ ನಿಮ್ಮ ಮತದಾನಕ್ಕೆ ಸಂಭಂಧಿಸಿದಂತೆ ಎಲ್ಲಾ ಮಾಹಿತಿ ದೊರೆಯುವುದು.

ಇದನ್ನೂ ಓದಿ: DBT system information : ಸರ್ಕಾರದಿಂದ ಇಲ್ಲಿವರೆಗೂ ನಿಮಗೆ ಬಂದಿರುವ ಹಣ ಎಷ್ಡು? ನೀವೇ ಪರೀಕ್ಷಿಸಿಕೊಳ್ಳಿ!!

ಬೇರೇ ವಿಧಾನಸಭೆ ಕ್ಷೇತ್ರಕ್ಕೆ ಸ್ಥಳಾಂತರ ಮಾಡಬೇಕಾದರೆ?
ಒಂದು ವೇಳೆ ಒಂದು ವಿಧಾನ ಸಭೆ ಕ್ಷೇತ್ರದಿಂದ ಇನ್ನೊಂದು ವಿಧಾನ ಸಭೆ ಕ್ಷೇತ್ರಕ್ಕೆ ಚುನಾವಣೆ ಪಟ್ಟಿಯಿಂದ ಸ್ಥಳಾಂತರಿಸಬೇಕಾದರೆ ನಮೂನೆ 8 shift ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.

ಹೊಸದಾಗಿ ಮತದಾನ ಪಟ್ಟಿಗೆ ಸೇರ್ಪಡೆ :
18 ವರ್ಷ ಮೇಲ್ಪಟ್ಟ ಮತದಾನ ಅರ್ಹರಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನಮೂನೆ 6 ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹೆಸರು ಇಲ್ಲಾ ಎಂದಾದಲ್ಲಿ ನಮೂನೆ 6 ರಲ್ಲಿ voter helpline mobile app, www.nvsp.in ವೆಬ್ ವಿಳಾಸಕ್ಕೆ ಭೇಟಿ ನೀಡಿ ಅನ್ ಲೈನ್ ನಲ್ಲಿ ಅರ್ಜಿಗಳನ್ನು ದಾಖಲಿಸಿರಿ. ಅಥವಾ ತಮ್ಮ ಸಮೀಪದ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: PM- Kisan 16th installment: ಪಿ ಎಂ ಕಿಸಾನ್ 16 ನೇ ಕಂತಿನ ಹಣಕ್ಕೆ ಈ ಪ್ರಕ್ರಿಯೆ ಕಡ್ಡಾಯ!!!

ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಮೇಲ್ವಿಚಾರಕರು ಕಡ್ಡಾಯವಾಗಿ ಅರ್ಹ ವ್ಯಕ್ತಿಗಳು ಮತದಾರರ ಪಟ್ಟಿಯಿಂದ ಕೈಬಿಟ್ಟಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ತಿಳಿಸಿದೆ.

ಇತ್ತೀಚಿನ ಸುದ್ದಿಗಳು

Related Articles